ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokayukta Raid: ಬೆಳ್ಳಂಬೆಳಗ್ಗೆಯೇ ಮೆಗಾ ಲೋಕಾಯುಕ್ತ ರೈಡ್‌, ರಾಜ್ಯಾದ್ಯಂತ 69 ಕಡೆ ದಾಳಿ

Lokayukta raid: ದಾಳಿ ಹಾಗೂ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಹಲವು ಅಧಿಕಾರಿಗಳು ಎರಡಕ್ಕಿಂತ ಹೆಚ್ಚು ಕಡೆ ಐಷಾರಾಮಿ ಮನೆಗಳು, ಔಟ್‌ಹೌಸ್‌ಗಳು, ಫ್ಯಾಕ್ಟರಿಗಳು, ಆಸ್ತಿಗಳನ್ನು ಹೊಂದಿದ್ದು, ಎಲ್ಲ ಕಡೆಗಳಿಗೂ ಲೋಕಾಯುಕ್ತ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ.

ಬೆಳ್ಳಂಬೆಳಗ್ಗೆಯೇ ಮೆಗಾ ಲೋಕಾಯುಕ್ತ ರೈಡ್‌, ರಾಜ್ಯಾದ್ಯಂತ 69 ಕಡೆ ದಾಳಿ

-

ಹರೀಶ್‌ ಕೇರ ಹರೀಶ್‌ ಕೇರ Sep 10, 2025 8:53 AM

ಬೆಂಗಳೂರು : ರಾಜ್ಯದ 69ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಮೆಗಾ ದಾಳಿ (Lokayukta Raid) ನಡೆಸಿದ್ದಾರೆ. ಅಕ್ರಮ ಆಸ್ತಿ ಸಂಪಾದಿಸಿದ ಆರೋಪದ ಮೇರೆಗೆ ಹಲವು ಅಧಿಕಾರಿಗಳ ಮನೆ- ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ (Officers) ಬಿಗ್ ಶಾಕ್ ಎದುರಾಗಿದ್ದು, ರಾಜ್ಯಾದ್ಯಂತ 69 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಲವು ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ಲೋಕಾಯುಕ್ತ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ದಾಳಿ ಹಾಗೂ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಹಲವು ಅಧಿಕಾರಿಗಳು ಎರಡಕ್ಕಿಂತ ಹೆಚ್ಚು ಕಡೆ ಐಷಾರಾಮಿ ಮನೆಗಳು, ಔಟ್‌ಹೌಸ್‌ಗಳು, ಆಸ್ತಿಗಳನ್ನು ಹೊಂದಿದ್ದು, ಎಲ್ಲ ಕಡೆಗಳಿಗೂ ಲೋಕಾಯುಕ್ತ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ.

ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ 21.43 ಕೆಜಿ ಚಿನ್ನದ ಬಿಸ್ಕೆಟ್‌, 10.98 ಕೆಜಿ ಚಿನ್ನಲೇಪಿತ ಬೆಳ್ಳಿ ಗಟ್ಟಿ ಜಪ್ತಿ!

ಬೆಂಗಳೂರು: ಅಕ್ರಮ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ (ED Raid) ಅವರ ಮನೆಯ ಮೇಲೆ ಸೆ.6ರಂದು ನಡೆಸಿದ್ದ ದಾಳಿ ವೇಳೆ ಬರೋಬ್ಬರಿ 21.43 ಕೆಜಿ ಚಿನ್ನದ ಬಿಸ್ಕೆಟ್‌ಗಳು, 10.98 ಕೆಜಿ ಚಿನ್ನಲೇಪಿತ ಬೆಳ್ಳಿ ಗಟ್ಟಿಗಳು, 24 ಕೋಟಿ ಮೌಲ್ಯದ 1 ಕೆಜಿ ಚಿನ್ನಾಭರಣಗಳನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಡಿ ಮಾಹಿತಿ ಹಂಚಿಕೊಂಡಿದೆ. ಕೆ.ಸಿ. ವೀರೇಂದ್ರ ಮತ್ತು ಇತರರ ವಿರುದ್ಧ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿ ಪಿಎಂಎಲ್‌ಎ ಕಾಯ್ದೆ 2002ರಡಿ ಬೆಂಗಳೂರಿನ ಇಡಿಯಿಂದ, ಚಳ್ಳಕೆರೆಯಲ್ಲಿ ಸೆ.6ರಂದು ದಾಳಿ ನಡೆಸಲಾಗಿತ್ತು. ಈ ವೇಳೆ ವಶಕ್ಕೆ ಪಡೆದ ವಸ್ತುಗಳು ಸೇರಿ ಈವರೆಗೆ ಜಪ್ತಿ ಮಾಡಿರುವ ಒಟ್ಟಾರೆ ಸ್ವತ್ತುಗಳ ಮೌಲ್ಯ 100 ಕೋಟಿ ರೂ.ಗಳನ್ನು ಮೀರಿದೆ ಎಂದು ಇಡಿ ಹೇಳಿದೆ.

ಇದನ್ನೂ ಓದಿ: Murder Case: ಪ್ರೇಮ ಪ್ರಕರಣ, ರೈಲಿನಡಿಗೆ ತಳ್ಳಿ ಯುವಕನ ಕೊಲೆ