ಕೃಷಿ ಯೋಜನೆಗಳು ಯಾರ ಉದ್ಧಾರಕ್ಕಾಗಿ?

Posted In : ಅಂಕಣಗಳು, ಯಾರಿಗೆ ಹೇಳೋಣ?

ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಕೃಷಿ ಕ್ಷೇತ್ರದ ಕೊಡುಗೆ ಕ್ಷೀಣಿಸುತ್ತಿದ್ದರೂ ಸಹ, ಕೃಷಿ ಕ್ಷೇತ್ರವನ್ನು ಉದ್ಯೋಗ ಸೃಷ್ಟಿಸುವ ಬಹುದೊಡ್ಡ ಚಟುವಟಿಕೆಯನ್ನಾಗಿ ಇಂದಿಗೂ ಗುರುತಿಸಲಾಗುತ್ತಿದೆ. ಭಾರತದಲ್ಲಿ ಹಸಿವು ಮುಕ್ತ ವಾತಾವರಣವನ್ನು ನಿರ್ಮಿಸುವುದಕ್ಕಾಗಿ ಆಹಾರ ಭದ್ರತಾ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಇದರನ್ವಯ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೊಟ್ಟೆತುಂಬ ಆಹಾರವನ್ನೊದಗಿಸುವುದನ್ನು ನಿಯಮೀಕರಣಗೊಳಿಸಲಾಗಿದೆ. ರಾಜ್ಯ ಸರಕಾರವು ಕೃಷಿ ಇಲಾಖೆಯ ಯೋಜನೆ ಹಾಗೂ ಯೋಜನೇತರ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 3823.74 ಕೋಟಿ ರುಪಾಯಿಗಳನ್ನು ಒದಗಿಸಲಾಗಿದೆಯೆಂದು ತಿಳಿಸಿದೆ. ಸಮಗ್ರ ಕೃಷಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಣ್ಣು ಆರೋಗ್ಯ ಅಭಿಯಾನ, ಕೃಷಿಭಾಗ್ಯ ಯೋಜನೆ, ಕೃಷಿ ಯಾಂತ್ರೀಕರಣ, ಹನಿ ಮತ್ತು ಲಘು ನೀರಾವರಿ ಹಾಗೂ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳ ಸ್ಥಾಪನೆ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡಿದೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಉತ್ತರಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಮುಂಗಾರು ಪರಿಣಾಮ 176 ತಾಲೂಕುಗಳ ಪೈಕಿ 160 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಯಿತು. ಸರಕಾರವೇ ನೀಡಿರುವ ಮಾಹಿತಿ ಪ್ರಕಾರ ಆಹಾರಧಾನ್ಯಗಳ ಉತ್ಪಾದನಾ ಗುರಿಯನ್ನು 118 ಲಕ್ಷ ಟನ್‌ನಷ್ಟು ಹೊಂದಲಾಗಿತ್ತಾದರೂ, ಉತ್ಪಾದನೆ ಮಾತ್ರ 87ಲಕ್ಷ ಟನ್ ಆಗುವ ನಿರೀಕ್ಷೆ ಇದೆ ಎಂದು ಅಂದಾಜಿಸಿದೆ.

