ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dulquer Salmaan: ವಾಹನಗಳ ಸ್ಮಗ್ಲಿಂಗ್‌ ಆರೋಪ; ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ರೇಡ್‌

ಪ್ಯಾನ್ ಇಂಡಿಯಾ (Pan India) ಸ್ಟಾರ್ ನಟ, ನಿರ್ಮಾಪಕರಾಗಿರುವ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮನೆಯ ಮೇಲೆ ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಇಬ್ಬರೂ ನಟರ ವಿರುದ್ಧ ಸ್ಮಗ್ಲಿಂಗ್ ಆರೋಪ ಕೇಳಿ ಬಂದಿದೆ.

ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ಕಸ್ಟಮ್ಸ್ ಅಧಿಕಾರಿಗಳಿಂದ ರೇಡ್‌

-

Vishakha Bhat Vishakha Bhat Sep 23, 2025 2:00 PM

ತಿರುವನಂತಪುರಂ: ಪ್ಯಾನ್ ಇಂಡಿಯಾ (Pan India) ಸ್ಟಾರ್ ನಟ, ನಿರ್ಮಾಪಕರಾಗಿರುವ ದುಲ್ಕರ್ ಸಲ್ಮಾನ್ (Dulquer Salmaan) ಮತ್ತು ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರ ಮನೆಯ ಮೇಲೆ ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಇಬ್ಬರೂ ನಟರ ವಿರುದ್ಧ ಸ್ಮಗ್ಲಿಂಗ್ ಆರೋಪ ಕೇಳಿ ಬಂದಿದ್ದು, ಮನೆಯಲ್ಲಿರುವ ಕಾರುಗಳು, ಇತರೆ ವಿದೇಶಿ ವಸ್ತುಗಳ ತನಿಖೆ ನಡೆಸಿದ್ದಾರೆ. ಕೇರಳದ ಕೊಚ್ಚಿಯ ತೇವರದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಮನೆ ಹಾಗೂ ಕೊಚ್ಚಿಯ ಪನಂಪಿನ್ನಿ ನಗರದಲ್ಲಿರುವ ದುಲ್ಕರ್ ಸಲ್ಮಾನ್ ಮನೆ ಸೇರಿದಂತೆ ಇವರಿಗೆ ಸೇರಿದ ಒಟ್ಟು 30 ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಟರುಗಳು ಮಾತ್ರವೇ ಅಲ್ಲದೆ ಕೇರಳದ ಪ್ರಮುಖ ಉದ್ಯಮಿಗಳ ಮನೆ ಮೇಲೆಯೂ ದಾಳಿ ನಡೆಸಲಾಗಿದೆ. ಈ ದಾಳಿಗೆ ‘ನುಮ್​ಕೂರ್’ ಎಂದು ಹೆಸರಿಡಲಾಗಿದ್ದು, ಪರಿಶೀಲನೆ ಇನ್ನೂ ಮುಂದುವರಿದಿದೆ. ಅಕ್ರಮವಾಗಿ ವಿದೇಶಗಳಿಂದ ವಾಹನ ಆಮದು ಮಾಡಿಕೊಳ್ಳುವುದು, ತೆರಿಗೆ ವಂಚನೆಗಳನ್ನು ಪತ್ತೆ ಹಚ್ಚಲು ದಾಳಿ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ವಾಹನಗಳನ್ನು ವಶಪಡಿಸಿಕೊಂಡವರಿಗೆ ನೋಟಿಸ್ ನೀಡಲಾಗುವುದು ಮತ್ತು ವಾಹನಗಳ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸಲು ಕೇಳಲಾಗುತ್ತದೆ. ತೆರಿಗೆ ವಂಚಿಸಿ ಎಂಟು ವಿಧದ ಉನ್ನತ ದರ್ಜೆಯ ವಾಹನಗಳನ್ನು ಭೂತಾನ್ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ.

ಈ ವಂಚನೆಯ ಜಾಲವು ವಾಹನಗಳನ್ನು ಮೊದಲು ಹಿಮಾಚಲ ಪ್ರದೇಶದಲ್ಲಿ ನೋಂದಾಯಿಸಿ, ನಂತರ ಅವುಗಳನ್ನು ಭಾರತದ ವಿವಿಧ ಭಾಗಗಳಿಗೆ ಸಾಗಿಸುವುದಾಗಿದೆ. ಆ ಕಾರುಗಳನ್ನು ಭಾರಿ ದೊಡ್ಡ ಮೊತ್ತಕ್ಕೆ ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಕೇರಳದಲ್ಲಿಯೇ ಇಂಥಹಾ ಕಾರುಗಳ ಮಾರಾಟ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಈ ಸ್ಮಗ್ಲಿಂಗ್‌ ಕುರಿತು ಕೇರಳದಲ್ಲಿ ಬಹು ದೊಡ್ಡ ಚರ್ಚೆಯಾಗಿತ್ತು. ಇದೀಗ ಅಧಿಕಾರಿಗಳು ನಟರಿಗೆ ಶಾಕ್‌ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: ED Raid: ಭರ್ಜರಿ ಇಡಿ ರೇಡ್‌! ದೆಹಲಿ ಉದ್ಯಮಿಗೆ ಸೇರಿದ 80 ಕೋಟಿ ರೂ. ವಿದೇಶಿ ಆಸ್ತಿ ವಶಕ್ಕೆ

ದುಲ್ಕರ್ ಸಲ್ಮಾನ್ ಬಳಿ ಹಲವು ಕಾರುಗಳಿದ್ದು, ಅದರಲ್ಲಿ ವಿದೇಶಿ ಕಾರುಗಳೂ ಸೇರಿವೆ. ಪೃಥ್ವಿರಾಜ್ ಸುಕುಮಾರನ್ ಸಹ ಹಲವಾರು ವಿದೇಶಿ ಕಾರುಗಳನ್ನು ಹೊಂದಿದ್ದಾರೆ. ಅವರ ಸಂಗ್ರಹದಲ್ಲಿ ಆಸ್ಟಿನ್ ಮಾರ್ಟಿನ್ ಕಾರು ಸಹ ಇದೆ. ಕೇರಳದ ಕೊಚ್ಚಿಯ ತೇವರದಲ್ಲಿ ಪೃಥ್ವಿರಾಜ್ ಸುಕುಮಾರನ್ ಮನೆಯಿದೆ.