About Us Advertise with us Be a Reporter E-Paper

ಅಂಕಣಗಳು

ಕೂಲಿ ಮಾಡುತ್ತಿದ್ದ ಮಹಿಳೆ ಇಂದು ಸಾಫ್‌ಟ್ವೇರ್ ಕಂಪನಿ ಒಡತಿ!

ಸಾಧನೆ: ಸಿದ್ದಾರ್ಥ ವಾಡೆನ್ನವರ

ಮನಸ್ಸಿದ್ದರೆ ಏನೆಲ್ಲ ಸಾಧನೆಗಳನ್ನು ಮಾಡಲು ಸಾಧ್ಯ, ಯಾವುದೂ ಅಸಾಧ್ಯವಲ್ಲ .  ಏನಾದರೂ ಸಾಧಿಸಿಯೇ ತೀರುತ್ತೇನೆ’ ಎನ್ನುವವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಒಬ್ಬ ಸಾಧಾರಣ ಹೆಣ್ಣುಮಗಳು ಜಗತ್ತಿನ ಶ್ರೀಮಂತ ದೇಶಕ್ಕೆ ಹೋಗಿ ಅಲ್ಲಿ ನೂರಾರು ಕೋಟಿ ರುಪಾಯಿಗಳ ವ್ಯವಹಾರ ನಡೆಸುತ್ತಿದ್ದಾಳೆ. ಬೆಂಜ್ ಕಾರಿನಲ್ಲಿ ಓಡಾಡುತ್ತಿದ್ದಾಳೆ. ಆಕೆ ನಮ್ಮ ಯುವ ಸಮುದಾಯಕ್ಕೆ ಸ್ಫೂರ್ತಿ. ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯವರಾದ ಅನಿಲಾ ಜ್ಯೋತಿ ರೆಡ್ಡಿ ಅವರ ಜೀವನ ಕತೆಗಿಂತಲೂ ಕುತೂಹಲಕಾರಿ!

ತಂದೆ ಕೆಲ ಕಾಲ ಮಿಲಿಟರಿ ಸೇರಿಕೊಂಡು ಕಾರಣಾಂತರಗಳಿಂದ ನಿವೃತ್ತಿ ಪಡೆದುಕೊಂಡರು. ಹೆಂಡತಿ ಮತ್ತು  ಮಕ್ಕಳಿಗೆ ಪ್ರತಿನಿತ್ಯ ಆಹಾರ ಒದಗಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಮಕ್ಕಳಿಗೆ ಹೊಟ್ಟೆತುಂಬಾ ಊಟ ಒದಗಿಸಲಿಕ್ಕೆ ಆಗುತ್ತಿಲ್ಲ, ಹೀಗೆಯೇ ಮುಂದುವರಿದರೆ ಅವರ ವಿದ್ಯಾಭ್ಯಾಸದ ಗತಿ ಏನು ಎಂದು ಚಿಂತೆಗೊಳಗಾಗಿದ್ದರು. ಎರಡನೆಯ ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಿದರೆ ಹೇಗೆ ಎಂದು ಯೋಚಿಸಿ ಅನಾಥಾಶ್ರಮದ ಮಾಹಿತಿ ಪಡೆದುಕೊಂಡರು. ಆದರೆ ಅನಾಥಾಶ್ರಮಕ್ಕೆ ಸೇರಿಸಲು ‘ತಂದೆ ಅಥವಾ ತಾಯಿ ಇವರಲ್ಲಿ ಯಾರಾದರೊಬ್ಬರು ತೀರಿಕೊಂಡವರ ಮಕ್ಕಳಿಗೆ ಮಾತ್ರ ಅನಾಥಾಶ್ರಮದಲ್ಲಿ ಪ್ರವೇಶ ನೀಡಲಾಗುವುದು’ ಎಂಬ ನಿಯಮ ಅಡ್ಡ ಬಂದಿತು.

