Kammaragatte Karnika: ಶಿಖರದ ತುದಿಗೆ ಘಟಸರ್ಪ ಅಡೀತ್ರಲೆ, ಭೂಲೋಕದ ಮುತ್ತು ಗಗನಕೇರೀತ್ರಲೇ: ಕಾರ್ಣಿಕ ನುಡಿದ ಕಮ್ಮಾರಗಟ್ಟೆ ಪೂಜಾರಿ
Kammaragatte Karnika: ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಆಂಜನೇಯ ಸ್ವಾಮೀ ಹಾಗೂ ಕಮ್ಮಾರಗಟ್ಟೆ ಗಿರಿಯಮ್ಮನ ಪುಣ್ಯಕ್ಷೇತ್ರದ ಅಂಜನೇಯನ ಪೂಜಾರಿ ಕಾರ್ಣಿಕ ನುಡಿದಿದ್ದಾರೆ. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಬಹುದು, ಏನು ಬೇಕಾದರೂ ಆಗಬಹುದು ಎಂಬರ್ಥದಲ್ಲಿ ಭಕ್ತರು ವಿಶ್ಲೇಷಿಸುತ್ತಿದ್ದಾರೆ. ಜತೆಗೆ, ಬೆಳೆ ಹಾಗೂ ದಿನಸಿ ಬೆಲೆ ಹೆಚ್ಚಾಗಲಿದೆ ಎಂಬ ಸೂಚನೆ ಇದು ಎನ್ನಲಾಗಿದೆ.


ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಆಂಜನೇಯ ಸ್ವಾಮಿ ಹಾಗೂ ಕಮ್ಮಾರಗಟ್ಟೆ ಗಿರಿಯಮ್ಮನ ಪುಣ್ಯಕ್ಷೇತ್ರದ ಪೂಜಾರಿ ಗುಂಡ್ಯಪ್ಪ ಈ ಬಾರಿಯ ಕಾರ್ಣಿಕ (Kammaragatte Karnika) ನುಡಿದಿದ್ದಾರೆ. ಕಮ್ಮಾರಗಟ್ಟೆಯ ಹೊಳೆಯಾತ್ರೆಯಲ್ಲಿ ಗಣಮಗ ಸಂಪ್ರದಾಯದಂತೆ ಕಾರ್ಣಿಕ ನುಡಿಯಲಾಯಿತು. ವಿವಿಧ ಗ್ರಾಮಗಳ ಸುಮಾರು ಹತ್ತು ದೇವರುಗಳು ಹೊಳೆಯಾತ್ರೆಯಲ್ಲಿ ಭಾಗಿಯಾಗಿದ್ದವು.
"ಶಿಖರದ ತುದಿಗೆ ಘಟಸರ್ಪ ಅಡೀತ್ರಲೆ, ಭೂಲೋಕದ ಮುತ್ತು ಗಗನಕೇರೀತ್ರಲೇ" ಎಂಬ ಕಾರ್ಣಿಕ ವಾಣಿಯನ್ನು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಬಹುದು, ಏನು ಬೇಕಾದರೂ ಆಗಬಹುದು ಎಂಬರ್ಥದಲ್ಲಿ ಭಕ್ತರು ವಿಶ್ಲೇಷಿಸುತ್ತಿದ್ದಾರೆ. ಜತೆಗೆ, ಬೆಳೆ ಹಾಗೂ ದಿನಸಿ ಬೆಲೆ ಹೆಚ್ಚಾಗಲಿದೆ ಎಂಬ ಸೂಚನೆ ಇದು ಎನ್ನಲಾಗಿದೆ. ‘ಭೂಲೋಕದ ಮುತ್ತು ಗಗನಕೇರೀತ್ರಲೇ’ ಎಂಬುದನ್ನು, ಏನೇ ಆದರೂ ದೇವರಿದ್ದಾನೆ ಭಯಪಡಬೇಡಿ ಎಂದು ಅಭಯ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ | Roopa Gururaj Column: ದಾನ ಮಾಡಿದ ಅಕ್ಕಿಯ ಕಾಳು ಬಂಗಾರವಾದಾಗ
ಮಂತ್ರಾಲಯ ಹುಂಡಿ ಎಣಿಕೆ; ದಾಖಲೆಯ ಕಾಣಿಕೆ, ಚಿನ್ನ- ಬೆಳ್ಳಿ ಸಂಗ್ರಹ
ಮಂತ್ರಾಲಯ(ರಾಯಚೂರು): ಭಕ್ತರ ಪಾಲಿನ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ (Mantralaya Shri Raghavendra Swamy Matha) ಭಕ್ತರು ಸಲ್ಲಿಸಿದ ಹುಂಡಿಯ ಕಾಣಿಕೆ ದಾಖಲೆಯ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಐದು ಕೋಟಿ ರೂ.ಗೂ ಅಧಿಕ ನಗದು ಮತ್ತು ಚಿನ್ನ ಮತ್ತು ಬೆಳ್ಳಿ ಕಾಣಿಕೆಯನ್ನು ಸಂಗ್ರಹಿಸಲಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ಶ್ರೀಮಠದ ಸಿಬ್ಬಂದಿಯಿಂದ ಬೆಳಗ್ಗೆಯಿಂದ ಎಣಿಕೆ ಕಾರ್ಯ ಆರಂಭವಾಗಿತ್ತು. ಸಂಜೆ ಆರು ಗಂಟೆ ಸುಮಾರಿಗೆ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 5 ಕೋಟಿ 30 ಲಕ್ಷದ 97 ಸಾವಿರದ 555 ರೂಪಾಯಿ ಕರೆನ್ಸಿ (5,30,97,555), 15 ಲಕ್ಷದ 14 ಸಾವಿರ ನಾಣ್ಯಗಳು ಸೇರಿ ಒಟ್ಟು 5 ಕೋಟಿ 46 ಲಕ್ಷದ 6 ಸಾವಿರದ 555 ರೂಪಾಯಿ (5,46,06,555) ಮತ್ತು 127 ಗ್ರಾಂ ಚಿನ್ನ ಹಾಗೂ 1,820 ಗ್ರಾಂ ಬೆಳ್ಳಿಯನ್ನು ಭಕ್ತರು ತಮ್ಮ ಆರಾಧ್ಯ ದೈವ ರಾಘವೇಂದ್ರ ಸ್ವಾಮಿ ಹುಂಡಿಗೆ ಸಮರ್ಪಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.