ಗುವಾಹಟಿಯಲ್ಲಿ ಪ್ರಕೃತಿ ಥೀಮ್ನ ವಿಮಾನ ನಿಲ್ದಾಣಕ್ಕೆ ಚಾಲನೆ
ಅಸ್ಸಾಂನ ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾದ ಹೊಸ ಟರ್ಮಿನಲ್ ಕಟ್ಟಡವನ್ನು ಶನಿವಾರ (ಡಿಸೆಂಬರ್ 20) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ವಿಶೇಷ ಎಂದರೆ ಇದು ಪ್ರಕೃತಿ ಥೀಮ್ನಲ್ಲಿ ನಿರ್ಮಾಣವಾದ ದೇಶದ ಮೊದಲ ಟರ್ಮಿನಲ್. ಈ ವಿಮಾನ ನಿಲ್ದಾಣವನ್ನು 2032ರ ವೇಳೆಗೆ ಪ್ರತಿ ವರ್ಷ 1.31 ಕೋಟಿ ಪ್ರಯಾಣಿಕರು ಬಳಸುವಂತೆ ಮಾಡುವ ಗುರಿ ಹೊಂದಲಾಗಿದೆ. ಸದ್ಯ ಈ ಟರ್ಮಿನಲ್ನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.