About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಯುವತಿಗೆ ಪಾಠ ಕಲಿಸಿದ ಬೈಕ್ ಸವಾರ..! (ವಿಡಿಯೊ)

ಬೀಜಿಂಗ್: ಇತ್ತೀಚೆಗೆ ಕೇರಳದಲ್ಲಿ ಸುರಿದ ಭಾರಿ ಮಳೆ ಹಲವು ಅವಾಂತರ ಸೃಷ್ಟಿಸಿತ್ತು. ಜೊತೆಗೆ ನದಿಗೆ ಎಸೆದಿದ್ದ ಪ್ಲಾಸ್ಟಿಕ್, ಕಸ-ಕಡ್ಡಿಗಳಂತಹ ವೇಸ್ಟೇಜ್‍ಗಳು ವಾಪಸ್ ದಂಡೆ ಮೇಲೆ ರಾಶಿ-ರಾಶಿಯಾಗಿ ಬಿದ್ದಿತ್ತು. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.

ಇದೀಗ ಚೀನಾದ ಬೀಜಿಂಗ್ ನಲ್ಲಿ ಹೀಗೆಯೇ ಒಂದು ವಿಲಕ್ಷಣ ಘಟನೆ ನಡೆದಿದೆ. ಆದರೆ ನದಿ, ನೀರು ಪ್ರವಾಹದಂಥ ಸ್ಟೋರಿಯಲ್ಲ. ಬದಲಾಗಿ ಯುವತಿಯೊಬ್ಬಳು ಕಾರಿನ ಡೋರ್ ತೆಗೆದು ರಸ್ತೆಯಲ್ಲೇ ಕಸ ಹಾಕಿದ್ದಾಳೆ. ಕಾರಿನ ಹಿಂಬದಿಯಿಂದ ಬಂದ ಬೈಕ್ ಸವಾರನೊಬ್ಬ ಇದನ್ನು ಗಮನಿಸಿ ಯುವತಿಯ ಕಾರಿನೊಳಗೆ ಎಸೆದು ಹೋಗಿದ್ದಾನೆ. ಆಕ್ರೋಶಗೊಂಡ ಯುವತಿ ಬೈಕ್ ಸವಾರನ ವಿರುದ್ಧ ಕೂಗಾಡಿದ್ದಾಳೆ. ಆದ್ರೆ ಯುವಕ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಮಾಡದೆ ತನ್ನ ಪಾಡಿಗೆ ತಾನು ಹೋಗಿದ್ದಾನೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅಲ್ಲದೆ ರಸ್ತೆಯಲ್ಲಿ ಕಸ ಎಸೆಯಬಾರದು ಎಂಬ ಪಾಠವನ್ನು ಕೂಡ ಬೈಕ್ ಸವಾರ ಕಲಿಸಿದ್ದಾನೆ.

Tags

Related Articles

Leave a Reply

Your email address will not be published. Required fields are marked *

Language
Close