ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Power Cut: ಆ.23, 24ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Bengaluru Power Cut: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11 ಕೆ.ವಿ. ಹೂಡಿ ಸ್ಟೇಷನ್ ವ್ಯಾಪ್ತಿಯ ಹಲವೆಡೆ ಆ.23ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ಆ.23, 24ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಸಾಂದರ್ಭಿಕ ಚಿತ್ರ.

Profile Siddalinga Swamy Aug 22, 2025 9:18 PM

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11 ಕೆ.ವಿ. ಹೂಡಿ ಸ್ಟೇಷನ್ ವ್ಯಾಪ್ತಿಯ ಹಲವೆಡೆ ಆ.23ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ಹೂಡಿ ವಿಲೇಜ್, ತಿಗಲಾರಪಾಳ್ಯ, ಸೀತಾರಾಮಪಾಳ್ಯ, ಬಸವನಗರ, ಸೊನ್ನೆಹಳ್ಳಿ, ಟ್ರಂಕ್ ಕೇಬಲ್ ದೋಷ, ಎನ್‌ಜಿಇಎಫ್ ಕೈಗಾರಿಕಾ ಪ್ರದೇಶ, ಶಿವರಾಜ್ ಫ್ಯಾಕ್ಟರಿ, ಇಎಸ್ಐ ರಸ್ತೆ, ವಿಎಸ್ಎನ್ಎಲ್ ಡೇಟಾ ಸೆಂಟರ್, ಪುರವ ಪಾರ್ಕ್ ವಿಲಾಸ್, ಶಿವಗಂಗಾ ಲೇಔಟ್, ಅನುಗ್ರಹ ಲೇಔಟ್, ಚಿನ್ನಪ್ಪ ಲೇಔಟ್, ಔಟರ್ ರಿಂಗ್ ರಸ್ತೆ, ರಾಮಕೃಷ್ಣ ರೆಡ್ಡಿ ಲೇಔಟ್, ಗರುಡಾಚಾರ್ ಪಾಳ್ಯ, ಆರ್‌ಎಚ್‌ಬಿ ಕಾಲೋನಿ, ಲಕ್ಷ್ಮೀ ಸಾಗರ, ಮಹೇಶ್ವರಮ್ಮ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಆ.24ರಂದು ಹಲವೆಡೆ ವಿದ್ಯುತ್ ವ್ಯತ್ಯಯ

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11 ಕೆ.ವಿ. ಎಸ್.ಆರ್.ಎಸ್. ಪೀಣ್ಯ ಸಬ್ ಸ್ಟೇಷನ್ ವ್ಯಾಪ್ತಿಯ ಹಲವೆಡೆ ಆ.24 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ಎಚ್ಎಂಟಿ ರಸ್ತೆ, ಆರ್‌ಎನ್‌ಎಸ್ ಅಪಾರ್ಟ್‌ಮೆಂಟ್, ಸಿಎಂಟಿಐ, ಬೋರಲಿಂಗಪ್ಪ ಗಾರ್ಡನ್, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಟೆಲಿಫೋನ್ ಎಕ್ಸ್ಚೇಂಜ್, 6ನೇ ಕ್ರಾಸ್, ರಿಲಯನ್ಸ್ ಕಮ್ಯುನಿಕೇಷನ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ, ಎಂಇಸಿ ಲೇಔಟ್, ಮಲಯಾಳಿ ಅತಿಥಿ ಗೃಹ ರಸ್ತೆ, ಕೆಎಚ್‌ಬಿ ಲೇಔಟ್, ರಾಜೇಶ್ವರಿ ನಗರ, ಆಕಾಶ್ ಥೇಟರ್ ರಸ್ತೆ, ಫ್ರೆಂಡ್ಸ್ ರ‍್ಕಲ್, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ, ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, 6ನೇ ಮುಖ್ಯ ರಸ್ತೆ, ವಿಭಾಗ ರಸ್ತೆ, 5ನೇ ಮುಖ್ಯ ರಸ್ತೆ, ಯುಕೊ ಬ್ಯಾಂಕ್ ರಸ್ತೆ, ಥರ‍್ಲಾಕ್ ರಸ್ತೆ, 7ನೇ ಮುಖ್ಯ ರಸ್ತೆ, 3ನೇ ಹಂತ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, ಇಎಸ್ಐಸಿ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶ.

ಈ ಸುದ್ದಿಯನ್ನೂ ಓದಿ | Festive Season Saree Shopping 2025: ಗೌರಿ ಹಬ್ಬಕ್ಕೆ ಹೆಚ್ಚಾಯ್ತು ಸೀರೆ ಖರೀದಿ

66/11 ಕೆ.ವಿ. ನೆಲಗೆದರನಹಳ್ಳಿ ಸಬ್ ಸ್ಟೇಷನ್ ವ್ಯಾಪ್ತಿಯ ಹಲವೆಡೆ ಆ.24ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ಕೆಂಪಯ್ಯ ಗಾರ್ಡನ್, ಎ ಟೈಪ್ ಶೆಡ್ಸ್ ತಿಗಳರಪಾಳ್ಯ ಮುಖ್ಯ ರಸ್ತೆ, ಪರ್ಲ್‌ ರಸ್ತೆ, ಮಾರುತಿ ಇಂಡಸ್ಟ್ರಿಯಲ್ ಎಸ್ಟೇಟ್, ನೆಲಿಕಾಗಡರನಹಳ್ಳಿ, ಎಚ್‌ಎಂಟಿ ಲೇಔಟ್, ಶಿವಪುರ, ಗೃಹಲಕ್ಷ್ಮಿ ಲೇಔಟ್, ಶಿವಪುರ, ಬೆಳ್ಮಾರ್ ಲೇಔಟ್, ವಿನಾಯಕ ನಗರ, 8ನೇ ಮೈಲ್ ರಸ್ತೆ, ಜಾಲಹಳ್ಳಿ ಕ್ರಾಸ್, ಕೆ.ಎಲ್.ಎ.ಪಿ.ಎಲ್. ಆಂಟಿಬಯೋಟಿಕ್ಸ್ ಪ್ರೈವೇಟ್ ಲಿಮಿಟೆಡ್, ರುಕ್ಮಿಣಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.