ಹೆಚ್ಚುವರಿ ಜೈಲುವಾಸ ಅನುಭವಿಸಿದ ವ್ಯಕ್ತಿಗೆ ಭರ್ಜರಿ ಆಫರ್ ನೀಡಿದ ಕೋರ್ಟ್
ವ್ಯಕ್ತಿಯೋರ್ವನನ್ನು ಶಿಕ್ಷಾವಧಿ ಮುಗಿದರೂ ನಾಲ್ಕೂವರೆ ವರ್ಷ ಹೆಚ್ಚುವರಿ ಸೆರೆವಾಸ ಅನುಭವಿಸಿದ್ದಕ್ಕೆ ವ್ಯಕ್ತಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅಲ್ಲದೇ ಈ ಬೇಜವಾಬ್ದಾರಿ ಮಾಡಿದ ಮಧ್ಯ ಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.