IND vs ENG: ನಾಲ್ಕನೇ ಟೆಸ್ಟ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಸ್ಥಾನಕ್ಕೆ ಸೂಕ್ತ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ!
ಇಂಗ್ಲೆಂಡ್ ವಿರುದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದರೆ, ಯುವ ವೇಗಿ ಅರ್ಷದೀಪ್ ಸಿಂಗ್‌ಗೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಬೇಕೆಂದು ಭಾರತೀಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಸಲಹೆ ನೀಡಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಂದು ಮ್ಯಾಂಚೆಸ್ಟರ್‌ನ ಓಳ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಜಸ್‌ಪ್ರೀತ್ ಬುಮ್ರಾ ಸ್ಥಾನಕ್ಕೆ ಸೂಕ್ತ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ.

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ದದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ (IND vs ENG) ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾಗೆ (Jasprit Bumrah) ವಿಶ್ರಾಂತಿ ನೀಡಿದರೆ, ಅವರ ಸ್ಥಾನದಲ್ಲಿ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್‌ಗೆ ಅವಕಾಶ ನೀಡಬೇಕೆಂದು ಭಾರತೀಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ (Ajinkya Rahane) ಸಲಹೆ ನೀಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಂದು ಆರಂಭವಾಗಲಿದೆ. ಈಗಾಗಲೇ ಎರಡು ಪಂದ್ಯಗಳನ್ನು ಸೋತಿರುವ ಭಾರತ ತಂಡ, ಈ ಟೆಸ್ಟ್ ಸರಣಿಯನ್ನು ಗೆಲ್ಲಬೇಕೆಂದರೆ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಬೇಕಾದ ಅಗತ್ಯವಿದೆ. ಇದರ ನಡುವೆ ನಾಲ್ಕನೇ ಟೆಸ್ಟ್‌ಗೆ ಬುಮ್ರಾಗೆ ವಿಶ್ರಾಂತಿ ನೀಡಿದರೆ ಪ್ರವಾಸಿಗರಿಗೆ ಹಿನ್ನಡೆಯಾಗಬಹುದು.
ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಸಲುವಾಗಿ ಜಸ್‌ಪ್ರೀತ್ ಬುಮ್ರಾಗೆ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಿಸಲಾಗುತ್ತದೆ ರೆಂದು ಈ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡದ ಟೀಮ್ ಮ್ಯಾನೇಜ್‌ಮೆಂಟ್ ರಿವೀಲ್ ಮಾಡಿತ್ತು. ಇದೀಗ ಜಸ್‌ಪ್ರೀತ್ ಬುಮ್ರಾ ಎರಡು ಪಂದ್ಯಗಳನ್ನು ಆಡಿದ್ದಾರೆ. ಇದೀಗ ಅವರಿಗೆ ಇನ್ನೊಂದೇ ಒಂದು ಪಂದ್ಯ ಬಾಕಿ ಮಾತ್ರ ಬಾಕಿ ಇದೆ. ಹಾಗಾಗಿ ಅವರು ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಆಡುವ ಬಗ್ಗೆ ಅನುಮಾನವಿದೆ. ಒಂದು ವೇಳೆ ಅವರು ವಿಶ್ರಾಂತಿ ಪಡೆದರೆ, ಅವರ ಸ್ಥಾನದಲ್ಲಿ ಯಾರು ಆಡಬಹುದೆಂಬ ಬಗ್ಗೆ ಭಾರಿ ಕುತೂಹಲವಿದೆ.
ENG vs IND: ಟೆಸ್ಟ್ ಕ್ರಿಕೆಟ್‌ನ ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿ ರವೀಂದ್ರ ಜಡೇಜಾ!
ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಜಿಂಕ್ಯ ರಹಾನೆ, ನಾಲ್ಕನೇ ಟೆಸ್ಟ್‌ಗೆ ಜಸ್‌ಪ್ರೀತ್ ಬುಮ್ರಾ ವಿಶ್ರಾಂತಿ ಪಡೆಯುವುದಾದರೆ, ಅವರ ಸ್ಥಾನಕ್ಕೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಸೂಕ್ತ ಆಯ್ಕೆ ಎಂದು ಹೇಳಿದ್ದಾರೆ. ಏಕೆಂದರೆ ಅರ್ಷದೀಪ್ ಸಿಂಗ್ ಚೆಂಡನ್ನು ಎರಡೂ ಹಾದಿಯಲ್ಲಿ ಸ್ವಿಂಗ್ ಮಾಡಬಲ್ಲರು ಎಂದು ತಿಳಿಸಿದ್ದಾರೆ.
