ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರೋಗ್ಯ

Breast cancer: ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಅಭಿಯಾನ: ಮಹಿಳಾ ಬೈಕ್ ಸವಾರರು, ಪಿಂಕ್ ಆಟೋಗಳ ರ‍್ಯಾಲಿ

ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಅಭಿಯಾನ

ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಆರಂಭಿಕ ಪತ್ತೆ, ಸಕಾಲಿಕ ಚಿಕಿತ್ಸೆ, ಸಬಲೀಕರಣದ ಸಂದೇಶವನ್ನು ಸಾರಲು ನಗರದಾದ್ಯಂತ ಮಹಿಳಾ ಬೈಕ್ ಸವಾರರು ಮತ್ತು ಪಿಂಕ್ ಆಟೋ ಚಾಲಕರು ಮಣಿಪಾಲ್ ಆಸ್ಪತ್ರೆ ಯಶವಂತಪುರದಿಂದ ರ‍್ಯಾಲಿ ನಡೆಸಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ನೂತನ ಸ್ತನ ಕ್ಯಾನ್ಸರ್ ಕ್ಲಿನಿಕ್ ಉದ್ಘಾಟಿಸಲಾಯಿತು.

Pearl Millet: ಸಜ್ಜೆಯ ಸದ್ಗುಣಗಳ ಬಗ್ಗೆ ತಿಳಿದಿದೆಯೇ?

ಸಜ್ಜೆ ಸೇವನೆಯಿಂದ ಆರೋಗ್ಯಕ್ಕೇನು ಲಾಭ?

Pearl millet: ಪ್ರೊಟೀನ್‌ಗಳ ಗುಡಾಣ, ನಾರಿನ ದಾಸ್ತಾನು, ಸೂಕ್ಷ್ಮ ಪೋಷಕಾಂಶಗಳ ಕೋಶ ಮುಂತಾದ ಹಲವು ಬಗೆಯ ಗುಣವಾಚಕಗಳನ್ನು ಹೊತ್ತಿರುವ ಸಿರಿಧಾನ್ಯಗಳು ದೀರ್ಘಕಾಲದಿಂದಲೇ ನಮ್ಮಲ್ಲಿ ಬಳಕೆಯಲ್ಲಿದ್ದವು. ಕ್ರಮೇಣ ಅಕ್ಕಿ, ಗೋದಿ ಮತ್ತಿತರ ಬೆಳೆಗಳ ಭರಾಟೆಯಲ್ಲಿ ಹಿನ್ನೆಲೆಗೆ ಸರಿದಿದ್ದವು. ಆದರೀಗ ಅವುಗಳನ್ನು ಅರಿತು ಬಳಸುವ ಕಾಲ ಮತ್ತೆ ಬಂದಿದೆ. ಹೀಗಿರುವಾಗ, ಬಾಜ್ರಾ ಎಂದೂ ಕರೆಯಲಾಗುವ ಸಜ್ಜೆಯ ಸದ್ಗುಣಗಳ ಬಗ್ಗೆ, ಚಳಿಗಾಲದಲ್ಲಿ ಅವುಗಳ ಉಪಯೋಗಗಳ ಬಗ್ಗೆ ಇಲ್ಲಿದೆ ಮಾಹಿತಿ..

