ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Pushpa Kumari

[email protected]

Articles
ಐಫೋನ್ 18 ಪ್ರೊ ಹಾಗೂ ಪ್ರೊ ಮ್ಯಾಕ್ಸ್‌ಗೆ ಭಾರತದಲ್ಲಿ ಭಾರೀ ಕ್ರೇಜ್: ಆ್ಯಪಲ್ ಸ್ಟೋರ್‌ಗಳ ಮುಂದೆ ಖರೀದಿಗೆ ಮುಗಿಬಿದ್ದ ಗ್ರಾಹಕರು!

ಐಫೋನ್ 18 ಪ್ರೊ, ಪ್ರೊ ಮ್ಯಾಕ್ಸ್ ಗೆ ದೇಶದೆಲ್ಲೆಡೆ ಭಾರಿ ಡಿಮ್ಯಾಂಡ್!

Viral News: ಐಫೋನ್ 18 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಖರೀದಿಸುವ ಬಗ್ಗೆ ಭಾರತೀಯ ಗ್ರಾಹಕರಲ್ಲಿ ಅಪಾರ ಉತ್ಸಾಹವಿದೆ. ಈ ಮೊಬೈಲ್‌ಗಳು ಇಂದು ಮಾರಾಟಕ್ಕೆ ಲಭ್ಯವಿದ್ದು ಇದೀಗ ಮೊಬೈಲ್ ಖರೀದಿ ಮಾಡಲು ದೆಹಲಿ, ನೋಯ್ಡಾ, ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಆ್ಯಪಲ್ ಮಳಿಗೆಗಳ ಹೊರಗೆ ಗ್ರಾಹಕರು ಸಾಲುಗಟ್ಟಿ ನಿಂತಿರುವ ವಿಡಿಯೊವೊಂದು ವೈರಲ್ ಆಗುತ್ತಿದೆ.

Health Tips: ಹಸಿ ಬೀಟ್ರೂಟ್ ಅಥವಾ ಬೇಯಿಸಿದ ಬೀಟ್ರೂಟ್: ಮೂತ್ರಪಿಂಡದ ಆರೋಗ್ಯಕ್ಕೆ ಯಾವುದು ಉತ್ತಮ?

ಬೀಟ್ರೂಟ್ ಮೂತ್ರಪಿಂಡದ ಆರೋಗ್ಯಕ್ಕೆ ಉತ್ತಮವೇ?

Health Tips: ಬೀಟ್ರೂಟ್ ಪೌಷ್ಟಿಕಾಂಶದಿಂದ ಕೂಡಿದ ತರಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ, ಫೋಲೇಟ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ನಾರಿನಾಂಶಗಳ ಪ್ರಮಾಣ ಅಧಿಕವಾಗಿದೆ. ಅದರಲ್ಲೂ ಆರೋಗ್ಯ ಕಾಳಜಿ ಉಳ್ಳವರು ಸಾಂಬಾರು, ಪಲ್ಯ, ಹಾಗೂ ಜ್ಯೂಸ್ ಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುತ್ತಾರೆ. ಆದರೆ ಮೂತ್ರಪಿಂಡದ ಆರೋಗ್ಯ ಸಮಸ್ಯೆ ಇದ್ದವರು ಇದನ್ನು ಸೇವನೆ ಮಾಡಬಹುದೇ?

ದಿನ ಭವಿಷ್ಯ, ಸೆಪ್ಟೆಂಬರ್ 18, 2026: ನಿಮ್ಮ ಯೋಜನೆಗಳು ಇಂದು ಯಶಸ್ಸಿನತ್ತ ಸಾಗಲಿವೆ!

ಇಂದು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ!

Horoscope Today September 18th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆಪಕ್ಷದ, ಸಪ್ತಮಿ ತಿಥಿಯ, ಜೇಷ್ಠ ನಕ್ಷತ್ರದ ಸೆಪ್ಟೆಂಬರ್‌ 18ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಮಾಹಿತಿ ಇಲ್ಲಿದೆ.