ಪ್ರತಿವರ್ಷ ಸಾವಿರಾರು ಕೋಟಿ ರುಪಾಯಿಗಳನ್ನು ವ್ಯಯಿಸಲಾಗುತ್ತಿದ್ದರೂ ಸಹ ತಾಂತ್ರಿಕತೆ ಹಾಗೂ ಯಾಂತ್ರೀಕರಣ ಅಗಾಧ ಪ್ರಮಾಣದಲ್ಲಿ ಬೆಳವಣಿಗೆಯನ್ನು ಕಾಣುತ್ತಿದ್ದರೂ ಸಹ ಕೃಷಿ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಅಧಃಪತನಕ್ಕಿಳಿಯಲು ಕಾರಣಗಳೇನಿರಬಹುದು? ರಾಜ್ಯದ ಕೃಷಿಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಸುಮಾರು ಹದಿನೇಳಕ್ಕಿಂತ ಹೆಚ್ಚು ಘಟಕಗಳು ಪಾಲುದಾರಿಕೆಯನ್ನು ವಹಿಸಿಕೊಂಡಿವೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ ಮತ್ತು ಕೃಷಿ ಮಾರುಕಟ್ಟೆಗಳೆಂಬ ಇಲಾಖೆಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದರೆ, ಕೃಷಿ ಮತ್ತು ತೋಟಗಾರಿಕೆಗಾಗಿ ಬೆಂಗಳೂರು, ಧಾರವಾಡ, ರಾಯಚೂರು, ಶಿವಮೊಗ್ಗ ಮತ್ತು ಬಾಗಲಕೋಟೆಗಳಲ್ಲಿ ವಿಶ್ವವಿದ್ಯಾಲಯಗಳು ತಲೆಯೆತ್ತಿ ನಿಂತಿವೆ. ಇನ್ನುಳಿದಂತೆ ಕೆ.ಎಫ್.ಎಫ್.ವಿ, ಎ.ಎಸ್.ಡಬ್ಲೂ.ಸಿ, ಕೆ.ಎಸ್.ಎಸ್.ಸಿ.ಎ ಹಾಗೂ ಕೆ.ಎ.ಪಿ.ಪಿ.ಇ.ಸಿ ಎಂಬ ನಿಗಮಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದು ಕರ್ಲ್ಬುಗಿಯಲ್ಲಿ ತೊಗರಿ ಮಂಡಳಿ ತಲೆ ಎತ್ತಿ ನಿಂತಿದೆ. ಎಲ್ಲ ಮಂಡಳಿ ಮತ್ತು ನಿಗಮಗಳೊಂದಿಗೆ ಸಹಭಾಗಿತ್ವದಲ್ಲಿ ಕರ್ತವ್ಯವನ್ನು ನಿರ್ವಹಿಸುವಂತೆ ಜಲಾನಯನ ಅಭಿವೃದ್ಧಿ ಇಲಾಖೆಯನ್ನು ಸಮೀಕರಣಗೊಳಿಸಲಾಗಿದೆ. ಕೇವಲ ಇವುಗಳ ನಿರ್ವಹಣೆಗಾಗಿ ವೇತನ, ಭತ್ಯೆ ಮತ್ತು ಸೌಲಭ್ಯಗಳಿಗಾಗಿ 497.13 ಕೋಟಿ ರುಪಾಯಿಗಳಷ್ಟು ಅನುಮೋದಿತ ಅನುದಾನವನ್ನು ಒದಗಿಸಲಾಗಿದೆ.

ಇಷ್ಟೆಲ್ಲಾ ಎಡೆಬಿಡದ ಪ್ರಯತ್ನಗಳಿದ್ದರೂ ಕೃಷಿ ಕ್ಷೇತ್ರವು ಹೀನಾಯವಾಗಿ ನೆಲಕಚ್ಚುತ್ತಿರಲು ಕಾರಣಗಳನ್ನು ಹುಡುಕಿದಾಗ ದೊರಕುವ ಉತ್ತರಗಳು ಕೇಳುಗರಲ್ಲಿ ಗಾಬರಿಯನ್ನು ಹುಟ್ಟಿಸುತ್ತವೆ. ಕರ್ನಾಟಕದಲ್ಲಿ ಸಾಗುವಳಿಗೆ ಲಭ್ಯವಾಗುವ ಭೌಗೋಳಿಕ ಭೂಪ್ರದೇಶ 190 ಲಕ್ಷ ಹೆಕ್ಟೇರ್‌ಗಳಷ್ಟಿದೆ. ಆದರೆ ಈ ವರ್ಷ ಬಿತ್ತನೆಯಾದ ಪ್ರದೇಶವು ಕೇವಲ 106 ಲಕ್ಷ ಹೆಕ್ಟೇರ್‌ಗಳಷ್ಟು ಮಾತ್ರ. ಬಿತ್ತನೆಯಾದ ಎಲ್ಲ ಪ್ರಕಾರದ ಬೆಳೆಗಳಲ್ಲಿ ಕಬ್ಬು ಹೊರತುಪಡಿಸಿ ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಹತ್ತಿ, ಹಾಗೂ ತಂಬಾಕು ಬೆಳೆಗಳು ಗಣನೀಯವಾಗಿ ಕುಸಿತ ಕಂಡಿವೆ.