Mana Santwana: ಮನ ಸಾಂತ್ವನ- ದೀಪದ ಬೆಳಕು ಮನಸ್ಸಿನ ಮೇಲೆ ಬೀರುವ ಪ್ರಭಾವ

ದೀಪಗಳ ಹಬ್ಬ ದೀಪಾವಳಿ-ಬೆಳಕು ಜ್ಞಾನ, ಭರವಸೆಯ ಮತ್ತು ಶಕ್ತಿಯ ಪ್ರತೀಕ

Diwali Festival: ಬೆಳಕು ಜ್ಞಾನ, ಭರವಸೆಯ ಮತ್ತು ಶಕ್ತಿಯ ಪ್ರತೀಕವಾದರೆ, ಕತ್ತಲು ಅಜ್ಞಾನ, ಹತಾಶೆ ಮತ್ತು ದೌರ್ಬಲ್ಯದ ಪ್ರತೀಕವಾಗಿದೆ. ನೀವೊಂದು ಸಣ್ಣ ಪ್ರಯೋಗ ಮಾಡಿನೋಡಿ. ನಿಮ್ಮ ಮನೆಯಲ್ಲಿ 10ನಿಮಿಷ ಎಲ್ಲಾ ಕಡೆ ವಿದ್ಯುತ್ ದೀಪವನ್ನು ಆರಿಸಿಬಿಡಿ. ಕತ್ತಲು ಆವರಿಸಿರಲಿ. ಈಗ ನಿಮ್ಮ ಮನಸ್ಸಿನಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. ಯಾವ ರೀತಿಯ ಆಲೋಚನೆಗಳು ಬರುತ್ತವೆ ಮತ್ತು ನಿಮ್ಮ ಮನಸ್ಥಿತಿ ಏನಿದೆ ಎಂದು ಗಮನಿಸಿ.

Seasonal Diseases: ಋತುಮಾನದ ಕಾಯಿಲೆಗಳನ್ನು ನಿವಾರಿಸಲು ಈ  ಆಹಾರಗಳನ್ನು ಸೇವಿಸಿ

ಋತುಮಾನದ ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಬಳಸಿ

ನಿಮ್ಮ ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳು ಉರಿ‌ಯೂತವನ್ನು ನಿಯಂತ್ರಿ ಸಲು, ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತವೆ ಎಂದು ವೈಜ್ಞಾನಿಕ ಸಂಶೋಧನೆಗಳೂ ದೃಢಪಡಿಸಿವೆ. ಹಾಗಾಗಿ ಬದಲಾಗುತ್ತಿರುವ ಋತುವಿನಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಪ್ರಮುಖ ಆಹಾರಗಳ ವಿವರ ಇಲ್ಲಿದೆ.

Worms in Humans: ಜಂತುಹುಳು ದೊಡ್ಡವರನ್ನೂ ಕಾಡಬಹುದು.. ಎಚ್ಚರ!

ಜಂತುಹುಳು ನಿವಾರಣೆಗೆ ಏನು ಮಾಡಬೇಕು?

Worms in Humans: ಮಕ್ಕಳಿಗೆ ಮಾತ್ರವಲ್ಲ ದೊಡ್ಡವರನ್ನೂ ಜಂತು ಹುಳುವಿನ ಬಾಧೆ ಕಾಡಬಹುದು. ಕಲುಷಿತ ನೀರು ಮತ್ತು ಆಹಾರದಿಂದ ಅವರಿಗೂ ಕರುಳಿನಲ್ಲಿ ಹುಳುಗಳು ಸೇರಿ, ಆರೋಗ್ಯವನ್ನು ಅಲ್ಲಾಡಿಸಬಹುದು. ಔಷಧಿಯಿಂದ ಈ ಸಮಸ್ಯೆಗೆ ಪರಿಹಾರವಂತೂ ಖಂಡಿತಾ ಇದೆ. ಅದಕ್ಕೂ ಮುನ್ನ, ಜಂತು ಹುಳುಗಳ ಬಾಧೆಯ ಲಕ್ಷಣಗಳನ್ನು ತಿಳಿದುಕೊಂಡಿರಬೇಕಲ್ಲವೇ?

ORS Label Ban: ಹಣ್ಣಿನ ಪಾನೀಯದ ಮೇಲೆ ಒಆರ್‌ಎಸ್‌ ಲೇಬಲ್ ಬಳಕೆ ನಿಷೇಧ; FSSAI ಮಹತ್ವದ ಆದೇಶ

ಹಣ್ಣಿನ ಪಾನೀಯದ ಮೇಲೆ ಒಆರ್‌ಎಸ್‌ ಲೇಬಲ್ ಬಳಕೆ ನಿಷೇಧ

ನಿಯಮ ಪಾಲಿಸದ ಪಾನೀಯಗಳಿಗೆ ಒಆರ್‌ಎಸ್‌ ಲೇಬಲ್‌ ಬಳಸುವುದನ್ನು ನಿಷೇಧಿಸಲಾಗಿದೆ. ಅತಿಸಾರದಿಂದ ಬಳಲುತ್ತಿರುವ ಮಕ್ಕಳಿಗೆ ಒಆರ್‌ಎಸ್‌ ಪಾನೀಯ ನೀಡಿದರೂ ತೀವ್ರ ನಿರ್ಜಲೀಕರಣ ಉಂಟಾಗುತ್ತಿದ್ದು, ಈ ಬಗ್ಗೆ ಡಾ. ಶಿವರಂಜನಿ ಸಂತೋಷ್ ಧ್ವನಿ ಎತ್ತುತ್ತಲೇ ಬಂದಿದ್ದು, ಕೊನೆಗೂ ಅವರ ಹೋರಾಟಕ್ಕೆ ಜಯ ಸಿಕ್ಕಿದೆ.

