About Us Advertise with us Be a Reporter E-Paper

ಅಂಕಣಗಳು

ಮಹಿಳಾ ತಂತ್ರಜ್ಞರು, ಉದ್ಯಮಿಗಳಿಗೆ ಸಿಗಲೇಬೇಕು ಮತ್ತಷ್ಟು ಪ್ರೋತ್ಸಾಹ

ರಶ್ಮಿ ಮೋಹನ್

ಪ್ರತಿ ನಿಮಿಷಕ್ಕೆ ನಾವು ಒಂದು ದೇಶವಾಗಿ 20 ಲಕ್ಷ ರು. ಕಳೆದುಕೊಳ್ಳುತ್ತಿದ್ದೇವೆ ಅಂದರೆ ನಿಮಗೆ ಹೇಗನಿಸಬಹುದು? ಏನು ಹೇಳುತ್ತೀರಿ? ಆ ಮೊತ್ತದಲ್ಲಿ ಏನೆಲ್ಲ ಮಾಡಬಹುದು, ನಮ್ಮ ರೈತರ ಕೆಲಸ ಹಗುರ ಮಾಡುವ ಒಂದು ವ್ಯವಸಾಯ ಉಪಕರಣ ನಿರ್ಮಿಸಬಹುದು, ‘ಯಾತ್ರಾ’ ಸಾಧನದ ಬಟನ್  ನಿಮ್ಮ ಪ್ರವಾಸ ಯೋಜನೆ ಸಿದ್ಧಪಡಿಸಬಹುದು. ಭಾರತೀಯ ಮಹಿಳೆಯರಿಗೆ ಅಪರೂಪವಾದ ಉತ್ಕೃಷ್ಟ ಗುಣಮಟ್ಟದ ಒಳ ಉಡುಪು ಈ ಹಣದಲ್ಲಿ ಸಿಗುತ್ತದೆ…ಅಂದರೆ ನಾವು-ನೀವು ಚಿಂತಿಸಿ ತುಂಬಿಕೊಡಬೇಕಾದಂತಹ ದೊಡ್ಡ ಮೊಬಲಗೇ ಅದು ಎಂಬುದು ಖಂಡಿತ. ಪ್ರತಿ ಸಾರಿ ಒಬ್ಬ ಮಹಿಳಾ ಎಂಜಿನಿಯರ್ ಕೆಲಸ ಬಿಟ್ಟಾಗ ಅಥವಾ ಸ್ಪರ್ಧೆಯಲ್ಲಿ ಮಹಿಳಾ ಉದ್ಯಮಿಯೊಬ್ಬರಿಗೆ ಅವಕಾಶ ನಿರಾಕರಿಸಲಾದಾಗ  ಈ ನಷ್ಟ ಉಂಟಾಗುತ್ತಿದೆ ಎಂದರೆ ಅಚ್ಚರಿಯಾಗಬಹುದು. ಆದರೆ ಒಂದು ಹಂತದವರೆಗೆ ಕಾರ್ಯನಿರ್ವಹಿಸಿ ಆನಂತರ ಮಹಿಳಾ ತಂತ್ರಜ್ಞರು, ಎಂಜಿನಿಯರುಗಳು ಮಾಯವಾಗುವಂತೆ  ನಮ್ಮ ವ್ಯವಸ್ಥೆಗೆ ನಾವು ಈ ಬೆಲೆ ತೆರಬೇಕಿದೆ.

