ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kidnap case: ಬಲವಂತವಾಗಿ ಇಸ್ಲಾಂಗೆ ಮಂತಾತರ ಮಾಡಿ ಆರು ವರ್ಷದ ಮಗುವಿನ ತಾಯಿಯನ್ನು ವಿವಾಹವಾದ ವ್ಯಕ್ತಿ!

ನೋಯ್ಡಾದ ಮಹಿಳೆಯನ್ನು ಬಲವಂತವಾಗಿ ಮತಾಂತರಿಸಿ ಮದುವೆ ಮಾಡಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಆರು ವರ್ಷದ ಮಗುವಿನ ತಾಯಿಯಾಗಿರುವ ನೋಯ್ಡಾ ಮಹಿಳೆಯನ್ನು ರಾಜಾ ಮಿಯಾನ್ ಅಲಿಯಾಸ್ ಎಹ್ಸಾನ್ ಮತ್ತು ಆತನ ಕುಟುಂಬವು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಮರುನಾಮಕರಣ ಮಾಡಿ ಮದುವೆಯನ್ನು ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಲವಂತವಾಗಿ ಅಪಹರಿಸಿ ಮದುವೆ: ಮೂವರ ಬಂಧನ

-

ನೋಯ್ಡಾ: ಮಹಿಳೆಯನ್ನು (Noida woman) ಬಲವಂತವಾಗಿ ಮತಾಂತರಿಸಿ (convert to Islam) ಮದುವೆ ಮಾಡಿಸಿರುವ ಘಟನೆ ಚೆನ್ನೈನಲ್ಲಿ (Chennai) ನಡೆದಿದೆ. ಮಹಿಳೆ ನೋಯ್ಡಾದವಳಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಆರು ವರ್ಷದ ಮಗುವಿನ ತಾಯಿಯಾಗಿರುವ ನೋಯ್ಡಾ ಮಹಿಳೆಯನ್ನು ರಾಜಾ ಮಿಯಾನ್ ಅಲಿಯಾಸ್ ಎಹ್ಸಾನ್ ಮತ್ತು ಆತನ ಕುಟುಂಬವು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಮರುನಾಮಕರಣ ಮಾಡಿ ಮದುವೆಯನ್ನು ಮಾಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ರಾಜಾ ಮಿಯಾನ್ ಅಲಿಯಾಸ್ ಎಹ್ಸಾನ್ ಸೇರಿದಂತೆ ಮೂವರನ್ನು ನೋಯ್ಡಾ ಪೊಲೀಸರು (Noida Police) ಬಂಧಿಸಿದ್ದಾರೆ.

28 ವರ್ಷದ ಮಹಿಳೆಯನ್ನು ರಾಜಾ ಮಿಯಾನ್ ಅಲಿಯಾಸ್ ಎಹ್ಸಾನ್ ಮತ್ತು ಕುಟುಂಬದವರು ಇಸ್ಲಾಂಗೆ ಮತಾಂತರಿಸಿ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಕುರಿತು ಮಹಿಳೆಯ ತಾಯಿ ತನ್ನ ಮಗಳನ್ನು ಬಿಡುಗಡೆ ಮಾಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ನ್ಯಾಯಾಲಯದ ನಿರ್ದೇಶನದ ಮೇರೆಗೆ ಆರು ವರ್ಷದ ಮಗುವಿನ ತಾಯಿಯಾಗಿರುವ ಮಹಿಳೆಯನ್ನು ಚೆನ್ನೈನಲ್ಲಿ ಪತ್ತೆ ಹಚ್ಚಿದ ಪೊಲೀಸರು ಮರಳಿ ನೋಯ್ಡಾಗೆ ಕರೆದುಕೊಂಡು ಬಂದಿದ್ದಾರೆ. ಮಹಿಳೆಗೆ ಆರೋಪಿಯು ಆಮಿಷವೊಡ್ಡಿದ್ದು, ಬಳಿಕ ಬಲವಂತವಾಗಿ ಮತಾಂತರಿಸಿ ಆಕೆಯ ಹೆಸರನ್ನು ಬದಲಾಯಿಸಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ಮದುವೆ ಮಾಡಿಸಿದ್ದರು. ಮಹಿಳೆ ತನ್ನ ಪತಿಯೊಂದಿಗೆ ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ ಮತ್ತು ವಿಚ್ಛೇದನ ಪಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಎಫ್‌ಐಆರ್ ದಾಖಲಾಗಿದ್ದು, ರಾಜಾ ಮಿಯಾನ್ ಮತ್ತು ಆತನ ಕುಟುಂಬ ಇದರಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ. ಆರೋಪಿಯ ತಾಯಿ ಮಹಿಳೆಯ ಚಿಕ್ಕಮ್ಮನಂತೆ ನಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಯ ಸಹೋದರ ಮದುವೆಗೆ ಅನುಕೂಲ ಮಾಡಿಕೊಡಲು ಆಕೆಯ ಸಹೋದರನಂತೆ ನಟಿಸಿದ್ದಾರೆ. ಸ್ಥಳೀಯ ಧರ್ಮಗುರುಯೊಬ್ಬರು ನಕಲಿ ಮದುವೆ ಒಪ್ಪಂದವನ್ನು ಮಾಡಿಸಿದ್ದಾರೆ.

ಇದನ್ನೂ ಓದಿ: Viral Video: ಊಟ ಹೇಗಿದೆ ಎಂದು ಕೇಳಿದ ವೇಟರ್‌ಗೆ ಮಹಿಳೆ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

ಪ್ರಕರಣಕ್ಕೆ ಸಂಬಂಧಿಸಿ ರಾಜಾ ಮಿಯಾನ್, ಆತನ ತಂದೆ, ತಾಯಿ, ಸಹೋದರ ಮತ್ತು ಧರ್ಮಗುರು ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜಾ ಮಿಯಾನ್, ಆತನ ತಂದೆ ಮತ್ತು ತಾಯಿಯನ್ನು ಬಂಧಿಸಲಾಗಿದ್ದು, ಆತನ ಸಹೋದರ ಮತ್ತು ಧರ್ಮಗುರು ತಲೆಮರೆಸಿಕೊಂಡಿದ್ದಾರೆ. ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.