ಜಲಪಾತದ ಬಳಿ ಮಗು ಎತ್ತಿಕೊಂಡಿದ್ದ ವ್ಯಕ್ತಿಯ ಮೇಲೆ ಬಿದ್ದ ಬೃಹತ್‌ ಕಾಳಿಂಗ ಸರ್ಪ; ಮೈ ಜುಂ ಎನಿಸುವ ವಿಡಿಯೊ ವೈರಲ್‌

ಅಂಬೋಲಿ ಜಲಪಾತದಲ್ಲಿ ಮಗು ಹಿಡಿದ ವ್ಯಕ್ತಿ ಮೇಲೆ ಬಿದ್ದ ಹಾವು

Amboli waterfall: ಮಹಾರಾಷ್ಟ್ರದ ಪ್ರಸಿದ್ಧ ಅಂಬೋಲಿ ಜಲಪಾತಕ್ಕೆ ಪ್ರವಾಸ ಹೋಗಿದ್ದ ಕುಟುಂಬವೊಂದಕ್ಕೆ ಅಘಾತವೊಂದು ಎದುರಾಗಿದೆ. ವ್ಯಕ್ತಿಯೊಬ್ಬರು ಮಗುವನ್ನು ಕೈಯಲ್ಲಿ ಎತ್ತಿಕೊಂಡು ಜಲಪಾತದ ಸೌಂದರ್ಯ ಸವಿಯುತ್ತಿದ್ದಾಗ ಏಕಾಏಕಿ ದೈತ್ಯಾಕಾರದ ಹಾವೊಂದು ಅವರ ಹೆಗಲ ಮೇಲೆ ಬಿದ್ದಿದೆ. ಈ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಬೀದಿ ಬದಿ ವ್ಯಾಪಾರಿಯ ಆಹಾರವನ್ನು ರಸ್ತೆಗೆ ಎಸೆದು ಹಲ್ಲೆ: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ!

ಬೀದಿ ಬದಿ ವ್ಯಾಪಾರಿಯ ಮೇಲೆ ಏಕಾಏಕಿ ದಾಳಿ: ಆರೋಪಿ ವಿರುದ್ಧ ಕಿಡಿ!

Viral News: ಬೀದಿ ಬದಿಯ ಮಾರಾಟಗಾರನೊಬ್ಬನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಏನೂ ಕಾರಣವಿಲ್ಲದೆ ಏಕಾಏಕಿ ಭೇಲ್ ಪುರಿ ಮಾರಾಟಗಾರನ ಮೇಲೆ ಹಲ್ಲೆ ನಡೆಸಿ, ಆತನ ಬಳಿಯಿದ್ದ ತಿನಿಸುಗಳನ್ನು ರಸ್ತೆಗೆ ಎಸೆದಿದ್ದಾನೆ.

ಜಪಾನ್, ಕೊರಿಯಾದ ಅನುಭವ ನೀಡುತ್ತಿದೆ: ದೆಹಲಿ ಮೆಟ್ರೋ ಸ್ವಚ್ಛತೆ ಕಂಡು ವಿದೇಶಿ ಪ್ರವಾಸಿ ಫುಲ್ ಫಿದಾ!

ದೆಹಲಿ ಮೆಟ್ರೋ ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ವಿದೇಶಿ ಪ್ರವಾಸಿ

Viral News: ಭಾರತದ ಆಧುನಿಕ ಮೂಲ ಸೌಕರ್ಯ ಹಾಗೂ ಮೆಟ್ರೊದ ಸ್ವಚ್ಚತೆ ಕಂಡು ವಿದೇಶಿ ಪ್ರವಾಸಿಯೊಬ್ಬರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇಲ್ಲಿನ ಸಾರಿಗೆ ವ್ಯವಸ್ಥೆಯು ಜಪಾನ್, ದಕ್ಷಿಣ ಕೊರಿಯದಂತ ಸ್ಥಳಗಳನ್ನು ನೆನಪಿಸುತ್ತದೆ. ಅಷ್ಟೇ ಅಲ್ಲದೆ ಕೇವಲ 56 ರೂಪಾಯಿಗೆ ದೆಹಲಿ ಏರ್‌ಪೋರ್ಟ್‌ನಿಂದ ನಗರದ ಕೇಂದ್ರ ಭಾಗಕ್ಕೆ ಸುಲಭವಾಗಿ ಪ್ರಯಾಣಿಸಲು ಸಾಧ್ಯ ವಾಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಶಾಲಾ ವ್ಯಾನ್; ಕೂದಲೆಳೆ ಅಂತರದಲ್ಲಿ ಮಕ್ಕಳು ಪಾರು!

ಶಾಲಾ ವ್ಯಾನ್ ಮರಕ್ಕೆ ಡಿಕ್ಕಿ: ಪವಾಡ ಸದೃಶವಾಗಿ ಮಕ್ಕಳು ಪಾರು!

Viral News: ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವ್ಯಾನ್ ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆ ದಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನ ವಿಜಯ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಪವಾಡ ಸದೃಶವಾಗಿ ಮಕ್ಕಳು ಪಾರಾಗಿದ್ದಾರೆ.

ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ಅನ್ನೋದು ಕಷ್ಟವೇ? ಫಿಟ್‌ನೆಸ್ ತಜ್ಞರು ಹೇಳೋದೇನು?

