ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಆಯುರ್ವೇದದಲ್ಲಿ ಕೂದಲಿನ ಆರೈಕೆ ಹೇಗೆ ?

ಮೊನ್ನೆ ಯಾವುದೋ ಒಂದು ಮದುವೆಯ ಸಮಾರಂಭಕ್ಕೆ ಹೋಗಿದ್ದೆ. ಮಂಟಪದಲ್ಲಿ ಗಂಡು ಹೆಣ್ಣಿನ ಶಾಸಗಳು ಬಹಳ ಉತ್ಸುಕತೆಯಿಂದ ನಡೆದಿತ್ತು. ಕೆಳಗೆ ಕುಳಿತಿದ್ದ ಹಿರಿಯರೂ ಸಹ ಮದುವೆಯ ಶಾಸ್ತ್ರದಲ್ಲಿ ತಲ್ಲೀನರಾಗಿ ಆಆನಂದವನ್ನು ಮತ್ತೆ ಮೆಲಕು ಹಾಕುತ್ತಿದ್ದರು. ಆದರೆ, ಇದೇ ಮಂಟಪದಲ್ಲಿ ಹಿಂದೆ ಮತ್ತೊಂದು ಪುಟ್ಟ ವಿಶಿಷ್ಟ ಸಮಾರಂಭವೊಂದು ನಡೆದಿತ್ತು. ಏನಪ್ಪಾ ಅದು ಅಂತ ನೋಡಿದರೆ, ಹೆಂಗಸರ ಮತ್ತು ಹೆಣ್ಣು ಮಕ್ಕಳ ಒಂದು ಪುಟ್ಟ ಚರ್ಚಾ ಕೂಟ.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನ ಶ್ರೀ

ಮೊನ್ನೆ ಯಾವುದೋ ಒಂದು ಮದುವೆಯ ಸಮಾರಂಭಕ್ಕೆ ಹೋಗಿದ್ದೆ. ಮಂಟಪದಲ್ಲಿ ಗಂಡು ಹೆಣ್ಣಿನ ಶಾಸಗಳು ಬಹಳ ಉತ್ಸುಕತೆಯಿಂದ ನಡೆದಿತ್ತು. ಕೆಳಗೆ ಕುಳಿತಿದ್ದ ಹಿರಿಯರೂ ಸಹ ಮದುವೆಯ ಶಾಸ್ತ್ರದಲ್ಲಿ ತಲ್ಲೀನರಾಗಿ ಆಆನಂದವನ್ನು ಮತ್ತೆ ಮೆಲಕು ಹಾಕುತ್ತಿದ್ದರು. ಆದರೆ, ಇದೇ ಮಂಟಪದಲ್ಲಿ ಹಿಂದೆ ಮತ್ತೊಂದು ಪುಟ್ಟ ವಿಶಿಷ್ಟ ಸಮಾರಂಭವೊಂದು ನಡೆದಿತ್ತು. ಏನಪ್ಪಾ ಅದು ಅಂತ ನೋಡಿದರೆ, ಹೆಂಗಸರ ಮತ್ತು ಹೆಣ್ಣು ಮಕ್ಕಳ ಒಂದು ಪುಟ್ಟ ಚರ್ಚಾ ಕೂಟ.

ಚರ್ಚೆಯ ಅಧ್ಯಕ್ಷರು ಸುಮಾರು ೭೦ ವರ್ಷದ ಅಜ್ಜಿ ಮತ್ತೆ ಗುಂಪಿನ ಸದಸ್ಯರು ಸುಮಾರು 20ರಿಂದ 42ಆಸುಪಾಸಿನ ಹೆಣ್ಣು ಮಕ್ಕಳು. ಚರ್ಚೆಯ ವಿಷಯ ಏನು ಅಂತ ಗೊತ್ತೇ? ‘ಕೂದಲು ಸಂರಕ್ಷಣೆ’. ಇದರ ವಿಷಯವಾಗಿ ತಮ್ಮ ಅಪಾರ ಅನುಭವವನ್ನು ಹಂಚಿಕೊಳ್ಳುತ್ತಿದ್ದದ್ದು ನಮ್ಮ ಸೂಪರ್ ಯಂಗ್ ಅಜ್ಜಿ. ಕಾರಣ, ಅವರ ವಯಸ್ಸು 70 ಆಗಿದ್ದರೂ ಸಹ ಅವರ ಕೂದಲು ಇನ್ನೂ ದಟ್ಟವಾಗಿ ಮತ್ತು ಸಾಕಷ್ಟು ಕಪ್ಪಾಗಿಯೇ ಉಳಿದಿತ್ತು. ತ್ವಚೆಯು ಅಷ್ಟೇನು ನೆರೆಯಿಲ್ಲದೆ, ಕಾಂತಿಯುತವಾಗಿ ಹೊಳೆಯುತ್ತಿತ್ತು.

