About Us Advertise with us Be a Reporter E-Paper

ಅಂಕಣಗಳು

ನಿಮಗೆ ಟೀಕಾಕಾರರಿಲ್ಲ ಅಂದರೆ ನೀವು ನಿಷ್ಪ್ರಯೋಜಕರೇ!

ಮುರುಗೇಶ ನಿರಾಣಿ. ಶಾಸಕ, ಉದ್ಯಮಿ

ಜಗತ್ತಿನ ನಂಬರ್ 1 ಉದ್ಯಮಿ ಎಂದು  ರಿಚರ್ಡ್ ಬ್ರಾನ್‌ಸನ್, ಟೀಕಾಕಾರರನ್ನು ಸಿಕ್ಕಾಪಟ್ಟೆ ಹೊಗಳಿ ಹೇಳುವ ಮಾತುಗಳು ತುಂಬ ಆಸಕ್ತಿದಾಯಕವಾಗಿದೆ.

ರಿಚರ್ಡ್ ಬ್ರಾನ್‌ಸನ್, 1950ರಲ್ಲಿ, ಲಂಡನ್ನಿನ ಬ್ಲಾಕ್‌ಹಿಕ್‌ನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ. ತನ್ನ 28ನೇ ವಯಸ್ಸಿನಲ್ಲಿ 28 ಕಂಪನಿಗಳನ್ನು ಆರಂಭಿಸಿ, 2.5 ಸಾವಿರ ಕೋಟಿ ರು. ವ್ಯವಹಾರ ನಡೆಸುತ್ತಿದ್ದಾನೆ. ಸೂಜಿಯಿಂದ ಹಿಡಿದು ವಿಮಾನದವರೆಗೆ ಆತನ ಉದ್ಯಮ ರಂಗ ವ್ಯಾಪಿಸಿದೆ.

ಈತ ಬಹಳ ಶ್ರೀಮಂತನಾಗಿದ್ದಾನೆಂದು ಈ ಲೇಖನ ಬರೆಯುತ್ತಿಲ್ಲ. ಹಣವನ್ನು ಗುಡ್ಡೆಹಾಕಿ ಕುಳಿತುಕೊಳ್ಳುವುದನ್ನು ನಾನು ಸಾಧನೆ ಎಂದೂ ಭಾವಿಸಿಲ್ಲ.  ಈ ಸಾಧಕನ ವಿಚಾರಗಳನ್ನು, ಚಿಂತನೆಗಳನ್ನು, ಬದುಕನ್ನು ಆಸ್ವಾದಿಸುವ ಮನಸ್ಸು, ಆನಂದ, ಸಂತೃಪ್ತಿ, ಸಾಹಸ ನನ್ನನ್ನು ಬಹಳ ಆಕರ್ಷಿಸಿವೆ. ಟೀಕೆ ಮತ್ತು ಟೀಕಾಕಾರರ ಬಗ್ಗೆ ರಿಚರ್ಡ್ ಹೇಳುವ ಮಾತುಗಳು ಗಮನಾರ್ಹವಾಗಿವೆ. ಹಾಗೆಯೇ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿವೆ. ರಿಚರ್ಡ್‌ನನ್ನು ಸತತ 6 ವರ್ಷ ಟೀಕಿಸಿ ಬರೆದ ಪತ್ರಕರ್ತ ಪಾರ್ಟಿಯೊಂದರಲ್ಲಿ ಭೇಟಿಯಾದಾಗ – ‘ನಾನು ಎಷ್ಟು ಟೀಕಿಸಿದರೂ ನೀವು ಕ್ಯಾರೇ ಅನ್ನುತ್ತಿಲ್ಲ. ನಿಮ್ಮ ಸಹನೆ ದೊಡ್ಡದು’ ಎಂದು ಹೇಳಿದ. ಕೂಡಲೇ, ‘ನಾನು ಅಪಾಯಿಂಟ್‌ಮೆಂಟ್  ಅಪರಿಚಿತರೊಂದಿಗೆ ಮಾತನಾಡುವದಿಲ್ಲ. ನನ್ನ ಕಾರ್ಯದರ್ಶಿಯನ್ನು ಭೇಟಿ ಮಾಡಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಿ’ ಎಂದು ರಿಚರ್ಡ್ ನೇರವಾಗಿ ಹೇಳಿದ. ಆರು ವರ್ಷ ಟೀಕೆ ಮಾಡಿದ ವ್ಯಕ್ತಿಗೆ ಕಾಪಾಳಮೋಕ್ಷ ಮಾಡಿಸಿಕೊಂಡ ಅನುಭವಾಯಿತು. ಈ ಪತ್ರಕರ್ತ ತಾನು ಬರೆದ ಟೀಕೆಗಳನ್ನು ರಿಚರ್ಡ್ ನೋಡಿಯೇ ಇಲ್ಲ ಎಂದು ಭಾವಿಸಿ ಹಳಹಳಿಸತೊಡಗಿದ.

