About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಕೊಲ್ಲಿ ಕಾಸಿಗೆ ವಿಜಯನ್ ಹವಣಿಸುತ್ತಿರುವುದೇಕೆ?

ದೆಹಲಿ: ಕೇರಳ ಪ್ರವಾಹಕ್ಕೆ ವಿದೇಶದಿಂದ ಯಾವುದೇ ರೀತಿಯ ದೇಣಿಗೆಯನ್ನು ನಾವು ಸ್ವೀಕರಿಸುವುದಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ, “ಚಾಲ್ತಿಯಲ್ಲಿರುವ ನಿಯಮಗಳ ಅನುಗುಣವಾಗಿ, ಪರಿಹಾರ ಹಾಗು ಮರು ಅಭಿವೃದ್ಧಿ ಕಾರ್ಯಕ್ರಮಗಳನ್ನು ದೇಶೀಯವಾಗೇ ಮಾಡುತ್ತೇವೆ” ಎಂದು ಹೇಳಿದ್ದಾರೆ.

ವಿದೇಶೀ ಸರಕಾರಗಳು ನೀಡುವ ದೇಣಿಗೆಯನ್ನು ಸ್ವೀಕರಿಸುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ನಯಸರ್ಗಿಕ ವಿಪತ್ತುಗಳಿಂದಾಗುವ ಹಾನಿಯನ್ನು ರರಿಪೇರಿ ಮಾಡಿಕೊಳ್ಳುವುದನ್ನು 2004ರಿಂದ ಭಾರತ ತನ್ನ ನೀತಿಯನ್ನಾಗಿ ಮಾಡಿಕೊಂಡಿದೆ.

ವಿದೇಶೀ ದೇಣಿಗೆ ಸ್ವೀಕರಿಸಲು ಇರುವ ಅಧಿಕೃತ ಅಡೆತಡೆಗಳನ್ನು ಮೀರಲು ತಮ್ಮ ಸರಕಾರ ಯತ್ನಿಸುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. 700 ಕೋಟಿ ರುಗಳನ್ನು ಆರ್ಥಿಕ ನೆರವಿನ ರೂಪದಲ್ಲಿ ನೀಡಲು ಯುಎಇ ಮುಂದಾಗಿರುವುದಾಗಿ ತಿಳಿಸಿದೆ.

ಕೊಲ್ಲಿ ಹಣಕ್ಕೆ ದಂಬಾಲು ಬಿದ್ದಿರುವ ವಿಜಯನ್‌, ಈ ಕುರಿತಂತೆ ಪ್ರಧಾನ ಮಂತ್ರಿ ಕಾರ್ಯಾಲಯದೊಂದಿಗೂ ಸಂಪರ್ಕ ಸಾಧಿಸುವುದಾಗಿ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close