ಮನಸ್ಸು ಕಲ್ಲು  ಅವರು ಎರಡನೆಯ ಮಗಳನ್ನು ಅನಾಥಾಶ್ರಮಕ್ಕೆ ಕರೆದೊಯ್ದು ‘ಇವಳು ನನ್ನ ಮಗಳು. ಇವಳ ತಾಯಿ ತೀರಿಹೋಗಿದ್ದಾಳೆ. ಇವಳಿಗೆ ಊಟ ಹಾಗೂ ಶಿಕ್ಷಣ ನೀಡಲು ನನ್ನಿಂದ ಸಾಧ್ಯವಾಗುತ್ತಿಲ್ಲ ದಯವಿಟ್ಟು ನನ್ನ ಮಗಳಿಗೆ ಪ್ರವೇಶ ನೀಡಿ’ ಎಂದು ಅನಾಥಾಶ್ರಮದ ಅಧಿಕಾರಿಗಳಿಗೆ ವಿನಂತಿಸಿಕೊಂಡರು. ತಾಯಿ ಜೀವಂತವಿದ್ದರೂ ಸತ್ತಿದ್ದಾಳೆ ಎನ್ನುವ ಹಣೆಪಟ್ಟಿಯೊಂದಿಗೆ ಮಗು ಅನಾಥ ಆಶ್ರಮ ಸೇರಿತು. ಹಲವು ವರ್ಷ ತಾಯಿಯ ದರ್ಶನ ಸಹ ಪಡೆಯದೇ ಶಿಕ್ಷಣವನ್ನು ಪಡೆಯಿತು.

1986 ರಲ್ಲಿ ಮೆಟ್ರಿಕ್ಯುಲೇಷನ್ ಶಿಕ್ಷಣ ಮುಗಿಸಿದ  ತಂದೆ ಅನಾಥಾಶ್ರಮಕ್ಕೆ ಬಂದು ತಮ್ಮ ಊರಿಗೆ ಕರೆದುಕೊಂಡು ಹೋದರು. ಕಾಲೇಜಿಗೆ ಸೇರಬೇಕು ಎನ್ನುವ ಉಮೇದಿಯಲ್ಲಿ ಮಗಳಿದ್ದರೆ ಪಾಲಕರು, ಮಗಳು ದೊಡ್ಡವಳಾಗಿದ್ದಾಳೆ ಅವಳಿಗೆ ಈಗ ಮದುವೆಯ ವಯಸ್ಸು ಎಂದು ಹಿರಿಯರೊಂದಿಗೆ ಚರ್ಚಿಸಿ ಪಕ್ಕದ ಊರಿನಲ್ಲಿ ಒಬ್ಬ ಅನಕ್ಷರಸ್ಥ ವರನನ್ನು ಹುಡುಕಿದರು. 16ನೇ ವಯಸ್ಸಿಗೇ ಮದುವೆ ಮಾಡಿಕೊಂಡು, ಕಲಿಯುವ ಹಂಬಲದಿಂದ ವಂಚಿತಳಾಗಿ ಗಂಡನ ಮನೆಯತ್ತ ಆಕೆ ಹೆಜ್ಜೆ ಇಟ್ಟಳು. ತಂದೆ-ತಾಯಿ ತಮ್ಮ ಜವಾಬ್ದಾರಿ ಮುಗಿಯಿತೆಂದು ಕೈತೊಳೆದುಕೊಂಡರು.