ಮಹಿಳೆಯರು ಕೊಬ್ಬು ಕರಗಿಸುವುದು ಕಷ್ಟವೇ? ತಜ್ಞರು ನೀಡಿದ ಟಿಪ್ಸ್ ಏನು?

Health Tips: ಪ್ರತಿದಿನ ಜಿಮ್‌ನಲ್ಲಿ ಹಲವು ಗಂಟೆಗಳ ಕಾಲ ವರ್ಕೌಟ್ ಮಾಡಿ ಊಟ ತಿಂಡಿ ಬಿಟ್ಟು ಹರಸಹಾಸ ಮಾಡುತ್ತಾರೆ. ಕೊಬ್ಬನ್ನು ಕರಗಿಸುವುದು ಪುರುಷರು ಹಾಗೂ ಮಹಿಳೆಯರ ಮುಖ್ಯ ಗುರಿಯಾಗಿರುತ್ತದೆ. ಆದಾಗ್ಯೂ, ಹಲವಾರು ಶಾರೀರಿಕ ಮತ್ತು ಹಾರ್ಮೋನುಗಳ ಅಂಶಗಳಿಂದಾಗಿ ಕೊಬ್ಬು ಕರಗುವುದು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸವಾಲಿನ ಕೆಲಸ ಆಗಿರಬಹುದು‌.

ದಿನ ಭವಿಷ್ಯ, ಸೆಪ್ಟೆಂಬರ್ 17, 2026: ನಿಮ್ಮ ನಿರೀಕ್ಷೆಯಂತೆ ಅಂದುಕೊಂಡ ಕೆಲಸ ಪೂರ್ಣಗೊಳ್ಳಲಿದೆ

ಇಂದು ನಿಮ್ಮ ಶ್ರಮಕ್ಕೆ ಉತ್ತಮ ಫಲಿತಾಂಶ ಸಿಗುವ ದಿನ

Horoscope Today September 17th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆ ಪಕ್ಷದ, ಷಷ್ಠಿ ತಿಥಿಯ, ಅನುರಾಧಾ ನಕ್ಷತ್ರದ ಸೆಪ್ಟೆಂಬರ್‌ 17ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಭಾರತದ ಡಿಸೈನ್ ಬಳಸಿದ ಹ್ಯಾಂಡ್ ಬ್ಯಾಗ್ ಬರೋಬ್ಬರಿ 8.3 ಲಕ್ಷ ರೂಪಾಯಿಗೆ ಮಾರಾಟ: ಇಟಲಿಯ ಫೆಂಡಿ ಸಂಸ್ಥೆ ವಿರುದ್ಧ ಹರ್ಷ್ ಗೋಯೆಂಕಾ, ಕಿರಣ್ ಮಜುಂದಾರ್ ಷಾ ಟೀಕೆ

ಭಾರತದ ಡಿಸೈನ್‌ನ ಈ ಬ್ಯಾಗ್‌ಗೆ ಬರೋಬ್ಬರಿ ಬಳಸಿ 8.3 ಲಕ್ಷ ರೂ.

Viral News: ಇಟಲಿಯ ಖ್ಯಾತ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಫೆಂಡಿ 8.3 ಲಕ್ಷ ರೂಪಾಯಿಯ 'ಮಲ್ಟಿಕಲರ್ ಬ್ಯಾಗೆಟ್' ಹ್ಯಾಂಡ್‌ಬ್ಯಾಗ್ ವಿನ್ಯಾಸ ಮಾಡಿದೆ. ಇದರ ಕನ್ನಡಿ ಮತ್ತು ಮಣಿಗಳ ವಿನ್ಯಾಸವನ್ನು, ಸಾಮಾನ್ಯವಾಗಿ ಭಾರತೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಬ್ಯಾಗ್‌ನಂತೆ ರೂಪಿಸಲಾಗಿದೆ. ಇದು ಭಾರತದ ಗುಜರಾತ್ ಹಾಗೂ ನವರಾತ್ರಿ ಹಬ್ಬದ ಸಮಯದಲ್ಲಿ ಬೀದಿ ಬದಿ ಮಾರುಕಟ್ಟೆಗಳಲ್ಲಿ ಸಿಗುವ ಸಾಂಪ್ರದಾಯಿಕ ಬ್ಯಾಗ್‌ನಂತಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಬ್ಯಾಂಕಾಕ್‌ನಲ್ಲಿ ಲಡ್ಡುಗಳ ಬದಲಿಗೆ ಗಣೇಶನಿಗೆ ಬಬಲ್ ಟೀ ಅರ್ಪಿಸಿದ ಭಕ್ತರು: ವಿಡಿಯೊ ನೋಡಿ

