Sri Ganesh Tel

ಪತಿಯ ಕೊಂದು ಚಿನ್ನ, ಹಣದೊಂದಿಗೆ ಪತ್ನಿ ಪರಾರಿ

Posted In : Others

ಆಗ್ರಾ: ಪತಿಯನ್ನು ಕೊಂದ ಪತ್ನಿ  ಬಳಿಕ ಚಿನ್ನ ಮತ್ತು ಹಣದೊಂದಿಗೆ ಪರಾರಿಯಾದ ಘಟನೆ ದೆಹಲಿಯಲ್ಲಿ ನಡೆದಿರುವುದಾಗಿ ಬುಧವಾರ ವರದಿಯಾಗಿದೆ.

ನಿರ್ಮಲ್ ಸಿಂಗ್ (45) ಹತ್ಯೆಯಾದ ವ್ಯಕ್ತಿ.

ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ನಿರ್ಮಲ್ ಸಿಂಗ್ ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದು, ನಾಲ್ಕು ವರ್ಷದ ಹಿಂದಷ್ಟೇ ತಾರಾ ಎಂಬಾಕೆಯನ್ನು ವಿವಾಹವಾಗಿದ್ದರು. ವಿಕಲಚೇತನನಾಗಿರುವ ನಿರ್ಮಲ್ ಸಿಂಗ್ ಅವರಿಗೆ ಭರತ್ ಸಿಂಗ್ ಎಂಬ 14ವರ್ಷದ ಮಗನಿದ್ದಾನೆ.

ಸೋಮವಾರ ರಾತ್ರಿ ಹತ್ಯೆಗೆ ಸಂಚು ರೂಪಿಸಿದ್ದ ಪತ್ನಿ ತಾರಾ, ನಿದ್ರೆ ಮಾತ್ರೆ ಸೇರಿಸಿದ ಹಾಲನ್ನು ಇಬ್ಬರಿಗೂ ನೀಡಿದ್ದಾಳೆ. ನಂತರ ನಿರ್ಮಲ್ ಸಿಂಗ್ ನ ಕತ್ತನ್ನು ಸೀಳಿದ್ದಾಳೆ. ಪರಿಣಾಮ ಪತಿ ಪ್ರಜ್ಞೆ ತಪ್ಪಿರುವುದನ್ನು ನೋಡಿ ಸತ್ತು ಹೋಗಿದ್ದಾನೆಂದು ತಿಳಿದು ಮನೆಯಲ್ಲಿದ್ದ ಆಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದಾಳೆ.

ಇದರಂತೆ ಮಂಗಳವಾರ ಬೆಳಿಗ್ಗೆ ಎಚ್ಚರಗೊಂಡಿರುವ ಭರತ್ ತಂದೆ ಸತ್ತು ಬಿದ್ದಿರುವುದನ್ನು ನೋಡಿ ಕೂಗಿಕೊಂಡಿದ್ದಾನೆ. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ತಾರಾಗಾಗಿ ತೀವ್ರ ಹುಡುಕಾಟ ನಡೆಸುದ್ದಾರೆ.

Leave a Reply

Your email address will not be published. Required fields are marked *

13 − nine =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top