Wedding Package: ಕಡಿಮೆ ಖರ್ಚಿನಲ್ಲಿ ಮದುವೆಯಾಗುವವರಿಗೆ ವಿಶೇಷ ʼವೆಡ್ಡಿಂಗ್ ಪ್ಯಾಕೇಜ್ʼ; ಕೇವಲ 1.50 ಲಕ್ಷ ಇದ್ರೆ ಸಾಕು!
Wedding Package: ಇವೆಂಟ್ ಆರ್ಗನೈಸರ್ ಮೈಸೂರು ಮನೀಶ್ ಅವರು ಈ ವಿಶೇಷ ಮದುವೆ ಪ್ಯಾಕೇಜ್ ಪರಿಚಯಿಸಿದ್ದಾರೆ. ಮದುವೆ ಕಾರ್ಯಕ್ರಮವನ್ನು ಕೇವಲ 1.5 ಲಕ್ಷ ರೂ.ಗಳಲ್ಲಿ ಸಂಪೂರ್ಣವಾಗಿ ನಾವೇ ವಹಿಸಿಕೊಂಡು ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ. ಮದುವೆ ಪ್ಯಾಕೇಜ್‌ನಲ್ಲಿ ಏನೆಲ್ಲಾ ವ್ಯವಸ್ಥೆ ಇರಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.


ಬೆಂಗಳೂರು: ಶ್ರೀಮಂತರು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವಿವಾಹವಾಗುತ್ತಾರೆ. ಆದರೆ, ಎಲ್ಲರೂ ಹಾಗೆಯೇ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕಡಿಮೆ ಖರ್ಚಿನಲ್ಲಿ, ಸರಳವಾಗಿ ಮದುವೆಯಾಗಲು ಬಯಸುವವರಿಗೆ ಇಲ್ಲೊಂದು ವಿಶೇಷ ಫ್ಯಾಕೇಜ್ ಇದೆ. ಬಡ ಜನತೆಗಾಗಿ ಕಡಿಮೆ ದರದಲ್ಲಿ ಮದುವೆ (Wedding Package) ಮಾಡಿಸಲು ಯೋಚಿಸಿರುವ ಪೋಷಕರಿಗಾಗಿ, ಒಂದು ದಿನದ ಮದುವೆಯ ಕಾರ್ಯಕ್ರಮವನ್ನು ಅತಿ ಕಡಿಮೆ ಖರ್ಚಿನಲ್ಲಿ ಮಾಡಿಕೊಡುವುದಾಗಿ ಇವೆಂಟ್ ಆರ್ಗನೈಸರ್ ಒಬ್ಬರು ತಿಳಿಸಿದ್ದಾರೆ.
ಇವೆಂಟ್ ಆರ್ಗನೈಸರ್ ಮೈಸೂರು ಮನೀಶ್ ಅವರು ಈ ವಿಶೇಷ ಮದುವೆ ಪ್ಯಾಕೇಜ್ ಪರಿಚಯಿಸಿದ್ದಾರೆ. ಮದುವೆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಾವೇ ವಹಿಸಿಕೊಂಡು ಮಾಡಿಕೊಡುತ್ತೇವೆ. ಬಡವರು ಅಥವಾ ಸರಳವಾಗಿ ಮದುವೆಯಾಗುವವರು ಇದ್ದರೆ (ಮೊ. 9342183867) ತಮ್ಮನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಏನೆಲ್ಲಾ ವ್ಯವಸ್ಥೆ ಇರಲಿದೆ?
- ಒಂದು ದಿನದ ಮಿನಿ ಫಂಕ್ಷನ್ ಹಾಲ್, ಬೆಳಗ್ಗೆ 6 ರಿಂದ ಮಧ್ಯಾಹ್ನ 4 ರತನಕ
- ಬೆಳಗ್ಗೆ 100 ಜನಕ್ಕೆ ತಿಂಡಿ, ಮಧ್ಯಾಹ್ನ 150 ಜನಕ್ಕೆ ಮಧ್ಯಾಹ್ನದ ಊಟ
- ಪೋಟೋಗ್ರಫಿ, ಒಂದು ಆಲ್ಬಮ್ ಕೊಡಲಾಗುವುದು ಮತ್ತು ವಿಡಿಯೊಗ್ರಫಿ ಮಾಡಿಕೊಡಲಾಗುವುದು.
- ಒಂದು ಸರಳವಾದ ವೇದಿಕೆಯ ಮೇಲೆ ಡೆಕೊರೇಶನ್ ಮಾಡಿಕೊಡಲಾಗುವುದು.
- ನಾದಸ್ವರ ಮತ್ತು ಡೋಲು ಮದುವೆಗೆ.
- ಒಬ್ಬರು ಪುರೋಹಿತರನ್ನು ನೇಮಿಸಲಾಗುವುದು.
ಈ ಮೇಲಿನ ಮೇಲೆ ಹೇಳಿದ ಎಲ್ಲವೂ ಕೇವಲ 1.5 ಲಕ್ಷ ರೂಪಾಯಿಯಲ್ಲಿ ಒಳಗೊಂಡಿರುತ್ತದೆ. ಮದುವೆ ಕಾರ್ಯಕ್ಕೆ ಬೇಕಾಗುವ ಹೂವು ಹಣ್ಣು ಪೂಜಾ ಸಾಮಗ್ರಿ ಗಳನ್ನು ಪೋಷಕರೇ ತರಬೇಕು.ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ ಮೊ. 9342183867 ಸಂಪರ್ಕಿಸಿ ಎಂದು ಇವೆಂಟ್ ಆರ್ಗನೈಸರ್ ಮೈಸೂರು ಮನೀಶ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ವಧು ಮತ್ತು ವರ ಇಬ್ಬರೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಚಿನ್ನದ ತಾಳಿಯನ್ನು ಸಾಂಪ್ರದಾಯಿಕ ಬಟ್ಟೆ ಸೀರೆ ಹಾಗೂ ಛತ್ರಿ, ಪೇಟಾ, ಗಾಜಿನ ಬಳೆ, ಅರಿಶಿನ-ಕುಂಕುಮ ನೀಡಲಾಗುವುದು.

ಈ ಸುದ್ದಿಯನ್ನೂ ಓದಿ | Vishwavani Book Release: ಮದುವೆಯ ಸುದ್ದಿ ವಿಶ್ವವಾಣಿಯಲ್ಲಿ ಬ್ರೇಕ್ ಆಗಿದ್ದರ ಹಿಂದಿನ ರಹಸ್ಯ ಬಹಿರಂಗಪಡಿಸಿದ ಸಂಸದ ತೇಜಸ್ವಿ ಸೂರ್ಯ!