ಕೌಶಲ್ಯ ವೃದ್ದಿ ತರಬೇತಿಗೆ ಮೂರು ಲಕ್ಷ ಯುವಕರು ಜಪಾನ್‌ಗೆ

Posted In : ದೇಶ

ದೆಹಲಿ: ಮುಂದಿನ ಐದು ವರ್ಷಗಳಲ್ಲಿ ದೇಶದ ಮೂರು ಲಕ್ಷ ಯುವಕರನ್ನು ವೃತ್ತಿ ಕೇಂದ್ರಿತ ತರಬೇತಿಗೆಂದು ಜಪಾನ್‌ಗೆ ಕಳುಹಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ಸರಕಾರದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿ ನಡೆಯಲಿರುವ ಈ ತರಬೇತಿಯ ವೆಚ್ಚವನ್ನುಜಪಾನ್ ಭರಿಸಲಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ತಾಂತ್ರಿಕ ತರಬೇತಿ ಕಾರ್ಯ ಕ್ರಮದ ಒಪ್ಪಂದಕ್ಕೆ ಭಾರತ-ಜಪಾನ್ ನಡುವೆ ಒಪ್ಪಂದವಾಗಲಿದೆ. ಇದೇ ವಿಚಾರವಾಗಿ, ಧರ್ಮೇಂದ್ರ ಪ್ರಧಾನ್ ವಾರಾಂತ್ಯ ಜಪಾನ್‌ಗೆ ತೆರಳಲಿದ್ದಾರೆ.

ಜಪಾನ್‌ಗೆ ತೆರಳಿ ಅಲ್ಲಿನ ವಾತಾವರಣದಲ್ಲಿ 3-5 ವರ್ಷಗಳ ಕಾಲ ಕೆಲಸ ಮಾಡುವ ಈ ಯುವಕರಿಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗುವುದು ಹಾಗೂ ಉದ್ಯೋಗದ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ಪ್ರಧಾನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

4 + 10 =

 
Back To Top