ನಾನು ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿ ಅನೇಕ ಶಾಲೆಗಳಿಗೆ ಭೇಟಿ ನೀಡುತ್ತಿರುತ್ತೇನೆ. ಅಲ್ಲೆಲ್ಲ ಉತ್ಕೃಷ್ಟ ಬುದ್ಧಿಮತ್ತೆಯ, ಕಲಿಕೆಯ ವಿಷಯಗಳಲ್ಲಿ ಅತ್ಯುತ್ತಮವಾಗಿ ನಿರ್ವಹಿಸುವ ಹುಡುಗಿಯರು ಕಾಣಸಿಗುತ್ತಾರೆ. ಆಗಾಗ ಕೇಳಿಬರುವ ‘ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತ ವಿಷಯಗಳ ಅಧ್ಯಯನವನ್ನು ಹೆಚ್ಚು ಹೆಣ್ಣುಮಕ್ಕಳು ಮಾಡುವುದಿಲ್ಲ; ಹಾಗಾಗಿ ಈ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಲ್ಲಿ ಒಂದು ವೈವಿಧ್ಯ ಇರುವುದಿಲ್ಲ’ ಎಂಬ ಅಭಿಪ್ರಾಯವನ್ನು ಪರೀಕ್ಷಿಸಲು ನನಗೆ ಈ ಅಕಾಶ ನೆರವಾಯಿತು.  ವಸ್ತುಸ್ಥಿತಿ ಹಾಗೇನೂ ಇಲ್ಲ. ನಮ್ಮ ಎಂಜಿನಿಯರಿಂಗ್ ಕಾಲೇಜುಗಳಿಂದ ಶೇ.30ಕ್ಕೂ ಅಧಿಕ ಮಹಿಳಾ ಪದವೀಧರರು ಹೊರಬೀಳುತ್ತಾರೆ. ಮನೆಗಳಲ್ಲಿ ಪಾಲಕರೂ ತಮ್ಮ ಹೆಣ್ಣುಮಕ್ಕಳನ್ನು ಎಂಜಿನಿಯರ್ ಮಾಡಲು ಉತ್ಸುಕರಾಗಿರುತ್ತಾರೆ. ನಿಮಗೊಂದು ಸಣ್ಣ ಉದಾಹರಣೆ ಹೇಳಬೇಕೆಂದರೆ ನನ್ನ ಕಸಿನ್ ಮಗಳು ಒಬ್ಬ ಜಾಣ ಹುಡುಗಿ. ಆದರೆ ಅವಳು ಡಾನ್‌ಸ್ ಕ್ಲಾಸ್‌ಗೆ ಸರಿಯಾಗಿ ಹೋಗುತ್ತಿಲ್ಲ ಎಂದು ಆತನ ಪತ್ನಿ ಒಮ್ಮೆ ಸುಮ್ಮನೆ ಹೀಗೇ ದೂರಿದಳು. ಅದಕ್ಕೆ ನನ್ನ ಕಸಿನ್ ಹೇಳಿದ ಉತ್ತರ ಏನು ಗೊತ್ತೇ? ಗಣಿತದಲ್ಲಿ  ಚುರುಕಾಗಿರುವುದರಿಂದ ಈ ದೂರನ್ನು ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳಬೇಕಾದ್ದಿಲ್ಲ!

ಇಷ್ಟೆಲ್ಲ ಶ್ರಮವಹಿಸಿ ನಾವು ಹುಡುಗಿಯರನ್ನು ಎಂಜಿನಿಯರ್ ಮಾಡುವುದು ಕೆಲ ಕಾಲದ ನಂತರ ಅವರು ರಂಗದಿಂದ ಕಣ್ಮರೆಯಾಗಿಬಿಡಲಿ ಎಂದೇ? ಈ ಸಮಸ್ಯೆಗೆ ಇರುವ ನಾನಾ ಮುಖಗಳನ್ನು ಇಂದು ಈ ಭಾಷಣದಲ್ಲಿ ನಿಮಗೆ ಪರಿಚಯಿಸುವುದು ನನ್ನ ಮುಖ್ಯ ಉದ್ದೇಶ. ಆಗಲೇ ಹೇಳಿದಂತೆ, ಕಾಲೇಜುಗಳಲ್ಲಿ ತಂತ್ರಜ್ಞಾನ ಅಥವಾ ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿರುವ ಹೆಣ್ಣುುಕ್ಕಳು ಧಂಡಿಯಾಗಿ ಸಿಗುತ್ತಾರೆ ಸರಿ, ಆದರೆ ಒಂದು 24 ಗಂಟೆ ನಡೆಯುವ  ಸ್ಪರ್ಧೆಯಲ್ಲಿ ಅವರ ಗೈರು ಎದ್ದುಕಾಣುತ್ತದೆ. ಏಕೆ ಹೀಗೆ ಅಂದರೆ ವಿದ್ಯಾರ್ಥಿನಿಯರ ಸುರಕ್ಷೆಯ ಪ್ರಶ್ನೆ ಏಳುತ್ತದೆ. ‘ಆಲ್‌ನೈಟ್ ಕೋಡಿಂಗ್ ಪಾರ್ಟಿ’ ಕತೆಯೂ ಅಷ್ಟೇ. ಏಕೆ ರಿಸ್‌ಕ್ ತೆಗೆದುಕೊಳ್ಳುವುದು ಎಂದು ವ್ಯವಸ್ಥಾಪಕರು ವಿದ್ಯಾರ್ಥಿನಿಯರಿಗೆ ಅವಕಾಶವನ್ನೇ ನೀಡಿರುವುದಿಲ್ಲ.

