ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈರಲ್‌

ಕೆನಡಾದಿಂದ ಭಾರತಕ್ಕೆ ಮರಳಿ ಬಂದ ಎನ್ಆರ್‌ಐ ಮಹಿಳೆ ಹೇಳಿದ್ದೇನು?

ಕೆನಡಾದಿಂದ ಭಾರತಕ್ಕೆ ಮರಳಿ ಬಂದ ಎನ್ಆರ್‌ಐ ಮಹಿಳೆ ಹೇಳಿದ್ದೇನು?

NRI Women: ಕೆನಡಾದಲ್ಲಿ ನೆಲೆಸಿದ್ದ ಎನ್‌ಆರ್‌ಐ ಮಹಿಳೆಯೊಬ್ಬರು ಭಾರತಕ್ಕೆ ಮರಳಿದ ನಂತರ ತಮ್ಮ ಜೀವನದಲ್ಲಿ ಸಂಭವಿಸಿದ ಬದಲಾವಣೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಭಾರತಕ್ಕೆ ವಾಪಸಾದುದು ಕೇವಲ ಸ್ಥಳಾಂತರವಲ್ಲ, ಬದಲಾಗಿ ಬದುಕಿನ ದೃಷ್ಠಿಕೋನವನ್ನೇ ಬದಲಿಸಿದ ಅನುಭವ ಎಂದು ಅವರು ವಿವರಿಸಿದ್ದಾರೆ.

ನ್ಯಾಯಾಧೀಶರ ನಿವಾಸದ ಎದುರೇ ಶ್ವಾನವನ್ನು ಗುಂಡಿಕ್ಕಿ ಕೊಂದ ಭದ್ರತಾ ಸಿಬ್ಬಂದಿ; ಆಘಾತಕಾರಿ ಕೃತ್ಯದ ವಿಡಿಯೊ ವೈರಲ್

ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದ ಜಡ್ಜ್ ಭದ್ರತಾ ಸಿಬ್ಬಂದಿ

ನ್ಯಾಯಾಧೀಶರ ನಿವಾಸದ ಎದುರೇ ನಡೆದ ಒಂದು ಆಘಾತಕಾರಿ ಘಟನೆಯ ವಿಡಿಯೊ ವೈರಲ್ ಆಗಿದ್ದು, ಸೋಶಿಯಲ್‌ ಭಾರಿ ಚರ್ಚೆಗೆ ಕಾರಣವಾಗಿದೆ. ನ್ಯಾಯಾಧೀಶರ ಮನೆಯ ಬಳಿಯ ನೆಲಕ್ಕೆ ಹೊಸದಾಗಿ ಕಾಂಕ್ರೀಟ್‌ ಹಾಕಲಾಗಿದ್ದು, ಅದರ ಮೇಲೆ ಹೆಜ್ಜೆ ಹಾಕಿದ ಶ್ವಾನಕ್ಕೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾನೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಪುಟಿನ್ ಜತೆಗಿನ ಪ್ರಧಾನಿ ಮೋದಿ ಫೋಟೊಗೆ ಜನರ ಬಹುಪರಾಕ್; ಎಕ್ಸ್‌ನ ಅತಿ ಹೆಚ್ಚು ಇಷ್ಟವಾದ ಪೋಸ್ಟ್ ಇದು

ಪುಟಿನ್ ಜತೆಗಿನ ಪ್ರಧಾನಿ ಮೋದಿ ಫೋಟೊಗೆ ಬಹುಪರಾಕ್

People admire Modi’s photo with Putin: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರ ಫೋಟೊ ಪೋಸ್ಟ್ ಆದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಭಾರಿ ಪ್ರತಿಕ್ರಿಯೆ ಬಂದಿದೆ. ಈ ಪೋಸ್ಟ್‌ ಅನ್ನು ನೆಟ್ಟಿಗರು ರೀಪೋಸ್ಟ್‌, ಶೇರ್, ಲೈಕ್‌ ಮಾಡಿದ್ದಾರೆ.

ಲೈಂಗಿಕ ಆಟಿಕೆ ಖರೀದಿಸುತ್ತಿರುವವರಲ್ಲಿ ಬೆಂಗಳೂರಿಗರೇ ನಂಬರ್ 1; ಟಾಯ್‌ಗೆ 4 ಲಕ್ಷ ರುಪಾಯಿ!

