PM Narendra Modi: ಬೆಂಗಳೂರಿನ ಆತ್ಮದಲ್ಲಿ ತಂತ್ರಜ್ಞಾನ ಇದೆ... ಆಪರೇಷನ್ ಸಿಂದೂರ್‌ನಲ್ಲೂ ಮಹತ್ವದ ಪಾತ್ರ: ಪ್ರಧಾನಿ ಮೋದಿ
PM Modi in Bengalore : ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ನಮ್ಮ ಮೆಟ್ರೋದ ಯೆಲ್ಲೋ ಲೈನ್ ಮತ್ತು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ. ಇದಾದ ಬಳಿಕ ಅವರು ಮೆಟ್ರೋ ೩ನೇ ಹಂತದ ಕಾಮಗಾರಿಗೆ ಅವರು ಅಡಿಗಲ್ಲು ಹಾಕಿದ್ದಾರೆ. ಈ ವೇಳೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ(PM Narendra Modi) ನಮ್ಮ ಮೆಟ್ರೋದ ಮೂರನೇ ಹಂತದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು. ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗದ ಮೊದಲ ರೈಲಿಗೆ ಚಾಲನೆ ನೀಡಿದ ನಂತರ ಶಾಲಾ ಮಕ್ಕಳು ಹಾಗೂ ಕಾರ್ಮಿಕರ ಜೊತೆಗೆ ರಾಗಿಗುಡ್ಡದಿಂದ ಎಲೆಕ್ಟ್ರಾನಿಕ್ ಸಿಟಿಯವರೆಗೆ ಸಂಚರಿಸಿದರು. ನಂತರ ಎಲೆಕ್ಟ್ರಾನಿಕ್ ಸಿಟಿಯ IIIT ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರುದ್ದೇಶಿಸಿ ಅವರು ಮಾತನಾಡಿದರು. ಬೆಂಗಳೂರು ನಗರದ ಅಧಿದೇವತೆ ಅಣ್ಣಮ್ಮನಿಗೆ ಸಮಸ್ಕರಿಸುತ್ತಾ ಮಾತು ಆರಂಭಿಸಿದ ಪ್ರಧಾನಿ, ಬೆಂಗಳೂರು ನಗರ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲಲು ಇಲ್ಲಿನ ಜನರ ಶ್ರಮ ಮತ್ತು ಪ್ರತಿಭೆಯೇ ಕಾರಣ. ಬೆಂಗಳೂರು ನವ ಭಾರತದ ಚಿಹ್ನೆ ಆಗಿದೆ. ಬೆಂಗಳೂರಿನ ಆತ್ಮದಲ್ಲಿ ತಂತ್ರಜ್ಞಾನ ಇದೆ. ಭವಿಷ್ಯಕ್ಕಾಗಿ ಬೆಂಗಳೂರನ್ನು ತಯಾರು ಮಾಡಬೇಕಾಗಿದೆ ಎಂದು ಹೇಳಿದರು.
ಇದೇ ವೇಳೆ ಅವರು ಆಪರೇಷನ್ ಸಿಂದೂರ್ ಬಗ್ಗೆ ಪ್ರಸ್ತಾಪಿಸಿದ ಅವರು, ಯೋಧರ ಶಕ್ತಿ ಸಾಮರ್ಥ್ಯವನ್ನು ಹಾಡಿ ಹೊಗಳಿದರು. ಆಪರೇಷನ್ ಸಿಂದೂರ್‌ನಲ್ಲಿ ನಮ್ಮ ತಂತ್ರಜ್ಞಾನ ಮತ್ತು ರಕ್ಷಣಾ ವ್ಯವಸ್ಥೆ ಮಹತ್ವದ ಪಾತ್ರ ವಹಿಸಿದೆ. ಇದರಲ್ಲಿ ಬೆಂಗಳೂರಿನ ಯುವಕರ ಪಾತ್ರ ಇದೆ. ಅದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಳೆದ ಕೆಲವು ವರ್ಷಗಳಿಂದ ನಮ್ಮ ಆರ್ಥಿಕತೆ ಐದನೇ ಸ್ಥಾನಕ್ಕೆ ಬಂದು ತಲುಪಿದೆ. ನಮ್ಮ ಗುರಿ ಇನ್ನೇನಿದ್ದರೂ ಮೂರನೇ ಸ್ಥಾನಕ್ಕೆ ತಲುಪುವುದು. ಭಾರತ ಈಗ ಪ್ರಪಂಚದ ಮೂರನೇ ಅತಿದೊಡ್ಡ ಮೆಟ್ರೋ ರೈಲ್ವೇ ಸಂಪರ್ಕ ಇರುವ ದೇಶವಾಗಿದೆ. ಕೇವಲ ಐದು ನಗರಗಳಲ್ಲಿ ಮೆಟ್ರೋ ಇತ್ತು. 2014ವರೆಗೆ ಕೇವಲ 74 ಏರ್ಪೋರ್ಟ್‌ಗಳು ಇದ್ದವು. ಈಗ ಅದರ ಸಂಖ್ಯೆ 200ಕ್ಕೂ ಹೆಚ್ಚಾಗಿವೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲೂ ಭಾರತ ಮುನ್ನುಗ್ಗುತ್ತಿದೆ. ದೇಶ ಎಷ್ಟು ವೇಗದಲ್ಲಿ ಮುಂದುವರಿಯುತ್ತಿದೆಯೋ ಅಷ್ಟೇ ವೇಗದಲ್ಲಿ ದೇಶದ ಬಡವರ ಬದುಕು ಸುಧಾರಿಸಿದೆ ಎಂದರು.
ಈ ಸುದ್ದಿಯನ್ನೂ ಓದಿ: Namma Metro: 2030ರ ವೇಳೆಗೆ 220 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣ ಗುರಿ: ಸಿಎಂ ಸಿದ್ದರಾಮಯ್ಯ
ಭಾರತ ಇದೀಗ ಆಟೋ ಮೊಬೈಲ್ ರಫ್ತಿನಲ್ಲಿ ನಾಲ್ಕನೇ ಅತಿದೊಡ್ಡ ರಾಷ್ಟ್ರವಾಗಿದೆ. ಎಲ್ಲರೂ ಜೊತೆಗೂಡಿ ವಿಕಸಿತ ಭಾರತವನ್ನು ರೂಪಿಸೋಣ. ವಿಶ್ವದ ಶೇ50ರಷ್ಟು ಡಿಜಿಟಲ್ ವ್ಯವಹಾರ ಭಾರತದಲ್ಲೇ ನಡೆಯುತ್ತಿದೆ.ಎಐ ಪವರ್‌ನಲ್ಲೂ ಭಾರತದ ಹೂಡಿಕೆ ಹೆಚ್ಚಾಗುತ್ತಿದೆ. ಕರ್ನಾಟಕದ ಪ್ರತಿಭೆಗಳು ಆತ್ಮ ನಿರ್ಭರದ ಪರಿಕಲ್ಪನೆಯ ನಾಯಕತ್ವ ವಹಿಸುವಂತಾಗಲಿ. ಮೇಕ್ ಇಂಡಿಯಾದಲ್ಲಿ ಕರ್ನಾಟಕ ಮತ್ತಷ್ಟು ಕೈ ಜೋಡಿಸಬೇಕಾಗಿದೆ.