ವಿಶ್ವ ಮಲೇರಿಯ ದಿನ: ಈ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ!
ಮಲೇರಿಯ ಸೋಂಕು ಪ್ರಸಾರ ವಾಗದಂತೆ ತಡೆಯುವುದು ಮತ್ತು ಸೂಕ್ತ ಚಿಕಿತ್ಸೆಯನ್ನು ರೋಗಿಗಳಿಗೆ ಒದಗಿಸುವುದರ ಮಹತ್ವವನ್ನು ಸಾರುವ ಉದ್ದೇಶದಿಂದ, ಏಪ್ರಿಲ್ ತಿಂಗಳ ೨೫ನೇ ದಿನವನ್ನು ವಿಶ್ವ ಮಲೇರಿಯ ದಿನವೆಂದು ಗುರುತಿಸಲಾಗಿದೆ. ವೈದ್ಯ ವಿಜ್ಞಾನ ಸಾಕಷ್ಟು ಉನ್ನತಿ ಹೊಂದಿರುವ ಈ ದಿನಗಳಲ್ಲೂ, ವಾರ್ಷಿಕವಾಗಿ ಕೋಟಿಗಟ್ಟಲೆ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ, ಮಲೇರಿಯ ರೋಗದ ದುಷ್ಪರಿಣಾಮವನ್ನು ಅರ್ಥ ಮಾಡಿಕೊಳ್ಳಬೇಕು.. ಹಾಗಾಗಿ ಈ ರೋಗದ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳಬೇಕು..