About Us Advertise with us Be a Reporter E-Paper

ಗುರು

ಜಡತೆ ದೂರ ಮಾಡುವ ಯೋಗಾಭ್ಯಾಸ

ಈಚಿನ ದಿನಗಳಲ್ಲಿ ದೈಹಿಕ ರೀತಿಯಲ್ಲಿ ಯೋಗಾಭ್ಯಾಸ ಮಾಡುವ ಪದ್ಧತಿ ಜನಪ್ರಿಯವಾಗುತ್ತಿದೆ. ಯೋಗಾಭ್ಯಾಸದ ವಿವಿಧ ಅಂಗಗಳಲ್ಲಿ ದೈಹಿಕ ಪರಿಶ್ರಮ ಒಂದು ಭಾಗ ಅಷ್ಟೇ. ನಿಜವಾದ ಯೋಗಾಭ್ಯಾಸವೆಂದರೆ ಅದಕ್ಕಿಂತ ಹೆಚ್ಚಿನದು. ಶ್ರದ್ಧೆಯಿಂದ ಮಾಡಿದ ಯೋಗಾಭ್ಯಾಸದಿಂದ ವ್ಯಕ್ತಿಯ ವೈಯಕ್ತಿಕ ಜೀವನದ ಮೇಲೆ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ.

ಅಧ್ಯಾತ್ಮ ಉದ್ದೀಪನೆ
ಯೋಗಾಭ್ಯಾಸ ಎಂದರೆ ಅದು ಧರ್ಮಕ್ಕೆ ಸಂಬಂಧಿಸಿದ್ದು ಎಂದು ತಿಳಿಯಲಾಗದು. ವ್ಯಕ್ತಿಯ ಅಧ್ಯಾತ್ಮ ಚಿಂತನೆಯ ಮೇಲೆ ಯೋಗಾಭ್ಯಾಸದ ಪ್ರಭಾವ ಮೂಡುತ್ತದೆ. ಅಭ್ಯಾಸಿಗಳ ಆಂತರಿಕ ಶಾಂತಿಯ ಪಥವನ್ನು ಪ್ರೀತಿಯ ಮತ್ತು ಮೂಲಕ ಕಂಡುಕೊಳ್ಳಲು ಯೋಗಾಭ್ಯಾಸವು ಸಹಾಯ ಮಾಡುತ್ತದೆ. ಒಂದು ಸಣ್ಣ ಉದಾರಣೆ ಎಂದರೆ ಕರ್ಮದ ಕುರಿತು ಇರುವ ತಿಳುವಳಿಕೆಗಳು. ನಾವು ಮಾಡಿದ ಸತ್ಕಾರ್ಯಗಳು ಈ ಜನ್ಮದಲ್ಲಿ ಹಾಗೂ ಮುಂದಿನ ಜನ್ಮಗಳಲ್ಲಿ ಸದ್ಗತಿ ಪ್ರಾಪ್ತಿ ಗೆ ಸಹಕರಿಸುತ್ತದೆ ಎನ್ನುತ್ತದೆ ಕರ್ಮ ಸಿದ್ಧಾಂತ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಾವು ಇತರರಿಗೆ ಪ್ರೀತಿಯನ್ನು ತೋರಿಸಿದರೆ, ಆ ಪ್ರೀತಿ ನಮಗೆ ಇನ್ನೊಂದು ರೂಪದಲ್ಲಿ ಹಿಂದಿರುಗಿ ಬರುತ್ತದೆ.