Viral News: ಇದು ನನ್ನ ಕೊನೆಯ ದೀಪಾವಳಿ...! ಕ್ಯಾನ್ಸರ್‌ ಪೀಡಿತ ಯುವಕನ ಹೃದಯವಿದ್ರಾವಕ ಪೋಸ್ಟ್

ಕ್ಯಾನ್ಸರ್ ಗೆದ್ದಿತು ಎಂದ ಯುವಕನ ಕೊನೆಯ ಪೋಸ್ಟ್

Cancer Patient: ಕೊಲೊರೆಕ್ಟಲ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ 21 ವರ್ಷದ ಯುವಕನೊಬ್ಬ ಇದು ನನ್ನ ಕೊನೆಯ ದೀಪಾವಳಿ ಎಂದು ಹೃದಯವಿದ್ರಾವಕ ಪೋಸ್ಟ್‌ವೊಂದನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ. ಭಾವನಾತ್ಮಕವಾದ ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ದುಃಖ ವ್ಯಕ್ತಪಡಿಸುತ್ತಿದ್ದಾರೆ.

KMC Hospital Mangalore: ಜೀವಕ್ಕೆ ಅಪಾಯವಾದ ಕಡಜ ಕಡಿತ: ಕೆಎಂಸಿ ವೈದ್ಯರಿಂದ ಬಾಲಕನಿಗೆ ಯಶಸ್ವಿ ಚಿಕಿತ್ಸೆ

ಬಾಲಕನಿಗೆ ಕಡಜ ಕಡಿತ: ಕೆಎಂಸಿ ವೈದ್ಯರಿಂದ ಯಶಸ್ವಿ ಚಿಕಿತ್ಸೆ!

KMC Hospital Mangalore: ಜೀವಕ್ಕೆ ಅಪಾಯಕಾರಿಯಾದ ಕಡಜಗಳ ಕುಟುಕಿಗೆ ಗುರಿಯಾಗಿ ಕಿಡ್ನಿ ವೈಫಲ್ಯದ ಅಪಾಯದಲ್ಲಿದ್ದ 10 ವರ್ಷದ ಬಾಲಕನಿಗೆ ಮಂಗಳೂರಿನ ಡಾ. ಬಿ ಆರ್‍ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ವೈದ್ಯರು ತ್ವರಿತ ಮತ್ತು ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

Nephro Urology: ನೆಫ್ರೋ ಯೂರೋಲಜಿ ಸಂಸ್ಥೆಗೆ ಎನ್‌ಎಬಿಎಚ್‌ ಮಾನ್ಯತೆ

ನೆಫ್ರೋ ಯೂರೋಲಜಿ ಸಂಸ್ಥೆಗೆ ಎನ್‌ಎಬಿಎಚ್‌ ಮಾನ್ಯತೆ

CM Siddaramaiah: ಗುಣಮಟ್ಟದ ಆರೋಗ್ಯ ಸೇವೆಯನ್ನು ಪ್ರತಿಯೊಬ್ಬರಿಗೂ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ನೆಫ್ರೋ ಯುರಾಲಜಿಯಂತಹ ಸಂಸ್ಥೆಗಳು ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Drink Coffee: ಕಾಫಿ ಪ್ರಿಯರೇ? ಚಟವಾಗದಿರಲಿ ನಿಮ್ಮ ಅಭ್ಯಾಸ!

ಕಾಫಿ ಹೆಚ್ಚು ಕುಡಿದರೆ ದೇಹಕ್ಕೇನು ಸಮಸ್ಯೆ?

