ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸೀಲಿಂಗ್‌ ಲೈಟ್‌ನಲ್ಲಿ ಅವಿತು ಕುಳಿತ ನಾಗರಾಜ! ಈ ರೀತಿ ರಾತ್ರಿ ಕಳೆಯೋ ಸ್ಥಿತಿ ಯಾರಿಗೂ ಬೇಡಪ್ಪಾ

Cobra Found Hiding in Ceiling Light: ಅಪಾರ್ಟ್‍ಮೆಂಟ್‌ನ ಸೀಲಿಂಗ್ ಲೈಟ್ ಒಳಗೆ ನಾಗರಹಾವೊಂದು ಅಡಗಿ ಕುಳಿತಿದ್ದ ಘಟನೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 51 ರಲ್ಲಿ ನಡೆದಿದೆ. ಕುಟುಂಬ ಸದಸ್ಯರು ತಂತಿಯಿರಬಹುದು ಎಂದೇ ಭಾವಿಸಿದ್ದರು. ಆದರೆ, ಅದು ಚಲಿಸಲು ಪ್ರಾರಂಭಿಸಿದಾಗ ಭೀತಿಗೊಂಡಿದ್ದಾರೆ.

ಸೀಲಿಂಗ್ ಲೈಟ್ ಒಳಗೆ ಅಡಗಿಕೊಂಡಿದ್ದ ನಾಗರಹಾವು

-

Priyanka P Priyanka P Sep 14, 2025 4:52 PM

ನೋಯ್ಡಾ: ಅಪಾರ್ಟ್‍ಮೆಂಟ್‌ನ ಸೀಲಿಂಗ್ ಲೈಟ್ ಒಳಗೆ ನಾಗರಹಾವನ್ನು (Cobra) ನೋಡಿದ ನಂತರ ಕುಟುಂಬವೊಂದು ಭಯಭೀತವಾದ ಘಟನೆ ಉತ್ತರ ಪ್ರದೇಶ (Uttar Pradesh) ದ ನೋಯ್ಡಾದ ಸೆಕ್ಟರ್ 51 ರಲ್ಲಿ ನಡೆದಿದೆ. ಮೊದಲಿಗೆ, ಅವರು ಅದನ್ನು ತಂತಿ ಎಂದು ಭಾವಿಸಿದ್ದರು. ಆದರೆ ಅದು ಚಲಿಸಲು ಪ್ರಾರಂಭಿಸಿದಾಗ, ಕುಟುಂಬ ಸದಸ್ಯರು ಭಯಪಟ್ಟಿದ್ದಾರೆ.

ನಾಗರಹಾವು ಅಡುಗೆಮನೆಯಲ್ಲಿತ್ತು. ಹೀಗಾಗಿ ಕುಟುಂಬ ಸದಸ್ಯರು ಮೇಲಿನ ಮಹಡಿಯ ಕೋಣೆಗಳಲ್ಲಿ ಉಳಿದುಕೊಂಡಿದ್ದರು. ಹೊರಗಿನಿಂದ ಆಹಾರ ಆರ್ಡರ್ ಮಾಡಿಕೊಂಡು ತಿನ್ನುತ್ತಿದ್ದರು. ಹಾವು ಅಲ್ಲಿಂದ ಕದಲಿಲ್ಲ. ನಂತರ ಅವರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಹಾವು ಹಿಡಿಯುವವರು ಮತ್ತು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಗಂಟೆಗಳ ಕಾಲ ಹೋರಾಡಿ, ಕೊನೆಗೆ ಕಷ್ಟಪಟ್ಟು ಹಾವನ್ನು ಹಿಡಿಯಲಾಯಿತು.

36 ಗಂಟೆಗಳ ಒತ್ತಡ ಮತ್ತು ಭಯಾನಕತೆಯ ನಂತರ, ಬುಧವಾರ ಸಂಜೆ, ಗೌತಮ್ ಬುದ್ಧ ನಗರ ಅರಣ್ಯ ಇಲಾಖೆ ಹಾವನ್ನು ರಕ್ಷಿಸಿತು. ಸೀಲಿಂಗ್‍ನಲ್ಲಿ ನಾಗರಹಾವಿನ ವಿಡಿಯೊ ವೈರಲ್ ಆಗುತ್ತಿದ್ದು, ನೆಟ್ಟಿಗರು ಸುರಕ್ಷತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ವರದಿಗಳ ಪ್ರಕಾರ, ಹಾವನ್ನು ಓಖ್ಲಾ ಪಕ್ಷಿಧಾಮದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದು ತಿಳಿದುಬಂದಿದೆ.

ವಿಡಿಯೊ ವೀಕ್ಷಿಸಿ:



ಯುಪಿಯಲ್ಲಿ ಹಾವು ಕಡಿತದಿಂದ ಇಬ್ಬರು ಮಕ್ಕಳು ಸಾವು

ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶದ ಬಲರಾಂಪುರದಿಂದ ವರದಿಯಾದ ಮತ್ತೊಂದು ಸುದ್ದಿಯಲ್ಲಿ, 12 ವರ್ಷದ ಬಾಲಕಿ ಮತ್ತು ಆಕೆಯ 8 ವರ್ಷದ ಸಹೋದರ ಮನೆಯ ಛಾವಣಿಯ ಮೇಲೆ ಮಲಗಿದ್ದಾಗ ವಿಷಪೂರಿತ ಹಾವು ಕಚ್ಚಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಹೇಮಂತ್ ಗುಪ್ತಾ ಮಾತನಾಡಿ, ಶುಭಂ ಮತ್ತು ಅವರ ಸಹೋದರಿ ಶಿವಾನಿ ಎಂದು ಗುರುತಿಸಲಾದ ಮಕ್ಕಳಿಗೆ ಬುಧವಾರ ಮುಂಜಾನೆ ಹಾವು ಕಚ್ಚಿದೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಅವರಿಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Viral Video: ಸ್ನೇಹಿತರಿಗೆ ಪಾರ್ಟಿ ಕೊಡಲು ಹೋಗಿ ತನ್ನ ಹೆಂಡತಿಯ ಬಗ್ಗೆ ತಿಳಿದು ಗಂಡ ಶಾಕ್!