ಹಾಗಾಗಿ, ಸಹಜವಾಗಿಯೇ ಇವರು ಆ ಮದುವೆ ಮನೆಯ ಬ್ಯೂಟಿ ಐಕಾನ್ ಆಗಿಬಿಟ್ಟರು. ನಮ್ಮ ಹೆಣ್ಣು ಮಕ್ಕಳನ್ನು ಕೇಳಬೇಕೇ? ಆರೋಗ್ಯವೆಂದರೆ ಅವರಿಗೆ ಕೇವಲ ಸ್ಕಿನ್ ಕೇರ್ ಮತ್ತು ಹೇರ್ ಕೇರ್. ಇವೆರಡರ ಬಗ್ಗೆ ಎಷ್ಟು ತಿಳಿದು ಕೊಂಡರು ಸಾಲದು. ಹಾಗಾಗಿ, ಅಜ್ಜಿಯನ್ನು ಮಧ್ಯದಲ್ಲಿ ಕೂರಿಸಿ ತಮ್ಮ ಎಲ್ಲಾ ಅನುಮಾನಗಳ ಪರಿಹಾರ ಮತ್ತು ಕೇಶವೃದ್ಧಿಯ ಬಗ್ಗೆ eನವೃದ್ಧಿ ಮಾಡಿಕೊಳ್ಳುವ ಕಸರತ್ತು ಬಹಳ ಹೊತ್ತಿನಿಂದ ನಡೆದಿತ್ತು.

ನಾನು ಒಬ್ಬ ಆಯುರ್ವೇದ ವೈದ್ಯೆಯಾಗಿ ಆ ಅಜ್ಜಿಯ ಮಾತುಗಳನ್ನು ಬಹಳ ಕುತೂಹಲದಿಂದ ಕೇಳಿಸಿಕೊಳ್ಳು ತ್ತಿದ್ದೆ. ಆಗ ನನಗೆ ಅರ್ಥವಾದ ಒಂದು ವಿಷಯವೆಂದರೆ ನಮ್ಮ ಭಾರತೀಯ ಪಾರಂಪರಿಕ ಜ್ಞಾನವು, ವಿಜ್ಞಾನಕ್ಕೆ ಎಷ್ಟು ಹತ್ತಿರವಾಗಿದೆ ಎಂದು. ಕಾರಣ, ಅವರು ಹೇಳಿದ ಸಾಕಷ್ಟು ವಿಚಾರಗಳು ಆಯುರ್ವೇದದ ಶಾಸ್ತ್ರದ ಮಾತು ಗಳಾಗಿತ್ತು. ಅದಕ್ಕೆ ಅವರ ಅನುಭವಾಮೃತವೂ ಸೇರಿತ್ತು. ಅದನ್ನು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದೆ ಅಲ್ವಾ? ಬನ್ನಿ ಹಾಗಾದರೆ, ನಮ್ಮ ಮದುವೆ ಮನೆಯ ಅಜ್ಜಿಯ ವಿಷಯಗಳ ಜೊತೆಗೆ ಆಯುರ್ವೇದದ ಮತ್ತಷ್ಟು ವಿಷಯಗಳನ್ನು ಸೇರಿಸಿ ಕೇಶರಕ್ಷಣೆ ಹೇಗೆ ಎಂಬ ವಿಷಯವನ್ನು ಅರ್ಥೈಸಿಕೊಳ್ಳೋಣ.

