ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harmanpreet Kaur: 150 ಮಹಿಳಾ ಏಕದಿನ ಪಂದ್ಯ ಆಡಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹರ್ಮನ್‌ಪ್ರೀತ್ ಕೌರ್

ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಪ್ರತೀಕಾ ರಾವಲ್(64), ಸ್ಮೃತಿ ಮಂಧಾನ(58) ಮತ್ತು ಹರ್ಲಿನ್‌ ಡಿಯೋಲ್‌(54) ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 281 ರನ್‌ ಬಾರಿಸಿ ಸವಾಲೊಡ್ಡಿದೆ. ಇನ್ನು 150ನೇ ಪಂದ್ಯದಲ್ಲಿ ಆಡಲಿಳಿದ ಹರ್ಮನ್‌ಪ್ರೀತ್‌ ಕೌರ್‌ ಕೇವಲ 11 ರನ್‌ ಮಾತ್ರ ಗಳಿಸಿದರು.

150ನೇ ಏಕದಿನ ಪಂದ್ಯ ಆಡಿ ಎಲೈಟ್‌ ಪಟ್ಟಿ ಸೇರಿದ ಹರ್ಮನ್‌ಪ್ರೀತ್ ಕೌರ್

-

Abhilash BC Abhilash BC Sep 14, 2025 5:19 PM

ಮುಲ್ಲನಪುರ: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌(Harmanpreet Kaur) ಅವರು ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ. 150 ಏಕದಿನ ಪಂದ್ಯಗಳಲ್ಲಿ ಆಡಿದ ಎರಡನೇ ಭಾರತೀಯ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ತವರಿನ ಏಕದಿನ ಸರಣಿಯ ಮೊದಲ ಪಂದ್ಯವನ್ನಾಡುವ ಮೂಲಕ ಈ ಸಾಧನೆ ಮಾಡಿದರು.

ಭಾರತ ಮಹಿಳಾ ತಂಡದ ಪರ ಅತ್ಯಧಿಕ ಏಕದಿನ ಪಂದ್ಯವನ್ನಾಡಿದ ದಾಖಲೆ ಮಾಜಿ ನಾಯಕಿ ಹಾಗೂ ಆಟಗಾರ್ತಿ ಮಿಥಾಲಿ ರಾಜ್‌ ಹೆಸರಿನಲ್ಲಿದೆ. ಮಿಥಾಲಿ 232 ಮಹಿಳಾ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ, ಹರ್ಮನ್‌ಪ್ರೀತ್ ಕೌರ್ 150 ಮಹಿಳಾ ಕ್ರಿಕೆಟ್ ಪಂದ್ಯಗಳಲ್ಲಿ ಕಾಣಿಸಿಕೊಂಡ 10 ನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

150ನೇ ಪಂದ್ಯವನ್ನಾಡುವ ಮುನ್ನ ಹರ್ಮನ್‌ಪ್ರೀತ್‌ ಕೌರ್‌ಗೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ವಿಶೇಷವಾಗಿ ಗೌರವ ಸಲ್ಲಿಸಿದರು. ಆಸ್ಟ್ರೇಲಿಯಾದ ಮಧ್ಯಮ ವೇಗಿ ಮೆಗನ್ ಶುಟ್ ಅವರಿಗೆ ಇದು 100ನೇ ಏಕದಿನ ಪಂದ್ಯ.

"ಇದು ನನಗೆ ಸಂತಸದ ಮತ್ತು ಹೆಮ್ಮೆಯ ಕ್ಷಣ. ಭಾರತ ಆಡುವುದನ್ನು ಹಲವು ವರ್ಷಗಳ ಕಾಲ ಮುಂದುವರಿಯುವ ಭರವಸೆ ನನಗಿದೆ" ಎಂದು ಕೌರ್‌ ಪಂದ್ಯಕ್ಕೂ ಮುನ್ನ ಹೇಳಿದರು.

ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಪ್ರತೀಕಾ ರಾವಲ್(64), ಸ್ಮೃತಿ ಮಂಧಾನ(58) ಮತ್ತು ಹರ್ಲಿನ್‌ ಡಿಯೋಲ್‌(54) ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 281 ರನ್‌ ಬಾರಿಸಿ ಸವಾಲೊಡ್ಡಿದೆ. ಇನ್ನು 150ನೇ ಪಂದ್ಯದಲ್ಲಿ ಆಡಲಿಳಿದ ಹರ್ಮನ್‌ಪ್ರೀತ್‌ ಕೌರ್‌ ಕೇವಲ 11 ರನ್‌ ಮಾತ್ರ ಗಳಿಸಿದರು.