ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cow Slaughter: ಮಾಂಸಕ್ಕಾಗಿ ಗಬ್ಬದ ಹಸು ಕದ್ದು ಕಡಿದ ಅಸ್ಸಾಮಿ ಕಾರ್ಮಿಕರ ಬಂಧನ

Cow Slaughter: ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಎಸ್ಟೇಟ್‌ನಲ್ಲಿ ಘಟನೆ ನಡೆದಿದೆ. ಮಾಂಸಕ್ಕಾಗಿ ಗಬ್ಬದ ಹಸುವನ್ನೇ ಅಮಾನವೀಯವಾಗಿ ಕೊಂದಿರುವ 6 ಅಸ್ಸಾಂ ಮೂಲದ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಮಾಂಸಕ್ಕಾಗಿ ಗಬ್ಬದ ಹಸು ಕದ್ದು ಕಡಿದ ಅಸ್ಸಾಮಿ ಕಾರ್ಮಿಕರ ಬಂಧನ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Jul 11, 2025 9:09 AM

ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ನಡೆದಿದೆ. ಚಿಕ್ಕಮಗಳೂರಿನಲ್ಲಿ (Chikkamagaluru news) ಮಾಂಸಕ್ಕಾಗಿ ಗಬ್ಬದ ಹಸುವೊಂದನ್ನು ಕದ್ದೊಯ್ದು ಕಡಿದಿರುವ (cow slaughter) ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಎಸ್ಟೇಟ್ ಒಂದರಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಮಾಂಸಕ್ಕಾಗಿ ಗಬ್ಬದ ಹಸುವನ್ನು ಕಡಿದಿದ್ದು, ಮಾಂಸವನ್ನು ಬಳಸಿಕೊಂಡಿದ್ದಾರೆ, ಬಳಿಕ ಅಂಗಾಂಗಗಳನ್ನು ಮಣ್ಣಿನಲ್ಲಿ ಹೂಳಲು ಯತ್ನಿಸಿದ್ದಾರೆ. ಈ ವೇಲೆ ಕೃತ್ಯ ಬಯಲಿಗೆ ಬಂದಿದ್ದು, ಕೃತ್ಯ ಎಸಗಿದ ಎಲ್ಲ ಕೂಲಿ ಕಾರ್ಮಿಕರನ್ನು ಬಂಧಿಸಲಾಗಿದೆ.

ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಎಸ್ಟೇಟ್‌ನಲ್ಲಿ ಘಟನೆ ನಡೆದಿದೆ. ಮಾಂಸಕ್ಕಾಗಿ ಗಬ್ಬದ ಹಸುವನ್ನೇ ಅಮಾನವೀಯವಾಗಿ ಕೊಂದಿರುವ 6 ಅಸ್ಸಾಂ ಮೂಲದ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಹಾಗೂ ಬಿಹಾರ ಮೂಲದ ಕಾರ್ಮಿಕರು ಚಿಕ್ಕಮಗಳೂರು ಹಾಗೂ ಕೊಡಗಿನ ಕಾಫಿ- ಟೀ ಎಸ್ಟೇಟ್‌ಗಳಲ್ಲಿ ತುಂಬಿಕೊಂಡಿದ್ದು, ಇವರ ನಡುವೆ ಅಪರಾಧ ಪ್ರಕರಣಗಳು ಹೆಚ್ಚು ಹೆಚ್ಚು ನಡೆಯುತ್ತಿರುವುದು ವರದಿಯಾಗಿದೆ. ಸ್ಥಳೀಯ ಜನಸಮುದಾಯಕ್ಕೂ ಇವರು ಈ ಮೂಲಕ ಆತಂಕ ತಂದೊಡ್ಡುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.

ಸಾಲಕ್ಕೆ ಬೇಸತ್ತು ತಾಯಿ- ಮಗಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ

ದಾವಣಗೆರೆ: ದಾವಣಗೆರೆಯಲ್ಲಿ ಘೋರವಾದ ದುರಂತ ಸಂಭವಿಸಿದೆ. ಹರಿಹರ ಬಳಿ ಇರುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ ರೈಲ್ವೇ ಸೇತುವೆ ಬಳಿ ತಾಯಿ- ಮಗಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳನ್ನ ಗಂಗನರಸಿ ಗ್ರಾಮದ ಸುವರ್ಣಮ್ಮ (65) ಮತ್ತು ಗೌರಮ್ಮ (45) ಎಂದು ಗುರುತಿಸಲಾಗಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆಯರಿಬ್ಬರ ರುಂಡ, ಮುಂಡ ಪ್ರತ್ಯೇಕವಾಗಿದ್ದು, ಅಂಗಾಂಗಗಳು ರಕ್ತಸಿಕ್ತವಾಗಿ ಛಿದ್ರವಾಗಿವೆ.

ಫೈನಾನ್ಸ್ ಸಾಲ ಕಟ್ಟಲಾಗದೆ ರೈಲಿಗೆ ತಲೆ ಕೊಟ್ಟು ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಸುವರ್ಣಮ್ಮ ಅವರ ಪತಿ ನಿಧನರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದು, ಮತ್ತೊಬ್ಬ ಪುತ್ರಿ ದಿವ್ಯಾಂಗರಾಗಿದ್ದರು. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Lawrence Bishnoi: ಬೆಂಗಳೂರಿನ ಉದ್ಯಮಿಗೆ ಭೂಗತ ಪಾತಕಿ ಲಾರೆನ್ಸ್‌ ಬಿಷ್ಣೋಯಿ ಹೆಸರಿನಲ್ಲಿ ಬೆದರಿಕೆ