ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru News: ಅಖಿಲ ಭಾರತ ಕರಾಟೆ ಸ್ಪರ್ಧೆಯಲ್ಲಿ ಸುಡೋಕನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಗೆ ಚಾಂಪಿಯನ್‌ಶಿಪ್

Bengaluru News: ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಅಖಿಲ ಭಾರತ ಓಪನ್‌ ಕರಾಟೆ 2025ರ ಸ್ಪರ್ಧೆಯಲ್ಲಿ ಸುಡೋಕನ್‌ ಮಾರ್ಷಲ್‌ ಆರ್ಟ್‌ ಅಕಾಡೆಮಿಯ ರೆನ್ಷಿ ಜೈನುಲ್‌ ಅಬಿದೀನ್‌ ನೇತೃತ್ವದ ತಂಡವು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್‌ಶಿಪ್‌ ತಮ್ಮದಾಗಿಸಿಕೊಂಡಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ 2ನೇ ಅಖಿಲ ಭಾರತ ಓಪನ್‌ ಕರಾಟೆ 2025 ಸ್ಪರ್ಧೆ

Profile Siddalinga Swamy Jul 31, 2025 5:37 PM

ಬೆಂಗಳೂರು: ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ (Bengaluru News) ನಡೆದ ಎರಡನೇ ಅಖಿಲ ಭಾರತ ಓಪನ್‌ ಕರಾಟೆ 2025ರ ಸ್ಪರ್ಧೆಯಲ್ಲಿ ಸುಡೋಕನ್‌ ಮಾರ್ಷಲ್‌ ಆರ್ಟ್‌ ಅಕಾಡೆಮಿಯ ರೆನ್ಷಿ ಜೈನುಲ್‌ ಅಬಿದೀನ್‌ ನೇತೃತ್ವದ ತಂಡವು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್‌ಶಿಪ್‌ ತಮ್ಮದಾಗಿಸಿಕೊಂಡಿದೆ. ವಿಸ್ಡಮ್ ಮಾರ್ಷಲ್ ಆರ್ಟ್ಸ್ ಕರಾಟೆ ಅಕಾಡೆಮಿಯು ಆಯೋಜಿಸಿದ್ದ ಈ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ದೇಶದಾದ್ಯಂತ ಉತ್ತಮ ಮಾರ್ಷಲ್ ಆರ್ಟ್‌ ಪಟುಗಳನ್ನು ಒಂದೆಡೆ ಸೇರಿಸಿತ್ತು. ಬಾಲ್ಡ್‌ವಿನ್‌ ಬಾಯ್ಸ್ ಹೈಸ್ಕೂಲ್, ಲೆಗಸಿ ಇಂಟರ್‌ ನ್ಯಾಷನಲ್ ಸ್ಕೂಲ್, ಪ್ಲೇ ಅರೇನಾ, ಏಕಂ ಸ್ಟುಡಿಯೋ ಮತ್ತು ಏಮ್ಸ್‌ ಪ್ರಿ ಸ್ಕೂಲ್‌ನಲ್ಲಿ ತರಬೇತಿ ಪಡೆಯುತ್ತಿರುವ ಸುಡೋಕನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಕಟಾ ಮತ್ತು ಕುಮಿಟೆ ಎರಡೂ ವಿಭಾಗಗಳಲ್ಲಿ ತಮ್ಮ ಅಪ್ರತಿಮ ಕೌಶಲ್ಯವನ್ನು ಪ್ರದರ್ಶಿಸಿದರು.

ಸ್ಪರ್ಧೆಯಲ್ಲಿ ಸುಡೋಕನ್‌ ಮಾರ್ಷಲ್‌ ಆರ್ಟ್‌ ಅಕಾಡೆಮಿಯ ತಂಡವು 5 ಚಿನ್ನ, 8 ಬೆಳ್ಳಿ ಮತ್ತು 12 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಹೆಚ್ಚಿನ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ತಂಡಕ್ಕೆ ಚಾಂಪಿಯನ್‌ಶಿಪ್‌ ಟ್ರೋಫಿ ಸಿಕ್ಕಿದೆ. ಕರಾಟೆ ಕಲಿಕೆಯಲ್ಲಿನ ಶಿಸ್ತು, ಏಕಾಗ್ರತೆ ಮತ್ತು ಶ್ರಮವು ಈ ವಿಜಯದ ಮೂಲಕ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ | Auto Fare Hike: ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ, ನಾಳೆಯಿಂದ ಜಾರಿ

ಸ್ಪರ್ಧೆಯಲ್ಲಿನ ಗೆಲುವಿಗೆ ನಿರಂತರವಾಗಿ ಬೆಂಬಲ ನೀಡಿ ಪ್ರೋತ್ಸಾಹಿಸಿದ ಅಖಿಲ ಕರ್ನಾಟಕ ಸ್ಪೋರ್ಟ್ಸ್‌ ಕರಾಟೆ ಅಸೋಸಿಯೇಷನ್‌ನ ಅಧ್ಯಕ್ಷ ಹನ್ಷಿ ಅರುಣ್ ಮಾಚಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ಭಾರ್ಗವ್ ರೆಡ್ಡಿ ಹಾಗೂ ಬಾಲ್ಡ್‌ವಿನ್‌ ಬಾಯ್ಸ್‌ ಹೈಸ್ಕೂಲ್‌ನ ಪ್ರಾಂಶುಪಾಲರಾದ ಡಾ. ಏಂಜೆಲ್‌ ಮೇರಿ ಅವರಿಗೆ ಅಕಾಡೆಮಿಯು ಧನ್ಯವಾದ ತಿಳಿಸಿದೆ.