ಬ್ಯಾಂಕಾಕ್‌ನಲ್ಲಿ ಗಣೇಶನಿಗೆ ಬಬಲ್ ಟೀ ನೈವೇದ್ಯ

Viral News: ಥೈಲ್ಯಾಂಡ್ ಬ್ಯಾಂಕಾಕ್‌ನಲ್ಲಿರುವ ಗಣಪತಿ ದೇವಾಲಯವೊಂದರಲ್ಲಿ ಚೌತಿಯನ್ನು ವಿಶಿಷ್ಟ ರೀತಿ ಆಚರಿಸಲಾಗಿದೆ. ಇಲ್ಲಿನ ಭಕ್ತರು ಸಾಂಪ್ರದಾಯಿಕ ಲಡ್ಡುಗಳ ಬದಲಿಗೆ ಗಣೇಶನಿಗೆ ಬಬಲ್ ಟೀ ಅರ್ಪಿಸಿದ್ದಾರೆ. ಭಕ್ತರು ಗಣಪನಿಗೆ ಅರ್ಪಿಸಲು ಸ್ವತಃ ಬಬಲ್ ಟೀಯನ್ನು ತೆಗೆದುಕೊಂಡು ದೇವಾಲಯಕ್ಕೆ ಆಗಮಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಭೋಪಾಲ್‌ನಲ್ಲಿ ʼಕಾಂತಾರʼ ಚಿತ್ರ ವೈಭವ: ‌ಗುಳಿಗ, ಪಂಜುರ್ಲಿ ದೈವದೊಂದಿಗೆ ಗಣಪತಿ ವಿಗ್ರಹವಿಟ್ಟು ಚೌತಿ ಆಚರಣೆ

ಭೋಪಾಲ್‌ನಲ್ಲಿ ಗುಳಿಗ, ಪಂಜುರ್ಲಿ ದೈವದೊಂದಿಗೆ ಕಂಗೊಳಿಸುತ್ತಿರುವ ಗಣಪ

Viral News: ಈ ಬಾರಿಯ ಮಧ್ಯ ಪ್ರದೇಶದ ಗಣೇಶೋತ್ಸವದಲ್ಲಿ ʼಕಾಂತಾರ ಚಾಪ್ಟರ್-1ʼ ಕಾನ್ಸೆಪ್ಟ್‌ ಆಧಾರಿತ ಅದ್ದೂರಿ ಸೆಟಪ್ ಮಾಡಲಾಗಿದ್ದು, ಗಮನ ಸೆಳೆದಿದೆ. ʼಕಾಂತಾರʼ ಸಿನಿಮಾದ ದೈವಾರಾಧನೆಯ ಸಾಂಸ್ಕೃತಿಕ ಹಿನ್ನೆಲೆಯಿಂದ ಪ್ರೇರಿತಗೊಂಡು ವಿಶೇಷ ಪೆಂಡಲ್ ಸಿದ್ಧಪಡಿಸಲಾಗಿದೆ. ಗಣೇಶನ ವಿಗ್ರಹ ಜತೆಗೆ ಗುಳಿಗ ಮತ್ತು ಪಂಜುರ್ಲಿ ದೈವದ ವಿಗ್ರಹವನ್ನು ಕೂರಿಸಲಾಗಿದೆ.

ಡೆಲಿವರಿ ಸಿಬ್ಬಂದಿ ಕಷ್ಟ ನೋಡಲಾಗದೆ ತನಗಾಗಿ ತಂದ ಹೊಸ ಅಡಿಡಾಸ್ ಶೂ ನೀಡಿದ ಯುವಕ

ಡೆಲಿವರಿ ಬಾಯ್‌ ಕಷ್ಟ ಅರಿತು ಹೊಸ ಅಡಿಡಾಸ್ ಶೂ ನೀಡಿದ ಯುವಕ

Viral News: ಕೆಲವೊಮ್ಮೆ ನಾವು ತೋರಿಸುವ ಸರಳ ದಯೆ ಯಾರನ್ನಾದರೂ ಸಂತೋಷಪಡಿಸಲು ಸಾಕಾಗುತ್ತದೆ. ಇದಕ್ಕೆ ಉತ್ತರಾಖಂಡದ ಈ ಘಟನೆಯೇ ಸಾಕ್ಷಿ. ಅಮನ್ ಶರ್ಮಾ ಎಂಬ ಯುವಕ ತಮ್ಮ ಹೊಸ ಶೂಗಳನ್ನು ಡೆಲಿವರಿ ಪಾರ್ಟ್‌ನರ್‌ಗೆ ನೀಡುತ್ತಿರುವ ಕ್ಷಣ ಎಲ್ಲರ ಹೃದಯ ಗೆದ್ದಿದೆ. ಮಳೆಯಲ್ಲಿ ಯಾವುದೇ ರಕ್ಷಣೆ ಹಾಗೂ ಶೂ ಇಲ್ಲದೆ ಆಹಾರ ಡೆಲಿವರಿ ಮಾಡುತ್ತಿದ್ದ ಯುವಕನಿಗೆ ತಮ್ಮ ಹೊಸ ಅಡಿಡಾಸ್ ಶೂ ಉಡುಗೊರೆಯಾಗಿ ನೀಡಿದ್ದಾರೆ.

