About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಪಟ್ಟಿಗೆ ಪಟ್ಟು ಹಾಕಿದ ಕುಸ್ತಿಪಟುಗಳು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಂಡು ಕಲೆ ಎಂದೇ ಖ್ಯಾತಿಯಾದ ಕುಸ್ತಿ ವಿಜೃಂಭಿಸಿತು. ಅಖಾಡದಲ್ಲಿ ತಮ್ಮ ನೆಚ್ಚಿ ಪೈಲ್ವಾನರನ್ನು ಕಂಡು ಪ್ರೇಕ್ಷಕರು ಜೈಕಾರದ ಘೋಷಣೆ ಕೂಗುವ ಮೂಲಕ ಹುರಿಯಾಳುಗಳನ್ನು ಹುರಿದುಂಬಿಸಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರೇ ಪೈಲ್ವಾನರನ್ನು ಅಖಾಡಕ್ಕೆೆ ಇಳಿಸುವ ಮೂಲಕ ನಾಡ ಹಬ್ಬ ದಸರಾ ಮಹೋತ್ಸವದ ನಿಮಿತ್ತ ನಡೆಯುವ ದಸರಾ ನಾಡ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.

ನಗರದ ದೊಡ್ಡಕೆರೆ ಮೈದಾನದಲ್ಲಿರುವ ಡಿ.ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಫಕೀರ ಅಹಮದ್ ಸಾಹೇಬರ ಗರಡಿಯ ಪೈ. ಪ್ರವೀಣ ಚಿಕ್ಕಹಳ್ಳಿ, ಬೆಳಗಾಂನ ಪೈ. ಸಾಗರ ಎಲಡ್ಕಿಗೆ ಬೆನ್ನು ತಟ್ಟುವ ಮೂಲಕ ಕುಸ್ತಿ ಕಾಳಗದಲ್ಲಿ ಸೆಣೆಸಲು ಅವಕಾಶ ನೀಡಿ ಮಾತನಾಡಿದರು.

ಮೈಸೂರಿನ ಒಡೆಯರು 1,610ರಲ್ಲಿ ಪ್ರಥಮ ಬಾರಿಗೆ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವ ನಡೆಸಿದರು. ಸ್ವಾತಂತ್ರ್ಯ ಪೂರ್ವ, ನಂತರದದಲ್ಲಿ ಹಲವು ಕ್ರೀಡೆಗಳೊಂದಿಗೆ ಗ್ರಾಮೀಣ ಪ್ರದೇಶದ ಗಂಡು ಕಲೆಯಾದ ಕುಸ್ತಿಗೆ ಹೆಚ್ಚು ಪ್ರೋತ್ಸಾಹ ನೀಡಿ ಬೆಳೆಸಿದರು. ಮೈಸೂರಿನ ಜನತೆ ಕೂಡ ಕುಸ್ತಿಯ ಬಗ್ಗೆೆ ಮೊದಲಿನಿಂದಲೂ ಅಭಿಮಾನ ಹೊಂದಿದ್ದು, ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನಮ್ಮ ಸರಕಾರವು ಕೂಡ ಕುಸ್ತಿ ಸೇರಿ ಎಲ್ಲ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು.

ಪುಣೆಯ ಪೈ. ಭಾರತ್ ಮದನೆ ಅವರನ್ನು 13 ನಿಮಿಷ 21 ಸೆಕೆಂಡ್‌ಗಳಲ್ಲಿ ಚಿತ್ ಮಾಡುವ ಮೂಲಕ ವಿಜಯಿಯಾದರು. ಇದಕ್ಕೂ ಮುನ್ನ ಪೈ.ಪ್ರವೀಣ್ ಚಿಕ್ಕಹಳ್ಳಿ ಮತ್ತು ಬೆಳಗಾವಿ ಪೈ.ಸಾಗರ ಎಲಡ್ಕಿ ನಡುವಿನ ಉದ್ಘಾಟನಾ ಕುಸ್ತಿ ಡ್ರಾನಲ್ಲಿ ಅಂತ್ಯಗೊಂಡಿತು.

ಸಚಿವ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಎನ್.ಮಹೇಶ್, ಶಾಸಕ ಅಶ್ವಿನ್‌ಕುಮಾರ್, ಮಹದೇವು, ಕರ್ನಾಟಕ ಒಲಂಪಿಕ್ ಸಂಸ್ಥೆೆಯ ಅಧ್ಯಕ್ಷ ಕೆ.ಗೋವಿಂದರಾಜು, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇದ್ದರು.

Tags

Related Articles

Leave a Reply

Your email address will not be published. Required fields are marked *

Language
Close