ಗಂಡನ ಮನೆಗೆ ಹೋದ ಕೆಲವೇ  ಅನಿಲಾ ಎರಡು ಹೆಣ್ಣುಮಕ್ಕಳಿಗೆ ಜನ್ಮ ನೀಡಿದರು. ಅಲ್ಲಿಯೂ ಕಿತ್ತು ತಿನ್ನುವ ಬಡತನ. ಮನೆ ಸಾಗಿಸಲು ಏನಾದರೂ ಮಾಡಬೇಕೆಂದು ಕೂಲಿ ಕೆಲಸ ಮಾಡಲು ಪ್ರಾರಂಭಿದರು. ಹೀಗಿರುವಾಗ ಒಮ್ಮೆ 1990ರಲ್ಲಿ ಆಕೆ ಇದ್ದ ಗ್ರಾಮಕ್ಕೆ ಸರಕಾರಿ ಅಧಿಕಾರಿಗಳು ಭೇಟಿ ನೀಡಿದರು. ಆ ಊಲ್ಲಿ ಕಲಿತ ಹೆಣ್ಣುಮಗಳು ಅವಳೊಬ್ಬಳೇ ವಯಸ್ಕರರಿಗೆ ಶಿಕ್ಷಣವನ್ನು ಕೊಡುವ ಕಾರ್ಯಕ್ರಮಕ್ಕೆ ಆಕೆಯನ್ನೇ ಶಿಕ್ಷಕಿಯನ್ನಾಗಿ ನೇಮಿಸಿದರು. ಅನೇಕ ಗ್ರಾಮಸ್ಥರಿಗೆ ಅಕ್ಷರ ಕಲಿಸಿದ ಅನಿಲಾ ಅಲ್ಲಿಗೆ ಸುಮ್ಮನಾಗಲಿಲ್ಲ. ‘ಕೇವಲ ಹತ್ತನೆಯ ಕ್ಲಾಸ್  ನನಗೆ ಇಷ್ಟೊಂದು ಅವಕಾಶಗಳಿರಬೇಕಾದರೆ ಹೆಚ್ಚಿನ ವಿದ್ಯಾಭ್ಯಾಸ ಕಲಿತರೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗಬಹುದಲ್ಲವೆ’ ಎಂದು ಯೋಚಿಸಿದರು. ಗಂಡ ಮತ್ತು ಅತ್ತೆ ಮಾವನ ಅನುಮತಿಯೊಂದಿಗೆ ದೂರಶಿಕ್ಷಣವನ್ನು ಪಡೆಯಲು ಮುಂದಾದರು. ಡಾ. ಬಿ. ಆರ್. ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡರು.ಹಗಲು, ರಾತ್ರಿ ಅಧ್ಯಯನ ಮಾಡಿ ಕಾಕತೀಯ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನೂ ಪಡೆದರು.