"ಅತ್ಯಾಧುನಿಕ ಸೌಲಭ್ಯ ಹೊಂದಿರುವ ವಂದೇ ಭಾರತ್ ರೈಲಿನೊಳಗೆ ಎಲ್ಲವೂ ಚೆನ್ನಾಗಿತ್ತು"! ಆದರೆ ಸಹ ಪ್ರಯಾಣಿಕರ ವರ್ತನೆ ವಿರುದ್ಧ ಯುವಕ ಬೇಸರ!

ವಂದೇ ಭಾರತ್ ನಲ್ಲಿ ಪ್ಲಾಸ್ಟಿಕ್ ಎಸೆದು ಅಶಿಸ್ತಿನಿಂದ ವರ್ತಿಸಿದ ಪ್ರಯಾಣಿಕರು

Viral News: ವಂದೇ ಭಾರತ್ ರೈಲು ಅತ್ಯಂತ ಸ್ವಚ್ಛವಾಗಿ ಕಂಡುಬಂದರೂ, ಸಿಬ್ಬಂದಿಗಳು ನಿಯಮಿತವಾಗಿ ಸ್ವಚ್ಛಗೊಳಿಸಿದ ಹೊರತಾಗಿಯೂ ಸೀಟುಗಳ ಕೆಳಗೆ ಮತ್ತು ಬೋಗಿಯ ವಿವಿಧ ಭಾಗಗಳಲ್ಲಿ ಕಸ ಬಿದ್ದಿರುವುದನ್ನು ಪ್ರಯಾಣಿಕರೊಬ್ಬರು ವಿಡಿಯೊ ಮಾಡಿ ಬೇಸರ ಹೊರಹಾಕಿದ್ದಾರೆ.

ಕೇವಲ ಒಗ್ಗರಣೆಗೆ ಮಾತ್ರವಲ್ಲ! ನಿಮ್ಮ ಆಹಾರದಲ್ಲಿ ಕರಿಬೇವು ಯಾಕೆ ಅಗತ್ಯ?

ಕರಿಬೇವಿನ ಎಲೆಗಳ ಆರೋಗ್ಯ ಪ್ರಯೋಜನಗಳು!

Health Tips: ಭಾರತೀಯ ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸಲಾಗುವ ಆಹಾರ ಪದಾರ್ಥಗಳಲ್ಲಿ ಕರಿಬೇವು ಕೂಡ ಒಂದಾಗಿದೆ. ನೀವು ಬೇಯಿಸಿದ ಆಹಾರದ ರುಚಿ ಹೆಚ್ಚು ಮಾಡುವುದಲ್ಲದೆ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ವಿಟಮಿನ್ ಸಿ ಮುಂತಾದ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಚರ್ಮದ ಆರೈಕೆಯಿಂದ ಹಿಡಿದು ಜೀರ್ಣಕ್ರಿಯೆವರೆಗೆ ಹಲವಾರು ರೀತಿಯ ಆರೋಗ್ಯ ಲಾಭವನ್ನು ಕರಿಬೇವು ನೀಡುತ್ತದೆ‌

ದಿನ ಭವಿಷ್ಯ, ಸೆಪ್ಟೆಂಬರ್ 16, 2026: ಬಹಳ ದಿನದಿಂದ ಅಂದುಕೊಂಡಿದ್ದ ಕೆಲಸ ಇಂದು ನೆರವೇರುತ್ತೆ; ಷೇರಿನಲ್ಲಿ ಲಾಭ

ಇಂದು ನಿಮ್ಮ ಕನಸು ನನಸಾಗುವ ದಿನ

Horoscope Today September 16th 2026: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆಪಕ್ಷದ, ಷಷ್ಠಿ ತಿಥಿಯ, ಅನುರಾಧಾ ನಕ್ಷತ್ರದ ಸೆಪ್ಟೆಂಬರ್‌ 16ನೇ ತಾರೀಕಿನ ಈ ದಿನದ ಭವಿಷ್ಯದ ಮಾಹಿತಿ ಇಲ್ಲಿದೆ.