ಸ್ನೇಹಿತರೆ, ನಾವು ತಿಂಗಳಿಗೊಮ್ಮೆ ಆಯುರ್ವೇದದ ಉಚಿತ ಆರೋಗ್ಯ ಶಿಬಿರವನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಇಲ್ಲಿ ಕಾಣುವ ಸಾಮಾನ್ಯ ಸಮಸ್ಯೆ ಎಂದರೆ ಅತಿಯಾದ ಕೂದಲು ಉದುರುವಿಕೆ. ಅಂತೆಯೇ, ನಮ್ಮ ಕ್ಲಿನಿಕಲ್ ಪ್ರಾಕ್ಟೀಸ್‌ನಲ್ಲಿ ಕೂಡ ಹಲವಾರು ಜನ ತಮ್ಮ ಕೂದಲು ಸಮಸ್ಯೆಗಾಗಿಯೇ ನಮ್ಮನ್ನು ಭೇಟಿ ಮಾಡಲು ಬರುತ್ತಾರೆ. ಡಾಕ್ಟ್ರೇ, ‘ಕೂದಲು ತುಂಬಾ ಉದುರುತ್ತೆ, ಕೂದಲು ಉದ್ದವಾಗುತ್ತಿಲ್ಲ, ಕೂದಲುತುಂಬಾ ಡ್ರೈ ಆಗಿಬಿಟ್ಟಿದೆ, ಕೂದಲಿನ ತುದಿಯಲ್ಲಿ ಜಾಸ್ತಿ ಸ್ಪ್ಲಿಟ್ ಎಂಡ್ಸ್ ಆಗ್ತಾ ಇದೆ, ಡ್ಯಾಂಡ್ರಫ್ ಸಮಸ್ಯೆ, ಕೂದಲು ಬೇಗ ಬಿಳಿ ಆಗ್ತಾ ಇದೆ ಇತ್ಯಾದಿ‌ ಇತ್ಯಾದಿ. ಈ ಸಮಸ್ಯೆಗಳಿಗೆ ನಿಮ್ಮ ಬಳಿ ಯಾವುದಾದರೂ ಒಳ್ಳೆಯ ಹೇರ್ ಆಯಿಲ್ ಇದ್ದರೆ ಪ್ಲೀಸ್ ಬರೆದು ಕೊಡಿ’ ಎನ್ನುವ ಬೇಡಿಕೆ ಸರ್ವೇ ಸಾಮಾನ್ಯ.

ಹೇರಳವಾದ ಕಪ್ಪು ಕೂದಲು ಯಾರಿಗೆ ಬೇಡ ಹೇಳಿ? ಸೊಂಪಾದ ಕೇಶ ರಾಶಿ ಮಹಿಳೆಯರಷ್ಟೇ ಗಂಡಸರಿಗೂ ಪ್ರಿಯ. ಆದರೆ ಈಗಿನ ಕಾಲದಲ್ಲಿ 20 ರಿಂದ 30 ವರ್ಷದ ಪ್ರಾಯದಲ್ಲಿ ಪಿಳ್ಳೆ ಜಡೆಯ ಹೆಣ್ಣು ಮಕ್ಕಳಾದರೆ ಬಕ್ಕ ತಲೆಯ ಗಂಡು ಮಕ್ಕಳು.

ಕೂದಲಿನ ಸಮಸ್ಯೆ ಇಷ್ಟೊಂದು ಜಾಸ್ತಿ ಆಗಲು ಕಾರಣವೇನು? ಯಾಕೆ ಹೀಗೆ? ಹಾಗಾದರೆ, ಒಳ್ಳೆ ಹೇರ್ ಆಯಿಲ್ ಹಚ್ಚಿದ ಕೂಡಲೇ ಈ ಸಮಸ್ಯೆ‌ ಸರಿಯಾಗುತ್ತದೆಯೇ? ಖಂಡಿತ ಇಲ್ಲ. ಕೂದಲಿನ ಸಮಸ್ಯೆ ಕೇವಲ ಕೂದಲಿಗಷ್ಟೇ ಸೀಮಿತವಾದದ್ದಲ್ಲ. ಹಾಗಾಗಿ, ಈ ಸಮಸ್ಯೆಯ ಮೂಲ ಕಾರಣಗಳನ್ನು ತಿಳಿದುಕೊಳ್ಳುವವರೆಗೂ ಈ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟ. ಆಯುರ್ವೇದದಲ್ಲಿ ಸಮಸ್ಯೆಯ ಕಾರಣದ ಪರಿವರ್ಜನವೇ ಪ್ರಥಮ ಚಿಕಿತ್ಸೆ.

ಸಾಮಾನ್ಯವಾಗಿ, ಈ ಕೂದಲಿನ ಸಮಸ್ಯೆಯ ಕಾರಣಗಳನ್ನು ನಾವು ಎರಡು ಗುಂಪಾಗಿ ವಿಭಾಗಿಸಬಹುದು. ಬಾಹ್ಯ ಹಾಗೂ ಆಭ್ಯಂತರ ಕಾರಣಗಳೆಂದು. ಮೊದಲಿಗೆ ಬಾಹ್ಯ ಕಾರಣಗಳ ಬಗ್ಗೆ ಸ್ವಲ್ಪ ಗಮನಹರಿಸೋಣ.