ಉದ್ಯೋಗಸ್ಥರಾದಾಗಲೂ ಇದೇ ಸನ್ನಿವೇಶವನ್ನು ಅವರು ಎದುರಿಸಬೇಕು: ಯಾವುದೋ ಅತ್ಯಂತ ಮುಖ್ಯ, ಆಸಕ್ತಿದಾಯಕ, ಸವಾಲಿನ ಕೆಲಸವನ್ನು ಪುರುಷ ಸಹೋದ್ಯೋಗಿಗಳು ಮದ್ಯ ಗುಟಕರಿಸುತ್ತ, ಲೋಕದ ಪರಿವೆಯೇ ಇಲ್ಲದೆ ನಾವು ‘ಸ್ಮಶಾನದ ಶಿಫ್‌ಟ್’ ಎಂದು ಕರೆಯುವ ತಡರಾತ್ರಿ ಪಾಳಿಯಲ್ಲಿ  ಮಹಿೆಯರು ಮನೆಗೆ ಧಾವಿಸಿರುತ್ತಾರೆ. ಮರು ದಿನ ಕಚೇರಿಗೆ ಬರುವ ವೇಳೆಗೆ ಬಹಳಷ್ಟು ಕೆಲಸ ಮುಗಿದುಹೋಗಿದ್ದು ತಾವು ಏನೂ ಮಾಡಲಾಗಲಿಲ್ಲ ಎಂಬ ಹತಾಶೆ ಅವರನ್ನು ಕಾಡುತ್ತದೆ. ಬುದ್ಧಿವಂತ ಹುಡುಗರೊಂದಿಗೆ ‘ಸಹಯೋಗ’ ಈ ರೀತಿಯಲ್ಲಿ ಅವರಿಗೆ ಸಾಧ್ಯವೇ ಇಲ್ಲ. ಆದರೆ ಒಂದು ‘ಚಹದ ಬಿಡುವಿನಲ್ಲಿ’ ಸಹ ಎಷ್ಟೊಂದು ಚಕಮಕಿ, ವಿಚಾರ ವಿನಿಯೋಗ, ಸಹೋದ್ಯೋಗಿಗಳು ಪರಸ್ಪರ ವಿಷಯ ಹಂಚಿಕೊಳ್ಳುವುದು, ಬೆಳೆಯುವುದು ಅವಕಾಶವಿರುವ ಕ್ಷೇತ್ರದಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಕಾಡುತ್ತೆ.