ಶಿಕ್ಷಕಿ ಹುದ್ದೆಗೆ ಅರ್ಜಿ ಹಾಕಿ ಶಿಕ್ಷಕಿಯಾಗಿ ನೇಮಕಗೊಂಡಾಗ ಅವರಿಗೆ ಸಿಗುತ್ತಿದ್ದ ಸಂಬಳ ಪ್ರತಿ ತಿಂಗಳಿಗೆ ಕೇವಲ 398ರು.  ಊರಿನಿಂದ ಪಟ್ಟಣದಲ್ಲಿದ್ದ ಶಾಲೆಗೆ ಕಲಿಸಲು ಹೋಗಬೇಕಾದರೆ ಎರಡು ಘಂಟೆ ಸಮಯ ತಗಲುತ್ತಿತ್ತು. ಅಷ್ಟು ಸಮಯ ವ್ಯರ್ಥವಾಗುತ್ತಿದೆ ಎಂದು ಯೋಚಿಸಿದ ಆಕೆ ಆ ವೇಳೆ ಬಟ್ಟೆ ವ್ಯಾಪಾರ ಮಾಡಿದರೆ ಹೇಗೆ ಎಂದು ಯೋಚಿಸಿ, ವ್ಯಾಪಾರಸ್ಥರಲ್ಲಿ ಹೋಗಿ ಸೀರೆ ಮಾರಿದರೆ ಕಮಿಷನ್ ದೊರೆಯುತ್ತದೆಯೇ ಎಂದು ವಿಚಾರಿಸಿದರು ಮತ್ತು ರೈಲಿನಲ್ಲಿ ಹೋಗುವಾಗ ಮತ್ತು ಬರುವಾಗ ಸೀರೆಗಳನ್ನು ಮಾರಾಟಮಾಡಲು ಆರಂಭಿಸಿಯೇ ಬಿಟ್ಟರು. ಹೀಗೆ ಸ್ವಲ್ಪ ಕಾಲ ನಡೆದ ಮೇಲೆ, ಅಮೆರಿಕದಿಂದ ಮಹಿಳೆಯೊಬ್ಬರು ಇವರ ಗ್ರಾಮಕ್ಕೆ  ಆಕೆ ತನ್ನ ಮಕ್ಕಳಿಗೋಸ್ಕರ ಪ್ರತಿದಿನ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡುತ್ತಿದ್ದುದನ್ನು ಅದನ್ನು ಗಮನಿಸಿದ ಅನಿಲಾಗೆ, ಅಷ್ಟೋಂದು ಹಣ ಖರ್ಚು ಮಾಡುವುದು ಹೇಗೆ ಸಾಧ್ಯ ಎಂದು ಆಶ್ಚರ್ಯವಾಯಿತು. ಈ ಕುರಿತು ಆ ಮಹಿಳೆಯನ್ನು ವಿಚಾರಿಸಿದರೆ, ‘ಅಮೆರಿಕದಲ್ಲಿ ಒಳ್ಳೆಯ ಸಂಬಳ ಸಿಗುತ್ತದೆ ಹೀಗಾಗಿ ನಾನು ಖರ್ಚು ಮಾಡುತ್ತಿದ್ದೇನೆ’ ಎಂದರು ಆಕೆ. ಇದನ್ನು ಕೇಳಿ ತಾನೂ ಅಮೆರಿಕಕ್ಕೆ ಹೋಗಬೇಕು ಎಂಬ ಅಭೀಪ್ಸೆ ಅನಿಲಾರಲ್ಲಿ ಮೊಳೆಯಿತು. ಅಲ್ಲಿಗೆ ಹೋಗಲು ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ  ಬೇಕಾಗುತ್ತದೆ ಎಂದು ಮಹಿಳೆ ವಿವರಿಸಿದ್ದನ್ನು ಮನಗಂಡ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಂಪ್ಯೂಟರ ತರಬೇತಿ ಪಡೆದುಕೊಂಡರು. ಕುಟುಂಬದ ಸದಸ್ಯರನ್ನು ಒಪ್ಪಿಸಿ ವೀಸಾ ಪಡೆಯಲು ಅರ್ಜಿ ಸಲ್ಲಿಸಿದರು. ಅರ್ಜಿ ತಿರಸ್ಕೃತವಾಯಿತು. ಆದರೆ ಹಠ ಬಿಡದೇ ಸತತವಾಗಿ ಅರ್ಜಿ ಸಲ್ಲಿಸಿ ಕೊನೆಗೂ ವೀಸಾ ಪಡೆದುಕೊಂಡರು.

