About Us Advertise with us Be a Reporter E-Paper

ವಿ +

ಜಕ್ಕೂರು ಕೆರೆಗೆ ಮರುಕಳಿಸುತ್ತಿದೆ ಯೌವ್ವನ

- ಸಚಿನ್ ಕೃಷ್ಣ

ಬೆಂಗಳೂರಿನಲ್ಲಿರುವ ಅದೆಷ್ಟೋ ಕೆರೆಗಳು, ಪುರಾತನ ನಗರಿಯ ಪಳೆಯುಳಿಕೆಗಳಂತೆ ಬದಲಾಗಿವೆ. ಜನರ, ಪ್ರಾಣಿ ಪಕ್ಷಿ, ಮರಗಿಡಗಳ ದಾಹವನ್ನು ನೀಗಬೇಕಾದ ಕೆರೆಗಳನ್ನು ಬಹುಮಹಡಿ ಕಟ್ಟಡಗಳು, ರಸ್ತೆಗಳು ಆಕ್ರಮಿಸಿಕೊಂಡಿವೆ. ಉಳಿದ ಕೆಲವೊಂದು ಕೆರೆಗಳು, ಚರಂಡಿಯ ನೀರು, ನಗರದ ತ್ಯಾಜ್ಯವನ್ನು ತನ್ನೊಳಗೆ ತುಂಬಿಕೊಂಡು ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿ ಪರಿವರ್ತನೆಗೊಂಡಿದೆ. ಇಂಥದ್ದೇ ಕೆರೆ ಜಕ್ಕೂರು ಲೇಕ್. ಆವರಣದಲ್ಲಿ ಒಮ್ಮೆ ಅಡ್ಡಾಡಿ ಬಂದರೆ ಪ್ರದೇಶವನ್ನಾವರಿಸಿರುವ ಅನೇಕ ಔಷಧ ಗಿಡಮೂಲಿಕೆಗಳು, ಆರೊಮ್ಯಾಟಿಕ್ ಪೊದೆಗಳು ಮತ್ತು ಅಳಿವೆಯಂಚಿನಲ್ಲಿರುವ ಅಪರೂಪದ ಸಸ್ಯಗಳ ಪಳೆಯುಳಿಕೆಯನ್ನು ಕಾಣಬಹುದು. ಸಾಮಾಜಿಕ ಸುಧಾರಣೆಗಳ ಹೆಸರಿನಲ್ಲಿ, ಪ್ರಕೃತಿಯ ಮೇಲಾಗುತ್ತಿರುವ ಆಕ್ರಮಣಕ್ಕೆ ಇದೊಂದು ಉದಾಹರಣೆಯಷ್ಟೇ. ಇಂತಹ ಜಕ್ಕೂರು ಕೆರೆ ಇದೀಗ ಮರುಜೀವ ಪಡೆದುಕೊಳ್ಳುವ ಹಾದಿಯಲ್ಲಿರುವುದು ಪರಿಸರ ಪ್ರೇಮಿಗಳಿಗೆ ಸಂತಸದ ಸಂಗತಿ.