ಖಾಕಿ ತೊಟ್ಟು ಮಕ್ಕಳಂತೆ ಪಾರ್ಕ್‌ನಲ್ಲಿ ಆಡಿ ಸಂಭ್ರಮಿಸಿದ ಸೆಕ್ಯುರಿಟಿ ಸಿಬ್ಬಂದಿ: ವಿಡಿಯೊ ವೈರಲ್

ಪಾರ್ಕ್‌ನಲ್ಲಿ ಮಕ್ಕಳಂತೆ ಆಡಿ ಸಂಭ್ರಮಿಸಿದ ಸೆಕ್ಯುರಿಟಿ ಸಿಬ್ಬಂದಿ

Viral News: ಉದ್ಯಾನವನವೊಂದರಲ್ಲಿ ಕರ್ತವ್ಯದ ನಡುವಿನ ಬಿಡುವಿನಲ್ಲಿ ಯೂನಿಫಾರ್ಮ್‌ನಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿ ಮೆರ್ರಿ-ಗೋ-ರೌಂಡ್ ಆಟ ಆಡುತ್ತಾ ಸಮಯ ಕಳೆದಿದ್ದಾರೆ. ಮಕ್ಕಳು ಆಡುವ ಆಟಿಕೆ ಮೇಲೆ ಕುಳಿತು ಸಮವಸ್ತ್ರಧಾರಿ ಸಿಬ್ಬಂದಿ ಬಾಲ್ಯದ ಕ್ಷಣ ಕಳೆದಿದ್ದಾರೆ. ಆದರೆ ಈ ವಿಡಿಯೊವನ್ನು ಯಾವಾಗ ಅಥವಾ ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದು ಆನ್‌ಲೈನ್‌ನಲ್ಲಿ ವ್ಯಾಪಕ ಗಮನ ಸೆಳೆದಿದೆ.

ಬೈಕ್‌ನಲ್ಲಿ ಬಂದು ವೃದ್ಧೆಯ ಸರ ದೋಚಲು ಯತ್ನ: ಕಳ್ಳರನ್ನು ಬೆನ್ನಟ್ಟಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು

ವೃದ್ಧೆಯ ಸರ ಕಳವಿಗೆ ಯತ್ನ: ಖದೀಮರನ್ನು ಹಿಡಿದ ಸ್ಥಳೀಯರು

Viral News: ರಾಜಸ್ಥಾನದ ಅಜ್ಮೀರ್‌ನಲ್ಲಿ ಬೈಕ್‌ನಲ್ಲಿ ಬಂದ ಖದೀಮರು ಮಹಿಳೆಯ ಕತ್ತಿನಿಂದ ಸರ ಕದಿಯಲು ಯತ್ನಿಸಿದ ಘಟನೆ ನಡೆದಿದೆ. ಮಹಿಳೆ ಗಟ್ಟಿಯಾಗಿ ಬೊಬ್ಬೆ ಹಾಕುತ್ತಿದ್ದಂತೆ ಸಾರ್ವಜನಿಕರು ಒಟ್ಟಾಗಿ ಕಳ್ಳರನ್ನು ಬೆನ್ನಟ್ಟಿದ್ದಾರೆ. ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದ ಈ ಘಟನೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ‌. ಕಳ್ಳರು ಮಹಿಳೆಯ ಕುತ್ತಿಗೆಯಿಂದ ಸರ ಕಸಿದುಕೊಳ್ಳಲು ಪ್ರಯತ್ನಿ ಸುತ್ತಿರುವುದು ಕಂಡುಬಂದಿದೆ. ಕೊನೆಗೂ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

ಹಬ್ಬ ಮಿಸ್ ಮಾಡಿಕೊಂಡ ಏರ್ ಇಂಡಿಯಾ ಸಿಬ್ಬಂದಿಗೆ ಫ್ಲೈಟ್‌ನಲ್ಲೇ ಬಪ್ಪನ ದರ್ಶನ! ಹೃದಯಸ್ಪರ್ಶಿ ದೃಶ್ಯ ವೈರಲ್‌

