ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ಧಿ ಇಲ್ಲ; ಕನ್ನಡಿಗರ ವಿರುದ್ಧ ಕ್ಯಾತೆ ತೆಗೆದ ಹಿಂದಿ ಯುವತಿ

ಉತ್ತರ ಭಾರತೀಯರು ಬೆಂಗಳೂರಿನಲ್ಲಿ ನೆಲೆಸಿ ರಾಜಧಾನಿ ಬಗ್ಗೆ ಕೀಳಾಗಿ ಮಾತನಾಡುವುದು ಹೊಸತೇನಲ್ಲ. ಇದೀಗ ಒಡಿಶಾ ಮೂಲದ ಯುವತಿಯೊಬ್ಬಳು ಬೆಂಗಳೂರಿನಲ್ಲಿ ಕಾರು ಓಡಿಸುವ ವಿಚಾರಕ್ಕೆ ಕನ್ನಡಿರಿಗೆ ಅವಮಾನಿಸಿದ್ದಾಳೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ದಿ ಇಲ್ಲ; ಕನ್ನಡಿರ ವಿರುದ್ಧ ಯುವತಿ ಕಿಡಿ

Vishakha Bhat Vishakha Bhat Jul 27, 2025 12:34 PM

ಬೆಂಗಳೂರು: ಉತ್ತರ ಭಾರತೀಯರು ಬೆಂಗಳೂರಿನಲ್ಲಿ ನೆಲೆಸಿ ರಾಜಧಾನಿ ಬಗ್ಗೆ ಕೀಳಾಗಿ ಮಾತನಾಡುವುದು ಹೊಸತೇನಲ್ಲ. ಹಾಗೆ ಮಾತನಾಡಿವರಿಗೆ ಕನ್ನಡಿಗರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಇಷ್ಟಾದರೂ ಇವರು ಮಾತ್ರ ಬುದ್ಧಿ ಕಲಿತಿಲ್ಲ. ಇದೀಗ ಒಡಿಶಾ ಮೂಲದ ಯುವತಿಯೊಬ್ಬಳು ಬೆಂಗಳೂರಿನಲ್ಲಿ ಕಾರು ಓಡಿಸುವ ವಿಚಾರಕ್ಕೆ ಕನ್ನಡಿಗರ ತಲೆಯಲ್ಲಿ ಬುದ್ಧಿಯಿಲ್ಲ, ಲದ್ದಿ ಇದೆ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಹರಿಬಿಟ್ಟಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಈ (Viral News) ವಿಡಿಯೋ ವೈರಲ್‌ ಆಗಿದ್ದು, ಆಕೆಯ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ.

ಒಡಿಶಾದ ನೇಹಾ ಬಿಸ್ವಾಲ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಸ್ಥಳೀಯ ಪಿಜಿಯೊಂದರಲ್ಲಿ ವಾಸವಾಗಿದ್ದಾಳೆ. ಮಳೆಯ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನ ಚಾಲಕರು ವೇಗವಾಗಿ ಓಡಿಸಿದ್ದರಿಂದ ರಸ್ತೆಯ ನೀರು ತನ್ನ ಮೇಲೆ ಸಿಡಿದಿತು ಎಂದು ಆಕ್ರೋಶಗೊಂಡ ಆಕೆ, ಛತ್ರಿ ಹಿಡಿದುಕೊಂಡು ವಿಡಿಯೋ ರೆಕಾರ್ಡ್ ಮಾಡಿದ್ದಾಳೆ. ಇಲ್ಲಿ ಇಷ್ಟು ಮಳೆ ಇದೆ. ಆದರೂ ವಾಹನಗಳನ್ನು ವೇಗವಾಗಿ ಓಡಿಸುತ್ತಾರೆ, ಈ ನಗರದ ಜನರಿಗೆ ಬುದ್ಧಿಯೇ ಇಲ್ಲ, ಶಿಕ್ಷಣವಿದ್ದರೂ ಅನಕ್ಷರಸ್ಥರಂತೆ ವರ್ತಿಸುತ್ತಾರೆ” ಎಂದು ವಿಡಿಯೋದಲ್ಲಿ ಮಾತನಾಡಿದ್ದಾಳೆ.

ಯುವತಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಎಲ್ಲರಿಗೂ ಆತಿಥ್ಯ ನೀಡುವ, ಕೆಲಸದ ಅವಕಾಶ ಕಲ್ಪಿಸುವ ನಗರವಾಗಿದ್ದರೂ, ಇಂತಹ ಅವಮಾನಕಾರಿ ಹೇಳಿಕೆಗಳು ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತಂದಿವೆ ಎಂದು ಜನರು ಕಿಡಿಕಾರಿದ್ದಾರೆ. ನಮ್ಮ ಆಶ್ರಯ ಪಡೆದುಕೊಂಡು ನಮ್ಮ ಬಗ್ಗೆಯೇ ಕೀಳಾಗಿ ಮಾತನಾಡುವ ಇಂತವರನ್ನು ಒದ್ದು ಹೊರಗೆ ಹಾಕಬೇಕೆಂದು ಜನ ಕಿಡಿ ಕಾರಿದ್ದಾರೆ.

ಈ ಹಿಂದೆ ಬೆಂಗಳೂರು ಬೆಂಗಳೂರಾಗಿರುವುದೇ ಉತ್ತರ ಭಾರತೀಯರಿಂದ ಎಂದು ಯುವತಿಯೊಬ್ಬಳು ಹೇಳಿದ್ದಳು. ಆ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ, ಉತ್ತರ ಭಾರತದಿಂದ ಬೆಂಗಳಳೂರಿಗೆ ಬಂದಾಗ ಎದುರಿಸಿದ ಸಾಂಸ್ಕೃತಿಕ ಆಘಾತ ಹೇಗಿತ್ತು ಎಂದು ಕೇಳಲಾಗಿತ್ತು. ಇದಕ್ಕೆ ಆಕೆ, "ಸಾಂಸ್ಕೃತಿಕ ಆಘಾತದ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಇಲ್ಲಿನ ಜನರು ಉತ್ತರ ಭಾರತೀಯರನ್ನು ದ್ವೇಷಿಸುತ್ತಾರೆ.

ಈ ಸುದ್ದಿಯನ್ನೂ ಓದಿ: Narayana Bharamani: ಮುಖ್ಯಮಂತ್ರಿಯಿಂದ ಅವಮಾನಕ್ಕೊಳಗಾಗಿ ರಾಜೀನಾಮೆಗೆ ಮುಂದಾದ ಎಎಸ್‌ಪಿ ನಾರಾಯಣ ಭರಮನಿಗೆ ಪದೋನ್ನತಿ

ಬೆಂಗಳೂರಿನ ಇಂದಿನ ಸ್ಥಿತಿಗೆ ಉತ್ತರ ಭಾರತೀಯರು ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಿರುವುದೇ ಕಾರಣ. ಆದರೆ ಜನರು ಇದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಹೇಳಿದ್ದಳು. ಯುವತಿಗೆ ನೆಟ್ಟಿಗರು ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದರು. ದಿಲ್ಲಿ, ನೋಯ್ಡಾ, ಗುರ್ಗಾಂವ್, ಚಂಡೀಗಢ ಇತ್ಯಾದಿ ನಗರಗಳು ಉತ್ತಮ ಉದ್ಯೋಗಗಳನ್ನು ಹೊಂದಿವೆ.. ಅದಕ್ಕಾಗಿ ಹೆಚ್ಚು ದೂರ ಪ್ರಯಾಣಿಸುವ ಅಗತ್ಯವಿಲ್ಲ ಮತ್ತು ಹೆಚ್ಚು ಶುಲ್ಕ ವಿಧಿಸುವ ಆಟೋ ವಾಲಾಗಳ ಬಗ್ಗೆ ಕೆಟ್ಟ ಭಾವನೆ ಹೊಂದಬೇಕಾಗಿಲ್ಲ ನೀನು ಅಲ್ಲಿಯೇ ಹೋಗು ಎಂದು ಹೇಳಿದ್ದರು.