Health Tips: ಕಾಫಿ ಪ್ರಿಯರಿಗೆ ಹೊತ್ತಾರೆ ಒಂದು ಸ್ಟ್ರಾಂಗ್‌ ಕಾಫಿ ಹೊಟ್ಟೆ ಸೇರದಿದ್ದರೆ ಸರಿಯಾಗಿ ಬೆಳಗೇ ಆಗುವುದಿಲ್ಲ.ಇನ್ನು ಚಳಿ ದೇಶಗಳಲ್ಲಂತೂ ಕಾಫಿಯ ಅಳತೆ ಕಪ್‌ಗಳಲ್ಲಿ ಅಲ್ಲ, ಮಗ್‌ಗಳಲ್ಲಿ ಘಂ ಎನ್ನುವ ಪರಿಮಳ ಮತ್ತು ರುಚಿಗೆ ಮನಸೋತು, ದೇಹದಲ್ಲೂ ಶಕ್ತಿ ಸಂಚಯನ ಆಗುತ್ತದೆಂಬ ನೆಪ ವೊಡ್ಡಿ ಆಗಾಗ ಕಾಫಿ ಕುಡಿಯುವ ಅಭ್ಯಾಸ ಅಥವಾ ಚಟ ಮಾಡಿಕೊಂಡರೆ ಮಾತ್ರ ಕೆಲಸ ಕೆಟ್ಟಿತೆಂದೇ ಅರ್ಥ. ಕಾಫಿ ಚಟ ಆರೋಗ್ಯಕ್ಕೆ ಮಾರಕವಾಗುವ ಹಾಗೆ ಇರದಂತೆ ಏನು ಮಾಡಬಹುದು?

ವಿಶ್ವದಲ್ಲಿಯೇ ಮೊದಲ ಬಾರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ರಹಿತ ಹೃದಯ ಕವಾಟ ಬದಲಿ ಚಿಕಿತ್ಸೆ ನಡೆಸಿದ ಫೋರ್ಟಿಸ್ ಹಾಸ್ಪಿಟಲ್

ಮೊದಲ ಬಾರಿಗೆ ಸ್ತ್ರಚಿಕಿತ್ಸೆ ರಹಿತ ಹೃದಯ ಕವಾಟ ಬದಲಿ ಚಿಕಿತ್ಸೆ ಯಶಸ್ವಿ

ಶ್ರೀಮತಿ ರೇಖಾ (ಹೆಸರು ಬದಲಾಯಿಸಲಾಗಿದೆ) ಅವರು ಈ ಹಿಂದೆ ಅಂದರೆ 2013ರಲ್ಲಿ ಬಲವಾದ ಟೆಫ್ಲಾನ್ ಬ್ಯಾಂಡ್‌ ಗಳನ್ನು ಬಳಸಿ ಕವಾಟ ರಿಪೇರಿಗೆ ಒಳಗಾಗಿದ್ದರು, ಈ ಸಂದರ್ಭದಲ್ಲಿ ಕಿರಿದಾ ಗಿದ್ದ ಹೃದಯ ಕವಾಟವನ್ನು ಬಲೂನ್ ಬಳಸಿ ಕೊಂಚ ದೊಡ್ಡದು ಮಾಡಲಾಗಿತ್ತು. ಕಾಲಾನಂತರ, ಆಕೆಯ ಹೃದಯ ಕವಾಟದ ಅಂಗಾಶವು ಮತ್ತೆ ಕ್ಷೀಣಿಸಿತು,

Spinal health: ಬೆನ್ನು ಮೂಳೆಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಬೆನ್ನು ಮೂಳೆಯ ಆರೋಗ್ಯ ಸುಧಾರಣೆ ಹೇಗೆ?

Health Tips: ಮೆದುಳಿಗೆ ಮತ್ತು ನಮ್ಮ ದೇಹದ ಇತರೆಲ್ಲ ಭಾಗಗಳಿಗೆ ಸಂವಹನ ಕಲ್ಪಿಸುವ ಕೆಲಸವೂ ಬೆನ್ನೆಲುಬಿಗೆ ಇದೆ.. ಇಷ್ಟೊಂದು ಕಾರ್ಯಭಾರ ಹೊತ್ತಿರುವ ಬೆನ್ನೆಲುಬಿಗೆ ಭಾರ ಹೆಚ್ಚಾಗಿ ನೋವು, ಕಿರಿಕಿರಿ ಮತ್ತು ಅನಾರೋಗ್ಯಕ್ಕೆ ಕಾರಣ ಆಗುವುದೂ ಇದೆ. ಹಾಗಾದರೆ ನಮ್ಮ ಬೆನ್ನುಹುರಿಗೆ ತೊಂದರೆ ಯಾಗುವುದಕ್ಕೆ ಏನು ಕಾರಣಗಳಿವೆ? ಇದಕ್ಕೇನು ಮಾಡಬಹುದು?

