Suhas Shetty Murder Case: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ- ಮತ್ತೆ ಮೂವರು ಆರೋಪಿಗಳು ಅರೆಸ್ಟ್
ಮೇ 1ರ ಗುರುವಾರದಂದು ರಾತ್ರಿ ಮಂಗಳೂರು ಸಮೀಪವಿರುವ ಬಜ್ಪೆ ಎಂಬಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯರನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿಂದಂತೆ ಮಂಗಳೂರು ಪೊಲೀಸರಿಂದ ಈಗಾಗಲೇ 8 ಆರೋಪಿಗಳ ಬಂಧನ ಆಗಿದೆ. ಇದೀಗ ಮತ್ತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ದಕ್ಷಿಣ ಕನ್ನಡ: ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರಿನ ಬಜಿಪೆಯಲ್ಲಿ ಬರ್ಬರವಾಗಿ ಕೊಲೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ(Suhas Shetty Murder Case) ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಕಳವಾರಿನ ಅಜರುದ್ದೀನ್ ಆಲಿಯಾಸ್ ಅಜರ್ ಆಲಿಯಾಸ್ ಅಜ್ಜು(29), ಬಜ್ಪೆ ನಿವಾಸಿ ಅಬ್ದುಲ್ ಖಾದರ್ ಆಲಿಯಾಸ್ ನೌಫಲ್(24), ವಾಮಂಜೂರಿನ ನೌಷದ್ ಆಲಿಯಾಸ್ ಚೊಟ್ಟೆ ನೌಷದ್(39) ಎಂದು ಗುರುತಿಸಲಾಗಿದೆ. ಮೇ.1ರಂದು ಸುಹಾಸ್ ಶೆಟ್ಟಿಯನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಲೆಗೈದಿದ್ದರು.
ಇನ್ನು ಅಜರುದ್ದೀನ್ ವಿರುದ್ಧ ಈ ಹಿಂದೆಯೂ ಮೂರು ಪ್ರಕರಣಗಳು ದಾಖಲಾಗಿದ್ದವು. ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸರು ಠಾಣೆಯಲ್ಲಿ ಕೇಸ್ ಗಳಿವೆ. ಸುಹಾಸ್ ಶೆಟ್ಟಿ ಚಲನವಲನದ ಬಗ್ಗೆ ಮಾಹಿತಿ ನೀಡಿ ಹತ್ಯೆಗೆ ಈ ಆರೋಪಿಗಳು ಸಹಕರಿಸಿದ್ದರು. ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಆರೋಪಿಗಳು ಕಾರಿನಲ್ಲಿ ಪಾರಿಯಾಗಲು ಅಬ್ದುಲ್ ಖಾದರ್ ಸಹಕರಿಸಿದ್ದನು. ಸುಹಾಸ್ ಹತ್ಯೆಗೆ ಉಳಿದ ಆರೋಪಿಗಳ ಜೊತೆಗೆ ನೌಷದ್ ಸಂಚು ರೂಪಿಸಿದ್ದನು. ನೌಷದ್ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ 6 ಕೇಸ್ ಗಳಿದ್ದಾವೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಗೆ ವಹಿಸಬೇಕಾಗಿ ರಾಜ್ಯ ಬಿಜೆಪಿ (BJP) ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರುಗಳು ಸೇರಿ ರಾಜ್ಯಪಾಲರಿಗೆ ನಾಲ್ಕು ಪುಟಗಳಷ್ಟು ಕೈ ಬರಹದ ರೂಪದಲ್ಲೇ ಮನವಿ ಸಲ್ಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Dinesh Gundu Rao: ಸುಹಾಸ್‌ನನ್ನು ಮಹಾತ್ಮ ಎಂದು ಬಿಂಬಿಸುತ್ತಿರುವ ಬಿಜೆಪಿಯವರು ಆಗೇಕೆ ರೌಡಿ ಪಟ್ಟಿಗೆ ಸೇರಿಸಿದ್ದರು? ದಿನೇಶ್ ಗುಂಡೂರಾವ್
ಪ್ರಕರಣದ ಹಿನ್ನೆಲೆ:
ಮೇ 1ರ ಗುರುವಾರದಂದು ರಾತ್ರಿ ಮಂಗಳೂರು ಸಮೀಪವಿರುವ ಬಜ್ಪೆ ಎಂಬಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯರನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿಂದಂತೆ ಮಂಗಳೂರು ಪೊಲೀಸರಿಂದ ಈಗಾಗಲೇ 8 ಆರೋಪಿಗಳ ಬಂಧನ ಆಗಿದೆ.
ಕೃತ್ಯ ಎಸಗಲು ಮೂರು ತಿಂಗಳ ಹಿಂದೆಯೇ ಪ್ರೀ ಪ್ಲ್ಯಾನ್:
ಮೂರು ತಿಂಗಳ ಹಿಂದೆಯೇ ಸುಹಾಸ್ ಶೆಟ್ಟಿ ಕೊಲೆ ಮಾಡಲು ಪ್ಲ್ಯಾನ್ ಆಗಿತ್ತು ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ ತಮ್ಮ ಆದಿಲ್ 3 ಲಕ್ಷ ರೂಪಾಯಿ ಹಣ ನೀಡಿದ್ದ. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಸಿದ್ದ. ಒಂದು ವೇಳೆ ಸುಹಾಸ್ ಶೆಟ್ಟಿ ಪಾರಾದರೆ ಇನ್ನೊಂದು ಪ್ಲಾನ್ ಕೂಡ ಸಿದ್ದವಾಗಿತ್ತು ಎನ್ನುವ ಮಾಹಿತಿ ಲಭ್ಯ ಆಗಿದೆ.