ಈಗ ‘ಹೆರಿಗೆ ರಜೆ’  ವಿಷಯಕ್ಕೆ ಬರುತ್ತೇನೆ. ಕೇಳಲು ಎರಡು ಪದ, ಆದರೆ ಎಷ್ಟೆಲ್ಲ ಸಂಗತಿ ಆಗ ಜರುಗುತ್ತವೆ ಅಂದರೆ… ನನಗೂ ಎರಡು ಮಕ್ಕಳಿವೆ. ಆರು ತಿಂಗಳ ‘ಹೆರಿಗೆ ರಜೆ’ಯಲ್ಲಿ ಎಳೆ ಕಂದನೊಂದಿಗೆ ಇದ್ದುದು ಒಂದು ಮಾಂತ್ರಿಕ ಅನುಭವವೇ ಆಗಿತ್ತು. ಆದರೆ ತಾಯ್ತನದ ಆನಂದ ಅನುಭವಿಸುತ್ತಿರುವ ಆ ವೇಳೆ, ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಎಷ್ಟೆಲ್ಲ ಅವಕಾಶಗಳನ್ನು ಕಳೆದುಕೊಂಡೆವಲ್ಲ ಎಂದು ಸಹ ಹಳಹಳಿಸುತ್ತಿರುತ್ತೇವೆ. ರಜೆ ಮುಗಿಸಿ ವಾಪಸ್ ಕಚೇರಿ ಪ್ರವೇಶಿದಾಗ ಅಲ್ಲಿ ಯಾವುದೂ ಹಿಂದೆ ಇದ್ದಂತಿಲ್ಲ!  ಪ್ರತಿ ಕ್ಷಣವೂ ಬೆಳೆಯುತ್ತಿರುವುದರಿಂದ ನೀವು ಕೆಲಸ ಮಾಡುತ್ತಿದ್ದ ಪ್ರಾಜೆಕ್‌ಟ್  ಮುಗಿದೇಹೋಗಿದೆ. ಹೊಸದಾಗಿ ಶುರುವಾಗಿರುವ ಕೆಲಸದ ತಲೆ ಬುಡ ಅರ್ಥವಾಗುತ್ತಿಲ್ಲ ಎಂಬ ಸನ್ನಿವೇಶ. ಟಾಸ್‌ಕ್ ಮುಗಿಸಿದ ಟೀಮ್‌ಮೇಟ್‌ಗಳಿಗೆ ಈಗ ಎಷ್ಟೋ ಹೊಸ ವಿಷಯ ಗೊತ್ತಾಗಿದೆ. ಸಾಕಷ್ಟು ಪರಿಣತಿ ಗಳಿಸಿಕೊಂಡಿದ್ದಾರೆ. ಆದರೆ ನೀವು ಹಿಂದೆ ಉಳಿದುಬಿಟ್ಟಿದ್ದೀರಿ…ಅವರ ಸರಿ ಸಮ ಜ್ಞಾನ ಗಳಿಸಲು ಎಲ್ಲಿದೆ ಸಮಯ ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎದುರು ನಿಂತು ಹೆದರಿಸುತ್ತದೆ.

ಅದನ್ನೂ ನಾವು ಮಹಿಳೆಯರು ಸವಾಲಾಗಿ ಸ್ವೀಕರಿಸುತ್ತೇವೆ  ನಿಜ; ಮನೆಯನ್ನು ಸಂಭಾಳಿಸಿ, ಮಕ್ಕಳ ಹೋಮ್‌ವರ್ಕ್‌ಗೆ ನೆರವಾಗಿ, ಎಲ್ಲ ಜವಾಬ್ದಾರಿ ಪೂರೈಸಿದ ನಂತರವೇ ಉಸಿರುಗಟ್ಟಿಕೊಂಡು ಆಫೀಸಿಗೆ ಹೋಗುತ್ತೇವೆ. ಏಕೆಂದರೆ ‘ಅಯ್ಯೋ ನಾನು ನಿರೀಕ್ಷಿತ ಯೋಗ್ಯತೆ ಗಳಿಸಿಕೊಂಡಿಲ್ಲ’ ಎಂಬ ಕೊರಗಿನ ಶಕ್ತಿ ಹಾಗಿರುತ್ತದೆ. ಸಹಯೋಗದ ಸಮಸ್ಯೆ ನಿವಾರಿಸಲು ಮಹಿಳೆಯರಿಗೆ ಉದ್ಯೋಗ ನೀಡಿರುವ ಸಂಸ್ಥೆಯೂ ಚಿಂತಿಸಬೇಕು. ಎಲ್ಲ ಮೀಟಿಂಗ್‌ಗಳಲ್ಲಿ ಒಬ್ಬ ಮಹಿಳಾ ಸದಸ್ಯರು ಇರುತ್ತಾರೇನೋ ಸರಿ, ಆದರೆ ಆಕೆ ತುಟಿಪಿಟಿಕ್ಕೆನ್ನದೆ ಕೂತಿರುತ್ತಾರೆ. ಮುಂದಾಗಿ ಆಕೆಯ ಅಭಿಪ್ರಾಯ ಕೇಳಬೇಕು. ಹೆರಿಗೆ ರಜ ಮುಗಿಸಿ  ಕಷ್ಟದ ಸಮಸ್ಯೆ ಕೊಡುವುದು ಹೇಗೆ ಎಂದು ಯಾವುದೇ ವಿನಾಯಿತಿಯ ಕೃಪೆ ತೋರದೇ ಅತ್ಯಂತ ಕಷ್ಟದ್ದನ್ನೇ ಆರಿಸಿ ಕೊಡಬೇಕು. ಅಷ್ಟೇ ಅಲ್ಲ, ಅದಕ್ಕೆ ಬೇಕಾದ ಕೌಶಲ ಕಲಿತುಕೊಳ್ಳಲು ಸಮಯವನ್ನೂ ನೀಡಬೇಕು. ಹಾಗೆಯೇ ಕೋಡಿಂಗ್ ಸ್ಪರ್ಧೆಗಳನ್ನು ಏರ್ಪಡಿಸುವಾಗ ಮಹಿಳೆಯರೂ ಸ್ಪರ್ಧಿಸಲು ಅನುವಾಗುವಂತೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ಅವಧಿ ಇಡಲಂತೂ ಮರೆಯಲೇಬೇಡಿ!