ಅಮೆರಿಕಕ್ಕೆ ಬಂದು ಪರಿಚಯಸ್ಥರಿಗೆ ಪೋನ್ ಮಾಡಿದರೆ ಯಾರೂ ಅವಳ ಸಂಪರ್ಕಕ್ಕೆ ಸಿಗಲಿಲ್ಲ. ಏನು ಮಾಡಬೇಕು ಎಂಬ ಯೋಚನೆಯಲ್ಲಿರುವಾಗ ಒಂದು ಕುಟುಂಬ ಅವರಿಗೆ ಆಶ್ರಯ ನೀಡಿತು. ಕರ್ತೃತ್ವಶಾಲಿಯಾದ ಆಕೆ  ಆ ಪರಿಸರಕ್ಕೆ ಒಗ್ಗಿಕೊಂಡು ಏನಾದರೂ ಕೆಲಸ ಮಾಡಲು ಸಾಧ್ಯವೇ ಎಂದು ಹುಡುಕಿದರು. ಗ್ಯಾಸ್ ಸ್ಟೇಷನ್, ಬೇಬಿ ಸಿಟ್ಟಿಂಗ್, ವಿಡಿಯೋ ಶಾಪ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಹೆಚ್ಚಿನ ಸಂಬಳಕ್ಕಾಗಿ ಬೇರೆ ಊರಿಗೆ ಹೋಗಿಯೂ ನೌಕರಿ ಮಾಡಿದರು. ಹೀಗೆಯೇ ಪ್ರಯತ್ನಿಸುತ್ತ ಇರುವಾಗ ಒಂದು ಕಂಪನಿಯ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿ ಆಯ್ಕೆಯಾದರು. ಒಳ್ಳೆಯ ಸಂಬಳ. ಆದರೆ ಅಮೆರಿಕದಲ್ಲಿ ನೌಕರಿ ಮಾಡಬೇಕಾದರೆ ಬೇಕಾದ ಕೆಲ ಅಗತ್ಯವಾದ ದಾಖಲೆಗಳು ಅವರ ಹತ್ತಿರ ಇರಲಿಲ್ಲ. ಈ  ನೀಡಿ ಅವರನ್ನು ತತ್‌ಕ್ಷಣ ನೌಕರಿಯಿಂದ ವಜಾ ಮಾಡಲಾಯಿತು. ಮತ್ತೆ ಬೇಬಿ ಸಿಟ್ಟಿಂಗ್ ಮತ್ತು ಹೋಟೆಲ್ ಪರಿಚಾರಕಿಯಾಗಿ ಕೆಲಸ ಮಾಡಿದರು. ಅದೇ ವೇಳೆ ನೌಕರಿಗೆ ಬೇಕಾದ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಮತ್ತೆ ಒಳ್ಳೆಯ ಕೆಲಸಕ್ಕೆ ಸೇರಿಕೊಂಡರು.

ಕೆಲ ದಿನಗಳ ತರುವಾಯ ಅನಿಲಾರಿಗೆ ಒಂದು ಯೋಚನೆ ಬಂತು: ‘ನನ್ನ ಹಾಗೆ ವಿಶ್ವದ ಹಲವು ದೇಶಗಳ ಜನರು ಅಮೆರಿಕಕ್ಕೆ ಬಂದು ಮಾಹಿತಿಯಿಲ್ಲದೆ ಪರದಾಡುತ್ತಿದ್ದಾರೆ. ಅವರೆಲ್ಲರಿಗೂ ಮಾರ್ಗದರ್ಶನ ನೀಡುವ ಒಂದು ಸಾಪ್ಟವೇರ್ ಕಂಪನಿ ಪ್ರಾರಂಭಿಸಿದರೆ  ತಮ್ಮ ಹತ್ತಿರ ಇದ್ದ ಕನಿಷ್ಠ ಬಂಡವಾಳದೊಂದಿಗೆ ಕೀಯ್ಸ (ಏಥಿ) ಎಂಬ ಸಾಫ್‌ಟ್ವೇರ್ ಕಂಪನಿಯನ್ನು ಅಕ್ಟೋಬರ್ 2001 ರಲ್ಲಿ ಪಿಯೋನಿಕ್ಸನಲ್ಲಿ ಪ್ರಾರಂಭಿಸಿದರು. ಒಬ್ಬ ಭಾರತೀಯನಿಗೆ ನೆರವಾಗಿ, ಅಂತಾರಾಷ್ಟ್ರೀಯ ಕಂಪನಿಲ್ಲಿ ನೌಕರಿ ಕೊಡಿಸಿದರು. ಹಾಗೆ ಶುರುವಾದ ಅವರ ವ್ಯವಹಾರ ವಿಜಯಯಾತ್ರೆ ತಡೆಯೇ ಇಲ್ಲದೆ ಮುಂದೆ ಮುಂದೆ ಸಾಗಿತು. ಇಂದು ಅನಿಲಾ ಜ್ಯೋತಿ ರೆಡ್ಡಿ ಒಡೆತನದ ಕಂಪನಿಯ ವಹಿವಾಟು ಸುಮಾರು 100 ಕೋಟಿ ರು. ಎಂದರೆ ಅವರ ಯಶಸ್ಸಿನ ಅಂದಾಜು ಸಿಕ್ಕೀತು! ಉದ್ಯೋಗ  ಬಂದ ಸಾವಿರಾರು ಜನರಿಗೆ ಸಹಾಯಹಸ್ತ ಚಾಚುತ್ತಿರುವ ಕಂಪನಿ ಉತ್ತಮ ಲಾಭದಲ್ಲಿಯೇ ಸಾಗುತ್ತಿದೆ.