ರೂಪಾಂತರಗೊಂಡ ಕೆರೆ ಮತ್ತು ಆವರಣ
ಸುಮಾರು ಒಂದು ದಶಕದ ಹಿಂದೆಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜಕ್ಕೂರು ಕೆರೆಗೆ ನೀಡಲು ಮುಂದಾಗಿದೆ. ಜನರನ್ನು ಒಗ್ಗೂಡಿಸಿ ಜಲ ಪೋಷಣಾ ಎಂಬ ಸ್ವ ಹಿತಾಸಕ್ತಿ ಗುಂಪೊಂದನ್ನು ರೂಪಿಸಿ, ಕಸದ ಎಸೆಯುವಿಕೆಯನ್ನು ತಡೆಯಲು ಬಿಡಿಎ ನೆರವಾಗಿದೆ. ಕೆರೆಯ ಪರಿಸರವನ್ನು ಶುಚಿಯಾಗಿಡಲು, ಕೆಲವರಿಂದ ಮಾತ್ರ ಸಾಧ್ಯ ಯೋಚಿಸಿ, ಒಮ್ಮತದ ಅಭಿಪ್ರಾಯಕ್ಕೆ ಬಂದು ಕೆರೆಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿ, ಬಿಬಿಎಂಪಿಯನ್ನು ಸಂಪರ್ಕಿಸಿದರು. ಕೆರೆಯ ಸ್ವಚ್ಛತೆಯ ಹೊಣೆ ಹೊರುವ ಮೂಲಕ, ತೋಟಗಾರಿಕೆ ಮತ್ತು ಸಸ್ಯತಜ್ಞರ ಸಹಾಯದಿಂದ ಸಮಗ್ರ ಯೋಜನೆಯನ್ನು ರೂಪಿಸಿದರು. ಈ ಪ್ರದೇಶದಲ್ಲಿ ಹಸಿರು ಹಾಸು ಹೆಚ್ಚಿಸುವುದಲ್ಲದೇ ವಲಸಿಗ ಹಕ್ಕಿಗಳು ಮತ್ತು ಜೇನುನೊಣಗಳ ಆವಾಸವನ್ನಾಗಿ ಪರಿವರ್ತಿಸಲು ಮುಂದಾದರು. ಸರೋವರದ ಆವರಣವನ್ನು ಸಾಧ್ಯವಾದಷ್ಟು ಮಟ್ಟಿಗೆ ನೈಸರ್ಗಿಕವಾಗಿಡಲು ಬೇಲಿ ಗಿಡಗಳನ್ನು ಮುಕ್ತಗೊಳಿಸಿ ನೈಸರ್ಗಿಕ ಸುಗಂಧಕ್ಕೆ ಪೊದೆ ಸಸ್ಯಗಳನ್ನು ನೆಡಲಾಯಿತು.

ಜಲಪೋಶನವೆಂಬ ನೊಂದಾಯಿತ ಸಂಸ್ಥೆ
ಯಾವುದೇ ಲಾಭೋದ್ದೇಶವಿಲ್ಲದೇ ನಡೆಯುತ್ತಿರುವ ಜಲಪೋಶನ ಒಂದು ನೊಂದಾಯಿತ ಸಂಸ್ಥೆಯಾಗಿದೆ. ಜಕ್ಕೂರು ಕೆರೆಯ ಸಮೀಪದಲ್ಲಿ ಪರಿಸರ ಪ್ರಜ್ಞೆಯುಳ್ಳ ನಾಗರೀಕರು ಮಾತ್ರ ವಾಸಿಸುತ್ತಿದ್ದಾರೆ. ಇದು ಇಂದು ಕೆರೆಯ ಸಂರಕ್ಷಣೆಗೆ ಮೀಸಲಾಗಿರುವ ಸುಮಾರು 200 ಸದಸ್ಯರನ್ನು ಹೊಂದಿದೆ. ಕಳೆದ ನಾಲ್ಕು ಅನೇಕ ಸಂಘ ಸಂಸ್ಥೆಗಳು ಜಲಪೋಶನ್‌ಗೆ ಆರ್ಥಿಕ ನೆರವು ನೀಡುತ್ತಿದೆ. ಅಲ್ಲದೇ ಜಲಪೋಶನ್ ಕೂಡ ತಮ್ಮ ಸಿಎಸ್‌ಆರ್ ಚಟುವಟಿಕೆಗಳ ಭಾಗವಾಗಿ ಕೈ ಜೋಡಿಸಲು ಅನೇಕ ಕಾರ್ಪೊರೇಟ್ ಕಂಪನಿಗಳನ್ನು ಮುಕ್ತವಾಗಿ ಸ್ವಾಗತಿಸಿದೆ. ಅಂತಹ ಪ್ರಮುಖ ಸಹಯೋಗಗಳು, ಸಸ್ಯಗಳನ್ನು ಸಂಗ್ರಹಿಸುವಲ್ಲಿ ಗಮನಾರ್ಹವಾಗಿ ಸಹಾಯ ಮಾಡುತ್ತಿದೆ.