ಲೈಂಗಿಕ ಆಟಿಕೆ ಖರೀದಿಸುತ್ತಿರುವವರಲ್ಲಿ ಬೆಂಗಳೂರಿಗರೇ ನಂಬರ್ 1

Bengaluru News: ಇತ್ತೀಚಿನ ವರದಿಯೊಂದರ ಪ್ರಕಾರ, ಭಾರತದಲ್ಲಿ ಸೆಕ್ಸ್ ಗೊಂಬೆಗಳ ಖರೀದಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ವಿಶೇಷವಾಗಿ ಸುಮಾರು 4 ಲಕ್ಷ ರುಪಾಯಿ ಮೌಲ್ಯದ ಸೆಕ್ಸ್ ಟಾಯ್‌ಗಳ ಮಾರಾಟವಾಗುತ್ತಿದೆ. ಬದಲಾಗುತ್ತಿರುವ ಜೀವನಶೈಲಿ, ತಂತ್ರಜ್ಞಾನ ಪ್ರಭಾವ ಮತ್ತು ಖಾಸಗಿ ಆಯ್ಕೆಗಳ ಬಗ್ಗೆ ಹೆಚ್ಚುತ್ತಿರುವ ಮುಕ್ತ ಮನೋಭಾವ ಈ ಪ್ರವೃತ್ತಿಗೆ ಕಾರಣ.

ರೀಲ್ಸ್ ಗೀಳು: ತನ್ನ ಖಾಸಗಿ ಅಂಗದಲ್ಲೇ ಫೋನ್ ಚಾರ್ಜರ್ ಸೇರಿಸಿಕೊಂಡ ಬಾಲಕ!

ಖಾಸಗಿ ಅಂಗದಲ್ಲಿ ಮೊಬೈಲ್ ಚಾರ್ಜರ್ ಸೇರಿಸಿಕೊಂಡ ಬಾಲಕ!

ಬಾಲಕನೊಬ್ಬ ಆನ್‌ ಲೈನ್‌ ನಲ್ಲಿ ವೀಡಿಯೊ ನೋಡಿ ತನ್ನ ಮೂತ್ರನಾಳಕ್ಕೆ ಫೋನ್ ಚಾರ್ಜರ್ ಸೇರಿಸಿ ಕೊಂಡ ಆಘಾತಕಾರಿ ಘಟನೆಯೊಂದು ನಡೆದಿದೆ. ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ ಈ ಘಟನೆ ನಡೆದಿದ್ದು ಪೋಷಕರನ್ನೇ ಗೊಂದಲ ಮೂಡಿಸುವಂತೆ ಬಾಲಕ ಮಾಡಿದ್ದಾನೆ.‌ ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

Bengaluru Child Assault: ಆಟವಾಡುತ್ತಿದ್ದ ಬಾಲಕನನ್ನು ಫುಟ್‌ಬಾಲ್‌ನಂತೆ ಒದ್ದ ಜಿಮ್ ಟ್ರೈನರ್; ಕ್ರೂರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

ಆಟವಾಡುತ್ತಿದ್ದ ಬಾಲಕನನ್ನು ಫುಟ್‌ಬಾಲ್‌ನಂತೆ ಒದ್ದು ಜಿಮ್ ಟ್ರೈನರ್ ವಿಕೃತಿ!

ಬೆಂಗಳೂರಿನ ತ್ಯಾಗರಾಜ ನಗರದ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಬಾಲಕನ ಮೇಲೆ ಹಲ್ಲೆ ಸಂಬಂಧ ಪೋಷಕರು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ರಸ್ತೆಯಲ್ಲಿನ ಸಿಸಿಟಿವಿ ಚೆಕ್ ಮಾಡಿದಾಗ, ಆರೋಪಿಯದ್ದು ಇಂತಹ ಕೃತ್ಯ ಇದೇ ಮೊದಲಲ್ಲ, ಈ ಹಿಂದೆಯೂ ಹಲವರಿಗೆ ಕಿರುಕುಳ ಕೊಟ್ಟಿದ್ದಾನೆ ಎಂಬುವುದು ತಿಳಿದುಬಂದಿದೆ.

ಒಂದೇ ಬೈಕ್ ನಲ್ಲಿ 7 ಮಂದಿ ಪ್ರಯಾಣ;  ಅಪಾಯಕಾರಿ ವಿಡಿಯೊ ಇಲ್ಲಿದೆ

ಒಂದೇ ಬೈಕ್ ನಲ್ಲಿ 7 ಮಂದಿ ಸವಾರಿ; ಕ್ರಮಕ್ಕೆ ನೆಟ್ಟಿಗರ ಆಗ್ರಹ

Viral Video: ಒಂದೇ ಬೈಕ್ ನಲ್ಲಿ ಬರೋಬ್ಬರಿ 7 ಜನ ಯುವಕರು ಸವಾರಿ ಮಾಡುತ್ತಿದ್ದ ಘಟನೆ ಮುಂಬೈನಲ್ಲಿ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಮುಂಬೈನ ಸಾಕಿ ನಾಕಾದಲ್ಲಿ ಸಂಚಾರ ದಟ್ಟಣೆಯ ನಡುವೆ ಏಳು ಯುವಕರು ಒಂದೆ ಬೈಕ್ ನಲ್ಲಿ ಕೂತು ಅಪಾಯಕಾರಿಯಾಗಿ ಸವಾರಿ ಮಾಡಿದ್ದಾರೆ. ಅಪ್ರಾಪ್ತ ವಯಸ್ಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು.

