About Us Advertise with us Be a Reporter E-Paper

ವಿವಾಹ್

ನೀನಿಲ್ಲದ ಬದುಕು ನೆನಪಿಗೂ ಬಾರದು..

- ರಾಘವೇಂದ್ರ ಈ. ಹೊರಬೈಲು

ಇನಿಯ,
‘ನಿನ್ನೊಳು ನಾ ನನ್ನೊಳು ನೀ
ಒಲಿದ ಮಿಂಚಂತೆ ನೀ…’
ಒಂದು ವಾರದಿಂದ ಇದೊಂದೇ ಹಾಡನ್ನು ಅದೆಷ್ಟು ಸಾರಿ ಹಾಡಿದೀನಿ ಅಂತಾನೆ ನೆನ್ಪಿಲ್ಲ ಪ್ರತೀ ಸೆಕೆಂಡಿಗೂ ಇದೇ ಹಾಡನ್ನೇ ಗುನುಗಬೇಕನಿಸ್ತಾಯಿದೆ. ನನ್ನ ಹೃದಯದೊಳಗೆ ಅದೆಂತಹ ಮೋಡಿ ಮಾಡಿ, ಗೂಡು ಕಟ್ಟಿ, ಕೂತುಬಿಟ್ಟೆಯೋ? ತಿಳಿಯುತ್ತಿಲ್ಲ.

ನಾನು ಮ್ಲ್‌ ಸ್ಕೂಲ್‌ನಿಂದ ಕಾಲೇಜ್ ಮೆಟ್ಟಿಲು ಹತ್ತುವವರೆಗೂ ಅದೆಷ್ಟು ಹುಡುಗ್ರನ್ನು ನೋಡಿಲ್ಲ? ಚಿಕ್ಕ ಹುಡ್ಗಿ ಆಗಿದ್ದಾಗಿಂದಲೇ ನನ್ನ ಬ್ಯೂಟಿಗೆ ಬೋಲ್ಡ್ ಆಗಿ, ಹಚಾ ಅಂತ ಓಡಿಸಿದ್ರೂ ಹಿಂದೇನೆ ಬರೋ ಹಚ್ ನಾಯಿ ತರ ಬೆನ್ ಹಿಂದೆ ಬರ್ತಾಯಿದ್ದ ಹುಡುಗರಿಗೆ ಆಟ ಆಡ್ಸಿಲ್ಲ? ನನ್ ಹಿಂದೆ ಸುತ್ತಾಡ್ತಿದ್ದವರಿಗೆಲ್ಲ ಒಂದೊಂದು ಸ್ಮೈಲ್ ಬೀಳಿಸ್ತಿದ್ದೆ. ನಂಗೂ ಅದೇ ಬೇಕಾಗ್ತಿದ್ದಿದ್ದು. ಅವರ ತುಂಬಿದ ಪಾಕೆಟ್ ಖಾಲಿ ಆಗೋವರ್ಗೂ ಚೆನ್ನಾಗಿ ಆಟ ಆಡ್ಸಿ, ಆಮೇಲೆ ಇನ್ನೊಂದು ಬಕರಾ ಸಿಗುತ್ತಾ ಅಂತ ಹುಡುಕ್ತಿದ್ದೆ. ನೆನೆಸ್ಕೊಂಡ್ರೆ ನನ್ ಬಗ್ಗೆ ನಂಗೇ ಜಿಗುಪ್ಸೆ ಹುಟ್ತಾಯಿದೆ ಕಣೋ, ಗಂಡ್ಮಕ್ಳಿಗೆ ಅದೆಷ್ಟೆಲ್ಲಾ ಸತಾಯಿಸ್ದೆ ಅಂತ. ತುಂಬಾ ಹುಡುಗರು, ಹುಡುಗಿ ಒಂದು ಕಿರುನಗೆ ಬೀರಿದ್ರೆ ಸಾಕು, ದಡಾರ್ ಅಂತ ಗುಂಡಿಗೆ ಬಿದ್ದುಹೋಗ್ತಾರೆ.