ಈಗ ಅಮೆರಿಕ ವಾಸಿಯಾಗಿರುವ ಆಕೆ ಬೆಂಜ್ ಕಾರು ಚಲಾಯಿಸುತ್ತಾರೆ. ತರುಣ ತಲೆಮಾರಿಗೆ ಯಶಸ್ವಿ ಉದ್ಯಮಿಯ ಅಪರಾವತಾರವಾಗಿ ಸ್ಫೂರ್ತಿ ತುಂಬುತ್ತಿದ್ದಾರೆ. ಅನಾಥ, ನಿರ್ಗತಿಕ ಮತ್ತು ಬಡವರಿಗೆ ಸಹಾಯ ಹಸ್ತ ಚಾಚುತ್ತಾ ಸಮಾಜದಲ್ಲಿ ತನ್ನ ಕಾರ್ಯವನ್ನು ಮುಂದುವರಿಸಿದ್ದಾರೆ.

ಕೇವಲ ಕೂಲಿ ಕೆಲಸ ಮಾಡುತ್ತಿದ್ದ ಒಬ್ಬ ಸಾಧಾರಣ ಹೆಣ್ಣು ಮಗಳು, ಎರಡು ಮಕ್ಕಳ ತಾಯಿ ಇಂದು ಇಷ್ಟು ಎತ್ತರಕ್ಕೆ ಬೆಳೆಯುತ್ತಾರೆಂದರೆ  ಪಡಲೇಬೇಕಾಗುತ್ತದೆ. ‘ನಿಮ್ಮ ಯಶಸ್ವಿನ ಗುಟ್ಟೇನು?’ ಎಂದು ಪತ್ರಕರ್ತರು ಕೇಳುವ ಪ್ರಶ್ನೆಗೆ ಶ್ರೀಮತಿ ರೆಡ್ಡಿ ಹೀಗೆ ಉತ್ತರಿಸುತ್ತಾರೆ: ‘ಒಂದು ಸಂದರ್ಭದಲ್ಲಿ ನಾನು ನೀರು ಕುಡಿದು ಜೀವನ ಸಾಗಿಸುತ್ತಿದ್ದೆ. ಇಂದು ನಾನು ಜಯ ಸಾಧಿಸಿರುವುದು ನನ್ನ ಅದೃಷ್ಟದಿಂದಲ್ಲ, ನನ್ನ ಸತತ ಪರಿಶ್ರಮದಿಂದ, ಬಿಡದ ಛಲದಿಂದ. ನನ್ನ ಎದೆಯಾಳದಲ್ಲಿ ಉಕ್ಕಿ ಹರಿಯುತ್ತಿದ್ದ ಜ್ವಾಲೆಯಿಂದ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ನನ್ನ ಹಠ ಇಂದು ಇಲ್ಲಿಯವರೆಗೆ ತಂದು ನಿಲ್ಲಿಸಿದೆ.’

ಶ್ರೀಮತಿ ಅನಿಲಾ ಜ್ಯೋತಿರೆಡ್ಡಿಯವರ  ಮತ್ತು ಅವರು ಸ್ಥಾಪಿಸಿದ ಕಂಪನಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಗೂಗಲ್ ಸರ್ಚ್‌ನಲ್ಲಿ ಇವರ ಹೆಸರನ್ನು ಟೈಪ್ ಮಾಡಿ!

Tags

Related Articles

Leave a Reply

Your email address will not be published. Required fields are marked *

Language
Close