 ಭಾರತೀಯ ಹುಡುಗಿಯರ ಇನ್ನೊಂದು ವಿಚಿತ್ರ ಸಮಸ್ಯೆ ಎಂದರೆ, ಇಲ್ಲಿತನಕ ನೀವು ಏನು ಉಡಬೇಕು, ತೊಡಬೇಕು ಯಾರನ್ನು  ಮುಂತಾದ ಮಹತ್ವದ ತೀರ್ಮಾನಗಳನ್ನೆಲ್ಲ ನಿಮ್ಮ ಪರವಾಗಿ ಬೇರೆಯವರು ತೆಗೆದುಕೊಂಡಿರುತ್ತಾರೆ. ಆ ಕಾರಣದಿಂದಾಗಿ ಸ್ವಂತವಾಗಿ ಒಂದು ನಿರ್ಣಯ ತೆಗೆದುಕೊಳ್ಳಬೇಕಾದಾಗ ಹೊಯ್ದಾಡುವಂತಾಗುತ್ತದೆ. ಉದಾಹರಣೆಗೆ ಕಾರ್ಪೊರೇಟ್ ಉದ್ಯೋಗ ಬಿಟ್ಟು ಒಂದು ಸ್ವಂತ ಉದ್ದಿಮೆ ಶುರುಮಾಡಲೇ ಎಂದು ನಾನು ಯೋಚಿಸಿದಾಗ ಮನೆಗೆಲಸದಲ್ಲಿ ನನಗೆ ಸಹಾಯ ಮಾಡುವ ಮಹಿಳೆಯೂ ಸೇರಿದಂತೆ ನಾನು ಎಲ್ಲರೊಂದಿಗೆ-ನನ್ನ ಪೋಷಕರು , ಸ್ನೇಹಿತರು, ಸಹೋದ್ಯೋಗಿಗಳು- ಸಮಾಲೋಚಿಸಿದೆ. ಅದು ಇಷ್ಟಕ್ಕೇ ಮುಗಿಯುವುದಿಲ್ಲ. ಈ ನನ್ನ ತೀರ್ಮಾನದಿಂದ ನನ್ನ ಪತಿಯ ಕೆಲಸ ಸಂಬಂಧಿತ ಪ್ರವಾಸ,  ಆರೋಗ್ಯ, ನನ್ನ ಮಕ್ಕಳ ಪರೀಕ್ಷೆ ವೇಳಾಪಟ್ಟಿಯ ಮೇಲೆ ಏನಾದರೂ ಪರಿಣಾಮವಾಗುತ್ತದೆಯೇ ಎಂಬುದನ್ನು ಸಹ ನಾನು ಯೋಚಿಸಬೇಕು.