ಹೀಗೆ ಅದೆಷ್ಟೋ ಹುಡುಗರಿಗೆ ಆಟ ಆಡ್ಸಿ, ನನ್ ಸುತ್ತಾನೆ ರೌಂಡ್ ಹೊಡ್ಸಿ ಮಾಡಿದ್ದೆ ಗೊತ್ತಾ? ನಿಜ ಹೇಳ್ಬೇಕು ಅಂದ್ರೆ, ಹುಡುಗ್ರೆಲ್ಲ ನಂಗೆ ಪಾಸ್ವರ್ಡ್ ಗೊತ್ತಿರೋ ಎಟಿಎಂ ಕಾರ್ಡ್ ತರ ಕಾಣಿಸ್ತಿದ್ರು. ನನ್ನ ಜತೆ ತಿರುಗಾಡೋದಕ್ಕೆ ಅವ್ರಿಗೇನೋ ಥ್ರಿಲ್ ಆಗಿದ್ರೆ, ನಂಗೆ ಆಟ ಆಡ್ಸೋದ್ರಲ್ಲೇ ಮಜಾ ಇರ್ತಿತ್ತು. ಆದ್ರೆ ಯಾವಾಗ್ಲೂ ನನ್ನನ್ನು ಕಾಡೋದ್ ಏನು ಅಂದ್ರೆ, ನನ್ನ ಹಿಂದೆ ಸುತ್ತುತ್ತಾ ಇದ್ದ ನೈಂಟಿ ಪರ್ಸೆಂಟ್ ಹುಡುಗ್ರಿಗೆ ನನ್ನ ಮನಸ್ಸಿಗಿಂತ, ದೇಹದ ಮೇಲೇ ಆಸೆ ಜಾಸ್ತಿ. ಆದ್ರೆ ನಾನೆಂತ ಕಿಲಾಡಿಯಾಗಿದ್ದರೆ ಗೊತ್ತಾ! ಅಷ್ಟೆಲ್ಲ ಹುಡುಗರ ಸುತ್ತಾಡಿದ್ರೂ ಒಬ್ಬನಿಗೂ ನನ್ನ ದೇಹ ಟಚ್ ಮಾಡೋದಕ್ಕೂ ಛ್ಸ್‌ ಕೊಟ್ಟಿಲ್ಲ. ಆದರೆ ಸಮಾಜದಲ್ಲಿ ಎಲ್ಲರೂ ನನ್ನ ನೋಡೋ ರೀತಿ ತುಂಬಾ ಹರ್ಟ್ ಮಾಡ್ತಾಯಿತ್ತು. ಒಬ್ಬ ಹುಡ್ಗ ಎಲ್ಲಿ, ಯಾರ ಜತೆ ಸುತ್ತಾಡಿದ್ರೂ ಕೆಟ್ಟದಾಗಿ ನೋಡದ ಸಮಾಜ, ಹುಡುಗ್ರನ್ನು ಆಟ ಅಡ್ಸೋದಕ್ಕೆ ಹೋದ್ರೆ ನನ್ನನ್ನು ನಡತೆಗೆಟ್ಟವಳನ್ನಾಗಿ ನೋಡೋಕೆ ಶುರು ಮಾಡ್ತು. ಸೊಸೈಟಿಯ ದೃಷ್ಟಿಕೋನವೇ ವ್ಟರ್ ಅನ್ನಿಸ್ತು. ಅವತ್ತೇ ಲ್ಟ್, ನಾನು ಸೈಲೆಂಟ್ ಆಗ್ಬಿಟ್ಟೆ.