ಜೇಡ ಕಚ್ಚಿದೆ ಎಂದು ನಿರ್ಲಕ್ಷ್ಯ ಮಾಡುವ ಮುನ್ನ ಈ ವಿಡಿಯೋ ವೀಕ್ಷಿಸಿ!

ಜೇಡ ಕಚ್ಚಿದ ಪರಿಣಾಮ ಮಹಿಳೆಯ ಸ್ಥಿತಿ ಗಂಭೀರ!

Viral Video: ಮಹಿಳೆಯೊಬ್ಬರಿಗೆ ಜೇಡ ಕಚ್ಚಿದ್ದ ಪರಿಣಾಮ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೂ ಜೀವ ಉಳಿಸಿಕೊಂಡು ಬದುಕಿ ಬಂದ ಘಟನೆ ನಡೆದಿದೆ. ಈ ಮೂಲಕ ಜೇಡ ಕಚ್ಚಿದೆ ಎಂಬ ನಿರ್ಲಕ್ಷ್ಯ ವಹಿಸಿದರೆ ಏನಾಗುತ್ತದೆ ಎಂಬುದಕ್ಕೆ ಈ ಮಹಿಳೆಯೇ ಜ್ವಲಂತ ಉದಾಹರಣೆಯಾಗಿದ್ದಾರೆ. ಸದ್ಯ ಆ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು ವೆಂಟಿಲೇಟರ್ ನಲ್ಲಿ ಆಕೆ ಚಿಕಿತ್ಸೆ ಪಡೆದು ಚೇತರಿಕೆ ಯಾಗಿದ್ದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಜೇಡ ಕಚ್ಚಿತು ಎಂಬ ನಿರ್ಲಕ್ಷ್ಯ ವಹಿಸಬಾರದು ಎಂಬ ನೆಲೆಯಲ್ಲಿ ಆನ್ಲೈನ್ ನಲ್ಲಿ ಹೊಸ ಚರ್ಚೆ ಏರ್ಪಡುತ್ತಿದೆ.

ಪಾಕಿಸ್ತಾನದ ಪಾರ್ಟಿ ಸಂಭ್ರಮದಲ್ಲಿ ಧುರಂದರ್ ಹಾಡಿನ ಹವಾ: ವಿಡಿಯೊ ವೈರಲ್!

ಪಾಕಿಸ್ತಾನದ ಪಾರ್ಟಿಯಲ್ಲಿ ಭಾರತೀಯ ಸಿನಿಮಾ ಹಾಡು; ವಿಡಿಯೊ ವೈರಲ್

Dhurandhar Movie: ಪಾಕಿಸ್ತಾನದ ಪಾರ್ಟಿ ಒಂದರಲ್ಲಿ ಧುರಂದರ್ ಸಿನಿಮಾದ ಐಕಾನಿಕ್ ಹಾಡನ್ನು ಬಳಸಿದ್ದು ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ರೀಲ್ಸ್ ಮತ್ತು ಮೇಮ್ಸ್ ನಲ್ಲಿ ಈ ಮ್ಯೂಸಿಕ್ ಫೇಮಸ್ ಆಗಿದೆ. ಅಂತೆಯೇ ಧುರಂದರ್ ಸಿನಿಮಾಕ್ಕೆ ಪಾಕಿಸ್ತಾನದಲ್ಲಿ ವಿರೋಧ ಇದ್ದರೂ ಕೂಡ ಅದರ ಮ್ಯೂಸಿಕ್ ಮಾತ್ರ ಎಲ್ಲರು ಮೆಚ್ಚಿ ಕೊಂಡಿದ್ದಾರೆ ಎಂಬುದಕ್ಕೆ ಈ ವಿಡಿಯೋ ಒಂದು ಸಾಕ್ಷಿ ಎಂದು ಹೇಳಬಹುದು.

1,500 ಜನಸಂಖ್ಯೆಯ ಈ ಗ್ರಾಮದಲ್ಲಿ ಕೇವಲ 3 ತಿಂಗಳಲ್ಲಿ 27 ಸಾವಿರ ಶಿಶುಗಳ ಜನನ! ಏನಿದು ವೈಚಿತ್ರ್ಯ?