‌1. ತಲೆಗೆ ನಿತ್ಯವೂ ಎಣ್ಣೆ ಹಚ್ಚದೇ ಇರುವುದು- ಹೌದು, ಇದೊಂದು ಅತ್ಯಂತ ಸಾಮಾನ್ಯವಾದ ಕಾರಣ. ಎಷ್ಟೋ ತಿಂಗಳುಗಳಿಂದ ಎಣ್ಣೆ ಹಚ್ಚದೆಯೇ ಹಾಗೆಯೇ ತಲೆ ಸ್ನಾನ ಮಾಡುವ ರೋಗಿಗಳನ್ನ ನಾವು ಕಂಡಿದ್ದೇವೆ. ಎಣ್ಣೆ ಹಚ್ಚಿಕೊಂಡರೆ ಕೂದಲು ಉದುರುವಿಕೆ ಜಾಸ್ತಿ ಆಗುತ್ತದೆ ಎಂಬ ಭಯ ಹಲವರಿಗೆ .

2. ಅತಿಯಾದ ಬಿಸಿ ನೀರಿನ ತಲೆ ಸ್ನಾನ- ಸ್ನೇಹಿತರೆ, ಸದಾ ನೆನಪಿಡಿ. ಬಿಸಿ ನೀರನ್ನು ಎಂದಿಗೂ ತಲೆಗೆ ಹಾಕಬಾರದು. ಇದರಿಂದ, ಕೂದಲಿಗಷ್ಟೇ ತೊಂದರೆಯಾಗದೆ ಇಂದ್ರಿಯಗಳಿಗೂ ಮತ್ತು ಮೆದುಳಿಗೂ ಸಹ ಇದು ಹಾನಿಕರ. ಹಾಗಾಗಿ ತಲೆ ಸ್ನಾನ ಮಾಡುವಾಗ ಮೊದಲು ತಲೆಗೆ ತಣ್ಣೀರನ್ನು ಹಾಕಿ ತೊಳೆದು, ಬಟ್ಟೆಯಿಂದ ಕೂದಲನ್ನುಮೃದುವಾಗಿ ಕಟ್ಟಿ, ನಂತರ ಮೈಗೆ ಬಿಸಿ ನೀರಿನ ಸ್ನಾನ ಸದಾ ಸ್ವಾಸ್ಥ್ಯಕರ.

3. ತಲೆ ಹೊಟ್ಟು - ಏರುಪೇರಾದ ಆಹಾರ ಮತ್ತು ನಿದ್ದೆಯ ಅಭ್ಯಾಸಗಳಿಂದ ಇತ್ತೀಚೆಗೆ ಹೊಟ್ಟಿನ ಹಾವಳಿ ಅತಿ ಯಾಗಿದೆ. ತಲೆಯ ಚರ್ಮದ ಆರೋಗ್ಯವು ಉತ್ತಮವಾಗಿಲ್ಲದಿದ್ದರೆ ಅದರ ಪರಿಣಾಮಗಳು ಕೂದಲಿನ ಮೇಲೆಯೂ ಆಗುವುದು ಸಹಜ. ತಲೆಯ ಹೊಟ್ಟನ್ನು ನಿವಾರಿಸಿಕೊಳ್ಳದೆ ಕೂದಲಿನ ಸಂರಕ್ಷಣೆಯು ಅಸಾಧ್ಯ.

4. ನೀರಿನ ಬದಲಾವಣೆಯೂ ಸಹ ಕೂದಲು ಉದರವಿಕೆಗೆ ಕಾರಣವಾಗುತ್ತದೆ. ಆಯುರ್ವೇದವು ಬಹಳ ವಿಸ್ತಾರವಾಗಿ ಹೇಳಿರುವ ಒಂದು ವಿಷಯವೆಂದರೆ - ನೀರಿನ ಗುಣಗಳ ಬಗ್ಗೆ. ನದಿ, ಕೆರೆ, ಬಾವಿ, ಬೋರ್ವೆಲ್ ನೀರಿನ ಗುಣಗಳು ಬೇರೆಬೇರೆ ಆಗುವುದರಿಂದ ಅವುಗಳ ಪರಿಣಾಮವೂ ಬೇರೆಯೇ ಆಗಿರುತ್ತದೆ. ಸಾಮಾನ್ಯವಾಗಿ ಬೋರ್ವೆಲ್ ನೀರು ಬಹಳಷ್ಟು ಜನರಲ್ಲಿ ಕೂದಲ ಉದರವಿಕೆಯನ್ನು ಹೆಚ್ಚು ಮಾಡುತ್ತದೆ.

