16.5 ಮಿಲಿಯನ್ ದಾಖಲೆ ಮೊತ್ತ ಜೇಬಿಗಿಳಿಸಿಕೊಂಡ ಬೇಬಿ ಎಬಿಡಿ!
ದಕ್ಷಿಣ ಆಫ್ರಿಕಾದ 22 ವರ್ಷದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ದಕ್ಷಿಣ ಆಫ್ರಿಕಾ-20 ಕ್ರಿಕೆಟ್ ಲೀಗ್ ಹರಾಜಿನಲ್ಲಿ 16.5 ಮಿಲಿಯನ್ ದಾಖಲೆಯ ಮೊತ್ತಕ್ಕೆ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್.