35,000 ಅಡಿ ಎತ್ತರದಲ್ಲಿ ಫ್ಲೈಟ್‌ನಲ್ಲೇ ಚೌತಿ ಏರ್ ಇಂಡಿಯಾ ಸಿಬ್ಬಂದಿ

Ganpati Puja 2026: ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯೊಬ್ಬರು ಕರ್ತವ್ಯದಲ್ಲಿದ್ದಾಗ ವಿಶೇಷವಾಗಿ ಗಣೇಶ ಹಬ್ಬವೊಂದನ್ನು ಆಚರಿಸಿಕೊಂಡಿದ್ದಾರೆ. ಫ್ಲೈಟ್ ಸಮಯ ಕೊನೆ ಕ್ಷಣದಲ್ಲಿ ಬದಲಾದ ಕಾರಣ ಸಿಬ್ಬಂದಿಯೊಬ್ಬರಿಗೆ ತಮ್ಮ ಮನೆಯಲ್ಲಿ ನಡೆಯುವ ಗಣೇಶ ಹಬ್ಬಕ್ಕೆ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದಾಗ್ಯೂ ಗಣಪನ ಆಶೀವಾರ್ದ ಎಂಬಂತೆ ಒಬ್ಬ ಪ್ರಯಾಣಿಕರು ವಿಮಾನದಲ್ಲಿ ಗಣಪತಿ ವಿಗ್ರಹವನ್ನು ತಂದಿದ್ದು ಇದನ್ನು ಕಂಡ ಅನುರಾಧಾ ಹಾಗೂ ಅವರ ಸಹೋದ್ಯೋಗಿ ಸಿಬ್ಬಂದಿಗಳು ಆಕಾಶದಲ್ಲೇ ಗಣಪತಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ‌.

ಸೌಂದರ್ಯ ವರ್ಧಕ ಚಿಕಿತ್ಸೆಗಾಗಿ 4 ಕೋಟಿ ರೂಪಾಯಿ ವೆಚ್ಚ ಮಾಡಿದ 75 ವರ್ಷದ ವೃದ್ಧೆ; ಈಗ ಊಟಕ್ಕೂ ಗತಿ ಇಲ್ಲ

ಸೌಂದರ್ಯ ಚಿಕಿತ್ಸೆಗೆ 4 ಕೋಟಿ ರೂ. ಖರ್ಚು ಮಾಡಿದ 75 ವರ್ಷದ ವೃದ್ಧೆ

Viral News: 75 ವರ್ಷದ ವೃದ್ಧೆಯೊಬ್ಬಳು ತಮ್ಮ ಇಡೀ ಉಳಿತಾಯ ಹಣವನ್ನು ಕೇವಲ ಸೌಂದರ್ಯ ಚಿಕಿತ್ಸೆಗೆ ವ್ಯಯಿಸಿದ್ದಾರೆ. ಸುಮಾರು 4 ಕೋಟಿ ರೂಪಾಯಿ ಹಣವನ್ನು ಒಂದೇ ಬ್ಯೂಟಿ ಸೆಲೂನ್‌ನಲ್ಲಿ ಖರ್ಚು ಮಾಡಿದ್ದಾಳೆ ಎನ್ನಲಾಗಿದೆ. ಆದರೆ ಈ ಇಡೀ ಹಣ ಖಾಲಿಯಾದ ನಂತರ ವೃದ್ಧೆ ಮನೆ ಬಾಡಿಗೆ ಕಟ್ಟಲು ಮತ್ತು ದಿನನಿತ್ಯದ ವೆಚ್ಚಗಳಿಗೂ ಹಣವಿಲ್ಲದೆ ಒಡವೆಗಳನ್ನು ಮಾರಾಟ ಮಾಡುವ ಹಂತಕ್ಕೆ ತಲುಪಿದ್ದಾಳೆ.

ಎಸಿ ಕೋಚ್‌ನಲ್ಲಿ ಮದ್ಯಪಾನ ಮಾಡಿ ರಂಪಾಟ ಮಾಡಿದ ಸಹಪ್ರಯಾಣಿಕರು: ವಿಡಿಯೊ ಮೂಲಕ ಕಹಿ ಅನುಭವ ಬಿಚ್ಚಿಟ್ಟ ಯುವತಿ!

