ತುಮಕೂರು ವಿವಿಯಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತಾ ಸಮಾವೇಶ
ತುಮಕೂರಿನಲ್ಲಿ ಪ್ರಥಮ ಬಾರಿಗೆ ನಾವೀನ್ಯತೆ ಮತ್ತು ಉದ್ಯಮಶೀಲತಾ ಸಮಾವೇಶವನ್ನು ತುಮಕೂರು ವಿಶ್ವವಿದ್ಯಾಲಯದ ಇಂಕ್ಯುಬೇಶನ್ ಸೆಂಟರ್ (TIIEC) ವತಿಯಿಂದ ಸೆ.13 ಮತ್ತು 14 ರಂದು ‘ಅನ್ವಯ 2025 – ಅಂತಾರಾಷ್ಟ್ರೀಯ ನಾವೀನ್ಯತೆ ಮತ್ತು ಉದ್ಯಮಶೀಲತಾ ಸಮಾವೇಶ’ ಕಾರ್ಯಕ್ರಮವನ್ನು ತುಮಕೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.

-

ಈ ಸಮಾವೇಶವು ನಾವೀನ್ಯತೆ, ಉದ್ಯಮಶೀಲತೆ ಮತ್ತು ಸಹಭಾಗಿತ್ವಗಳಿಗೆ ವೇದಿಕೆಯಾಗಲಿದ್ದು, ಆಸಕ್ತ ನವೋದ್ಯಮಿಗಳು www.anvayaevents.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಭಾಗವಹಿಸಿ. ಈ ಕಾರ್ಯಕ್ರಮದಲ್ಲಿ ಹೊಸ ಉದ್ಯಮಶೀಲತೆಯ ಕುರಿತಂತೆ ಹಲವು ವಿಚಾರ ಗೋಷ್ಠಿಗಳು ಮತ್ತು ಚರ್ಚೆಗಳು ನಡೆಯಲಿವೆ. ದೇಶದ ವಿವಿಧ ಸ್ಟಾರ್ಟ್‌ಅಪ್ ಸಂಸ್ಥಾಪಕರು, ಹೂಡಿಕೆದಾರರು, ಕೈಗಾರಿಕೋದ್ಯಮಿಗಳು, ಕಾನೂನು ತಜ್ಞರು ಮತ್ತು ಸಂಶೋಧಕರು ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಮೂಲಕ ತಮ್ಮ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಬಳಸಿಕೊಂಡು ಪರಿಣಾಮಕಾರಿ ಬದಲಾವಣೆ ತರಲು ಸಹಾಯವಾಗಲಿದೆ.
ಸ್ಟಾರ್ಟ್‌ಅಪ್‌ಗಳು, ಮಹಿಳಾ ಉದ್ಯಮಿಗಳು ಮತ್ತು ಯುವಕರಿಗೆ ಸೂಕ್ತವಾದ ವೇದಿಕೆಯಗಲಿದೆ. ತಮ್ಮ ಹೊಸ ಆಲೋಚನೆ, ಯೋಜನೆಗಳಿಗೆ ಹೂಡಿಕೆದಾರರೊಂದಿಗೆ ನೇರ ಸಂಪರ್ಕ, ಸಹಭಾಗಿತ್ವ, ಉದ್ಯಮ ವಿಸ್ತರಣೆ ಹಾಗೂ ನೆಟ್‌ವರ್ಕಿಂಗ್ ಮಾಡುವ ಅನನ್ಯ ಅವಕಾಶಕ್ಕೆ ವೇದಿಕೆಯಲ್ಲಿದೆ.
ಉದ್ಯಮದಲ್ಲಿ ಬೆಳೆಯುತ್ತಿರುವ ತುಮಕೂರಿನಲ್ಲಿ ವಿಶೇಷ ಬಿಸಿನೆಸ್ ನೆಟ್‌ವರ್ಕಿಂಗ್ ವಲಯ ಮತ್ತು ಹೂಡಿಕೆದಾರರ ಸಂವಾದಕ್ಕೆ ಈ ಕಾರ್ಯಕ್ರಮ ವೇದಿಕೆಯಗಲಿದೆ. ತುಮಕೂರು ಇನೋವೇಷನ್, ಇಂಕ್ಯುಬೇಶನ್ ಮತ್ತು ಎಂಟಪ್ರನರ್‌ಶಿಪ್ ಕೌನ್ಸಿಲ್ (TIIEC) ತುಮಕೂರು ವಿಶ್ವವಿದ್ಯಾನಿಲಯದ ನವೀನ್ಯತಾ ಸಂಸ್ಥೆಯಾಗಿದ್ದು, ಕಾಪ್ರಾಡ್ ಇಂಡಸ್ಟ್ರೀಸ್ ಸಹಕಾರದೊಂದಿಗೆ ಸ್ಥಾಪಿಸಲ್ಪಟ್ಟಿದೆ. ONFYX, ಇಷಾ ಔಟ್‌ರೀಚ್ ಮತ್ತು ಫುಡ್ ಚೈನ್ ಕ್ಯಾಂಪೇನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯು ತ್ತಿರುವ ಈ ಎರಡು ದಿನಗಳ ಸಮಾವೇಶದಲ್ಲಿ 500 ಕ್ಕೂ ಹೆಚ್ಚು ಉದ್ಯಮಿಗಳು, 30 ಕ್ಕೂ ಹೆಚ್ಚು ರಾಷ್ಟ್ರಮಟ್ಟದ ವಕ್ತಾರರು, ಅನೇಕ ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳು ಭಾಗವಹಿಸ ಲಿದ್ದಾರೆ.