Winter Foods: ಚಳಿಗಾಲದ ಆಹಾರಾಭ್ಯಾಸ: ಏನಿದರ ಲಾಭಗಳು?

ಚಳಿಗಾಲದ ಆಹಾರಾಭ್ಯಾಸ ಹೇಗಿರಬೇಕು?

Winter Health Care Tips: ಕೆಲವು ಆಹಾರಗಳನ್ನು ಸ್ವಲ್ಪ ಆದ್ಯತೆಯ ಮೇರೆಗೆ ಸೇವಿಸಿದಲ್ಲಿ ಋತುಮಾನದ ಸಮಸ್ಯೆ ಗಳನ್ನು ದೂರ ಮಾಡಬಹುದು. ಅಂದರೆ, ನಮ್ಮ ಆರೋಗ್ಯವನ್ನು ಕಾಪಾಡುವಂಥ ಅಭ್ಯಾಸಗಳು ಚಳಿ ಗಾಲವನ್ನು ಸುಲಲಿತವಾಗಿ ದಾಟಿಸಬಲ್ಲವು. ಹಾಗಾದರೆ ಚಳಿಗಾಲದಲ್ಲಿ ನಮ್ಮ ಆಹಾರ ಹೇಗಿರಬೇಕು? ಏನದರ ಸೇವನೆಯ ಲಾಭಗಳು?

WHO Alert: ಕಲುಷಿತ ಭಾರತೀಯ ಕೆಮ್ಮಿನ ಸಿರಪ್ ಬಗ್ಗೆ ಎಚ್ಚರ: ವಿಶ್ವ ಆರೋಗ್ಯ ಸಂಸ್ಥೆ

ಕೆಮ್ಮಿನ ಸಿರಪ್: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಇತ್ತೀಚಿಗೆ ಭಾರತದಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ 21 ಮಕ್ಕಳು ಸಾವನ್ನಪ್ಪಿದ ಬಳಿಕ ಇದೀಗ ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳಿಗೆ ವಿಶ್ವ ಆರೋಗ್ಯ ಸಮಷ್ಟೇ ಎಚ್ಚರಿಕೆ ನೀಡಿದೆ. ಎಲ್ಲ ದೇಶಗಳಲ್ಲಿ ವಿಶೇಷವಾಗಿ ಅನೌಪಚಾರಿಕ ಮತ್ತು ಅನಿಯಂತ್ರಿತ ಪೂರೈಕೆ ಸರಪಳಿಗಳ ಬಗ್ಗೆ ಜಾಗರೂಕರಾಗಿರಲು ವಿಶ್ವ ಅರೋಗ್ಯ ಸಂಸ್ಥೆ ಕರೆ ನೀಡಿದೆ.

ಬ್ರಿಸ್ಟಲ್ ಮೈಯರ್ಸ್ ಸ್ಕ್ವಿಬ್ ನಿಂದ ಭಾರತದಲ್ಲಿ ಸಿಂಪ್ಟೊಮ್ಯಾಟಿಕ್ ಅಬ್ ಸ್ಟ್ರಕ್ಟಿವ್ ಹೈಪರ್ಟ್ರೊಫಿಕ್ ಕಾರ್ಡಿಯೊಮಯೋಪತಿಗೆ ಕೊಪೊಝೊ ಬಿಡುಗಡೆ