"ಹೌದು, ಜಸ್‌ಪ್ರೀತ್ ಬುಮ್ರಾ ಆಡಿಲ್ಲವಾದರೆ, ಅವರ ಸ್ಥಾನಕ್ಕೆ ಸೂಕ್ತ ಆಟಗಾರ ಅರ್ಷದೀಪ್ ಸಿಂಗ್. ಏಕೆಂದರೆ ಇಂಗ್ಲೆಂಡ್‌ನಲ್ಲಿ ಎರಡೂ ಬದಿಯಲ್ಲಿ ಚೆಂಡನ್ನು ಸ್ವಿಂಗ್ ಮಾಡಬಲ್ಲ ಡಗೈ ವೇಗಿ ನಿಮಗೆ ಬೇಕಾಗುತ್ತದೆ ಹಾಗೂ ಅವರು ತಮ್ಮ ಎರಡೂ ಬದಿಯ ಸ್ವಿಂಗ್ ಮಾಡುವ ಮೂಲಕ ಸ್ಪಿನ್ನರ್‌ಗಳಿಗಾಗಿ ಪಿಚ್ ಅನ್ನು ಒರಟು ಮಾಡಬಹುದು. ಹಾಗಾಗಿ ಜಸ್‌ಪ್ರೀತ್ ಬುಮ್ರಾ ಆಡಿಲ್ಲವಾದರೆ, ಅರ್ಷದೀಪ್ ಸಿಂಗ್ ಆಡಲೇಬೇಕು," ಎಂದು ಅಜಿಂಕ್ಯ ರಹಾನೆ ತಿಳಿಸಿದ್ದಾರೆ.
IND vs ENG: ಕರುಣ್ ನಾಯರ್ ಔಟ್, ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XIನಲ್ಲಿ 2 ಬದಲಾವಣೆ ಸಾಧ್ಯತೆ!
ಅರ್ಷದೀಪ್ ಸಿಂಗ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 21 ಪಂದ್ಯಗಳಿಂದ 66 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತ ತಂಡದ ಪರ ವೈಟ್‌ಬಾಲ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದು ಬಾಕಿ ಇದೆ. ಆದರೆ, ಎಡಗೈ ವೇಗಿ ಅಭ್ಯಾಸದ ವೇಳೆ ತಮ್ಮ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಚೆಂಡನ್ನು ತಡೆಯುವ ವೇಳೆ ಅವರಿಗೆ ಗಾಯವಾಗಿದೆ ಎಂದು ಟೀಮ್ ಇಂಡಿಯಾ ಸಹಾಯಕ ಕೋಚ್ ಯಾನ್ ಟೆನ್ ಡಶಟ್ ತಿಳಿಸಿದ್ದರು.
"ಬೌಲಿಂಗ್ ವೇಳೆ ಚೆಂಡನ್ನು ತಡೆಯುವ ವೇಳೆ ಅರ್ಷದೀಪ್ ಸಿಂಗ್ ಅವರ ಕೈಗೆ ಚೆಂಡು ತಗುಲಿತ್ತು. ಅದು ಎಷ್ಟು ಗಂಭೀರವಾಗಿದೆ ಎಂಬುದು ಗೊತ್ತಿಲ್ಲ. ಭಾರತದ ವೈದ್ಯಕೀಯ ತಂಡ ಅರ್ಷದೀಪ್ ಸಿಂಗ್ ಅವರ ಗಾಯದ ಮೇಲೆ ನಿಗಾ ವಹಿಸಿದ್ದಾರೆ ಹಾಗೂ ಅವರಿಗೆ ಒಲಿಗೆ ಹಾಕಬೇಕಾ? ಅಥವಾ ಬೇಡವಾ? ಎಂದು ನೋಡಬೇಕು. ಇದಾದ ಬಳಿಕ ಮುಂದಿನ ಪಂದ್ಯಕ್ಕೆ ಅವರನ್ನು ಆಯ್ಕೆಗೆ ಪರಿಗಣಿಸಬೇಕಾ? ಅಥವಾ ಬೇಡವಾ? ಎಂದು ನೋಡಬೇಕಾಗುತ್ತದೆ," ಎಂದು ಸಹಾಯಕ ಕೋಚ್ ಹೇಳಿದ್ದಾರೆ.