ನಾವು ಮಹಿಳೆಯರು ಇದೆಲ್ಲದಕ್ಕೂ ತಯಾರಿರುತ್ತೇವೆ. ಮೇಲಿನ ಸಮಸ್ಯೆಗಳನ್ನೆಲ್ಲ ವಿಂಗಡಿಸಿ, ಪರಿಹರಿಸಿಕೊಂಡೆವು ಎನ್ನುವಷ್ಟರಲ್ಲಿ ಮತ್ತೊಂದು ಪ್ರಶ್ನೆ ಪಟ್ಟಿ ತಯಾರಿರುತ್ತದೆ: ಉದ್ದಿಮೆದಾರಳಾಗಿ ನಾನು ತಯಾರಿಸುತ್ತಿರುವ ಉತ್ಪನ್ನ ಮಾರುಕಟ್ಟೆಯ ಗುಣಮಟ್ಟ ತಲುಪಬಲ್ಲುದೇ? ಆರ್ಥಿಕ ನೆರವನ್ನು ಇದಕ್ಕಾಗಿ ಬೇಡಿಕೆ ಇಟ್ಟು ತೆಗೆದುಕೊಳ್ಳುವಷ್ಟು ಗಟ್ಟಿ ಉದ್ದಿಮೆ ಇದಾಗಿದೆಯೇ? ಹೀಗೇ…ಮಹಿಳೆಯರ ಜನ್ಮಜಾತ ಅಭ್ಯಾಸವಾದ ವಿಪರೀತ ವಿಶ್ಲೇಷಣೆಯಲ್ಲಿ ಕಳೆದುಹೋಗುತ್ತೇವೆ. ಶೀಘ್ರವಾಗಿ ಏಕೆ  ನಾವು ಏಕೆ ತೆಗೆದುಕೊಳ್ಳಲಾರೆವೆಂದರೆ ಅದರಲ್ಲಿ ನಮಗೆ ಪ್ರಾಕ್ಟೀಸ್ ಕಡಿಮೆ! ಜತೆಗೆ ವೈಫಲ್ಯದ ಭೀತಿ. ‘ಎಲ್ಲದರಲ್ಲೂ ಪರಿಣತಿ ಸಾಧಿಸು’ ಎಂದು ಹೆಣ್ಣುಮಕ್ಕಳಲ್ಲಿ ಎಳವೆಯಲ್ಲಿಯೇ ಬಿತ್ತಲಾದ ಪಾಠದಿಂದ ‘ಸುಮ್ಮನೆ ಒಂದು ಕೈ ನೋಡೋಣ’ ಎಂಬ ಆಕಾಂಕ್ಷೆ, ಪ್ರಯತ್ನ ನಮ್ಮಿಂದ ಸಾಧ್ಯವೇ ಇಲ್ಲ ಎಂಬಂತಾಗಿಬಿಟ್ಟಿದೆ.