ಕೊಪೊಝೊ ಬಿಡುಗಡೆ: ಒ.ಎಚ್.ಸಿ.ಎಂ. ರೋಗಿಗಳಿಗೆ ಪ್ರಥಮ ಚಿಕಿತ್ಸೆಯ ಆಯ್ಕೆ

ಭಾರತದಲ್ಲಿರುವ ಪ್ರಸ್ತುತದ ವೈದ್ಯಕೀಯ ಚಿಕಿತ್ಸೆಗಳಾದ ಬೀಟಾ ಬ್ಲಾಕರ್ ಗಳು, ಕ್ಯಾಲ್ಷಿಯಂ ಚಾನೆಲ್ ಬ್ಲಾಕರ್ ಗಳು ಮತ್ತು ಡಿಸೊಪೈರಮೈಡ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತವೆ ಆದರೆ ಅದರ ಆಂತರ್ಯದಲ್ಲಿರುವ ಕಾರಣವನ್ನು ನಿವಾರಿಸುವುದಿಲ್ಲ. ಶಸ್ತ್ರಚಿಕಿತ್ಸೆಯ ಪ್ರಕ್ರಿಯೆ ಗಳಾದ ಸೆಪ್ಟಲ್ ರಿಡಕ್ಷನ್ ಥೆರಪಿ (ಆಲ್ಕೊಹಾಲ್ ಸೆಪ್ಟಲ್ ಅಬಲೇಷನ್ ಅಥವಾ ಮೈಯೆಕ್ಟಮಿ) ಆಯ್ಕೆಗಳೇ ಹೊರತು ಅವು ಸೂಕ್ತವಾಗಿಲ್ಲದಿರಬಹುದು ಅಥವಾ ಎಲ್ಲ ರೋಗಿಗಳಿಗೂ ಲಭ್ಯ ವಿಲ್ಲದೇ ಇರಬಹುದು.

ಬೊಜ್ಜು ದೀರ್ಘಕಾಲದ, ಮರುಕಳಿಸುವ ಕಾಯಿಲೆ

ಬೊಜ್ಜು ದೀರ್ಘಕಾಲದ, ಮರುಕಳಿಸುವ ಕಾಯಿಲೆ

ಹೊಸ ಚೌಕಟ್ಟಿನ ಪ್ರಮುಖ ಅಂಶವೆಂದರೆ ರೋಗಿಯ ನಿರ್ದಿಷ್ಟ ಆರೋಗ್ಯ ತೊಡಕುಗಳ ಆಧಾರದ ಮೇಲೆ ಚಿಕಿತ್ಸೆಯನ್ನು ಟೈಲರಿಂಗ್ ಮಾಡುವ ಮಾರ್ಗದರ್ಶನ. ಅಲ್ಗಾರಿದಮ್ ಅನುಮೋದಿತ OMM ಗಳ ವರ್ಣಪಟಲವನ್ನು ಪರಿಶೀಲಿಸಿತು, ಅವುಗಳ ವಿಭಿನ್ನ ಪರಿಣಾಮಕಾರಿತ್ವ ಮತ್ತು ಪ್ರಯೋಜನಗಳನ್ನು ಗಮನಿಸಿತು.

Deepika Padukone: ದೇಶದ ಮೊದಲ ಮಾನಸಿಕ ಆರೋಗ್ಯದ ರಾಯಭಾರಿಯಾಗಿ ಕನ್ನಡತಿ ದೀಪಿಕಾ ಪಡುಕೋಣೆ ನೇಮಕ

ಕನ್ನಡತಿ ದೀಪಿಕಾಗೆ ಮಹತ್ತರ ಜವಾಬ್ದಾರಿ ಕೊಟ್ಟ ಕೇಂದ್ರ ಸರ್ಕಾರ

Mental Health Ambassador: ಕನ್ನಡತಿ ದೀಪಿಕಾ ಪಡುಕೋಣೆ ಅವರಿಗೆ ಭಾರತ ಸರ್ಕಾರವು ಮಹತ್ವದ ಜವಾಬ್ದಾರಿಯೊಂದನ್ನು ನೀಡಿದೆ. ಹೌದು, ಮಾನಸಿಕ ಆರೋಗ್ಯದ ರಾಯಭಾರಿಯನ್ನಾಗಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಿಸಿದೆ. ಮೊದಲ ಮಾನಸಿಕ ಆರೋಗ್ಯದ ರಾಯಭಾರಿಯಾದ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ.

Benefits of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?

ಹುಣಸೆ ಹಣ್ಣಿನಿಂದ ದೇಹಕ್ಕೇನು ಲಾಭ?

Benefits of Tamarind: ಭಾರತೀಯ ಅಡುಗೆ ಮನೆಗಳಲ್ಲಿ ಇರಲೇಬೇಕಾದ ವ್ಯಂಜನಗಳ ಪೈಕಿ ಹುಣಸೆ ಹಣ್ಣು ಸಹ ಒಂದು. ಅದರಲ್ಲೂ ದಕ್ಷಿಣ ಭಾರತೀಯ ಅಡುಗೆಗಳಲ್ಲಿ ತಿಳಿಸಾರು, ಹುಳಿ, ಗೊಜ್ಜು, ಚಟ್ನಿ, ಪುಳಿಯೋಗರೆಗಳಿಂದ ಹಿಡಿದು ಬಹಳಷ್ಟು ಅಡುಗೆಗಳನ್ನು ರುಚಿಗಟ್ಟಿಸುವುದಕ್ಕೆ ಹುಣಸೆಹುಳಿ ಬೇಕೆಬೇಕು. ಏನೀ ಹಣ್ಣಿನ ಪ್ರಯೋಜನಗಳು?