ಕೋಟಿ ವಿದ್ಯೆಗಿಂತಲೂ ಮೇಟಿ ವಿದ್ಯೆ ಮೇಲು, ರೈತನೇ ಅನ್ನದಾತ, ರೈತ ಈ ದೇಶದ ಬೆನ್ನೆಲುಬು ಮುಂತಾದ ಮಾತುಗಳು ಯಾವ ರೈತನನ್ನೂ ಸುಸ್ಥಿರಗೊಳಿಸಲು ಸಾಧ್ಯವಾಗಿರುವುದಿಲ್ಲ. ಪ್ರತಿವರ್ಷ ಸರಕಾರದಿಂದ ಘೋಷಣೆಯಾಗುವ ಯೋಜನೆಗಳು ಹಾಗೂ ರೂಪಿಸಲಾಗುವ ನಿಯಮಾವಳಿಗಳು ಈತನ ಬಾರದೆ ದಿನಗಳನ್ನು ಪೂರೈಸಿ ಬಿಡುತ್ತವೆ. ಅಷ್ಟಕ್ಕೂ ಇಲಾಖೆಗಳು, ಕೃಷಿ ವಿಶ್ವವಿದ್ಯಾಲಯಗಳು, ನಿಗಮಗಳು ಹಾಗೂ ಮಂಡಳಿಗಳು ರೂಪಿಸುವ ಯಾವುದೇ ಯೋಜನೆಗಳು ಕೃಷಿ ಪ್ರದೇಶದವರೆಗೆ ಪೂರೈಕೆಯಾಗದೆ ಅಂತ್ಯವನ್ನು ಕಂಡುಕೊಳ್ಳುತ್ತವೆ. ಇದಾವುದರ ಪರಿವೆ ಇಲ್ಲದ ರೈತ ತನ್ನ ಪಾಡಿಗೆ ತಾನು ಉತ್ಪಾದನೆಗಾಗಿ ವೆಚ್ಚ ಮಾಡಿದ ಪ್ರಮಾಣದಷ್ಟು ಸಹ ಆದಾಯವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿರುವುದಕ್ಕಾಗಿ ವ್ಯವಸ್ಥೆಯನ್ನು ಹಾಗೂ ತನ್ನನ್ನು ತಾನು ನಿಂದಿಸಿಕೊಳ್ಳುತ್ತಾ ದಿನದೂಡಲಾರಂಭಿಸುತ್ತಾನೆ. ಎಲ್ಲ ಮಾರ್ಗಗಳೂ ಅವನ ಪಾಲಿಗೆ ಮುಚ್ಚಿಕೊಂಡಾಗ ಬೇರೆ ಯಾವ ದಾರಿಯೂ ಕಾಣದೆ ಸುಳಿಯಿಂದ ಹೊರಬರಲಾಗದೆ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾನೆ. ಇಲ್ಲಿಯವರೆಗೆ ರೈತರ ಆತ್ಮಹತ್ಯೆಗೆ ಒಂದು ಲಕ್ಷ ರುಪಾಯಿಗಳನ್ನು ಪರಿಹಾರವಾಗಿ ನೀಡುತ್ತಿದ್ದ ಮೊತ್ತವನ್ನು ಈಗ ಐದು ಲಕ್ಷಕ್ಕೆ ಏರಿಸಲಾಗಿದೆ. ಸರಕಾರದ ಈ ನಡಿಗೆ ರೈತರ ಆತ್ಮಹತ್ಯೆಯನ್ನು ತಡೆಗಟ್ಟುವಲ್ಲಿ ಯಾವ ಮಹತ್ತರ ಪಾತ್ರವನ್ನು ನಿರ್ವಹಿಸಬಲ್ಲದೆಂಬುದನ್ನು ಸರಕಾರವೇ ವಿವರಿಸಿ ಹೇಳಬೇಕಾಗಿದೆ. ಸಮಗ್ರ ಕೃಷಿಯನ್ನು ಸುಸ್ಥಿರಗೊಳಿಸುವುದಕ್ಕಾಗಿ ಬೇರೆ ದಿಕ್ಕಿನಲ್ಲಿ ಆಲೋಚಿಸದಿದ್ದರೆ ರೈತರಿಗೆ ಉಳಿಗಾಲ ಇರಲಾರದು.