ಟೀಕಾರರನ್ನು ಸಂಪೂರ್ಣ ನಿರ್ಲಕ್ಷ ಮಾಡಿರಿ. ಘೆಛಿಜ್ಝಛ್ಚಿಠಿ ಜಿ ಠಿಛಿ ಚಿಛಿಠಿ ್ಠ್ಞಜಿಞಛ್ಞಿಠಿ ಈ ಮಾತು ಎಲ್ಲ ಕಾಲಕ್ಕೂ ಹೊಂದದಿರಬಹುದು. ಕೆಲವೊಂದು ಸಂದರ್ಭಗಳಲ್ಲಿ ಟೀಕಾಕಾರಿಗೆ ಉತ್ತರಿಸುವುದು  ಅವಶ್ಯವೆನಿಸಿದರೆ ಅಥವಾ ನಿಮಗೆ ಸಮಯವಿದ್ದರೆ ಮಾತ್ರ ಉತ್ತರಸಿಬಹುದು. ಇವು ರಿಚರ್ಡ್ ಅವರ ಗಟ್ಟಿ ಅಭಿಪ್ರಾಯಗಳು. ಟೀಕಾಕಾರನ್ನು ಎದುರಿಸಲು ದಿವ್ಯ ನಿರ್ಲಕ್ಷ ಹಾಗೂ ಉದಾಸೀನತೆಯೇ ಮದ್ದು.

ಕೆಲವರಿಗೆ ನಿಮ್ಮ ಏಳ್ಗೆ ಸಹಿಸುವುದು ಆಗುವುದಿಲ್ಲ. ಅವರಲ್ಲಿ ನಿಮ್ಮ ಬಗ್ಗೆ ಹೊಟ್ಟೆ ಕಿಚ್ಚು ಕುದಿಯುತ್ತಿರುತ್ತದೆ. ನಿಮ್ಮ ವಾಹನ, ಸಂಪತ್ತು, ಅಧಿಕಾರ, ಭವ್ಯ ಮನೆ ನೋಡಿ ಹೊಟ್ಟೆ ಕಿಚ್ಚುಪಡುವವರು ನಿಮ್ಮ ಸುತ್ತಮುತ್ತ ಇರುತ್ತಾರೆ. ಇವರೆಲ್ಲ ಹಿತಚಿಂತಕರ ವೇಷ ಧರಿಸಿರುತ್ತಾರೆ. ಆದರೆ ನೀವು ಮಾತ್ರ ಇದಾವುದಕ್ಕೂ  ಕಡಿಸಿಕೊಳ್ಳಬೇಡಿರಿ. ನೀವು ಟೀಕೆಗಳಿಗೆ ಹೆದರಿದರೆ ನಿಮ್ಮ ಕತೆ ಮುಗಿದೇ ಹೋಯಿತು.