5. ಕೆಮಿಕಲ್‌ಗಳಿಂದ ತುಂಬಿರುವ ಶಾಂಪೂಗಳ/ ಸಾಬೂನುಗಳ ಅತಿಯಾದ ಬಳಕೆ- ಟಿವಿಯಲ್ಲಿ ಬರುವ ವಿವಿಧ ಆಡ್‌ಗಳನ್ನು ನೋಡಿ ಮರುಳಾಗಿ ಬೇರೆ ಬೇರೆ ರೀತಿಯ ಶಾಂಪೂಗಳನ್ನು ಬಳಸುವ ಯುವಕ ಯುವತಿಯರಿಗೆ ಏನು ಕಡಿಮೆ ಇಲ್ಲ. ಆದರೆ, ಬಹಳ ಹಾನಿಕರ ಕೆಮಿಕಲ್ಗಳಿಂದ ತುಂಬಿರುವ ಈ ಶಾಂಪುಗಳು ನೈಸರ್ಗಿಕವಾದ ಉತ್ತಮಕೂದಲನ್ನು ನೀಡಲು ಸಾಧ್ಯವೇ ಇಲ್ಲ. ಆದಷ್ಟು ನ್ಯಾಚುರಲ್ ಶಾಂಪೂ- ಸಲೈಡ್ ಮತ್ತು ಪಾರಬೆನ್ ರಹಿತವಾದ ಶಾಂಪೂಗಳ ಬಳಕೆ ಉತ್ತಮ.

6. ಕೂದಲಿಗೆ ವಿವಿಧ ಕೃತಕ ಬಣ್ಣಗಳನ್ನು ಹಚ್ಚುವ ಅಭ್ಯಾಸ- ಹೌದು, ಬಣ್ಣಗಳ ಪ್ಯಾಕೆಟ್ ಮೇಲೆ Seಜಿo bಟಛಿo ಟಠಿ Zoಛಿ eZಜ್ಟಿ Zಅಂತನೂ ಬರೆದಿರುತ್ತಾರೆ. ಆದರೆ ಖಂಡಿತವಾಗಿಯೂ ಅದು ಸುಳ್ಳು ಎನ್ನುವ ಅರಿವು ನಮಗೆಇರಲಿ.

7. ಅಂತೆಯೇ, ಕಪ್ಪು ಕೂದಲಿ ಗೋಸ್ಕರ ಕೃತಕ ಬಣ್ಣಗಳ ಬಳಕೆಯೂ ಸಹ ಕೂದಲು ಉದುರುವಿಕೆಗೆ ಕಾರಣವಾಗ ಬಹುದು .

8. ಬಿಸಿಲು, ಧೂಳು, ಹಿಮದಲ್ಲಿನ ಅತಿಯಾದ ಓಡಾಟ- ದ್ವಿಚಕ್ರ ವಾಹನಗಳಲ್ಲಿ ಓಡಾಡುವಾಗ ಕೆಲವು ನಿಯಮ ಗಳನ್ನು ಪಾಲಿಸುವುದು ಕೂದಲ ಸಂರಕ್ಷಣೆಗೆ ಸಹಾಯಕಾರಿ. ಉದಾಹರಣೆಗೆ- ಎದರು ಗಾಳಿಗೆ ತಲೆಯನ್ನು ಒಡ್ಡದೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಒಳ್ಳೆಯದು. ಹೆಲ್ಮೆಟ್ ಧರಿಸುವ ಮುನ್ನ ತೆಳುವಾದ, ಬಿಳಿಯಾದ ಕಾಟನ್ ಬಟ್ಟೆಯನ್ನು ತಲೆಗೆ ಸುತ್ತಿಕೊಂಡು ನಂತರ ಹೆಲ್ಮೆಟ್ ಧರಿಸುವುದು ಸಹಾಯಕಾರಿ. ಇದು ಕೇಶವನ್ನು ಬಿಸಿಲು, ಧೂಳು ಮತ್ತು ಗಾಳಿಯಿಂದ ಸಂರಕ್ಷಿಸಿತ್ತದೆ.

ಇವಿಷ್ಟು ಬಾಹ್ಯಾ ಕಾರಣಗಳ ಸಂಕ್ಷಿಪ್ತ ಪಟ್ಟಿ. ಈಗ ಬಹಳ ಮುಖ್ಯವಾದ ಆಭ್ಯಂತರ ಅಥವಾ ಆಂತರಿಕಕಾರಣ ಗಳ ಬಗ್ಗೆ ನೋಡೋಣ.

1. ಬಹಳ ಮುಖ್ಯವಾದ ಕಾರಣವೆಂದರೆ ನಿzಗೆಡುವುದು ಅಥವಾ ಕ್ರಮರಹಿತ ನಿದ್ದೆ. ಅದರಲ್ಲೂ, ರಾತ್ರಿ ಜಾಗರಣೆ ಮಾಡಿ ಹಗಲು ನಿದ್ದೆಯನ್ನು ಮಾಡುವ ಅಭ್ಯಾಸ ಕೇಶದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಕಾಲಿಕ ನಿz ಎಂದಿಗೂ ಕೇಶ ವೃದ್ಧಿಕರ.

