About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಅತಿಯಾದ ಸಕ್ಕರೆ ಉತ್ಪಾದನೆ ಮಧುಮೇಹಕ್ಕೆ ಕಾರಣ, ಬೇರೆ ಬೆಳೆಗಳನ್ನು ಬೆಳೆಯಿರಿ: ಯೋಗಿ ಆದಿತ್ಯನಾಥ್‌

ಮೀರತ್‌: ವಿಪರೀತ ಕಬ್ಬು ಬೆಳೆಯಿಂದ ಪರೋಕ್ಷವಾಗಿ ಮಧುಮೇಹ ಖಾಯಿಲೆ ಹೆಚ್ಚಲು ಕಾರಣವಾದಂತೆ ಎಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ತಮ್ಮ ರಾಜ್ಯದ ರೈತರಿಗೆ ಬೇರೆ ಬೆಳೆಗಳನ್ನು ಬೆಳೆಯಲು ಸೂಚಿಸಿದ್ದಾರೆ.

“ಅತಿಯಾದ ಸಕ್ಕರೆ ಉತ್ಪಾದನೆಯಿಂದ ಅದರ ಅತಿಯಾದ ಸೇವನೆಗೆ ಪ್ರಚೋದನೆ ನೀಡಿದಂತಾಗಿ ಸಕ್ಕರೆ ಖಾಯಿಲೆಗೆ ಕಾರಣವಾದಂತಾಗುತ್ತದೆ. ಈ ಸವಾಲನ್ನು ಸರಳವಾಗಿ ಎದುರಿಸಬಹುದು — ಕಬ್ಬಿನ ಜತೆಗೆ ನೀವು ಬೇರೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು” ಎಂದು ಯೋಗಿ ತಿಳಿಸಿದ್ದಾರೆ.

ಉತ್ತರ ಪ್ರದೇಶ ದೇಶದ ಅತಿ ದೊಡ್ಡ ಸಕ್ಕರೆ ಉತ್ಪಾದಕ ರಾಜ್ಯವಾಗಿದೆ. ಅಕ್ಟೋಬರ್‌ 20- ನವೆಂಬರ್‌ 5ರವರೆಗೆ ಕಬ್ಬು ಅರೆಯುವ ಕೆಲಸಕ್ಕೆ ಕಾರ್ಖಾನೆಗಳು ಚಲನೆ ನೀಡಲಿವೆ. ಅಕ್ಟೋಬರ್‌ 15ರ ವೇಳೆಗೆ ರೈತರಿಗೆ ಕಾರ್ಖಾನೆಗಳು ಪಾವತಿ ಮಾಡದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಯೋಗಿ ಎಚ್ಚರಿಸಿದ್ದಾರೆ.

“ಬಡವರು ಹಾಗು ರೈತರನ್ನು ಮುಖ್ಯವಾಹಿನಿಗೆ ತರುವುದೇ ನಮ್ಮ ಉದ್ದೇಶವಾಗಿದೆ. ಅಕ್ಟೋಬರ್‌ 15ರ ವೇಳಗೆ ಸಕ್ಕರೆ ಕಾರ್ಖಾನೆಗಳು ಪಾವತಿ ಮಾಡದೇ ಇದ್ದಲ್ಲಿ, ಮಿಲ್ಲುಗಳ ಮಾಲೀಕರನ್ನು ತರಾಟೆಗೆ ತೆಗೆದುಕೊಳ್ಳಲಾಗುವುದು” ಎಂದು ಯೋಗಿ ತಿಳಿಸಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close