ಬೆಂಗಳೂರು ವಿಮಾನ ನಿಲ್ದಾಣ ಸೇವಾ ನಿಯಮಿತ ವತಿಯಿಂದ ತಿರುಚಿನಾಪಳ್ಳಿ ವಿಮಾನ ನಿಲ್ದಾಣದಲ್ಲಿ ಓ’ವೆಟ್ರಾ ಲೌಂಜ್ ಪ್ರಾರಂಭ
ಸೌಕರ್ಯ, ಸಂಸ್ಕೃತಿ ಮತ್ತು ಅನುಕೂಲತೆಯ ಸಮ್ಮಿಶ್ರಣವನ್ನು ಒದಗಿಸುವಂತೆ ವಿನ್ಯಾಸಗೊಳಿಸ ಲಾದ ಓ’ವೆಟ್ರಾ, ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ಸಜ್ಜಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಮೊದಲು ವಿಶ್ರಾಂತಿ, ಊಟ ಮತ್ತು ಅತ್ಯುತ್ತಮ ಅನುಭವ ಪಡೆಯುವ ವಿಧಾನವನ್ನು ಈ ಸೌಲಭ್ಯವನ್ನು ಒದಗಿಸಲಿದೆ.


ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್) ಅಂಗಸಂಸ್ಥೆಯಾದ ಬೆಂಗಳೂರು ವಿಮಾನ ನಿಲ್ದಾಣ ಸೇವಾ ನಿಯಮಿತ (ಬಿಎಎಸ್‌ಎಲ್) ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಲೌಂಜ್ ಓ’ವೆಟ್ರಾವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಸೌಕರ್ಯ, ಸಂಸ್ಕೃತಿ ಮತ್ತು ಅನುಕೂಲತೆಯ ಸಮ್ಮಿಶ್ರಣವನ್ನು ಒದಗಿಸುವಂತೆ ವಿನ್ಯಾಸಗೊಳಿಸ ಲಾದ ಓ’ವೆಟ್ರಾ, ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ಸಜ್ಜಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಮೊದಲು ವಿಶ್ರಾಂತಿ, ಊಟ ಮತ್ತು ಅತ್ಯುತ್ತಮ ಅನುಭವ ಪಡೆಯುವ ವಿಧಾನವನ್ನು ಈ ಸೌಲಭ್ಯವನ್ನು ಒದಗಿಸಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ 080 ಲೌಂಜ್‌ಗಳು ಹಲವು ಉನ್ನತ ಪ್ರಶಸ್ತಿಗಳನ್ನು ಗಳಿಸಿದ ಸೇವಾ ಶ್ರೇಷ್ಠತೆಯ ಮೇಲೆ ನಿರ್ಮಿಸಲಾದ ಹೊಸ ಲೌಂಜ್, ಸೊಗಸಾದ ಮತ್ತು ಸ್ವಾಗತಾರ್ಹ ವಾತಾವರಣದೊಂದಿಗೆ ತಿರುಚ್ಚಿ ವಿಮಾನ ನಿಲ್ದಾಣದ ಆತಿಥ್ಯಕ್ಕೆ ಹೊಸ ಆಯಾಮ ನೀಡಲಿದೆ.
ಇದನ್ನೂ ಓದಿ: Kiran Upadhyay Column: ಇವರು ಬಾಲ ಶಾಸ್ತ್ರಿ
ತಿರುಚಿರಾಪಳ್ಳಿಯ ಸಾಂಸ್ಕೃತಿಕ ರಚನೆಗೆ ಅನುಗುಣವಾಗಿರುವ ಹೊಸ ಲೌಂಜ್, ಸ್ಥಳೀಯ ಕಲೆ, ವಾಸ್ತುಶಿಲ್ಪ ಮತ್ತು ವಸ್ತುಗಳಿಂದ ಪಡೆದ ವಿನ್ಯಾಸ ಅಂಶಗಳ ಮೂಲಕ ನಗರದ ಗುರುತನ್ನು ಪ್ರತಿಬಿಂಬಿಸುತ್ತದೆ. ಕೋಲಂ ಪ್ರೇರಿತ ಸ್ವಾಗತ ಗೋಡೆಯು ಅತಿಥಿಗಳನ್ನು ಸಂಪ್ರದಾಯಬದ್ಧವಾಗಿ ಸ್ವಾಗತಿಸುತ್ತದೆ. ಮೃದುವಾದ ನೀಲಿ ನೆಲಹಾಸು ಕಾವೇರಿ ನದಿಯ ಹರಿವನ್ನು ಪ್ರತಿಬಿಂಬಿಸುತ್ತದೆ. ಕೈಯಿಂದ ಮಾಡಿದ ಕಬ್ಬಿನ ಮತ್ತು ಬಿದಿರಿನ ಚಿಟೈ ವಿವರಗಳು ಮೇಲ್ಛಾವಣಿಯನ್ನು ಅಲಂಕರಿಸುತ್ತವೆ.
