Traffic Fine: ಶೇ.50 ರಿಯಾಯಿತಿಯಲ್ಲಿ ಟ್ರಾಫಿಕ್ ದಂಡ ಪಾವತಿಗೆ ಇಂದೇ ಕೊನೆಯ ದಿನ
ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಿನಾಂಕ:11.02.2023 ರೊಳಗೆ ದಾಖಲಾದ ಪುಕರಣಗಳಿಗೆ ಮಾತ್ರ ಅನ್ವಯವಾಗುವಂತೆ, ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಪುಕರಣಗಳ ದಂಡದ ಬಾಕಿ ಮೊತ್ತದಲ್ಲಿ ಮತ್ತೊಂದು ಬಾರಿಗೆ ಶೇಕಡಾ 50 ರಷ್ಟು (ಐವತ್ತರಷ್ಟು ಮಾತ್ರ ರಿಯಾಯಿತಿ) ನೀಡಿ ಆದೇಶಿಸಲಾಗಿತ್ತು.

-

ಬೆಂಗಳೂರು: ನಿಮ್ಮ ವಾಹನದ ಟ್ರಾಫಿಕ್ ದಂಡ (Traffic Fine) ಬಾಕಿ ಉಳಿಸಿಕೊಂಡಿದ್ದರೆ, ತ್ವರೆ ಮಾಡಿ. ರಾಜ್ಯ ಸರ್ಕಾರ (Karnataka government) ನಿಮಗೆ ನೀಡಿರುವ ವಿನಾಯಿತಿ ದಂಡ ಪಾವತಿ ಅವಕಾಶ ಇಂದು (ಸೆ.12) ಮುಗಿಯುತ್ತಿದೆ. ರಾಜ್ಯದಲ್ಲಿ ಟ್ರಾಫಿಕ್ ಪೊಲೀಸ್ (traffic police) ಇಲಾಖೆ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ಅರ್ಧ ರಿಯಾಯಿತಿ ಉಪಕ್ರಮ ಘೋಷಣೆ ಮಾಡಿದ್ದು, ಅದರ ಅವಧಿ ಇಂದು ಮುಕ್ತಾಯವಾಗುತ್ತಿದೆ.
ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಿನಾಂಕ:11.02.2023 ರೊಳಗೆ ದಾಖಲಾದ ಪುಕರಣಗಳಿಗೆ ಮಾತ್ರ ಅನ್ವಯವಾಗುವಂತೆ, ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಪುಕರಣಗಳ ದಂಡದ ಬಾಕಿ ಮೊತ್ತದಲ್ಲಿ ಮತ್ತೊಂದು ಬಾರಿಗೆ ಶೇಕಡಾ 50 ರಷ್ಟು (ಐವತ್ತರಷ್ಟು ಮಾತ್ರ ರಿಯಾಯಿತಿ) ನೀಡಿ ಆದೇಶಿಸಲಾಗಿತ್ತು. ಈ ರಿಯಾಯಿತಿಯು ದಿನಾಂಕ:09.09.2023ರವರೆಗೆ ಇತ್ಯರ್ಥಗೊಳ್ಳುವ ಪುಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ತಿಳಿಸಲಾಗಿತ್ತು.
ನಿಮ್ಮ ಬಾಕಿ ದಂಡವನ್ನು ರಿಯಾಯತಿಯೊಂದಿಗೆ ಪಾವತಿ ಮಾಡುವ ವಿಧಾನ ಹೀಗಿದೆ-
- ಈ ಕೆಳಗಿನ ಮೊಬೈಲ್ ಆಪ್‌ಗಳನ್ನು ಬಳಸಿ (ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಲ್ಲಿ ಲಭ್ಯ):
ಕರ್ನಾಟಕ ರಾಜ್ಯ ಪೊಲೀಸ್ ಆಪ್
ಆಸ್ಟಮ್ (BTP/ಟ್ರಾಫಿಕ್ ಉಲ್ಲಂಘನೆ ವ್ಯವಸ್ಥೆ)
ಪ್ರಕ್ರಿಯೆ:
- ನಿಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿ.
ನಿಮ್ಮ ವಾಹನದ ಫೋಟೋ/ವಿವರಗಳನ್ನು ಪರಿಶೀಲಿಸಿ.
ರಿಯಾಯಿತಿಯೊಂದಿಗೆ ದಂಡವನ್ನು ಪಾವತಿಸಿ.
- ಯಾವುದೇ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮುಖೇನ ಪಾವತಿಸುವಿಕೆ.
ಸಂಚಾರ ನಿರ್ವಹಣಾ ಕೇಂದ್ರ (TMC)ಗೆ ಭೇಟಿ ನೀಡಿ:
ಮೊದಲನೇ ಮಹಡಿ, ಇನ್ಸಾಂಟ್ರಿ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್ ಹತ್ತಿರ, ಬೆಂಗಳೂರು
ಇದನ್ನೂ ಓದಿ: Kannada Language: ಕನ್ನಡ ಮಾತನಾಡಿದ್ದಕ್ಕೆ ಖಾಸಗಿ ಶಾಲೆಯಲ್ಲಿ ದಂಡ, ಪ್ರಾಧಿಕಾರ ಅಸಮಾಧಾನ