ಈ ಗ್ರಾಮದ ಜನ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ 27 ಸಾವಿರ ಜನನ ನೋಂದಣಿಯಾಗಿರುವ ವಿಚಾರವೊಂದು ಇದೀಗ ಎಲ್ಲರ ಗಮನ ಸೆಳೆದಿದೆ. ವಿಶೇಷವೆಂದರೆ ಈ ಗ್ರಾಮದ ಜನಸಂಖ್ಯೆ ಕೇವಲ 15 ಸಾವಿರ. ಈ ವಿಚಾರವೀಗ ಅಧಿಕಾರಿಗಳ ನಿದ್ದೆಗೆಡಿಸಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ. ಈ ಘಟನೆಯನ್ನು ರಾಜ್ಯದಲ್ಲಿ ನಡೆದಿರುವ ಅತೀ ದೊಡ್ಡ ಜನನ ದಾಖಲಾತಿ ಹಗರಣವೆಂದು ಪರಿಗಣಿಸಲಾಗಿದೆ.

ಅತ್ತೆ...ಅತ್ತೆ...ನನಗೆ ಪತ್ನಿ ಬೇಕತ್ತೆ: ಹೆಂಡತಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಅತ್ತೆಯ ಕಾಲು ಹಿಡಿದ ಪತಿರಾಯ

ಇದು ಗಂಡ-ಹೆಂಡಿರ ನಡುವಿನ ಜಗಳದ ಸುದ್ದಿ

Viral Video: ಉತ್ತರ ಪ್ರದೇಶದ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಅತ್ತೆಯ ಕಾಲಿಗೆ ಸಾರ್ವಜನಿಕವಾಗಿ ಬಿದ್ದು ಗೋಳಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಲಿಘಡದಲ್ಲಿರುವ ಪೊಲೀಸ್ ಸ್ಟೇಷನ್ ಒಂದರ ಹೊರಗಡೆ ಈ ಘಟನೆ ನಡೆದಿದೆ. ಮಗಳಿಗೆ ಹೇಳಿದ ಹಿಂಸೆ ಕೊಡುತ್ತಿದ್ದ ಕಾರಣ ಗಂಡನೊಂದಿಗೆ ಮತ್ತೆ ತನ್ನ ಮಗಳನ್ನು ಕಳುಹಿಸಲು ಅತ್ತೆ ನಿರಾಕರಿಸಿದ್ದ ಹಿನ್ನಲೆ ಹೀಗೆ ನಡುರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದಾನೆ.

ʼಧುರಂಧರ್ʼ ಸ್ಟೈಲ್‌ನಲ್ಲಿ ಸ್ಟೆಪ್ ಹಾಕಿ ಮಗಳನ್ನು ಬರ ಮಾಡಿಕೊಂಡ ತಂದೆ: ವೈರಲ್ ವಿಡಿಯೊ ಇಲ್ಲಿದೆ

ಮಗಳು ಜನಿಸಿದ ಖುಷಿಗೆ ʼಧುರಂಧರ್ʼ ಸ್ಟೈಲ್‌ನಲ್ಲಿ ಡ್ಯಾನ್ಸ್ ಮಾಡಿದ ತಂದೆ

Viral Video: ರಣವೀರ್ ಸಿಂಗ್ ನಟನೆಯ ಬಾಲಿವುಡ್‌ ಚಿತ್ರ ‘ಧುರಂಧರ್ʼ ಸದ್ಯ ಭಾರಿ ಸದ್ದು ಮಾಡುತ್ತಿದೆ. ಸದ್ಯ ಈ ಸಿನಿಮಾದ ಹಾಡುಗಳು ಕೂಡ ಸಿಕ್ಕಪಟ್ಟೆ ಟ್ರೆಂಡಿಂಗ್‌ನಲ್ಲಿದ್ದು, ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ‌. ಸದ್ಯ ಈ ಚಿತ್ರದ ಕ್ರೇಝ್‌ ಈಗ ಆಸ್ಪತ್ರೆಯ ಮೆಟ್ಟಿಲೇರಿದೆ. ಚಿತ್ರದ 'FA9LA' ಹಾಡಿಗೆ ಹೊಸದಾಗಿ ತಂದೆಯಾದ ವ್ಯಕ್ತಿಯೊಬ್ಬರು ಡ್ಯಾನ್ಸ್‌ ಮಾಡಿದ್ದಾರೆ.

Viral Video: ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು

ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮನ ಬಂದಂತೆ ಥಳಿಸಿದ ಅಪ್ರಾಪ್ತರು

ತಮಿಳುನಾಡಿನ ವಿರುತ್ತನಗರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ತಮಗಿಂತ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಅಪ್ರಾಪ್ತ ಬಾಲಕರ ಗುಂಪೊಂದು ಮನ ಬಂದಂತೆ ಹಲ್ಲೆ ನಡೆಸಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಭೀಕರ ಪ್ರವಾಹದ ನಡುವೆಯೂ ಹುಲಿಯನ್ನು ರಕ್ಷಣೆ ಮಾಡಿದ ಆನೆ:  ಮೂಕ ಪ್ರಾಣಿಗಳ ಸ್ನೇಹಕ್ಕೆ ನೆಟ್ಟಿಗರು ಫಿದಾ, ವಿಡಿಯೋ ನೋಡಿ

ಆನೆಯ ಬೆನ್ನೇರಿ ಪ್ರವಾಹದಿಂದ ಪಾರಾದ ಹುಲಿ: ವಿಡಿಯೊ ಇಲ್ಲಿದೆ!