Benifits of Yam: ಚಿನ್ನದಂಥಾ ಸುವರ್ಣ ಗಡ್ಡೆಯನ್ನು ತಿಂದವನೇ ಗಟ್ಟಿ

ಇಷ್ಟವಿಲ್ಲದಿದ್ದರೂ, ಸುವರ್ಣ ಗಡ್ಡೆ ಸೇವಿಸಬೇಕಂತೆ! ಯಾಕೆ ಗೊತ್ತಾ

ನಾವು ಪ್ರತಿದಿನ ಬಳಸುವ ಕೆಲವು ಆಹಾರ ಪದಾರ್ಥಗಳಲ್ಲಿ ನಾನಾ ಆರೋಗ್ಯ ಪ್ರಯೋಜನಗಳ ಇರುತ್ತದೆ. ಆದರೆ ಅದರ ಬಗ್ಗೆ ಅನೇಕರಿಗೆ ತಿಳಿದೇ ಇರೋದಿಲ್ಲ. ಅಂತಹ ಆಹಾರ ಪದಾರ್ಥಗಳಲ್ಲಿ ಸುವರ್ಣ ಗಡ್ಡೆಯು ಒಂದಾಗಿದ್ದು, ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ

World Mental Health day: ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತ್ಮಹತ್ಯೆ; ಮಾನಸಿಕ ಆರೋಗ್ಯಕ್ಕೆ ವಿಶೇಷ ಸಲಹೆ ನೀಡಿದ ಸದ್ಗುರು

ಮಾನಸಿಕ ಆರೋಗ್ಯದ ಕುರಿತು ಸದ್ಗುರುಗಳ ಸಲಹೆ

ಭಾರತವು ಒಂದು ಗಂಭೀರವಾದ ಮಾನಸಿಕ ಆರೋಗ್ಯ ಸಂಕಷ್ಟವನ್ನು ಎದುರಿಸುತ್ತಿದ್ದು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಹೊಸದಾಗಿ ನೀಡಿರುವ ಅಚ್ಚರಿಯ ಮಾಹಿತಿಯ ಪ್ರಕಾರ, ಹಿಂದಿನ ದಶಕದ ವಿದ್ಯಾರ್ಥಿ ಆತ್ಮಹತ್ಯೆಗಳಲ್ಲಿ 65% ಏರಿಕೆ ಕಂಡು ಬಂದಿದೆ.

World mental health day: ಮನಸ್ಸೆಂಬ ಯಂತ್ರವನ್ನು ಸುಸ್ಥಿತಿಯಲ್ಲಿಯಿರಿಸಿಕೊಳ್ಳಿ

ಮನಸ್ಸು ಎಂಬ ಯಂತ್ರವನ್ನು ಸುಸ್ಥಿತಿಯಲ್ಲಿಯಿರಿಸಿಕೊಳ್ಳಿ

ನಮಗೆಲ್ಲರಿಗೂ ದೈಹಿಕ ಆರೋಗ್ಯ ಎಷ್ಚು ಮುಖ್ಯವೋ ಅಷ್ಟೇ ಮುಖ್ಯ ಮಾನಸಿಕ ಸ್ವಾಸ್ಥತೆಯೂ ಕೂಡ. ಈ ನಿಲುವುನಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು(WHO, world health organisation) ಪ್ರತಿ ವಷ೯ವೂ 10ನೇ ಅಕ್ಟೋಬರ್ ರಂದು “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಯನ್ನು ಸತತವಾಗಿ ಆಚರಿಸುಕೊಂಡು ಬಂದಿದೆ.

Menstrual Leave: ರಾಜ್ಯದ ಮಹಿಳಾ ನೌಕರರಿಗೆ ಗುಡ್‌ನ್ಯೂಸ್‌!  ಶೀಘ್ರದಲ್ಲೇ ಮುಟ್ಟಿನ ರಜೆ?

ರಾಜ್ಯದ ಮಹಿಳಾ ಉದ್ಯೋಗಿಗಳಿಗೆ ಶೀಘ್ರದಲ್ಲೇ ಮುಟ್ಟಿನ ರಜೆ?

