ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪುಟ್ಟ ಕಂದಮ್ಮನ ಪ್ರಾಣದ ಜೊತೆ ಈ ಪಾಪಿಗಳ ಚೆಲ್ಲಾಟ! ಎದೆ ಝಲ್ಲೆನಿಸೋ ವಿಡಿಯೊ ಇಲ್ಲಿದೆ

Woman throws baby from terrace: ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ವಿಡಿಯೊಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಅಂಥದ್ದೇ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಟೆರೇಸ್‍ನಿಂದ ನಿಂತ ಮಹಿಳೆಯರ ಗುಂಪಿನಲ್ಲಿ ಒಬ್ಬರು, ಮಗುವನ್ನು ಮೇಲಿನಿಂದ ಎಸೆದಿದ್ದಾರೆ. ಕೆಳಗೆ ನಿಂತಿದ್ದ ವ್ಯಕ್ತಿ ಮಗುವನ್ನು ಕ್ಯಾಚ್ ಹಿಡಿದಿದ್ದಾರೆ.

ಟೆರೇಸ್‌ನಿಂದ ಮಗುವನ್ನು ಎಸೆದ ಮಹಿಳೆ- ವಿಡಿಯೊ ನೋಡಿ

Priyanka P Priyanka P Aug 28, 2025 1:53 PM

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ವಿಡಿಯೊಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದು ನಿಜವಾಗಿಯೂ ಸಂಭವಿಸಿದೆಯೇ ಎಂಬುದು ಅಚ್ಚರಿಗೊಳಗಾಗುತ್ತಾರೆ. ಇದೀಗ ಅಂಥದ್ದೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ ಮನೆಯ ಟೆರೇಸ್‌ನಲ್ಲಿ ನಿಂತಿರುವ ಮಹಿಳೆಯರ ಗುಂಪನ್ನು ತೋರಿಸಲಾಗಿದೆ. ಅವರು ಮೆರವಣಿಗೆಯನ್ನು ನೋಡುತ್ತಿರುವುದನ್ನು ತೋರಿಸುತ್ತದೆ. ಆದರೆ, ಈ ವೇಳೆ ವಿಲಕ್ಷಣ ಘಟನೆಯೊಂದು ನಡೆದಿದೆ. ಘಟನೆಯ ವಿಡಿಯೊ ಭಾರೀ ವೈರಲ್‌(Viral Video) ಆಗುತ್ತಿದೆ

ಆ ಮಹಿಳೆಯರಲ್ಲಿ ಒಬ್ಬಳು ಟೆರೇಸ್‌ನ ಅಂಚಿನಲ್ಲಿ ಅಪಾಯಕಾರಿಯಾಗಿ ಒರಗಿಕೊಂಡು, ಕೈಯಲ್ಲಿ ಮಗುವನ್ನು ಹಿಡಿದುಕೊಂಡು ನಿಂತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ, ತನ್ನ ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದುಕೊಂಡಿದ್ದವಳು ಕೆಳಗೆ ನಿಂತಿದ್ದ ವ್ಯಕ್ತಿಯ ಕೈಗೆ ಎಸೆದಿದ್ದಾಳೆ. ಅದೃಷ್ಟವಶಾತ್, ಆ ವ್ಯಕ್ತಿ ಸರಿಯಾದ ಸಮಯದಲ್ಲಿ ಮಗುವನ್ನು ಹಿಡಿದುಕೊಳ್ಳಲು ಸಾಧ್ಯವಾಯಿತು. ಈ ವಿಡಿಯೊವನ್ನು ತೆಗೆದ ನಿಖರವಾದ ಸ್ಥಳವನ್ನು ನಿರ್ದಿಷ್ಟಪಡಿಸದಿದ್ದರೂ, ಅದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತ್ವರಿತವಾಗಿ ವೈರಲ್ ಆಗಿದೆ.

ವಿಡಿಯೊ ವೀಕ್ಷಿಸಿ:

ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಒಬ್ಬರು ಈ ಘಟನೆಯನ್ನು ನೋಡಿ ಆಘಾತಕ್ಕೊಳಗಾದರು. ನೀವು ಬ್ಲಿಂಕಿಟ್‌ನಿಂದ ಮಗುವಿಗೆ 10 ನಿಮಿಷಗಳಲ್ಲಿ ಇನ್ನೊಂದನ್ನು ಪಡೆಯುತ್ತೀರಿ ಎಂದು ಆರ್ಡರ್ ಮಾಡಿದ್ದೀರಾ? ಎಂದು ಸಿಟ್ಟಿನಿಂದ ಪ್ರಶ್ನಿಸಿದ್ದಾರೆ. ಪೋಷಕರು ಮಗುವಿನ ಸುರಕ್ಷತೆಯನ್ನು ಹೇಗೆ ಅಪಾಯಕ್ಕೆ ಸಿಲುಕಿಸಬಹುದು ಎಂದು ಹಲವರು ಪ್ರಶ್ನಿಸಿದರೆ, ಇತರರು ತಾವು ನೋಡಿದ್ದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದು ತಮಾಷೆಯೇ ಅಲ್ಲ, ಅದು ದುರಂತದಲ್ಲಿ ಕೊನೆಗೊಳ್ಳಬಹುದಿತ್ತು. ಅದೃಷ್ಟವಶಾತ್ ದೇವರು ಕಾಪಾಡಿದ ಎಂದು ಬಳಕೆದಾರರು ಹೇಳಿದ್ದಾರೆ.

ಇದು ತುಂಬಾ ಬೇಜವಾಬ್ದಾರಿ. ಮಗುವಿಗೆ ಹೀಗೆ ಮಾಡಲು ಹೇಗೆ ಸಾಧ್ಯ? ಎಂದು ಬೇರೆ ಬಳಕೆದಾರರು ಸಿಡಿಮಿಡಿಗೊಂಡಿದ್ದಾರೆ. ಸದ್ಯ, ಈ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: Onam Celebrations: ಮುಸ್ಲಿಂ ವಿದ್ಯಾರ್ಥಿಗಳಿಗೆ ಓಣಂ ಆಚರಣೆಯಲ್ಲಿ ಭಾಗವಹಿಸಬೇಡಿ ಎಂದು ಶಿಕ್ಷಕರಿಂದ ತಾಕೀತು!