ತೀವ್ರವಾದ ಪ್ರವಾಹದ ನಡುವೆ ಆನೆಯೊಂದು ತನ್ನ ಸೊಂಡಿಲು ನೀಡಿ ಹುಲಿಯನ್ನು‌ ತನ್ನ ಬೆನ್ನ ಮೇಲೆ ಕುಳ್ಳಿರಿಸಿಕೊಂಡು ಕಾಪಾಡಿರುವ ವಿಡಿಯೋವೊಂದು ಸಂಚಲನ ಸೃಷ್ಟಿ ಮಾಡಿದೆ. ಈ ಹೃದಯ ಸ್ಪರ್ಶಿ ದೃಶ್ಯವನ್ನು ಕಂಡ ನೆಟ್ಟಿಗರು ಫಿದಾ ಆಗಿದ್ದು ಇದು ನಿಜವಲ್ಲ, ಎಐ‌ ವಿಡಿಯೊ ಎಂದು ಸೋಷಿ ಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಾರೆ.

Viral News: ರಾತ್ರೋರಾತ್ರಿ ಕೆಂಪು ಬಣ್ಣಕ್ಕೆ ತಿರುಗಿದ ಹಾರ್ಮುಜ್ ದ್ವೀಪದ ಸಮುದ್ರ! ಏನಿದರ ಅಸಲಿಯತ್ತು?

ರಾತ್ರೋರಾತ್ರಿ ಕೆಂಪು ಬಣ್ಣಕ್ಕೆ ತಿರುಗಿದ ಹಾರ್ಮುಜ್ ದ್ವೀಪದ ಸಮುದ್ರ!

Blood-Red landscape: ಇರಾನ್‌ನ ಹೋರ್ಮುಜ್ ದ್ವೀಪದ ಸಮುದ್ರವು ರಾತ್ರೋರಾತ್ರಿ ಕೆಂಪು ಬಣ್ಣಕ್ಕೆ ತಿರುಗಿದ್ದು, ಎಲ್ಲರಲ್ಲೂ ಅಚ್ಚರಿ ತಂದಿತ್ತು. ಈ ವಿಚಿತ್ರ ಘಟನೆಯ ಬಗ್ಗೆ ಮಾಹಿತಿ ಮತ್ತು ವಿಜ್ಞಾನಾತ್ಮಕ ವಿವರಣೆ ಇಲ್ಲಿ ನೀಡಲಾಗಿದೆ. ದ್ವೀಪದ ವಿಶಿಷ್ಟ ಭೂಗರ್ಭಶಾಸ್ತ್ರ, ಲೋಹ ಸಮೃದ್ಧ ಮಣ್ಣು ಮತ್ತು ಮಳೆಯ ನೀರಿನ ಪರಿಣಾಮವೇ ಈ ಅಚ್ಚರಿಕರ ದೃಶ್ಯಕ್ಕೆ ಕಾರಣವಾಗಿದೆ.

ಮದ್ಯದಂಗಡಿಗೆ ನುಗ್ಗಿ ಬಾಟಲಿ ಪುಡಿ ಪುಡಿ ಮಾಡಿದ ನಾರಿಮಣಿಗಳು; ವಿಡಿಯೋ ವೈರಲ್‌

ಮದ್ಯದ ಅಂಗಡಿಗೆ ನುಗ್ಗಿ ಬಾಟಲಿಗಳನ್ನು ರೋಡಿಗೆ ಎಸೆದ ಮಹಿಳೆಯರು: ಕಾರಣ ಏನು?

ನಿತ್ಯ ಮದ್ಯ ಬೇಕೇ ಬೇಕು ಎಂದು ಅವಲಂಬಿತರಾಗಿರುವವರ ಸಂಖ್ಯೆ ನಮ್ಮ ದೇಶದಲ್ಲಿ ಹೆಚ್ಚಾಗಿಯೆ ಇದೆ. ಕುಟುಂಬದ ಜೀವನ ಸೌಕರ್ಯಕ್ಕೆ ಹೆಂಗಸರು ಪ್ರಶ್ನೆ ಮಾಡಿದರೆ ಅವರಿಗೆ ಹೊಡೆದು ಬಡಿದು ಹಿಂಸಿ ಸುತ್ತಾರೆ. ಇಂತಹ ಮನಸ್ಥಿತಿಯಿಂದ ಬೇಸತ್ತ ಮಹಿಳೆಯರು ಮದ್ಯದಂಗಡಿಯ ವಿರುದ್ಧ ಪ್ರತಿಭಟನೆ ನಡೆಸಿ ಅಲ್ಲಿನ ಮದ್ಯದ ಬಾಟಲಿ ಗಳನ್ನು ಹೊರಗೆ ಎಸೆದ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಮಹುವಾ ಗ್ರಾಮದಲ್ಲಿ ನಡೆದಿದೆ.