ಕೃಷಿ ಅಭಿವೃದ್ಧಿ ಯೋಜನೆಯ ಪ್ರಮುಖ ಅಂಶಗಳಲ್ಲಿ ಸಸ್ಯ ಸಂರಕ್ಷಣೆಯೂ ಸೇರಿದೆ. ಕೃಷಿ ಉತ್ಪನ್ನಗಳನ್ನು ಸಂದರ್ಭದಲ್ಲಿ ದವಸ ಧಾನ್ಯಗಳಿಗೆ ಕಾಡುವ ಇಲಿ, ಹೆಗ್ಗಣ, ಕೀಟ ಮತ್ತು ರೋಗಗಳ ಕಾಟದಿಂದ ತೇವಾಂಶ ಕೊರತೆಯಿಂದ ಉಂಟಾಗುವ ನಷ್ಟವನ್ನು ತಪ್ಪಿಸಲು ಧಾನ್ಯ ಸಂಗ್ರಹಣಾ ಪೆಟ್ಟಿಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುತ್ತಿವೆ. ಅದೇ ರೀತಿ ಬೀಜದಿಂದ ಹಾಗೂ ಮಣ್ಣಿನಿಂದ ಹರಡುವ ರೋಗ ಮತ್ತು ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಬೀಜವನ್ನು ಬಿತ್ತನೆಗೆ ಉಪಯೋಗಿಸುವ ಮೊದಲು ಪೀಡೆ ನಾಶಕಗಳಿಂದ ಉಪಚರಿಸುವ ಕುರಿತು ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವೇ ಬೀಜೋಪಚಾರ ಆಂದೋಲನವಾಗಿದೆ. ಸುರಕ್ಷಿತ ಕೀಟನಾಶಕಗಳ ಮತ್ತು ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಕೌಶಲ ಪ್ರಾತ್ಯಕ್ಷಿಕೆಗಳನ್ನು ಅಲ್ಲಲ್ಲಿ ಏರ್ಪಡಿಸಲಾಗುತ್ತಿದೆ. ಮಳೆ, ಗಾಳಿ ಹಾಗೂ ಇತರೆ ಪ್ರಾಕೃತಿಕ ವೈಪರಿತ್ಯಗಳಿಂದ ಆಹಾರ ಧಾನ್ಯಗಳ ಗುಣಮಟ್ಟವನ್ನು ಸಂರಕ್ಷಿಸುವುದಕ್ಕಾಗಿ ರೈತರಿಗೆ ಸಹಾಯಧನದಲ್ಲಿ ಟಾರ್ಪಾಲಿನ್‌ಗಳನ್ನು ಪೂರೈಸಲಾಗುತ್ತಿದೆ. ಅದರೊಂದಿಗೆ ಮಣ್ಣು ಆರೋಗ್ಯ ಕುರಿತ ಅಭಿಯಾನಕ್ಕಾಗಿ ಅಪಾರ ಪ್ರಮಾಣದ ಹಣವನ್ನು ವ್ಯಯಿಸಲಾಗುತ್ತಿದೆ. ಕರ್ನಾಟಕದಲ್ಲಿ 78,32,000 ಕೃಷಿ ಹಿಡುವಳಿಗಳು ಅಸ್ತಿತ್ವದಲ್ಲಿವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಪ್ರತಿ ಹಿಡುವಳಿದಾರರ ಮಣ್ಣನ್ನು ಪರೀಕ್ಷಿಸಿ ಮಾಹಿತಿಯನ್ನು ನೀಡುವ ಉದ್ದೇಶವನ್ನು ಹೊಂದಿರುತ್ತದೆ.