ಎಸಿ ಬೋಗಿಯಲ್ಲಿ ಮದ್ಯಪಾನ ಮಾಡಿ ಸಹಪ್ರಯಾಣಿಕರಿಂದ ಕಿರಿಕಿರಿ: ಯುವತಿ ಆಕ್ರೋಶ

Viral News: ಗುವಾಹಟಿಯಿಂದ ಕೋಲ್ಕತ್ತಾಕ್ಕೆ ಎಸಿ ಕೋಚ್ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬರು ಸಹ ಪ್ರಯಾಣಿಕರಿಂದ ಉಂಟಾದ ಕಿರಿಕಿರಿಯ ಬಗ್ಗೆ ಬೇಸರ ಹೊರಹಾಕಿದ್ದಾರೆ‌. ಸಾರಾಯ್‌ ಘಾಟ್ ಎಕ್ಸ್‌ಪ್ರೆಸ್‌ನ 2AC ಬೋಗಿಯಲ್ಲಿದ್ದ ಸಹ-ಪ್ರಯಾಣಿಕರು ಮದ್ಯಪಾನ ಮಾಡುವುದು, ಬೋಗಿಯೊಳಗೆ ಕಸ ಹಾಕುವುದು ಮತ್ತು ರಾತ್ರಿಯಿಡೀ ಜೋರಾಗಿ ಸಂಗೀತ ನುಡಿಸುವ ಮೂಲಕ ತೊಂದರೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳಿಂದ ಸ್ಪಂದನೆ ಸಿಗದೇ ಸ್ವಂತ ಖರ್ಚಿನಲ್ಲಿ ಫುಟ್‌ಪಾತ್ ದುರಸ್ತಿಗೊಳಿಸಿದ ಬೆಂಗಳೂರಿನ ಕಂಪನಿಯೊಂದರ ಸಿಇಒ! GBA ವಿರುದ್ಧ ನೆಟ್ಟಿಗರು ಕಿಡಿ!

ಸ್ವಂತ ಖರ್ಚಿನಲ್ಲೇ ಫುಟ್‌ಪಾತ್ ದುರಸ್ತಿಗೊಳಿಸಿದ ಬೆಂಗಳೂರಿನ ಸಿಇಒ!

Viral News: ಕೊರಮಂಗಲದಲ್ಲಿರುವ ವಸತಿ ಸಂಕೀರ್ಣದ ಮುಂಭಾಗದಲ್ಲಿದ್ದ ಹಾನಿಗೊಳಗಾಗಿದ್ದ ಫುಟ್‌ಪಾತ್‌ ಅನ್ನು ಸರಿಪಡಿಸಲು ಅಧಿಕಾರಿಗಳಿಗೆ ದೂರು ನೀಡಿದರೂ ಗಮನಹರಿಸದೇ ಇದ್ದಾಗ ಬೆಂಗಳೂರಿನ ಕಂಪನಿಯೊಂದರ ಸಿಇಒ ಒಬ್ಬರು ಸ್ವತಃ ತಾವೇ ಕ್ರಮ ಕೈಗೊಂಡರು. ತಮ್ಮ ಸ್ವಂತ ಖರ್ಚಿನಲ್ಲಿ ಫುಟ್ ಪಾತ್ ದುರಸ್ತಿ ಮಾಡುವ ಮೂಲಕ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.

ಥೈರಾಯ್ಡ್  ಸಮಸ್ಯೆ ಇದ್ದರೆ ದಿನವೂ ಮಖಾನ ಸೇವಿಸುವುದು ಎಷ್ಟು ಒಳ್ಳೆಯದು?

ಥೈರಾಯ್ಡ್ ಸಮಸ್ಯೆಗೆ ರಾಮಬಾಣ ಮಖಾನ!

Health Tips: ಇಂದು ಥೈರಾಯ್ಡ್ ಸಮಸ್ಯೆ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ. ವಿಪರೀತ ಆಯಾಸ, ತೂಕ ಹೆಚ್ಚಾಗುವುದು, ಖಿನ್ನತೆಯಂತಹ ಅನೇಕ ಸಮಸ್ಯೆಗಳು ಇದರಿಂದ ಉಂಟಾಗಬಹುದು. ಹೀಗಾಗಿ ಮಿತಿಮೀರುವ ಮೊದಲೇ ನಾವು ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಮುಖ್ಯವಾಗಿ ಥೈರಾಯ್ಡ್ ಸಮಸ್ಯೆ ಇದ್ದವರಿಗೆ ಪ್ರತಿದಿನ ಸೂಕ್ತವಾದ ಉಪ ಹಾರದ ಆಯ್ಕೆ ಅಂದ್ರೆ ಅದು ಮಖಾನ.

ದಿನ ಭವಿಷ್ಯ, ಸೆಪ್ಟೆಂಬರ್ 15, 2026: ಇಂದು ಹೊಸ ಉದ್ಯಮ ಆರಂಭಿಸಲು ಉತ್ತಮ ಸಮಯ!

ಇಂದು ಪ್ರೀತಿಯ ವಿಚಾರದಲ್ಲಿ ಈ ರಾಶಿಗೆ ಶುಭಸುದ್ದಿ!

Horoscope Today September 15th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆಪಕ್ಷದ, ಪಂಚಮಿ ತಿಥಿಯ, ಸ್ವಾತಿ ನಕ್ಷತ್ರದ ಸೆಪ್ಟೆಂಬರ್‌ 15ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಮಾಹಿತಿ ಇಲ್ಲಿದೆ.

Loading...