Viral Video: ಬೆಂಗಳೂರಿನ ಹೆವೀ ಟ್ರಾಫಿಕ್ ನಡುವೆಯೇ ಹೆಲ್ಮೆಟ್‌ನಿಂದ ಹೊಡೆದಾಡಿದ ಬೈಕ್ ಸವಾರರು: ವಿಡಿಯೋ ವೈರಲ್

ಬೆಂಗಳೂರಿನ ಸಂಚಾರ ದಟ್ಟಣೆ ನಡುವೆ ಹೆಲ್ಮೆಟ್ ನಿಂದ ಹೊಡೆದಾಡಿದ ಬೈಕ್ ಸವಾರರು!

ಬೈಕ್ ಸವಾರರಿಬ್ಬರು ಹೆಲ್ಮೆಟ್ ಅನ್ನೇ ಬಳಸಿಕೊಂಡು ರಸ್ತೆ ಮಧ್ಯೆ ಪರಸ್ಪರ ಹೊಡೆದಾಡಿಕೊಳ್ಳುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಚಾರ ದಟ್ಟಣೆಯ ನಡುವೆಯೂ ಯಾವ ಪರಿಜ್ಞಾನ ಇಲ್ಲದೆ ಹೆಲ್ಮೆಟ್ ನಿಂದ ಒಬ್ಬರಿಗೊಬ್ಬರು ತಳಿಸುತ್ತಿರುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

Viral Video: ಕರುವಿಗೆ ಟೂತ್‌ಬ್ರಷ್‌ನಿಂದ ಹಲ್ಲುಜ್ಜಿದ ಪುಟ್ಟ ಬಾಲಕಿ: ಮುಗ್ಧತೆಗೆ ಮನಸೋತ ನೆಟ್ಟಿಗರು!

ಕರುವಿಗೆ ಟೂತ್‌ಬ್ರಷ್ ನಿಂದ ಹಲ್ಲುಜ್ಜಿದ ಬಾಲಕಿ: ಕ್ಯೂಟ್ ವಿಡಿಯೊ ಇಲ್ಲಿದೆ!

Viral Video: ಪುಟ್ಟ ಬಾಲಕಿಯೊಬ್ಬಳು ಮನೆಯ ಕರುವಿಗೆ ತೋರಿಸಿದ ಕಾಳಜಿಯೊಂದು ಎಲ್ಲರ ಮನಗೆದ್ದಿದೆ.. ಪುಟ್ಟ ಬಾಲಕಿಯೊಬ್ಬಳು ಕರುವಿನ ಹಲ್ಲು ಸ್ವಚ್ಛಗೊಳಿಸಲು ಟೂತ್‌ಬ್ರಷ್ ಬಳಕೆ ಮಾಡಿ ನೆಟ್ಟಿಗರ ಹೃದಯಗಳನ್ನು ಗೆದ್ದಿದ್ದಾಳೆ. ಕರುವಿನ ಬಾಯಿಯನ್ನು ತನ್ನ ಪುಟ್ಟ ಕೈಗಳಿಂದ ಹಿಡಿದು ಹಲ್ಲುಜ್ಜುತ್ತಿರುವ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ.

ಎಚ್ಚರಿಕೆ ನೀಡಿ ಅಭಿಮಾನಿಯೊಂದಿಗೆ ತಾಳ್ಮೆ ಕಳೆದುಕೊಂಡ ಬುಮ್ರಾ; ವಿಡಿಯೊ ವೈರಲ್‌

ಅಭಿಮಾನಿಯ ಫೋನ್‌ ಕಿತ್ತೊಗೆದ ಜಸ್‌ಪ್ರೀತ್‌ ಬುಮ್ರಾ

viral video: ವೈರಲ್‌ ವಿಡಿಯೊದಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ವಿಡಿಯೊ ಮಾಡುತ್ತಾ ತಾನು ನಿಮ್ಮೊಂದಿಗೆ ಪ್ರಯಾಣಿಸುತ್ತೇನೆ ಎಂದು ಹೇಳಿದಾಗ ಬುಮ್ರಾ ನಿಮ್ಮ ಫೋನ್ ಬಿದ್ದರೆ, ನನ್ನನ್ನು ಕೇಳಬಾರದು ಎನ್ನುತಾರೆ. ಆಗ ಅಭಿಮಾನಿ ಪರವಾಗಿಲ್ಲ ಸರ್ ಎನ್ನುತ್ತಾನೆ. ತಾಳ್ಮೆ ಕಳೆದುಕೊಂಡ ಬುಮ್ರಾ ನಿಲ್ಲಿಸು ಸಾಕು ಎಂದು ಮೊಬೈಲ್‌ ಕಸಿದುಕೊಳ್ಳಲು ಮುಂದಾಗುತ್ತಾರೆ. ಈ ವೇಳೆ ಕ್ಲಿಪ್ ಥಟ್ಟನೆ ಕೊನೆಗೊಂಡಿತು.