‘ಏಕೆ ಈ ಸಂಗತಿಗಳ ಕುರಿತು ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತೀಯಾ’ ಎಂದು ಅನೇಕರು ನನ್ನನ್ನು ಕೇಳುತ್ತಾರೆ. ಅದಕ್ಕೆ ನನಗೆ ಎರಡು ಹೆಣ್ಣುಮಕ್ಕಳಿವೆ ಎನ್ನುವುದು ಒಂದು ಕಾರಣವಾದರೆ, ನನ್ನ ಮನೆಯಲ್ಲಿ  ಸುಳಿವೂ ಇಲ್ಲದೆ ಬೆಳೆದ ಹಿನ್ನೆಲೆ ಈ ಕುರಿತು ಹೆಚ್ಚು ತಿಳಿದುಕೊಳ್ಳುವಂತೆ ನನ್ನನ್ನು ಪ್ರೇರೇಪಿಸಿದೆ. ಇಪ್ಪತ್ತು ತುಂಬುತ್ತಲೇ ಮದುವೆಯಾಗುತ್ತೀನಿ ಎಂದು ಮನೆಯಲ್ಲಿ ಘೋಷಿಸಿದಾಗ ತಂದೆಗೆ ಸ್ವಲ್ಪ ಆಶ್ಚರ್ಯವಾದರೂ ನನ್ನ ಅಣ್ಣನನ್ನು ಈ ಕುರಿತು ಬೆಂಬಲಿಸಿದಷ್ಟೇ ನಿರಾಳವಾಗಿ ನನಗೂ ಸರಿ ಎಂದರು. ಇದನ್ನು ಯೋಚಿಸಿದಾಗ,  ವೃತ್ತಿರಂಗದಲ್ಲಿ ತಂತ್ರಜ್ಞಾನ ಪರಿಣತ ಮಹಿಳೆಯರು ಕಣ್ಮರೆಯಾಗುವುದನ್ನು ತಪ್ಪಿಸಲುವಲ್ಲಿ ಪಾಲಕರು, ಹಿರಿಯರ ಪಾತ್ರವೂ ಇದೆ ಎಂದು ಹೊಳೆಯಿತು. ಎಳವೆಯಿಂದಲೇ ಗಂಭೀರ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವರು ಹೆಣ್ಣುುಕ್ಕಳನ್ನು ಪ್ರೋತ್ಸಾಹಿಸಬೇಕು.  ಮುಂದೆ ಬದುಕಿನಲ್ಲಿ ಜವಾಬ್ದಾರಿಯುತ ನಿರ್ಣಯಗಳನ್ನು ತೆಗೆದುಕೊಳ್ಳುವುದು ಸಲೀಸಾಗುತ್ತದೆ. ಈ ಬಗ್ಗೆ ಜಾಗೃತಿ ಉಂಟಾದಷ್ಟೂ, ನಾವು-ನೀವು ನಮ್ಮ ಕೈಲಾದ ಪ್ರಯತ್ನ ಮಾಡಿದಷ್ಟೂ ‘ಕಣ್ಮರೆ’ ವಿದ್ಯಮಾನ ಒಂದಷ್ಟು ಹತೋಟಿಗೆ ಬರುತ್ತದೆ ಎಂಬುದು ನನ್ನ ವಿಚಾರ.

ನನ್ನ ಮಗಳಿಗೆ ಉಸೈನ್ ಬೋಲ್‌ಟ್ ಅಂದರೆ ಬಹಳ ಇಷ್ಟ. ಇಬ್ಬರೂ ‘ಒಲಿಂಪಿಕ್‌ಸ್’ ಪ್ರಸಾರ ನೋಡುತ್ತಾ ಕೂತಿದ್ದಾಗೊಮ್ಮೆ ‘ಅಮ್ಮ ನಾನು ಅಥ್ಲೀಟ್ ಆಗಲಾ? ಅದರಿಂದ ಹಣ ಮಾಡುವುದು ಸಾಧ್ಯವಾ?’ ಎಂದವಳು ಇದ್ದಕ್ಕಿದ್ದಂತೆ ಕೇಳಿದಳು. ನನ್ನ ತಲೆಯಲ್ಲಿ ನನ್ನದೇ  ‘ಮ್ಯಾತ್‌ಸ್ನಲ್ಲಿ ಅವಳು ತುಂಬ ಜಾಣೆಯಾಗಿರುವುದರಿಂದ ಆ ದಿಕ್ಕಿನಲ್ಲಿ ಮುಂದುವರಿಯಬೇಕಲ್ಲವೇ?’ ಆದರೆ ನಾಲಗೆ ಕಚ್ಚಿಕೊಂಡು ಆ ಮಾತನ್ನು ತಡೆದುಕೊಂಡೆ. ನೀನು ಏನು ಬೇಕಾದರೂ ಆಗಬಹುದು, ಮುಕ್ತವಾಗಿ ಆಯ್ಕೆ ಮಾಡಿೊಳ್ಳಬಹುದು ಎಂದು  ಆಶ್ವಾಸನೆ ಇತ್ತೆ.