2. ಜ್ವರ, ರಕ್ತ ಹೀನತೆ, ಪಾಂಡುರೋಗ ಮುಂತಾದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ದೀರ್ಘಕಾಲ ಬಳಲುವುದೂ ಸಹ ಕೂದಲನ್ನು ದುರ್ಬಲಗೊಳಿಸುತ್ತದೆ.

3. ಆಹಾರದಲ್ಲಿ ಅತಿಯಾಗಿ ಉಪ್ಪು, ಖಾರ ಮತ್ತು ಹುಳಿ ರುಚಿಯ ಬಳಕೆ- ಸ್ನೇಹಿತರೆ ನೆನಪಿಡಿ, ಅತಿಯಾಗಿ ಉಪ್ಪು ಮತ್ತು ಹುಳಿ ರುಚಿಗಳ ಬಳಕೆ ಯು ಕೂದಲಿಗಷ್ಟೇ ಹಾನಿತರದೆ ಮುಪ್ಪಿನ ಲಕ್ಷಣಗಳನ್ನು ಬಹು ಬೇಗ ಆಹ್ವಾನಿಸು ತ್ತದೆ. ಚರ್ಮ ಬೇಗ ಸುಕ್ಕುಗಟ್ಟುವುದು, ಕೂದಲು ಬೇಗ ಬಿಳಿಯಾಗುವುದು, ಮೂಳೆಗಳು ಬೇಗ ಸವೆಯುವುದು ಸಹ ಈ ಒಂದು ಕಾರಣದಿಂದಲೇ ಎಂದು ಹೇಳಬಹುದು. ಇದರ ಜೊತೆಗೆ ಮದ್ಯಪಾನ ಮತ್ತು ಧೂಮಪಾನಗಳು ಸೇರಿಕೊಂಡರೆ ಅಧೋಗತಿ!

4. ಆಹಾರದಲ್ಲಿ ಒಳ್ಳೆ ಜಿಡ್ಡಿನ ಅಂಶದ ಕೊರತೆಯೂ ಸಹ ಕೂದಲು ಹಾಳಾಗಲು ಕಾರಣ. ತುಪ್ಪ, ಬೆಣ್ಣೆ ಮತ್ತು ಹಾಲುಗಳ ಬಳಕೆ ಕೂದಲು ಬೆಳೆಯುವುದಕ್ಕೆ ಬೇಕಾಗುವ ಅತ್ಯವಶ್ಯಕವಾದ ಸಾಮಗ್ರಿಗಳು. ಅಂತೆಯೇ ಷಡ್ರಸದಿಂದ ಕೂಡಿದ ಸಂತುಲಿತ ಆಹಾರದ ಕೊರತೆಯೂ ಕೂದಲು ಉದುರುವಿಕೆಗೆ ಕಾರಣ.

5.ನಮ್ಮ ಜೀವನ ಶೈಲಿ ಅಂದರೆ ದಿನಚರ್ಯೆ ಮತ್ತು ಋತುಚರ್ಯೆಗಳನ್ನು ಸರಿಯಾಗಿ ಪಾಲಿಸದೆ ಇರುವುದು ಸಹ ಕೂದಲು ಉದುರುವಿಕೆಗೆ ಕಾರಣ.

6.ಅತಿಯಾದ, ಕ್ರಮರಹಿತ ವ್ಯಾಯಾಮದ ಮೂಲಕ ನಮ್ಮ ದೇಹವನ್ನು ಫಿಟ್ನೆಸ್ ಹೆಸರಿನಲ್ಲಿ ದಂಡಿಸುವುದು ಕೂದಲ ಆರೋಗ್ಯವನ್ನು ಹಾಳುಮಾಡುತ್ತದೆ. ಸರಿಯಾದ ಕ್ರಮವನ್ನು ತಿಳಿದು ಮಿತವಾದ ವ್ಯಾಯಾಮವನ್ನು ಮಾಡುವುದು ಸದಾ ಕ್ಷೇಮ.

