Physical Abuse: ಬೈಕ್‌ಗಳಲ್ಲಿ ಚೇಸ್ ಮಾಡಿ ವಿಶೇಷ ಚೇತನ ಯುವತಿಯ ಮೇಲೆ ಗ್ಯಾಂಗ್ ರೇಪ್- ಭಯಾನಕ ವಿಡಿಯೊ ಇಲ್ಲಿದೆ
ಉತ್ತರ ಪ್ರದೇಶದ ಬಲರಾಂಪುರದಲ್ಲಿ ನಿರ್ಜನ ರಸ್ತೆಯಲ್ಲಿ 21 ವರ್ಷದ ವಿಶೇಷ ಚೇತನ ಯುವತಿಯು ತನ್ನ ಚಿಕ್ಕಪ್ಪನ ಮನೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ದುರುಳರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಯುವತಿಯನ್ನು ಮೂರು ನಾಲ್ಕು ಬೈಕ್ ಗಳಲ್ಲಿ ಅಪರಿಚಿತರು ಬೆನ್ನಟ್ಟುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಬಲರಾಂಪುರ: ವಿಶೇಷ ಚೇತನ ಯುವತಿಯನ್ನು ನಾಲ್ಕು ಬೈಕ್ ಗಳಲ್ಲಿ ಬೆನ್ನಟ್ಟಿ ಬಂದ ಸಾಮೂಹಿಕ ಅಪರಿಚಿತರು ಅತ್ಯಾಚಾರ(Physical Abuse) ನಡೆಸಿರುವ ಆಘಾತಕಾರಿ ಘಟನೆ ಸೋಮವಾರ ರಾತ್ರಿ ಉತ್ತರ ಪ್ರದೇಶದ ಬಲರಾಂಪುರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಯುವತಿಯನ್ನು ನಿರ್ಜನ ಪ್ರದೇಶದಲ್ಲಿ ಕೆಲವು ವ್ಯಕ್ತಿಗಳು ಬೆನ್ನಟ್ಟಿಕೊಂಡು ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಉನ್ನತ ಪೊಲೀಸ್ ಸಿಬ್ಬಂದಿಯ ನಿವಾಸದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಸಾಕಷ್ಟು ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬಲರಾಂಪುರದಲ್ಲಿ ನಿರ್ಜನ ರಸ್ತೆಯಲ್ಲಿ 21 ವರ್ಷದ ವಿಶೇಷ ಚೇತನ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ. ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಾಲ್ಕು ಬೈಕ್ ಗಳಲ್ಲಿ ಅಪರಿಚಿತರು ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂತ್ರಸ್ತ ಯುವತಿ ತನ್ನ ಚಿಕ್ಕಪ್ಪನ ಮನೆಯಿಂದ ಕಾಲ್ನಡಿಗೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಇವರ ಮನೆ ಕೇವಲ ಒಂದು ಕಿಲೋ ಮೀಟರ್ ದೂರದಲ್ಲಿತ್ತು.
ಭಯಾನಕ ವಿಡಿಯೊ ನೋಡಿ
#Uttar_Pradesh – District #Balrampur,
— CMNS_Media⚔️ #Citizen_Media🏹VEDA 👣 (@1SanatanSatya) August 13, 2025
A 21 year old mute and deaf girl was gang raped.
In the CCTV, the girl is running away and the beasts are chasing her on a bike.
Late night, the accused were caught in a police encounter with 2 stray dogs. pic.twitter.com/RlXNs1L3ho
ಪೊಲೀಸ್ ವರಿಷ್ಠಾಧಿಕಾರಿಯವರ ನಿವಾಸದಲ್ಲಿರುವ ಸಿಸಿಟಿವಿ ಕೆಮರಾದಲ್ಲಿ ಕೂಡ ಯುವತಿ ರಸ್ತೆಯಲ್ಲಿ ಹಿಂದೆ ನೋಡುತ್ತಾ ಓಡುತ್ತಿರುವುದನ್ನು ಮತ್ತು ನಾಲ್ಕು ಬೈಕ್ ಗಳಲ್ಲಿ ಅಪರಿಚಿತ ವ್ಯಕ್ತಿಗಳು ಆಕೆಯನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು. ಯುವತಿ ಮನೆಗೆ ಹಿಂದಿರುಗದ ಕಾರಣ ಅವಳ ಕುಟುಂಬ ಆಕೆಯನ್ನು ಹುಡುಕಲು ಪ್ರಾರಂಭಿಸಿದರು. ಪೊಲೀಸ್ ಪೋಸ್ಟ್ ಬಳಿಯ ಪೊದೆಗಳಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಅವಳು ಪ್ರಜ್ಞೆ ಮರಳಿದ ಬಳಿಕ ಕೆಲವು ವ್ಯಕ್ತಿಗಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ: Jaya Bachchan: ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಬಂದ ವ್ಯಕ್ತಿಯನ್ನು ತಳ್ಳಿದ ಜಯಾ ಬಚ್ಚನ್; ವಿಡಿಯೊ ವೈರಲ್
ಈ ಕುರಿತು ಮಾಹಿತಿ ನೀಡಿರುವ ಎಎಸ್ಪಿ ವಿಶಾಲ್ ಪಾಂಡೆ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವುದಾಗಿ ಕುಟುಂಬ ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಅಂಕುರ್ ವರ್ಮಾ, ಹರ್ಷಿತ್ ಪಾಂಡೆ ಎಂಬವರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಆಕೆಗೆ ಚಿಕಿತ್ಸೆ ಅಗತ್ಯವಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಪ್ರಕರಣ ದಾಖಲಿಸಿರುವ ಪೊಲೀಸರು ಉಳಿದ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್, ಎಸ್‌ಪಿ ಮತ್ತು ನ್ಯಾಯಾಧೀಶರಂತಹ ಉನ್ನತ ಅಧಿಕಾರಿಗಳು ವಾಸಿಸುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.