ನೀನು ಯಾವಾಗ ನಮ್ ಕಾಲೇಜಿಗೆ ಬಂದ್ಯೋ, ಮುಳುಗುತ್ತಿರುವವನಿಗೆ ದಡ ಸೇರಿಸಲೆಂದೇ ಬರುವ ದೋಣಿಯಂತೆ ಕಂಡೆ. ಯಾರನ್ನು ಬೇಕಾದ್ರೂ ಅಟ್ರ್ಯ್ಟ್‌ ಮಾಡುವ ಹ್ಯಾಂಡ್ಸಮ್‌ನೆಸ್ ಆಗಿರ್ಲಿ, ಜಿಮ್‌ಗೆ ಹೋಗಿ ಬೆವರಿಳಿಸಿದ ಬಾಡಿ ಆಗ್ಲಿ, ಹೀರೋಯಿಸಂ ಆಗ್ಲಿ, ಯಾವ್ದೇ ಸ್ಪೆಷಾಲಿಟಿ ಇಲ್ದಿದ್ರೂ, ಇತರರನ್ನು ಗೌರವಿಸುವ ನಿನ್ನ ಸ್ವಭಾವ, ಬೇರೆಯವರ ನೋವಿಗೆ ಸ್ಪಂದಿಸುವ ಕಾಳಜಿ ಮತ್ತು ಆ ಲವಲವಿಕೆ, ಎಲ್ಲಕ್ಕಿಂತ ಮುಖ್ಯವಾಗಿ ಯಾರು ಏನೇ ಅಂದ್ರೂ ಒಬ್ಬ ಹುಡುಗಿಯಾಗಿ ನನ್ನನ್ನು ಆದರಿಸಿದ ರೀತಿ ಇವೆಲ್ಲ ನಿನ್ನನ್ನು ನನ್ನ ಹೀರೋನನ್ನಾಗಿ ಮಾಡಿ, ಎಂದೆಂದೂ ಗಟ್ಟಿಯಾಗಿ ಹಿಡಿದುಕೊಳ್ಳುವಂತೆ ಮಾಡ್ತು. ಒಂದಂತೂ ನಿಜ, ನಾನು ಮೊದ್ಲು ಚೆಲ್ಲುಚೆಲ್ಲಾಗಿ ಇದ್ದಿದ್ದೂ ಹೌದು. ಹುಡುಗ್ರನ್ನೆಲ್ಲ ಪುಟ್ಬಾಲ್‌ನಂತೆ ಆಡಿದ್ದೂ ನಿಜ. ಆದ್ರೆ ನೀನು ಸಿಕ್ಕಿದ ಮೇಲೆ ಕಂಪ್ಲೀಟ್ ಚೇಂಜ್ ಆಗ್ಹೋಗಿದೀನಿ.

ಅದೆಲ್ಲದಕ್ಕೂ ನೀನೇ ಕಾರಣ ಅನ್ನೋದೂ ಸತ್ಯ. ನನ್ನ ಜೀವನದ ಕೊನೆಯ ಉಸಿರು ಇರೋವರೆಗೂ ನಿನ್ ಜತೆ ಮಾತ್ರ ಹೆಗಲಿಗೆ ಹೆಗಲು ಕೊಡ್ತೀನಿ. ನನ್ನನ್ನು ನಂಬು, ಹಾಗೇ ಯಾವತ್ತೂ ನನ್ನ ಕೈ ಬಿಡಬೇಡ. ಇಲ್ಲೀವರೆಗೂ ನಂಗೆ ಯಾರೂ ಬೇಕಾಗಿಲ್ಲ ಅನ್ನೋ ಬದುಕ್ತಾ ಇದ್ದೆ. ಆದ್ರೆ ಈಗ ಸತ್ಯ ಅರ್ಥ ಆಗಿದೆ, ಯಾರೂ ಯಾರನ್ನೂ ಯಾವಾಗ್ಲೂ ಯಾಮಾರ್ಸೋದಕ್ಕಾಗಲ್ಲ ಅಂತ. ನಿನ್ನ ಸ್ನೇಹ ನನ್ನನ್ನು ಇನ್ಯಾವತ್ತೂ ಹಳೆಚಾಳಿಗೆ ಮರಳದಷ್ಟು ಬದಲಾಯಿಸಿದೆ. ಹಾಗಾಗಿ ಬದುಕಿದ್ರೆ ನಿನ್ನ ಸಂಗದಲ್ಲೇ ಅಂತ ಗಟ್ಟಿ ಮನಸ್ಸು ಮಾಡಿಕೊಂಡಿದೀನಿ. ನಿನ್ನ ಬಿಟ್ಟು ಬದುಕೋದನ್ನು ಕನಸಲ್ಲೂ ನೆನಪು ಮಾಡ್ಕೊಳ್ಳೋಕೆ ಅಗಲ್ವೋ. ಪ್ಲೀಸ್ ಕಣೋ ನನ್ನನ್ನು ಮಾತ್ರ ಬಿಡ್ಬೇಡ.
ನಿನ್ನನ್ನೇ ನಂಬಿರುವವಳು.. ನಾನು

Tags

Related Articles

Leave a Reply

Your email address will not be published. Required fields are marked *

Language
Close