ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಗ್ರಹಚಾರ ಕೆಟ್ರೆ ಹೀಗೂ ಆಗುತ್ತೆ! ಪೇಯಸಿಯನ್ನು ಕಾಣಲು ಹೋದವನ ಕಥೆ ಏನಾಯ್ತು ಗೊತ್ತಾ?

Young Man Allegedly Tied: ಗೆಳತಿಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋಗಿದ್ದಕ್ಕೆ ಯುವಕನೊಬ್ಬನಿಗೆ ಧರ್ಮದೇಟು ಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಯುವಕ ಬರುವ ವಿಚಾರ ಗೊತ್ತಾದ ಯುವತಿಯ ಕುಟುಂಬಸ್ಥರು, ಆತನನ್ನು ಹಿಡಿದು ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ.

ಮದರಸಿಯನ್ನು ಭೇಟಿಯಾಗೋಕೆ ಹೋದವನ ಕಥೆ ಏನಾಯ್ತು ಗೊತ್ತಾ?

-

Priyanka P Priyanka P Sep 13, 2025 5:41 PM

ಇಂದೋರ್: ಗೆಳತಿಯನ್ನು ಭೇಟಿಯಾಗಲು ಹೋದ ಯುವಕನೊಬ್ಬನನ್ನು ಆಕೆಯ ಕುಟುಂಬ ಸದಸ್ಯರು ಹಿಡಿದು, ಕಟ್ಟಿಹಾಕಿ, ಕ್ರೂರವಾಗಿ ಥಳಿಸಿದ ಘಟನೆ ಮಧ್ಯಪ್ರದೇಶ (Madhya Pradesh) ದ ಶಿಯೋಪುರ್ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ಪ್ರಕಾರ, ಈ ಘಟನೆ ಶಿಯೋಪುರ ಜಿಲ್ಲೆಯ ದಬೀಪುರ ಗ್ರಾಮದಲ್ಲಿ ನಡೆದಿದೆ. ಆ ವ್ಯಕ್ತಿಯು ಶಿವಪುರಿ ಜಿಲ್ಲೆಯ ಗುರಿಚಾ ಗ್ರಾಮದ ನಿವಾಸಿಯಾಗಿದ್ದು, ಆತ ದಬೀಪುರದ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಹೀಗಾಗಿ ಆಕೆಯನ್ನು ಭೇಟಿಯಾಗಲು ಅವಳ ಮನೆಗೆ ಹೋಗಿದ್ದನು. ಈ ವಿಚಾರ ಯುವತಿಯ ಕುಟುಂಬ ಸದಸ್ಯರಿಗೆ ತಿಳಿಯುತ್ತಿದ್ದಂತೆ ಅವನನ್ನು ಹಿಡಿದು ಹಗ್ಗದಿಂದ ಕೈಗಳನ್ನು ಕಟ್ಟಿ, ನಂತರ ಅವನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಈ ದೃಶ್ಯದ ವಿಡಿಯೊ ರೆಕಾರ್ಡ್‌ ಕೂಡ ಮಾಡಲಾಗಿದೆ.

ವಿಡಿಯೊ ವೀಕ್ಷಿಸಿ:



ವಿಡಿಯೊದಲ್ಲಿ, ಆ ವ್ಯಕ್ತಿ ಅಳುತ್ತಾ ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು. ಆದರೂ, ಕೂಡ ಯುವತಿಯ ಕುಟುಂಬಸ್ಥರು ಅವನ ಮೇಲೆ ಮತ್ತಷ್ಟು ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದವರು ಅವನಿಗೆ ಸಹಾಯ ಮಾಡುವ ಬದಲು ತಮ್ಮ ಫೋನ್‌ಗಳಲ್ಲಿ ವಿಡಿಯೊ ಚಿತ್ರೀಕರಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಅದಾಗಲೇ ಆ ವ್ಯಕ್ತಿ ಅಲ್ಲಿಂದ ಹೊರಟು ಹೋಗಿದ್ದ.

ಇನ್ನು ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ ರಾಕೇಶ್ ಶರ್ಮಾ, ವಿಷಯ ಬಹಳ ಗಂಭೀರವಾಗಿದ್ದು, ತನಿಖೆ ನಡೆಯುತ್ತಿದೆ. ಸತ್ಯ ಶೀಘ್ರದಲ್ಲೇ ಹೊರಬರಲಿದೆ. ತಪ್ಪಿತಸ್ಥರ ​​ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಇದೇ ರೀತಿಯ ಪ್ರತ್ಯೇಕ ಘಟನೆಯೊಂದು ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದಿತ್ತು. ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಆಕೆಗೆ ನಾಲ್ವರು ಮಹಿಳೆಯರು ಥಳಿಸಿರುವ ಆಘಾತಕಾರಿ ಘಟನೆ ನಡೆದಿತ್ತು. ಭೂ ವಿವಾದದಿಂದಾಗಿ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಈ ಕ್ರೂರ ಕೃತ್ಯದ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಕ್ರಮ ತೆಗೆದುಕೊಂಡಿದ್ದರು.

ಇದನ್ನೂ ಓದಿ: Viral Video: ಕಾರ್ಮಿಕನನ್ನು ತಲೆಕೆಳಗಾಗಿ ನೇತುಹಾಕಿ, ಗುತ್ತಿಗೆದಾರನಿಂದ ಥಳಿತ; ಅಮಾನವೀಯ ಕೃತ್ಯದ ವಿಡಿಯೊ ಇಲ್ಲಿದೆ