ಟೆರಾಕೋಟಾ ಕಲೆ ಮತ್ತಿತರ ಅಂಶಗಳು ರಾಕ್‌ಫೋರ್ಟ್ ದೇವಾಲಯಕ್ಕೆ ಗೌರವ ಸಲ್ಲಿಸುವುದಲ್ಲದೇ, ಸ್ಥಳೀಯ ಪರಂಪರೆಯನ್ನು ಜಾಗತಿಕ ಆಕರ್ಷಣೆಯೊಂದಿಗೆ ಸಂಯೋಜಿಸುತ್ತವೆ. ದೇಶೀಯ ಟರ್ಮಿನಲ್‌ನಲ್ಲಿ 450 ಚದರ ಮೀಟರ್ ಮತ್ತು ಅಂತಾರಾಷ್ಟ್ರೀಯ ಟರ್ಮಿನಲ್‌ನಲ್ಲಿ 620 ಚದರ ಮೀಟರ್ ವಿಸ್ತೀರ್ಣದಲ್ಲಿರುವ ಒ'ವೆಟ್ರಾ ಲೌಂಜ್‌ನ್ನು ಸೌಕರ್ಯ, ಪ್ರವೇಶದ ಸಾಧ್ಯತೆ ಮತ್ತು ಅರ್ಥಗರ್ಭಿತ ಸೇವೆಗೆ ಆದ್ಯತೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ದೇಶೀಯ ವಿಭಾಗದಲ್ಲಿ 107 ಅತಿಥಿಗಳು ಮತ್ತು ಅಂತಾರಾಷ್ಟ್ರೀಯ ವಿಭಾಗದಲ್ಲಿ 150 ಅತಿಥಿಗಳಿಗೆ ವಿಶ್ರಾಂತಿ ಕೊಠಡಿಗಳು ಅವಕಾಶ ಕಲ್ಪಿಸುತ್ತವೆ.
ಏಕಾಂಗಿ ಪ್ರಯಾಣಿಕರು ಮತ್ತು ಸಣ್ಣ ಗುಂಪುಗಳಿಗೆ ಅನುಗುಣವಾಗಿ ಲೌಂಜ್ ಆಸನ ವಿನ್ಯಾಸ ಗಳನ್ನು ಹೊಂದಿದೆ. ಬಿಎಎಸ್‌ಎಲ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಜಾರ್ಜ್ ಕುರುವಿಲ್ಲಾ ಅವರು ಮಾತನಾಡಿ, "ಬಿಎಎಸ್‌ಎಲ್ ನಲ್ಲಿ ನಮ್ಮ ದೃಷ್ಟಿಕೋನವು ಕೆಲಸಕ್ಕಷ್ಟೇ ಸೀಮಿತವಾಗದೇ, ಆಯಾ ಪ್ರದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ಥಳಗಳನ್ನು ಮತ್ತು ಪ್ರಯಾಣದ ಅನುಭವವನ್ನು ಉನ್ನತೀಕರಿಸುವ ವಿಶ್ರಾಂತಿ ಕೊಠಡಿಗಳನ್ನು ರಚಿಸುವುದಾಗಿದೆ. ನಾವು ಮೊದಲ ಬಾರಿಗೆ ಬೆಂಗಳೂರಿನಿಂದ ಆಚೆ ಈ ದೃಷ್ಟಿಕೋನವನ್ನು ವಿಸ್ತರಿಸುತ್ತಿದ್ದೇವೆ.