ಮಣ್ಣು ಪರೀಕ್ಷಾ ಪ್ರಯೋಗಾಲಯಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನೇಮಿಸಿ ಈ ಕಾರ್ಯಕ್ರಮದಲ್ಲಿ ನಿರ್ವಹಣಾ ವೆಚ್ಚವನ್ನು ಭರಿಸಲಾಗುತ್ತಿದೆ. ಅವುಗಳೊಂದಿಗೆ ಸುಸ್ಥಿರ ಕೃಷಿ ಅಭಿಯಾನದಡಿ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆ, ಸೂಕ್ಷ್ಮ ನೀರಾವರಿ ಯೋಜನೆ, ಮಣ್ಣು ಆರೋಗ್ಯ ನಿರ್ವಹಣೆ ಮತ್ತು ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮ, ಪರಂಪರಾಗತ ಕೃಷಿ ವಿಕಾಸ ಯೋಜನೆ ಹಾಗೂ ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಕೃಷಿ ಯೋಜನೆಗಳೂ ಚಾಲ್ತಿಯಲ್ಲಿವೆ.
ಹೀಗೆ ಅಸಂಖ್ಯಾತ ಇಲಾಖೆಗಳು, ಅಧಿಕಾರಿಗಳು, ನಿಗಮ ಮಂಡಳಿಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದರೂ ಸಹ ಕೃಷಿ ಕ್ಷೇತ್ರ ಹಾಗೂ ರೈತನ ಬದುಕು ಸುಭದ್ರ ನೆಲೆಯನ್ನು ಕಂಡುಕೊಳ್ಳದಿರಲು ಕಾರಣಗಳಿವೆ. ಹೊಲ, ಬಿತ್ತನೆ, ನೇಗಿಲು, ಕುಂಟೆ, ಗೊಬ್ಬರ ಕಳೆ, ಇವುಗಳನ್ನು ಉಪಯೋಗಿಸದ ಹಾಗೂ ಅನುಭವಿಸದ ವ್ಯಕ್ತಿಗಳೆಲ್ಲರೂ ಕೃಷಿಕನಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುವ ಸ್ಥಾನವನ್ನಲಂಕರಿಸಿ ಬಿಟ್ಟಿದ್ದಾರೆ. ಹೀಗೆ ಹುದ್ದೆಯನ್ನು ಅಲಂಕರಿಸಿದವರು ಐಷಾರಾಮಿ ಬದುಕನ್ನವಲಂಬಿಸಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ನೀತಿನಿಯಮಗಳನ್ನು ರೂಪಿಸುತ್ತಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೃಜಿಸಲಾದ ಬಹಳಷ್ಟು ಹುದ್ದೆಗಳು ಹುದ್ದೆಯನ್ನಲಂಕರಿಸುವ ವ್ಯಕ್ತಿಯನ್ನು ತೃಪ್ತಿಪಡಿಸುವ ಹೊಂದಿವೆಯೇ ಹೊರತು ಕೃಷಿ ಹಾಗೂ ರೈತನ ಸಮಗ್ರ ಅಭಿವೃದ್ಧಿಯನ್ನಲ್ಲ! ಇಷ್ಟೆಲ್ಲಾ ಇಲಾಖೆಗಳು ಪ್ರತಿವರ್ಷ ಸಾವಿರಾರು ಕೋಟಿ ಹಣವನ್ನು ವ್ಯಯಿಸಿ ನೂರಾರು ಮಾರ್ಗದರ್ಶನಗಳನ್ನು ನೀಡುತ್ತಿವೆ. ಆದರೆ ಇಂದಿಗೂ ರೈತ ಬಯಸುತ್ತಿರುವುದು ಗುಣಮಟ್ಟದ ವಿದ್ಯುತ್, ಸಮರ್ಪಕ ನೀರು ಹಾಗೂ ವೈಜ್ಞಾನಿಕ ಬೆಲೆಗಳನ್ನು ಮಾತ್ರ. ಆದರೆ ಇವುಗಳನ್ನು ಪೂರೈಸುವ ಇಚ್ಛೆಯನ್ನು ಯಾವ ಸರಕಾರಗಳೂ ಹೊಂದಿರುವಂತೆ ಕಾಣುವುದಿಲ್ಲ. ಭಾರತ ಸಂವಿಧಾನದಲ್ಲಿ ಕೃಷಿಯನ್ನು ರಾಜ್ಯ ಪಟ್ಟಿಗೆ ಸೇರಿಸಲಾಗಿದೆ. ಆದುದರಿಂದ ಕೃಷಿ ಅಭಿವೃದ್ಧಿಯಲ್ಲಿ ರಾಜ್ಯ ಸರಕಾರದ ಪಾತ್ರ

Leave a Reply

Your email address will not be published. Required fields are marked *

five × one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top