About Us Advertise with us Be a Reporter E-Paper

Breaking Newsದೇಶಪ್ರಚಲಿತ

ಗೋ ರಕ್ಷಣೆಗೆ ಸೆಸ್ ವಿಧಿಸಲು ಮುಂದಾದ ಯುಪಿ​ ಸಿಎಂ ಯೋಗಿ ಆದಿತ್ಯನಾಥ್​

ಲಖನೌ: ಗೋವುಗಳ ರಕ್ಷಣಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಹೊಸ ಕ್ರಮ ಜಾರಿಗೆ ತಂದಿದೆ. ಇದರ ನಿರ್ವಹಣೆಗೆ ಶೇ.2 ಸೆಸ್​ ವಿಧಿಸಲು ನಿರ್ಧರಿಸಲಾಗಿದೆ. ಇದರನ್ವಯ ಉತ್ತರ ಪ್ರದೇಶದ ಪ್ರತಿ ಗ್ರಾಮ ಹಾಗೂ ನಗರಗಳಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗುತ್ತದೆ.

ಮಂಗಳವಾರ ನಡೆದ ಸಂಸದೀಯ ಸಭೆಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಇದರಡಿಯಲ್ಲಿ ಉತ್ತರ ಪ್ರದೇಶದ ಎಲ್ಲ ಹಳ್ಳಿ ಹಾಗೂ ನಗರಗಳಲ್ಲಿ ತಾತ್ಕಾಲಿಕ ಗೋಶಾಲೆ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ಬೀಡಾಡಿ ದನಗಳಿಗೆ ಆಶ್ರಯ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಎಲ್ಲಾ ಜಿಲ್ಲೆಗಳಲ್ಲಿ 1,000 ಹಸುಗಳನ್ನು ಸಾಕಬಹುದಾದ ಸಾಮರ್ಥ್ಯ ಉಳ್ಳ ಗೋಶಾಲೆಯನ್ನು ಸ್ಥಾಪನೆ ಮಾಡಲಾಗುತ್ತದೆ. ಇದರ ನಿರ್ವಹಣೆಗೆ ಶೇ.2 ಸೆಸ್​ ವಿಧಿಸಲು ನಿರ್ಧರಿಸಲಾಗಿದೆ. ಈ ಮೂಲಕ ಸರ್ಕಾರ ಗೋವುಗಳನ್ನು ರಕ್ಷಿಸಲು ಮುಂದಾಗಿದೆ.

ಅನೇಕರು ಗೋವುಗಳನ್ನು ಬೀದಿಯಲ್ಲಿ ಬಿಟ್ಟು ತೆರಳುತ್ತಾರೆ. ಈ ಗೋವುಗಳಿಗೆ ಆಶ್ರಯ ಒದಗಿಸುವುದು ನಮ್ಮ ಮುಖ್ಯ ಉದ್ದೇಶ. ಈ ಹೊಸ ಯೋಜನೆಯಿಂದ ಗೋವುಗಳಿಗೆ ರಕ್ಷಣೆ ಸಿಗುವ ಭರವಸೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲು ಕೂಡ ಉತ್ತರ ಪ್ರದೇಶ ಸರ್ಕಾರ ಹಸುಗಳ ಸಂರಕ್ಷಣೆಗೆ ಅನೇಕ ಕ್ರಮಗಳನ್ನು ಕೈಗೊಂಡಿತ್ತು.

Tags

Related Articles

Leave a Reply

Your email address will not be published. Required fields are marked *

Language
Close