ನಿರ್ವಹಣೆಯ ಹೊಣೆ ಹೊತ್ತ ಜಲಸೇವಿಕಾ
ಕೆರೆ ಮತ್ತು ಅದರ ಹಸಿರು ಹೊದಿಕೆಯ ನಿರ್ವಹಣೆಯ ಜವಬ್ಧಾರಿಯನ್ನು ‘ಜಲ ಸೇವಿಕ’ ಎಂಬ ಹೆಸರಿನ ಸ್ಥಳೀಯ ಮಹಿಳಾ ಸ್ವಸಹಾಯ ಗುಂಪು ತೆಗೆದುಕೊಂಡಿದೆ. ಸದಸ್ಯರು ಸಂಪೂರ್ಣವಾಗಿ ಸಾವಯವ ಮಾದರಿಯಲ್ಲಿ ಸಸ್ಯವರ್ಗವನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತೆ ವಹಿಸಿದ್ದಾರೆ. ಇದಕ್ಕಾಗಿ ಸುತ್ತ ಮುತ್ತಲಿನ ನಿವಾಸಿಗಳು ತಮ್ಮ ಮನೆಗಳಿಂದ ತಮ್ಮ ಅಡಿಗೆ ತ್ಯಾಜ್ಯ ಮತ್ತು ಸಸ್ಯದ ಮಿಶ್ರಗೊಬ್ಬರವನ್ನು ಸಸ್ಯಗಳಿಗೆ ನೈಸರ್ಗಿಕ ಗೊಬ್ಬರವಾಗಿ ನೀಡುತ್ತಿದ್ದಾರೆ. ಅಲ್ಲದೇ ಲೇಕ್‌ನ ಆವರಣದಲ್ಲಿ ಜಲಾ ಪೋಷಣ ಸದಸ್ಯರು ಮತ್ತು ಸ್ವಯಂ ಸೇವಕರು ನಿಯಮಿತವಾಗಿ ಭೇಟಿಯಾಗುತ್ತಾರೆ. ಅಲ್ಲಿ ಕೆರೆಗೆ ಸಂಬಂಧಿಸಿದ ಹೆಚ್ಚಿನ ಯೋಜನೆಗಳನ್ನು ರೂಪಿಸುವ ಕೆಲಸವನ್ನು ಮಾಡಲಾಗುತ್ತದೆ.

ಯಲಹಂಕದ ಟ್ರಾನ್‌ಸ್ ಡಿಸಿಪ್ಲಿನರಿ, ಹೆಲ್‌ತ್, ಸೈನ್ ಟೆಕ್ನಾಲಜಿ ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾ ಅಧಿಕಾರಿಯಾಗಿರುವ ಡಾ. ಗಣೇಶ್ ಬಾಬು ಅವರು ಫ್ಲೋರಾ ಆಯ್ಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಇವರು ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳಲ್ಲಿ ಪರಿಣತರಾಗಿದ್ದಾರೆ. ಅಪರೂಪದ ಸಸ್ಯಗಳು ಮತ್ತು ಮರಗಳನ್ನು ಸಂಗ್ರಹಿಸಲು ಎಫ್.ಎಲ್. ಆರ್. ಎಚ್.ಟಿ, ಜಿಕೆವಿಕೆ ಇನ್ನಿತರ ಸಂಸ್ಥೆಗಳಿವೆ.

ಆರಂಭದಲ್ಲಿ ತೋಟವನ್ನು ಕೇವಲ ತಜ್ಞರು ಮಾತ್ರ ನಿರ್ವಹಿಸುತ್ತಿದ್ದರು. ಅಲ್ಲದೇ ಗಿಡ ನೆಡುವ ಕಾರ್ಯಗಳಿಗೆ ಸೂಕ್ತವೆಂದು ಮಾನ್ಸೂನ್ ತಿಂಗಳನ್ನು ಆರಿಸಿಕೊಳ್ಳಲಾಗಿದೆ. ಈಗಾಗಲೇ ಬಹಳಷ್ಟು ನಡೆಯುತ್ತಿದ್ದು, ಆಯಾ ಸಸ್ಯಗಳ ಜಾತಿ ಆಧಾರಿತವಾಗಿ ಹಾಗೂ ಅಪರೂಪದ ಅಳಿವಿನಂಚಿನಲ್ಲಿರುವ ಸಸ್ಯಗಳನ್ನೇ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close