About Us Advertise with us Be a Reporter E-Paper

ಅಂಕಣಗಳು

ಮಹಿಳೆಯರ ಭದ್ರತೆ, ಸುಪ್ರೀಂ ಕಳವಳ

ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ  ಅಧಿಕಾರಿಗಳು ವಿಫಲರಾಗಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಬಿಹಾರದ ಗೃಹದಲ್ಲಿ ಅಬಲೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರದ ಕರಾಳ ಕಥೆ ದಿನಕ್ಕೊಂದರಂತೆ ಅನಾವರಣಗೊಳ್ಳುತ್ತಿರುವ ಸಂಬಂಧ ಸಲ್ಲಿಸಲಾಗಿದ್ದ ಮನವಿಯ ತುರ್ತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಿಹಾರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಆಶ್ರಯ ಗೃಹಗಳಂತಹ ಪಾಪಕೂಪಗಳು ಅಸ್ತಿತ್ವಕ್ಕೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. ದೇಶದಲ್ಲಿ ಪ್ರತಿ 6 ಗಂಟೆಗಳಿಗೊಂದರಂತೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದ್ದು, ಪ್ರತಿ ವರ್ಷ 38,000  ನಡೆಯುತ್ತಿವೆ. ಆಡಳಿತ ನಡೆಸುತ್ತಿರುವ ಸರಕಾರಗಳಿಗೆ ಇವು ಗಮನಕ್ಕೆ ಬಂದಿಲ್ಲವೇ ಎಂದು ಕೋರ್ಟ್ ಝಾಡಿಸಿದೆ. ಒಂರ್ಥದಲ್ಲಿ ಸುಪ್ರೀಂ ಕೋರ್ಟಿನ ಈ ಕಟು ಟೀಕೆ ಬಹುತೇಕ ದೇಶವಾಸಿಗಳ ಕೂಗೂ ಆಗಿದೆ ಎಂದೇ ಹೇಳಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಅಂಕೆ ಮೀರುತ್ತಿರುವುದು ಸುಳ್ಳಲ್ಲ. ಸಮಾಜದಲ್ಲಿ ಸೂಕ್ತ ರಕ್ಷಣೆ ಇಲ್ಲದೆ ಮಹಿಳೆಯರು ಅನಾಥರಾಗುತ್ತಿರುವುದು ಎಲ್ಲರೂ ಬಲ್ಲ ವಿಷಯ. ಆದಾಗ್ಯೂ ಅಧಿಕಾರ ವರ್ಗ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಇಡೀ ದೇಶವೇ  ತಗ್ಗಿಸುವಂತಾದ ನಿರ್ಭಯಾ ಹತ್ಯಾಚಾರದ ನಂತರ ಸರಕಾರಗಳು ಮಹಿಳೆಯರ ಸುರಕ್ಷತೆ ಬಗ್ಗೆ ಪುಂಖಾನುಪುಂಖವಾಗಿ ಹೇಳಿದ್ದೇ ಬಂತು. ಆದರೆ ಅದಾವುದೂ ಕಾರ್ಯರೂಪಕ್ಕೆ ಬರಲಿಲ್ಲ. ನಿರ್ಭಯಾ ಹೆಸರಿನಲ್ಲಿ ಆಗಿನ ಕೇಂದ್ರ ಸರಕಾರ ಒಂದು ನಿಧಿಯನ್ನು ಸ್ಥಾಪಿಸಿ ಅದನ್ನು ಮಹಿಳೆಯರ ಸುರಕ್ಷತೆಗೆ ಬಳಸುವುದಾಗಿ ಘೋಷಿಸಿತ್ತು. ದುರಂತವೆಂದರೆ ನಿರ್ಭಯಾ ಪ್ರಕರಣ ಒಂದು ಸಂಕೇತವಾಗಿ ಉಳಿಯಿತೇ ಹೊರತು ಕೀಚಕ ಸಂತತಿಯ ಕಡಿವಾಣಕ್ಕೆ ದಾರಿದೀಪವಾಗಲಿಲ್ಲ. ಆಶ್ರಯ ಗೃಹಗಳಂತಹ ಸಾಮೂಹಿಕ ವಸತಿ ಕೇಂದ್ರಗಳನ್ನು ಖಾಸಗಿಯವರ ಸುಪರ್ದಿಗೆ ಕೊಟ್ಟು ಕೈತೊಳೆದುಕೊಳ್ಳುವಂತಹ ಸರಕಾರಗಳು  ಮಾರಕ. ಈ ಗೃಹಗಳ ಮೇಲೆ ನಿಗಾ ಇಡಬೇಕು ಎಂಬ ಕನಿಷ್ಠ ಜ್ಞಾನವೂ ಬಿಹಾರದ ಅಧಿಕಾರಿಗಳಿಗೆ ಇಲ್ಲದೇ ಹೋಗಿದ್ದು ವಿಪರ್ಯಾಸವೇ ಸರಿ. ಬಿಹಾರದ ಘಟನೆ ಬೆಳಕಿಗೆ ಬಂದ ಬೆನ್ನಲ್ಲಿಯೇ ಉತ್ತರ ಪ್ರದೇಶದಲ್ಲಿ ಸಹ ಇಂತಹುದೇ ಘಟನೆ ವರದಿಯಾಗಿರುವುದು ವ್ಯವಸ್ಥೆಯ ಜಡತ್ವವನ್ನು, ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಮಹಿಳೆಯರನ್ನು ಶೋಷಿಸುವ ಶಕ್ತಿಗಳಿಗೆ ಎಚ್ಚರಿಕೆ ಸಂದೇಶವೊಂದನ್ನು ಸರಕಾರ ರವಾನಿಸಬೇಕಿದೆ ಮತ್ತು ಅದು ತುರ್ತಾಗಿ ಆಗಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close