ರಾಜಕೀಯ ರಂಗಕ್ಕೆ ಬಂದ ಮಹಿಳೆಯರ ಬಗ್ಗೆ ಅತಿ ಹೆಚ್ಚು ಟೀಕೆಗಳು ಬರುತ್ತವೆ. ಮೊದಲಿಗೆ ಅವರ ಚಾರಿತ್ರ್ಯ ವಧೆಗೆ ಕಲ್ಪಿತ ಟೀಕೆಗಳನ್ನು ಆರಂಭಿಸುತ್ತಾರೆ. ಚಾರಿತ್ರ ವಧೆಯ ಮಾತುಗಳಿಗೆ ಮಹಿಳೆಯರು ತಕ್ಷಣ ಹೆದರುತ್ತಾರೆ. ಇದನ್ನೇ ಅಸ್ತ್ರವಾಗಿ ಮಾಡಿಕೊಂಡು ಮಹಿಳೆಯರು ರಾಜಕೀಯ ರಂಗದಲ್ಲಿ ಬೆಳೆಯದಂತೆ ಮಹಿಳೆಯರೇ ಹೆಚ್ಚು ಗುಲ್ಲೆಬ್ಬಿಸುತ್ತಾರೆ.

ಹೆಣ್ಣಿಗೆ ಹೆಣ್ಣೆ ಶತ್ರು ಎನ್ನುವ ಮಾತು ಹೆಚ್ಚು ಅನ್ವಯಿಸುತ್ತದೆ. ಆಕೆ ಹಾದಿ  ಎಂದು ಹೆದರಿಸುತ್ತಾರೆ. ಹೀಗಾಗಿ ಜಗತ್ತಿನ ತುಂಬ ರಾಜಕಿಯಕ್ಕೆ ಬರುವ ಹೆಣ್ಣು ಮಕ್ಕಳ ಸಂಖ್ಯೆ ತೀರಾ ಕಡಿಮೆ. ಮಹಿಳಾ ರಾಜಕಾರಣಿಗಳಿಗೆ ನಾನು ಮನಸ್ಸು ಗಟ್ಟಿ ಮಾಡಿಕೊಳ್ಳಲು ಹೇಳುತ್ತೇನೆ. ಆಗ ದಪ್ಪ ಚರ್ಮದವಳು ಎಂದು ಜೋರಾಗಿ ಹೇಳಬಹುದು. ಅದನ್ನು ನಿರ್ಲಕ್ಷಿಸಿ. ಚೆನ್ನಾಗಿ ಕೆಲಸ ಮಾಡಿ, ದೊಡ್ಡ ಸ್ಥಾನ ಗಳಿಸಿರಿ. ಆಗ ವಿರೋಧಿಗಳೇ ನಿಮ್ಮನ್ನು ಹೊಗಳತೊಡಗುತ್ತಾರೆ. ನಿಮ್ಮ ಅಭಿಮಾನಿಗಳು ಎಂದು ಹೆಮ್ಮೆಯಿಂದ ಹೇಳಲು ಶುರು ಮಾಡುತ್ತಾರೆ.

ನಾವು ಪೂರ್ಣ ಬೆಳೆಯುವವರೆಗೆ, ಗೆಲ್ಲುವವರೆಗೆ ಟೀಕೆಗಳು  ಇರುತ್ತವೆ. ಇದು ಬದುಕಿನ ಒಂದು ಭಾಗ. ನಾವು ಇಂಥವರ ನಡುವೆಯೇ ಬದುಕಬೇಕು ಮತ್ತು ಬೆಳೆಯಬೇಕು. ನೀವು ಯಾವುದೇ ಊರು, ಯಾವುದೇ ದೇಶಕ್ಕೆ ಹೋದರೂ, ಟೀಕಿಸುವ ಶನಿಗಳ ಕಾಟ ತಪ್ಪದು. ‘ಬೆಟ್ಟದ ಮೇಲೊಂದು ಮನೆ ಮಾಡಿ ಮೃಗಗಳಿಗಂಜಿದಡೆಂತಯ್ಯ? ಲೋಕದಲ್ಲಿ ಹುಟ್ಟಿ ಬಂದ ಮೇಲೆ ಸುತ್ತಿ ನಿಂದೆಗಳು ಬಂದರೆ ಸಮಾಧಾನಿಯಾಗಿರಬೇಕು’ ಎಂದು ಅಕ್ಕ ಮಹಾದೇವಿ ಹೇಳಿದ ವಚನ ಈಗ ನೆನಪಿಗೆ ಬರುತ್ತದೆ.