ಸಭಾಂಗಣದಲ್ಲಿ ಕುಳಿತಿರುವ ಮಹಿಳಾ ಎಂಜಿನಿಯರುಗಳಿಗೂ ನಾನು ಹೇಳುವುದಿಷ್ಟೆ. ಎಲ್ಲ ಅವಕಾಶಗಳಿಗೂ ತೆರೆದುಕೊಳ್ಳಿ; ‘ಎಸ್’ ಎಂದು ಸಮ್ಮತಿಸುವುದನ್ನು ಆರಂಭಿಸಿ. ಯಾವುದೇ ಪ್ರಯತ್ನಕ್ಕೂ ಶೇ.50 ವೈಫಲ್ಯದ ಸಾಧ್ಯತೆ ಇರುತ್ತದೆಯಾದ್ದರಿಂದ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ.  ಹಾದಿಯಲ್ಲಿ ಬಂದ ಚಾನ್‌ಸ್ಗಳನ್ನು ಬಂದಂತೆಯೇ ಸ್ವೀಕರಿಸಿ. ಸಣ್ಣದೋ, ದೊಡ್ಡದೋ ಮುಖ್ಯವಾದದ್ದೋ ಅಥವಾ ಕ್ಷುಲ್ಲಕ ಎನಿಸುವಂಥದ್ದೋ, ನಿಮಗೆ ಆಸಕ್ತಿ ಹುಟ್ಟಿದರೆ  ಅಷ್ಟು ಸಾಕು.

 ನೀವು ಬರೆದ ಕೋಡ್ ಅನ್ನು ತುಂಬ ಸಮರ್ಥ ಎಂದು ಹೆಸರಾದ ಪುರುಷ ಸಹೋದ್ಯೋಗಿಗೆ ತೋರಿಸಲು ಹಿಂಜರಿಯಬೇಡಿ. ಮುಂದಿನ ಸಮ್ಮೇಳನ ನೀವು ಆಯೋಜಿಸುತ್ತೀರಾ ಎಂಬ ಪ್ರಸ್ತಾಪವನ್ನು ಮುಖ್ಯಸ್ಥರು ಮುಂದಿಟ್ಟರೆ ತಡಬಡಾಯಿಸದೆ ‘ಖಂಡಿತ’ ಎನ್ನಿ. ಹಲವಾರು ಹಂತಗಳಲ್ಲಿ ನಡೆಯುವ ಕಾರ್ಯಾಗಾರಕ್ಕೆ ಒಂದು ಪೋಸ್ಟರ್ ತಯಾರಿಸಬೇಕಿದೆ. ನೀವು ಮಾಡಿ ಎಂದು  ‘ಆಗದು’ ಎನ್ನಲಾಗದು! ಏಕೆಂದರೆ ಹೀಗೆ ಹಿಂದೆ ಮುಂದೆ ನೋಡದೇ ‘ಆಗಲಿ’ ಎಂದ ಕ್ಷಣದಿಂದ ನೀವು ಅದನ್ನು ಮಾಡಲು ಬದ್ಧರಾಗುತ್ತೀರಿ. ಶತಾಯಗತಾಯ ಅದನ್ನು ಮಾಡಿ ಮುಗಿಸಲು ಒಂದು ದಾರಿ ಕಂಡುಕೊಳ್ಳುತ್ತೀರಿ. ಅದಕ್ಕಿಂತ ಹೆಚ್ಚಾಗಿ ಈ ಪ್ರಕ್ರಿಯೆಯಲ್ಲಿ ಒಂದು ಕಲಿಕೆ ನಿಮ್ಮದಾಗುತ್ತದೆ. ಸೋರಿಹೋಗುತ್ತಿರು 20 ಲಕ್ಷ ರು. ನಷ್ಟದಲ್ಲಿ ನಿಮ್ಮ ‘ಕಾಣಿಕೆ’ ಸೇರುವುದು ಖಂಡಿತ ಬೇಡ.

Tags

Related Articles

Leave a Reply

Your email address will not be published. Required fields are marked *

Language
Close