7.ಆಯುರ್ವೇದದ ಪ್ರಕಾರ ಕೂದಲನ್ನು ಅಸ್ತಿ ಧಾತುವಿನ ಉಪಧಾತುವೆಂದು ಹೇಳಿದ್ದಾರೆ. ಹಾಗಾಗಿ, ಅಸ್ತಿಧಾತುವಿನ (ಮೂಳೆಗಳ) ಪೋಷಣೆಯಲ್ಲಿ ಏರುಪೇರು ಆದರೂ ಸಹ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

8. ಮಾನಸಿಕ ಕಾರಣಗಳಾದ ಅತಿಯಾದ ಕೋಪ, ಚಿಂತೆ, ದುಃಖ ಅಥವಾ ಸ್ಟ್ರೆಸ್ ಕೂದಲ ಬುಡವನ್ನೇ ದುರ್ಬಲ ಗೊಳಿಸಿ ಕೂದಲು ಉದುರುವಿಕೆಗೆ ನೇರವಾಗಿ ಕಾರಣವಾಗುತ್ತದೆ. ಇನ್ನು ಕೂದಲು ಉದುರುವಿಕೆಗೆ ಪರಿಹಾರವೇನು? ಚಿಕಿತ್ಸೆ ಹೇಗೆ? ನೋಡೋಣ.

ಮೊಟ್ಟಮೊದಲಿಗೆ ನಿದಾನ ಪರಿವರ್ಜನೆ ಅಂದರೆ ನಾನು ಮೇಲೆ ಹೇಳಿದ ಎಲ್ಲ ಕಾರಣಗಳನ್ನು ಸರಿಪಡಿಸಿಕೊಂಡು ಆ ಕಾರಣಗಳನ್ನು ನಮ್ಮ ಜೀವನ ದಿಂದ ಮತ್ತು ಜೀವನ ಶೈಲಿಯಿಂದ ದೂರವಾಗಿಸುವುದು. ಇಲ್ಲವಾದರೆ, ಯಾವ ಚಿಕಿತ್ಸೆಯೂ ಫಲ ಕೊಡುವುದಿಲ್ಲ.

ಆಯುರ್ವೇದ ಹೇಳುತ್ತದೆ - ಸ್ನೇಹಸಾರೋಯಂ ಪುರುಷಃ - ನಮ್ಮ ಅಸ್ತಿತ್ವಕ್ಕೆ ಬಹಳ ಮುಖ್ಯವಾದ ಕಾರಣವೆಂದರೆ ಸ್ನೇಹ ಅಂದರೆ ಜಡ್ಡಿನ ಪದಾರ್ಥಗಳು. ಹಾಗಾಗಿ, ನಮ್ಮ ಪ್ರತಿನಿತ್ಯ ಆಹಾರದಲ್ಲಿ ತುಪ್ಪ, ಬೆಣ್ಣೆ, ಮಾಂಸರಸದಂತಹ ಒಳ್ಳೆಯ ಜಿಡ್ಡಿನ ಪದಾರ್ಥಗಳನ್ನು ಸೇರಿಸಿಕೊಳ್ಳುವುದು ಅತ್ಯವಶ್ಯಕ. ಪ್ರತಿನಿತ್ಯ ತಲೆಗೆ ಎಣ್ಣೆ ಹಚ್ಚುವುದು ಬಹಳಮುಖ್ಯ. ಸರಿಯಾದ ಎಣ್ಣೆಯನ್ನು, ಸರಿಯಾದ ರೀತಿಯಲ್ಲಿ, ಸರಿಯಾದ ಸಮಯಕ್ಕೆ ಹಚ್ಚುವುದು ಅತ್ಯವಶ್ಯಕ. ಇದರಿಂದ ಬರೀ ಕೂದಲು ಮಾತ್ರವಲ್ಲದೆ ತಲೆಯ ಚರ್ಮದ ಸಂರಕ್ಷಣೆಯೂ ಆಗುತ್ತದೆ. ಹೊಟ್ಟು ಕಡಿಮೆಯಾಗಿ, ಕೂದಲ ತುದಿ ಒಡೆಯುವುದಿಲ್ಲ. ಇದು ಅಕಾಲ ನರೆಯನ್ನು ತಡೆಯುತ್ತದೆ.

ಜೊತೆಗೆ, ಇಂದ್ರಿಯಗಳನ್ನು ಸುಸ್ಥಿತಿಯಲ್ಲಿಟ್ಟು ಶಿರಸ್ಸಿಗೆ ಬಲವನ್ನು ಕೊಡುತ್ತದೆ. ಸರಿಯಾದ ಕ್ರಮದಲ್ಲಿ ನಿತ್ಯವೂ ಅಥವಾ ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ತಲೆಗೆ ಎಣ್ಣೆ ಹಚ್ಚಿ, ಕ್ರಮಬದ್ಧವಾಗಿ ಸ್ನಾನ ಮಾಡುವುದು ಕೇಶ ಸಂರಕ್ಷಕ.