ಮನಸಿಗೆ ಏಕಾಗ್ರತೆ ಮತ್ತು ಸ್ಪಷ್ಟತೆ
ಯೋಗಾಭ್ಯಾಸವು ನಿಯಮಿತವಾಗಿ ಮಾಡಬೇಕು ಎಂದು ಹೇಳುತ್ತದೆ. ಏಕೆಂದರೆ ಇದರಿಂದಾಗಿ ವ್ಯಕ್ತಿಯೋರ್ವನ ಚಿಂತನೆಗಳು ಸಕಾರಾತ್ಮಕವಾಗಿ ರೂಪುಗೊಳ್ಳುತ್ತವೆ. ಧ್ಯಾನ ಮಾಡುತ್ತಿರುವಾಗ ಆಗಾಗ ಬರುವ ನಕಾರಾತ್ಮಕ ಯೋಚನೆಗಳನ್ನು ಮೆಲ್ಲಗೆ ಮುಖ್ಯದಾರಿಯಿಂದ ಸರಿಸುವ ಕೆಲಸ ಮಾಡುವಂತಹದ್ದು ನಿಯಮಿತ ಉಸಿರಾಟ ಮತ್ತು ದೇಹದ ರಿಲ್ಯಾಕ್ಸೇಶನ್. ನಮ್ಮ ಭಾವನಾತ್ಮಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಇದು ಬಹಳ ಮುಖ್ಯ. ನಮ್ಮ ಜೀವನದಲ್ಲಿ ಬರುವ ಒಳ್ಳೆಯ ವಿಚಾರಗಳನ್ನು ಸ್ಪಷ್ಟವಾಗಿ ಗ್ರಹಿಸಲು ಸಾಧ್ಯವಾಗದಿದ್ದಾಗ ಮಾತ್ರ ಒತ್ತಡ ಚಿಂತೆ ಮತ್ತು ಖಿನ್ನತೆ ಕಾಡುತ್ತದೆ. ಧ್ಯಾನವು ಮನಸ್ಸಿನ ಗ್ರಹಿಕೆಯ ತೋರಿಸಿಕೊಡುತ್ತದೆ. ಆದ್ದರಿಂದಲೇ ವ್ಯಕ್ತಿಯೊಬ್ಬರ ಚಿಂತನೆಗಳನ್ನು ಈ ಕ್ಷಣಕ್ಕೆ ಪ್ರಸ್ತುತ ಸ್ಥಿತಿಗೆ ತರುವ ಮೂಲಕ ನಕಾರಾತ್ಮಕ ಚಿಂತನೆಗಳು ದೂರಾಗುತ್ತವೆ. ಧ್ಯಾನದ ಜೊತೆಯಲ್ಲಿ ಕೈತೋಟ ಮಾಡುವಿಕೆ ವ್ಯಾಯಾಮ ಹಾಗೂ ಬಿಸಿನೀರಿನ ಸ್ನಾನ ಮೊದಲಾದ ಸಕಾರಾತ್ಮಕ ಲೌಕಿಕ ಚಟುವಟಿಕೆಗಳು ಯೋಗಾಭ್ಯಾಸದ ಅತ್ಯುತ್ತಮ ಫಲಿತಾಂಶವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತವೆ.

ಸ್ವಯಂ ನಿಯಂತ್ರಣ ಮತ್ತು ಶಿಸ್ತು
ನಮ್ಮ ಜೀವನದಲ್ಲಿ ನಿತ್ಯದ ದಿನಚರಿಯಲ್ಲಿ ಉತ್ಪತ್ತಿಯಾಗುವ ಒತ್ತಡಕ್ಕೆ ಪ್ರತಿಯಾಗಿ ಉದ್ಭವಿಸುವ ಮಾನಸಿಕ ಪ್ರತಿಕ್ರಿಯೆ ಮತ್ತು ಮನಸ್ಸಿನ ಲಹರಿಯನ್ನ ನಿಯಂತ್ರಿಸುವ ಸಾಕಷ್ಟು ಪ್ರಗತಿ ಸಾಧಿಸಬಹುದು. ನಿಗದಿತವಾದ ಯೋಗಾಭ್ಯಾಸದಿಂದ ಮಾನಸಿಕ ಮತ್ತು ದೈಹಿಕ ಶಿಸ್ತನ್ನು ಕಾಪಾಡಲು ಸಾಧ್ಯವಾಗುತ್ತದೆ. ಇದರಿಂದಾಗಿ ಜೀವನದಲ್ಲಿ ಎದುರಾಗುವ ಸವಾಲುಗಳು ಮತ್ತು ಸನ್ನಿವೇಶಗಳನ್ನು ಸಮಚಿತ್ತದಿಂದ ಎದುರಿಸಬಹುದು. ನಾವು ಜೀವಿಸುವ ಈ ಜಗತ್ತಿನಲ್ಲಿ ಮತ್ತು ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಇರುವ ಚೈತನ್ಯದ ಕುರಿತು ಯೋಗಾಭ್ಯಾಸವು ನಮ್ಮನ್ನು ಎಚ್ಚರಿಸುತ್ತದೆ. ಇದೇ ರೀತಿಯ ಶಿಸ್ತುಬದ್ಧ ಅಭ್ಯಾಸದಿಂದಾಗಿ ವಾತಾವರಣದ ಚೈತನ್ಯವನ್ನು ನಮ್ಮ ಜೀವನದ ಉನ್ನತಿಗೆ ಉಪಯೋಗಿಸುವ ಮಾರ್ಗ ಹೊಳೆಯಬಹುದು. ಈ ಒಂದು ಮನೋಸ್ಥಿತಿಯಿಂದ ದೊರೆಯುವ ಜಡತೆಯಿಂದ ತುಂಬಿರಬಹುದಾದ ಜೀವನಕ್ಕೆ ಹೊಸ ತನವನ್ನು ನೀಡುವ ಮಾರ್ಗವನ್ನು ಹುಡುಕಲು ನಮ್ಮ ಮನಸ್ಸಿಗೆ ಸಾಧ್ಯವಾಗುತ್ತದೆ. (ಟ್ಯಾಮಿ ಸನ್ಸ್ ಬರಹವನ್ನು ಆಧರಿಸಿ)

Tags

Related Articles

Leave a Reply

Your email address will not be published. Required fields are marked *

Language
Close