Working Women: ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವಾರ್ಷಿಕವಾಗಿ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಪರಿಚಯಿಸಲು ಕರ್ನಾಟಕ ಸರ್ಕಾರ ಸಿದ್ಧವಾಗಿದೆ. ಈ ಬಗ್ಗೆ ಸಿಎಂ ಶೀಘ್ರದಲ್ಲೇ ನೀಡುವ ಸಾಧ್ಯತೆ ಇದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಮುಟ್ಟಿನ ರಜೆ ನೀತಿಯ ಕುರಿತು ಚರ್ಚಿಸುವ ಸಾಧ್ಯತೆಯಿದೆ.

Turnip Tubers: ಟರ್ನಿಪ್‌ ಗಡ್ಡೆಯ ಗುಣ ವಿಶೇಷಗಳನ್ನು ಬಲ್ಲಿರಾ?

ಟರ್ನಿಪ್‌ ಗಡ್ಡೆಯಲ್ಲಿ ಯಾವೆಲ್ಲ ಸತ್ವಗಳಿದೆ?

Turnip Tubers: ಈರುಳ್ಳಿಯಿಂದ ತೊಡಗಿ, ಗಜ್ಜರಿ, ಗೆಣಸು, ಬೀಟ್‌ರೂಟ್‌, ನವಿಲುಕೋಸು, ಮೂಲಂಗಿ ಮುಂತಾದ ಎಷ್ಟೋ ಗಡ್ಡೆಗಳು ನಮ್ಮ ನಿತ್ಯದ ಆಹಾರಗಳ ಪಟ್ಟಿಯಲ್ಲಿವೆ. ಆದರೆ ಜನಪ್ರಿಯವಾಗಿ ಬಳಕೆಯಲ್ಲಿ ಇಲ್ಲದಿದ್ದರೂ, ಪೌಷ್ಟಿಕ ಸತ್ವಗಳ ಖನಿ ಎಂದೇ ಹೆಸರಾಗಿದ್ದು ಟರ್ನಿಪ್‌ ಗಡ್ಡೆ. ಹಲವಾರು ದೇಶಗಳಲ್ಲಿ ಟರ್ನಿಪ್‌ ಗಡ್ಡೆ ಅತ್ಯಂತ ಜನಪ್ರಿಯ ತರಕಾರಿ. ಆದರೆ ಭಾರತದಲ್ಲಿ ಉಳಿದೆಲ್ಲಾ ಗಡ್ಡೆಗಳಷ್ಟು ಟರ್ನಿಪ್‌ ಬಳಕೆಯಲ್ಲಿಲ್ಲ..ಏನಿದರ ಸತ್ವಗಳು ಎಂಬುದನ್ನು ನೋಡೋಣ.

Ghee Benefits: ತುಪ್ಪವನ್ನೇಕೆ ಸೂಪರ್‌ಫುಡ್‌ ಎನ್ನಲಾಗುತ್ತದೆ ಗೊತ್ತೇ?

ತುಪ್ಪ ಯಾಕೆ ಆರೋಗ್ಯಕ್ಕೆ ಒಳಿತು?

Ghee Benefits: ಅಮೃತ ಸಮಾನವಾದ ತುಪ್ಪವು ರುಚಿಗೂ, ಆರೋಗ್ಯಕ್ಕೂ ಬೇಕಾದಂಥದ್ದು. ಇದರ ಪೋಷಕ ಸತ್ವಗಳು ಇಂದಿನ ದಿನಗಳಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿದ್ದು, ಚಯಾಪಚಯ ವೃದ್ಧಿ ಮತ್ತು ಜೀರ್ಣಾಂಗಗಳ ಕ್ಷಮತೆಯೂ ಸೇರಿದಂತೆ ಬಹಳಷ್ಟು ಲಾಭಗಳಿಗಾಗಿ ಆಹಾರ ತಜ್ಞರು ಇದನ್ನು ಸೇವಿಸು ವಂತೆ ಸೂಚಿಸುತ್ತಿದ್ದಾರೆ. ಹಾಗಾದರೆ ಇದನ್ನು ಸೂಪರ್‌ಫುಡ್‌ ಎನಿಸಿಕೊಳ್ಳುತ್ತಿರುವುದೇಕೆ?

Loading...