ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Munawar Faruqui: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಕೊಲೆಗೆ ಸಂಚು; ಇಬ್ಬರು ಅರೆಸ್ಟ್‌

Munawar Faruqui: ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಮುನಾವರ್ ಫಾರೂಕಿ ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ಗೋಲ್ಡಿ ಬ್ರಾರ್ ಗುಂಪಿನ ಇಬ್ಬರು ಸದಸ್ಯರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈತ್ಪುರ-ಕಾಳಿಂದಿ ಕುಂಜ್ ರಸ್ತೆಯಲ್ಲಿ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯ ವೇಳೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಮುನಾವರ್ ಫಾರೂಕಿ ಕೊಲೆಗೆ ಸಂಚು; ಆರೋಪಿಗಳ ಬಂಧನ!

-

Profile Pushpa Kumari Oct 2, 2025 3:38 PM

ನವದೆಹಲಿ: ಸ್ಟ್ಯಾಂಡ್ ಅಪ್ ಕಾಮಿಡಿ, ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಮುನಾವರ್ ಫಾರೂಕಿ (Munawar Faruqui) ಸೋಶಿಯಲ್ ಮಿಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಆಗಿದ್ದಾರೆ. ಇವರ ಸ್ಟ್ಯಾಂಡಪ್ ಕಾಮಿಡಿ ಟ್ಯಾಲೆಂಟ್ ನಿಂದಲೇ ಹಿಂದಿ ಬಿಗ್​ಬಾಸ್​ ಸೀಸನ್​ 17ರ ಕಪ್ ಅನ್ನು ​ ಮುನಾವರ್​ ಫಾರೂಕಿ ಗೆದ್ದಿದ್ದಾರೆ. 2022ರಲ್ಲಿ ನಟಿ ಕಂಗನಾ ರಣಾವತ್ ನಡೆಸಿ ಕೊಡುತ್ತಿದ್ದ ರಿಯಾಲಿಟಿ ಟಿವಿ ಶೋ 'ಲಾಕ್ ಅಪ್' ಸೀಸನ್ ಅನ್ನು ಫಾರೂಕಿ ಗೆದ್ದಿದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ಅವರ ವಿರುದ್ಧ ಕೊಲೆ ಸಂಚು ರೂಪಿಸಲಾಗುತ್ತಿದೆ ಎಂಬ ಮಾತು ಕೇಳಿಬಂತು. ಇದೀಗ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಮುನಾವರ್ ಫಾರೂಕಿ ಕೊಲೆಗೆ ಸಂಚು ರೂಪಿಸಿದ್ದು ನಿಜ ಎಂದು ತಿಳಿದು ಬಂದಿದೆ. ಫಾರೂಕಿ ಅವರ ವಿರುದ್ಧ ಕೊಲೆ ಸಂಚು ರೂಪಿಸಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಗೋಲ್ಡಿ ಬ್ರಾರ್ ಗುಂಪಿನ ಇಬ್ಬರು ಸದಸ್ಯರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈತ್ಪುರ-ಕಾಳಿಂದಿ ಕುಂಜ್ ರಸ್ತೆಯಲ್ಲಿ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯ ವೇಳೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಹರಿಯಾಣದ ಪಾಣಿಪತ್‌ ನಿವಾಸಿ ರಾಹುಲ್ ಮತ್ತು ಭಿವಾನಿಯ ಸಾಹಿಲ್ ಎಂದು ಗುರುತಿಸಲಾಗಿದೆ. ಅವರಿಬ್ಬರೂ ಆರೋಪಿಗಳು ಸೇರಿಕೊಂಡು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಫಾರೂಕಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂಬುದು ತಿಳಿದುಬಂದಿದೆ.

ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೋಕಿ ಅವರನ್ನು ಕೊಲೆ ಮಾಡಬೇಕು ಎಂಬ ಉದ್ದೇಶಕ್ಕೆ ಇಬ್ಬರು ಆರೋಪಿಗಳು ಗ್ಯಾಂಗ್‌ಸ್ಟರ್ ರೋಹಿತ್‌ ಗೋದಾರ ಅವರಿಂದ ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದರು. ಫಾರೂಕಿ ಅವರ ಚಲನವಲಗಳನ್ನು ಗಮನಿಸಿದ್ದ ಆರೋಪಿಗಳು, ಮುಂಬೈ ಮತ್ತು ಪಶ್ಚಿಮ ಬಂಗಾಳ, ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಫಾರೂಕಿ ಅವರ ಕೊಲೆಗೆ ದೊಡ್ಡ ಮಟ್ಟದ ಪ್ಲ್ಯಾನಿಂಗ್ ಕೂಡ ಮಾಡಲಾಗಿತ್ತು ಎಂದು ದೆಹಲಿ ಪೊಲೀಸರು ಕೂಡ ಈ ಬಗ್ಗೆ ತಿಳಿಸಿದ್ದಾರೆ.

ಇದನ್ನು ಓದಿ:Crime News: ಅತ್ಯಾಚಾರದ ಆರೋಪ ಹೊರಿಸಿದ ಗೆಳತಿ- ಮನನೊಂದು ಯುವಕ ಆತ್ಮಹತ್ಯೆಗೆ ಶರಣು

ಫಾರೂಕಿ ಅವರ ಕೊಲೆಗೆ ಸಂಚು ರೂಪಿಸಿದ್ದ ರಾಹುಲ್ 2024ರ ಡಿಸೆಂಬರ್‌ನಲ್ಲಿ ಹರಿಯಾಣದ ಯಮುನಾನಗರದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಲ್ಲಿಂದ ಆತ ತಲೆಮರೆಸಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಜೈತ್ಪುರ-ಕಾಳಿಂದಿ ಕುಂಜ್ ರಸ್ತೆಯಲ್ಲಿ ನಡೆದ ಗುಂಡಿನ ಚಕಮಕಿಯ ವೇಳೆ ಇಬ್ಬರು ಆರೋಪಿಗಳಿಗೂ ಗಂಭೀರ ಗಾಯವಾಗಿದ್ದು ಕೂಡ ತನಿಖೆ ವೇಳೆ ತಿಳಿದುಬಂದಿದೆ.

ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮಗಳಲ್ಲಿ ಫಾರೋಕಿ ಅವರು ಹೆಚ್ಚಾಗಿ ಹಿಂದೂ ದೇವತೆಗಳ ಕುರಿತು ಅವಹೇಳನ ಮಾಡುತ್ತಾರೆ ಅನ್ನೋ ಆರೋಪ ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ. 2021ರಲ್ಲಿ ಹಿಂದೂ ದೇವತೆಗಳ ವಿರುದ್ಧ ಟೀಕಾತ್ಮಕ ಹೇಳಿಕೆ ನೀಡುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಕ್ಕಾಗಿ ಅನೇಕ ಜನರು ಫಾರೂಕಿ ವಿರುದ್ಧ ತಿರುಗಿಬಿದ್ದಿದ್ದರು. ಇದರಿಂದಾಗಿ ಒಂದು ತಿಂಗಳು ಜೈಲು ಶಿಕ್ಷೆಯನ್ನು ಕೂಡ ಅನುಭವಿಸಿದ್ದರು. ಸದ್ಯ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಕೊಲೆಗೆ ಯತ್ನ ಕೂಡ ಮಾಡಲಾಗಿದೆ.