Crime News: ಲಿಫ್ಟ್ ನೀಡೋ ನೆಪದಲ್ಲಿ 50 ವರ್ಷದ ಮಹಿಳೆ ಮೇಲೆ ಎರಡು ಬಾರಿ ಗ್ಯಾಂಗ್ ರೇಪ್!
Physical Abused: 50 ವರ್ಷದ ವಿಧವೆಯ ಮೇಲೆ ಮೂವರು ಪುರುಷರು ಎರಡು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಹಳ್ಳಿಗೆ ತೆರಳಲು ಲಿಫ್ಟ್ ಆಫರ್ ನೀಡಿದ ದುಷ್ಕರ್ಮಿಗಳು ನಂತರ ಈ ಕೃತ್ಯವೆಸಗಿದ್ದಾರೆ. ಯಾರಿಗಾದರೂ ತಿಳಿಸಿದರೆ ಪರಿಣಾಮ ನೆಟ್ಟಗಿರಲ್ಲ ಎಂದೂ ಬೆದರಿಕೆ ಹಾಕಿದ್ದರು.

-

ಅಹಮದಾಬಾದ್: ಮೂವರು ಪುರುಷರು 50 ವರ್ಷದ ವಿಧವೆಯ ಮೇಲೆ ಎರಡು ಬಾರಿ ಸಾಮೂಹಿಕ ಅತ್ಯಾಚಾರ(Physical Abused) ಎಸಗಿದ ಆಘಾತಕಾರಿ ಘಟನೆ ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಕರಾವಳಿ ಪಟ್ಟಣವಾದ ಉನಾದಲ್ಲಿ ನಡೆದಿದೆ. ಕಳೆದ ವಾರ ಈ ಘಟನೆ ನಡೆದಿದ್ದು, ಬುಧವಾರದಂದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮೂವರೂ ಮೀನುಗಾರರು ಎಂದು ಪೊಲೀಸರು ತಿಳಿಸಿದ್ದಾರೆ (Crime News).
ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆಯನ್ನು ಮಂಗಳವಾರ ಉನಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿತು. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಆಕೆಯ ಕುಟುಂಬಸ್ಥರು ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಅತ್ಯಾಚಾರದ ಘಟನೆಯನ್ನು ಆಕೆ ವೈದ್ಯರಿಗೆ ತಿಳಿಸಿದ್ದಾರೆ. ಕೂಡಲೇ ಆಸ್ಪತ್ರೆಯು ವೈದ್ಯಕೀಯ-ಕಾನೂನು ಪ್ರಕರಣ (ಎಂಎಲ್‌ಸಿ) ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿತು. ಹೀಗಾಗಿ ಆಸ್ಪತ್ರೆಗೆ ಧಾವಿಸಿದ ಪೊಲೀಸರು ಮಹಿಳೆಯಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿದರು.
ಇದನ್ನೂ ಓದಿ: Viral News: ಗಾಢ ನಿದ್ದೆಯಲ್ಲಿದ್ದ ಗಂಡನ ಮೇಲೆ ಕೊತ ಕೊತ ಕುದಿಯುವ ಎಣ್ಣೆ ಸುರಿದು ಖಾರದ ಪುಡಿ ಎರಚಿದ ಪತ್ನಿ!
ನಂತರ, ಅತ್ಯಾಚಾರ ಸಂತ್ರಸ್ತೆ ನವಬಂದರ್ ಮೆರೈನ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆಯ ಪತಿ 10 ವರ್ಷಗಳ ಹಿಂದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಿಳೆಯು, ಒಂದು ವಾರದ ಹಿಂದೆ ಮಾಂಡ್ವಿ ಚೆಕ್‌ಪೋಸ್ಟ್‌ನಿಂದ ತನ್ನ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದ ಮೂವರು ದುಷ್ಕರ್ಮಿಗಳು ತನ್ನ ಬಳಿಗೆ ಬಂದರು. ಈ ವೇಳೆ ತಮ್ಮ ಹಳ್ಳಿಗೆ ಬಿಡುವುದಾಗಿ ಅವರು ಹೇಳಿದರು. ಅವರ ಬಗ್ಗೆ ಪರಿಚಯವಿದ್ದುದರಿಂದ ಒಪ್ಪಿದ ಮಹಿಳೆ ಬೈಕ್ ಹತ್ತಿದ್ದಾರೆ.
ಆದರೆ, ಬೈಕ್‍ನಲ್ಲಿ ಸ್ವಲ್ಪ ದೂರ ಪ್ರಯಾಣ ಮಾಡಿದ ನಂತರ ಅವರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಇದಾದ ನಂತರ, ಮೂವರು ಆರೋಪಿಗಳಲ್ಲಿ ಒಬ್ಬನ ಮನೆಗೆ ಆಕೆಯನ್ನು ಬಲವಂತವಾಗಿ ಕರೆದೊಯ್ದು, ಅಲ್ಲಿ ಮತ್ತೆ ಅತ್ಯಾಚಾರ ಮಾಡಿದ್ದಾರೆ. ಬಳಿಕ ಆಕೆಗೆ ಮನೆಗೆ ಮರಳಲು ಅವಕಾಶ ಮಾಡಿಕೊಟ್ಟರು. ಆದರೆ, ಲೈಂಗಿಕ ದೌರ್ಜನ್ಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪೊಲೀಸರು ಹಲವಾರು ತಂಡಗಳನ್ನು ರಚಿಸಿದ್ದರು. ಕೊನೆಗೂ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರ ಕೈಗೂ ಕೋಳ ತೊಡಿಸಲಾಗಿದ್ದು, ಹೆಡೆಮುರಿ ಕಟ್ಟಲಾಗಿದೆ.