ಕಾಶ್ಮೀರಿ ಬೆಡಗಿಗೆ ಕ್ಲೀನ್‌ ಬೌಲ್ಡ್‌ ಆದ ಟೀಮ್‌ ಇಂಡಿಯಾ ಆಲ್‌ರೌಂಡರ್‌

ಕಾಶ್ಮೀರಿ ಬೆಡಗಿಗೆ ಕ್ಲೀನ್‌ ಬೌಲ್ಡ್‌ ಆದ ಟೀಮ್‌ ಇಂಡಿಯಾ ಆಲ್‌ರೌಂಡರ್‌

Washington Sundar's Girlfriend: 1994 ಡಿಸೆಂಬರ್‌ 5 ರಂದು ಕಾಶ್ಮೀರಿ ಕುಟುಂಬದಲ್ಲಿ ಜನಿಸಿರುವ ಸಾಹಿಬಾ ಬಾಲಿ, ದೆಹಲಿ ವಿವಿಯಲ್ಲಿ ಅರ್ಥಶಾಸ್ತ್ರದ ಪದವೀಧರರಾಗಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲೂ ಗಮನಸೆಳೆದಿರುವ ಇವರು ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ನಂತರ ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳ ಮೂಲಕವೂ ಜನಪ್ರೀಯರಾಗಿದ್ದಾರೆ.

ಮಗುವಿನ ಚೇಷ್ಟೆಗೆ ವಸ್ತು ಸಂಗ್ರಹಾಲಯದಲ್ಲಿದ್ದ 51.5 ಲಕ್ಷ ರುಪಾಯಿ ಮೌಲ್ಯದ  ಚಿನ್ನದ ಕಿರೀಟಕ್ಕೆ ಹಾನಿ

ಮಗುವಿನ ಚೇಷ್ಟೆಯಿಂದ 51.5 ಲಕ್ಷ ರುಪಾಯಿ ಮೌಲ್ಯದ ಚಿನ್ನದ ಕಿರೀಟ ಜಖಂ

ವಸ್ತು ಪ್ರದರ್ಶನವೊಂದರಲ್ಲಿ ಮಗುವೊಂದು ಆಕಸ್ಮಿಕವಾಗಿ ಗಾಜಿನ ಪೆಟ್ಟಿಗೆಯನ್ನು ಮುಟ್ಟಿ ತಳ್ಳಿದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಗಾಜಿನ ಒಳಗೆ ಇದ್ದ ಸುಮಾರು 2 ಎರಡು ಕೆಜಿ ತೂಕದ ಮದುವೆಯ ಕಿರೀಟ ಕೆಳಗೆ ಬಿದ್ದ ಪರಿಣಾಮ ಹಾನಿಗೊಳಗಾಗಿದೆ. ಸದ್ಯ ಇದರ ದುರಸ್ತಿ ವೆಚ್ಚ ಸುಮಾರು 51.5 ಲಕ್ಷ ರುಪಾಯಿ ತಲುಪಬಹುದು ಎನ್ನಲಾಗಿದೆ.

ಗ್ಲೌಸ್ ಧರಿಸದೆ ಬರಿಗೈಯಲ್ಲಿ ಗ್ರಾಹಕರಿಗೆ ರಾಗಿ ಮುದ್ದೆ ಬಡಿಸಿದ ರೆಸ್ಟೋರೆಂಟ್ ಸಿಬ್ಬಂದಿ; ಆಹಾರ ಸುರಕ್ಷತೆ ಬಗ್ಗೆ ಜೋರಾಯ್ತು ಚರ್ಚೆ