ಓ’ವೆಟ್ರಾ ನ ಪ್ರಾರಂಭವು ನಮ್ಮ ರೋಮಾಂಚಕಾರಿ ಹೊಸ ಅಧ್ಯಾಯವನ್ನು ಗುರುತಿಸುತ್ತದೆ. ಇದು ಚಿಂತನಶೀಲ, ಸಂಸ್ಕೃತಿಯಲ್ಲಿ ಬೇರೂರಿರುವ ಮತ್ತು ದೇಶಾದ್ಯಂತ ಆತಿಥ್ಯದ ಹೊಸ ಮಾನದಂಡ ವನ್ನು ರೂಪಿಸುವತ್ತ ಒಂದು ಹೆಜ್ಜೆಯಾಗಿದೆ” ಎಂದು ತಿಳಿಸಿದರು. ಉನ್ನತ ಮಟ್ಟದ ಪಾಕಶಾಲೆ ಗಳಿಂದ ಹಿಡಿದು, ಅಂತರ್ಗತವಾದ- ಪ್ರಯಾಣಿಕರ ಕೇಂದ್ರಿತ ವಿನ್ಯಾಸದವರೆಗೆ ಓ’ವೆಟ್ರಾ ನ ಪ್ರತಿಯೊಂದು ಅಂಶವೂ ಸಹ ಚಿಂತನಶೀಲ ಆತಿಥ್ಯದ ನೀತಿಯನ್ನು ಪ್ರತಿಬಿಂಬಿಸುತ್ತವೆ. ಅತಿಥಿಗಳು ಲೈವ್ ಪಾಕಶಾಲೆ, ಬಫೆ, ಜಾಗತಿಕ ಮತ್ತು ಪ್ರಾದೇಶಿಕತೆಯ ಸಮ್ಮಿಲನದಿಂದ ಸಂಯೋಜನೆಗೊಂಡ ಬಾರ್ ಪ್ರದೇಶಗಳನ್ನು ಆನಂದಿಸಬಹುದಾಗಿದೆ.
ತಾಜಾ ಹಾಗೂ ಸ್ಥಳೀಯ ಪದಾರ್ಥಗಳಿಂದ ರಚಿಸಲಾದ ಮೆನು, ಉಪಹಾರ, ಊಟ, ಭೋಜನ ಮತ್ತು ಅತ್ಯುತ್ತಮ ಚಹಾದಂತಹ ವೈವಿಧ್ಯಮಯ ಆಹಾರಗಳನ್ನು ಹೊಸ ಲೌಂಜ್ ಪೂರೈಸುತ್ತದೆ. ಅಲ್ಲದೇ, ಅತ್ಯುತ್ತಮ ವೈವಿಧ್ಯತೆ ಹಾಗೂ ಗುಣಮಟ್ಟ ಎರಡನ್ನೂ ಖಚಿತಪಡಿಸುತ್ತದೆ. ವಿಶ್ರಾಂತಿ ಕೊಠಡಿಗಳು ಕಡಿಮೆ/ಸೀಮಿತ ಚಲನಶೀಲತೆ ಹೊಂದಿರುವ ಪ್ರಯಾಣಿಕರಿಗೆ ಅನುಗುಣವಾಗಿರುವ ಶೌಚಾಲಯಗಳೊಂದಿಗೆ ಸಂಪೂರ್ಣವಾಗಿ ಸಜ್ಜುಗೊಂಡಿವೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಶವರ್ ಸೌಲಭ್ಯಗಳು ಹೆಚ್ಚುವರಿಯಾಗಿ ಲಭ್ಯವಿದೆ.
ಉಚಿತ ಅತಿ ವೇಗದ ವೈಫೈ ಎಲ್ಲೆಡೆ ಲಭ್ಯವಿದ್ದು, ಅತಿಥಿಗಳು ಸಂಪರ್ಕದಲ್ಲಿರಲು, ಕೆಲಸ ಮಾಡಲು ಅಥವಾ ಸುಲಭವಾಗಿ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುತ್ತದೆ. ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರು ಬಿಎಎಸ್‌ಎಲ್ ಒದಗಿಸುವ ಮೀಟ್ & ಗ್ರೀಟ್ ಮತ್ತು ಪೋರ್ಟರ್ ಸೇವೆಯನ್ನು ಪಡೆಯುವ ಮೂಲಕ ತಮ್ಮ ವಿಮಾನ ನಿಲ್ದಾಣದ ಅನುಭವವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.