ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ಸಿಎಂ ಕಾರಿನ ಮೇಲೆ 2,000 ರೂ. ದಂಡ, ಫೈನ್ ಕಟ್ಟಿ ಮಾದರಿಯಾದ ಸಿದ್ದರಾಮಯ್ಯ

ಸಿಎಂ ಸರ್ಕಾರಿ ಕಾರು ಕೆಎ-05, ಜಿಎ- 2023 ಕಾರಿನ ಮೇಲೆ ನಿಯಮ ಉಲ್ಲಂಘನೆ ಸಂಬಂಧ 7 ಕೇಸ್ ಬಾಕಿ ಇದ್ದು, 2000 ರು. ದಂಡ ಪಾವತಿಸಬೇಕಿದೆ ಎಂದು ಬರೆಯಲಾಗಿತ್ತು. ಸಿದ್ದರಾಮಯ್ಯ ಅವರು ತಮ್ಮ ಕಾರಿನ ಮೇಲೆ ಹಾಕಲಾಗಿರುವ ದಂಡವನ್ನು ಪೂರ್ತಿಯಾಗಿ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಕಾರಿನ ಮೇಲೆ 2,000 ರೂ. ದಂಡ, ಫೈನ್ ಕಟ್ಟಿ ಮಾದರಿಯಾದ ಸಿದ್ದರಾಮಯ್ಯ

-

ಹರೀಶ್‌ ಕೇರ ಹರೀಶ್‌ ಕೇರ Sep 6, 2025 7:22 AM

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಬಳಸುವ ಸರ್ಕಾರಿ ಕಾರಿನ (car) ಮೇಲೆ ಸಂಚಾರ ನಿಯಮ ಉಲ್ಲಂಘನೆ ( ಪ್ರಕರಣಗಳ ಮೇಲೆ 2000 ರು. ದಂಡ (fine) ಪಾವತಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಎಕ್ಸ್ ತಾಣದಲ್ಲಿ ‘ಆರ್‌ಸಿ ಬೆಂಗಳೂರು’ ಹೆಸರಿನ ಖಾತೆಯಲ್ಲಿ ಮುಖ್ಯಮಂತ್ರಿ ಕಾರಿನ ಫೋಟೋ ಪೋಸ್ಟ್ ಹಾಕಲಾಗಿದೆ.‌

ಸಿಎಂ ಸರ್ಕಾರಿ ಕಾರು ಕೆಎ-05, ಜಿಎ- 2023 ಕಾರಿನ ಮೇಲೆ ನಿಯಮ ಉಲ್ಲಂಘನೆ ಸಂಬಂಧ 7 ಕೇಸ್ ಬಾಕಿ ಇದ್ದು, 2000 ರು. ದಂಡ ಪಾವತಿಸಬೇಕಿದೆ ಎಂದು ಬರೆಯಲಾಗಿತ್ತು. ಈ ಪೈಕಿ 6 ಸಲ ಸೀಟ್ ಬೆಲ್ಟ್ ಧರಿಸದೆ, ಒಮ್ಮೆ ವೇಗವಾಗಿ ಚಾಲನೆ ಮಾಡಿದ್ದಕ್ಕೆ ದಂಡ ಬಿದ್ದಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾರಿನ ಮೇಲೆ ಹಾಕಲಾಗಿರುವ ದಂಡವನ್ನು ಪೂರ್ತಿಯಾಗಿ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.