ನಿಸರ್ಗ ತನ್ನ ಪಾಲಿನ ಕರ್ತವ್ಯವನ್ನು ತಾನೇ ನೇರವಾಗಿ ಮಾಡುತ್ತದೆ.  ಇಚ್ಛೆ ಹಾಗೂ ಆದೇಶಗಳಿಗೂ ಅದು ಕಾಯುವುದಿಲ್ಲ. ನಿಸರ್ಗ ನಿಯಮ ಧಿಕ್ಕರಿಸಿ ಬದುಕುವುದು ಯಾರಿಂದಲೂ ಸಾಧ್ಯವಿಲ್ಲ. ‘ನಾಯಕ’ ಅನ್ನುವ ಪದ ‘ನ್ಯಾಯಿಕ’ ಅನ್ನುವ ಗುಣವಾಚಕದಿಂದ ಬಂದಿದೆ. ಯಾರು ತನ್ನನ್ನು ಹಿಂಬಾಲಿಸಿ ಬಂದವರು ಹಾಗೂ ತನ್ನನ್ನು ನಂಬಿ ಬದುಕುವವರಿಗೆ ನ್ಯಾಯ ದೊರಕಿಸಿಕೊಡುತ್ತಾನೇ ಅವನು ಮಾತ್ರ ನಿಜವಾದ ನಾಯಕ. ಹೀಗೆ ನ್ಯಾಯ ದೊರಕಿಸಿಕೊಳ್ಳುವವರನ್ನು ಜನರು ಗೌರವಿಸಲು ಆರಂಭಿಸುತ್ತಾರೆ. ಅದಲ್ಲದೆ ಅಹಂಕಾರದಿಂದ ವರ್ತಿಸುವವರನ್ನು ಮರೆತು ಬಿಡುತ್ತಾರೆ.

ನಮ್ಮಲ್ಲಿ ಉದ್ಯಮಪತಿಗಳಿಗೆ, ಶ್ರೀಮಂತರಿಗೆ ಕೊರತೆಯಿಲ್ಲ. ಆದರೆ ಅವರ್ಯಾರೂ  ಬ್ರಾನ್‌ಸನ್‌ನಂತೆ ‘ಹಾಟ್ ಏರ್ ಬಲೂನ್’ನಲ್ಲಿ ಜಗತ್ತು ಸಂಚರಿಸುವುದಿಲ್ಲ. ಶಾರ್ಕ್‌ಗಳ ಜತೆಗೆ ಈಜಲು ಹೋಗುವುದಿಲ್ಲ. ವಿಮಾನದಿಂದ ಕೆಳಕ್ಕೆ ಜಿಗಿಯುವುದಿಲ್ಲ. ಬಾಹ್ಯಕಾಶ ಪ್ರವಾಸಕ್ಕೆ ಸಜ್ಜಾಗುವುದಿಲ್ಲ. ಆದರೆ, ಬ್ರಾನ್‌ಸನ್ ಹಾಗಲ್ಲ. ಆತ ಹುಟ್ಟಾ ಪರಮ ಸಾಹಸಿ. ಆತನಲ್ಲಿ ಈ ಗುಣವಿಲ್ಲದಿದ್ದರೆ ಕಾಲೇಜ್ ಶಿಕ್ಷಣ ಸಹ ಮುಗಿಸದ ಅವನಿಗೆ, ಮುನ್ನೂರೈವತ್ತಕ್ಕೂ ಹೆಚ್ಚು ಬೇರೆ-ಬೇರೆ ಉದ್ಯಮಗಳನ್ನು ಆರಂಭಿಸಲು ಆಗುತ್ತಿತ್ತಾ? ಏರಲೈನ್‌ಸ್ ಟ್ರೇನ್ ಹಡಗು ಮುಂತಾದ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿತ್ತಾ? ಒಬ್ಬ ಕಾಲೇಜ್ ಡ್ರಾಪ್‌ಔಟ್‌ಗೆ ಜಗತ್ತೇ ಗುರುತಿಸುವಂಥ  ಎಂಬ ಬ್ರಾಂಡ್ ಕಟ್ಟಲು ಆಗುತ್ತಿತ್ತಾ? ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕು ಆರಂಭಿಸಿದ ವ್ಯಕ್ತಿ, ಧನಿಕನಾದ ಕತೆಯಿದು. ಹಾಗೆಂದು ಇದು ಹೊಟ್ಟೆ ತುಂಬಿದವನು ಹೇಳುವ ಉಪದೇಶಾಮೃತ ಅಲ್ಲ. ಇದು ಮೈಬಗ್ಗಿಸಿ ದುಡಿದವನ ಕೈಜಗ್ಗುವ ಕತೆ. ಈ ಕೃತಿಯನ್ನು ಓದಿದ ಮೇಲೆ ನೀವು ಬ್ರಾನಸನ್‌ನಂತೆ ಉದ್ಯಮಪತಿಯಾಗದೇ ಹೋಗುಬಹುದು. ಆದರೆ ನಿಮ್ಮ ಜೀವನವನ್ನು ಅತ್ಯಂತ ಖುಷಿಯಿಂದ ಅನುಭವಿಸುತ್ತೀರಿ. ಬದುಕನ್ನು ಇನ್ನಷ್ಟು ಪ್ರೀತಿಸುತ್ತೀರಿ. ಇವು ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ರಿಚರ್ಡ್ ಬಗ್ಗೆ ಹೇಳುವ ಮಾತುಗಳು:

ರಾತ್ರಿ ನಿದ್ದೆ ಕೆಡಿಸುವ ಕೆಲಸವನ್ನು ಮಾಡಬೇಡಿ.

ಇವತ್ತೇ ಕೊನೆ ದಿನವೆನ್ನುವಂತೆ ತೀವ್ರವಾಗಿ ಬದುಕಿರಿ.

ಮಜವಾಗಿ ಪ್ರೀತಿಯಿಂದ ಕೆಲಸ ಮಾಡುವುದು ಯಶಸ್ಸಿನ ಗುಟ್ಟು.

ಸುಮ್ಮನೆ ಕೆಲಸ ಮಾಡುತ್ತಾ ಹೋಗಿ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ.

ದುಡಿಯುವ ಕೈಗಳಲ್ಲಿ, ಯೋಚಿಸುವ ಮಿದುಳಿನಲ್ಲಿ, ಪ್ರೀತಿಸುವ ಹೃದಯದಲ್ಲಿ ನಿಮಗೆ ನಂಬಿಕೆಯಿರಲಿ.

ಕನಸು ಕಾಣುವುದು ತಪ್ಪಲ್ಲ. ಸಣ್ಣ ಸಣ್ಣ ಗುರಿ ಹೊಂದುವುದು ತಪ್ಪು.Low aim is crime.

ಪರಿಶ್ರಮದ ಬೆವರು ಹರಿಸುವ ಕೆಲಸಮಾಡಿ ಕೃಷಿ ಕೆಲಸ ಬಹಳ ಉತ್ತಮ.

 ಎಲ್ಲ ಅವಕಾಶಗಳನ್ನು ತನ್ನದಾಗಿಸಿಕೊಳ್ಳುವವನೆ ಪರ ಜಗತ್ತು ನಿಲ್ಲುತ್ತದೆ.

ದುಡಿಯುವ ಕೈಗಳೇ ಅಮೃತ ಹಸ್ತಗಳು.

ನಿರೂಪಣೆ: ಮಲ್ಲಿಕಾರ್ಜುನ ಹೆಗ್ಗಳಗಿ, ಬಸವರಾಜ ಶೆಲ್ಲಿಕೇರಿ

Tags

Related Articles

Leave a Reply

Your email address will not be published. Required fields are marked *

Language
Close