ನೆಲ್ಲಿಕಾಯಿ, ಭೃಂಗರಾಜ, ಕರಿಬೇವು, ದ್ರಾಕ್ಷಿ, ದಾಳಿಂಬೆ, ಮೆಂತ್ಯ, ಒಂದೆಲಗ ಮುಂತಾದವು ಕೂದಲಿಗೆ ಸೊಂಪನ್ನು ಕೊಡುತ್ತದೆ. ಹಾಗಾಗಿ ಇವುಗಳನ್ನು ನಿತ್ಯ ಆಹಾರದಲ್ಲಿ ಮತ್ತು ತೈಲಗಳಲ್ಲಿ ಬಳಸಬಹುದು.

ಆಯುರ್ವೇದದ ಪ್ರಕಾರ ನಿತ್ಯವೂ ಮೂಗಿಗೆ ಎರಡು ಹನಿ ಎಣ್ಣೆಯನ್ನು ಹಾಕುವುದು ಒಂದು ಉತ್ತಮವಾದ ದಿನಚರ್ಯೆ. ಇದು ಕೇಶ ಸಂರಕ್ಷಕವೂ ಹೌದು. ಇದಕ್ಕೆ ನಸ್ಯ ಎಂದು ಕರೆಯುತ್ತಾರೆ. ನಿತ್ಯವೂ ಸ್ನಾನ ಮಾಡುವ ಮುನ್ನ ಖಾಲಿ ಹೊಟ್ಟೆಯಲ್ಲಿ ಎರಡು ಹನಿ ಬೆಚ್ಚಗಿನ ಎಣ್ಣೆಯನ್ನು ಮೂಗಿಗೆ ಹಾಕಿಕೊಳ್ಳುವುದು ಉತ್ತಮವಾದಅಭ್ಯಾಸ. ಇದನ್ನು ಇಂದೇ ಪ್ರಾರಂಭಿಸಿ.

ಇನ್ನು, ತೊಂದರೆ ಹೆಚ್ಚಾದಾಗ ಆಯುರ್ವೇದ ವೈದ್ಯರ ಮಾರ್ಗದರ್ಶನದಲ್ಲಿ ಶಿರೋಧಾರಾ, ಶಿರೋಬಸ್ತಿ, ಶಿರೋ ಲೇಪ ಮುಂತಾದ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬಹುದು. ನಿತ್ಯವೂ ಎಣ್ಣೆ ಹಚ್ಚಿ, ಮೃದುವಾಗಿ ವ್ಯಾಯಾಮ ಮಾಡಿ, ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿದರೆ ಶಿರಸ್ಸಿಗೆ ರಕ್ತ ಸಂಚಾರ ಉತ್ತಮವಾಗಿ ಸಹಜವಾಗಿಯೇ ಸಮಸ್ಯೆಗಳು ಪರಿಹಾರವಾಗುತ್ತದೆ.

ಇವಿಷ್ಟೂ ಉಪಾಯಗಳ ಪುಟ್ಟ ಪಟ್ಟಿ. ಒಟ್ಟಾರೆ ಸ್ನೇಹಿತರೆ, ನೆನಪಿನಲ್ಲಿಡಿ- ಕೇಶ ಸಂರಕ್ಷಣೆ ಮತ್ತು ಕೇಶ ಸಂವರ್ಧನೆಯಾವುದೋ ಮ್ಯಾಜಿಕ್ ಪರಿಹಾರದಿಂದ ಬಗೆಹರಿಯುವ ವಿಷಯವಲ್ಲ. ನಮ್ಮ ದೈನಂದಿನ ಆಹಾರ ಮತ್ತು ವಿಹಾರಗಳಲ್ಲಿಯೇ ಇದರ ಸೀಕ್ರೆಟ್ ಅಡಗಿದೆ . ಯಾವುದೋ ಒಂದು ಎಣ್ಣೆಯನ್ನು ಹಚ್ಚಿಯೋ ಅಥವಾ ವಿಟಮಿನ್ ಮಾತ್ರೆ ನುಂಗುವುದರಿಂದಲೋ ಕೇಶ ಸೊಂಪಾಗಿ ಬೆಳೆಯುವುದಾಗಿದ್ದರೆ ಈ ಜಗತ್ತಿನಲ್ಲಿ ಎಲ್ಲರೂ ಶಕುಂತಲೆಯರೇ ಆಗಿಬಿಡುತ್ತಿದ್ದರು, ಅಲ್ಲವೇ?

ಇದನ್ನೂ ಓದಿ: Dr SadhanaShree Column: ಶರತ್‌ ಋತುವಿನ ವಿಹಾರದ ಷರತ್ತುಗಳು!