ಬರಿ ಕೈಯಲ್ಲಿ ರಾಗಿ ಮುದ್ದೆ ಬಡಿಸಿದ ರೆಸ್ಟೋರೆಂಟ್ ಸಿಬ್ಬಂದಿ

Viral Video: ಇತ್ತೀಚಿನ ದಿನದಲ್ಲಿ ಆಹಾರ ಸುರಕ್ಷತೆ, ಶುಚಿತ್ವದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದೆ. ಕೆಲವು ಹೊಟೇಲ್‌ಗಳಲ್ಲಿ ಸ್ವಚ್ಛತೆ ಕೊರತೆ ಇರುವ ಬಗ್ಗೆ ಆಗಾಗ ದೂರು ಕೇಳಿ ಬರುತ್ತಲೇ ಇರುತ್ತದೆ. ಕರ್ನಾಟಕದ ರೆಸ್ಟೋರೆಂಟ್ ಒಂದರಲ್ಲಿ ಸಿಬ್ಬಂದಿಯೊಬ್ಬರು ಗ್ಲೌಸ್ ಬಳಸದೆ ಬರೀ ಕೈಯಲ್ಲಿ ರಾಗಿ ಮುದ್ದೆ ಮಾಡಿ ಗ್ರಾಹಕರಿಗೆ ಬಡಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ರೆಸ್ಟೋರೆಂಟ್ ಸಿಬ್ಬಂದಿ ನೈರ್ಮಲ್ಯದ ಕಾಯ್ದುಕೊಳ್ಳದೆ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಅಪೂರ್ವ ಸಹೋದರ: ಸೈಕಲ್ ಬ್ಯಾಲನ್ಸ್ ತಪ್ಪಿ ಸೈಕಲ್‌ನಿಂದ ಬಿದ್ದ ಬಾಲಕ; ತಮ್ಮನ ರಕ್ಷಣೆಗೆಂದು ಪ್ರಾಣದ ಹಂಗು ತೊರೆದು ಗುಂಡಿಗೆ ಹಾರಿದ ಅಣ್ಣ

ಸೈಕಲ್ ತುಳಿಯುವ ವೇಳೆ ಗುಂಡಿಗೆ ಬಿದ್ದ ತಮ್ಮನನ್ನು ರಕ್ಷಿಸಿದ್ದ ಅಣ್ಣ

ಸೈಕಲ್ ತುಳಿಯುತ್ತಿದ್ದ ಬಾಲಕನೊಬ್ಬ ಬ್ಯಾಲನ್ಸ್ ತಪ್ಪಿ ಮನೆ ಅಂಗಳದ ಅಂಚಿನ ಹೊಂಡಕ್ಕೆ ಬಿದ್ದಿದ್ದಾನೆ. ತಮ್ಮ ಬೀಳುವುದನ್ನು ಕಂಡ ಆತನ ಅಣ್ಣ ಹಿಂದೆ ಮುಂದೆ ಕೂಡ ಯೋಚಿಸದೆ ರಕ್ಷಣೆಗಾಗಿ ಧಾವಿಸಿ ಅದೇ ಗುಂಡಿಗೆ ಹಾರಿದ್ದಾನೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರಾಣದ ಭಯ ತೊರೆದು ತಮ್ಮನ ಜೀವ ರಕ್ಷಿಸಲು ಮುಂದಾದ ಅಣ್ಣನ ಪರಾಕ್ರಮ ನೆಟ್ಟಿಗರ ಗಮನ ಸೆಳೆಯುತ್ತಿದೆ.

Sidney Shootout: ಮೃತ ಮಾಲೀಕನ ಶವಕ್ಕೆ ಕಾವಲಾಗಿ ನಿಂತಿರುವ ಶ್ವಾನ; ಮೂಕ ಪ್ರಾಣಿಯ ವೇದನೆ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ

ಬೋಂಡಿ ಬೀಚ್ ದಾಳಿಯಲ್ಲಿ ಮಾಲಕನನ್ನೇ ಕಳೆದುಕೊಂಡ ನಾಯಿ!

ಸಿಡ್ನಿಯ ಬೊಂಡಿ ಬೀಚ್ಗೆ ತನ್ನ ಮಾಲಕನ ಜೊತೆ ನಾಯಿಯೊಂದು ತೆರಳಿದ್ದು ದುಷ್ಕರ್ಮಿಗಳು ಸಾಮೂಹಿಕ ಗುಂಡಿನ ದಾಳಿಯ ಸಂದರ್ಭದಲ್ಲಿ ಮಾಲಕನ ಶವಕ್ಕೆ ಆ ನಾಯಿಯು ರಕ್ಷಣೆ ನೀಡುತ್ತಿರುವ ಘಟನೆ ನಡೆದಿದೆ. ಬೀಚ್ ಬಳಿ ದಾಳಿಯಿಂದ ನಾಯಿಯ ಮಾಲಕ ಸತ್ತುಹೋಗಿದ್ದು ತನ್ನ ಮಾಲಕ ನನ್ನು ಬಿಟ್ಟು ಅಲ್ಲಿಂದ ತೆರಳಲು ಒಪ್ಪದ ನಿಷ್ಠಾವಂತ ನಾಯಿಯ ವಿಡಿಯೋ ಒಂದು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ಈ ಹೃದಯ ವಿದ್ರಾವಕ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Loading...