Self Harming: ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ
ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪ ಜೈಲಿನಲ್ಲಿರುವ ವಿಶಾಲ್ ಗಾವ್ಲಿ ಭಾನುವಾರ ಮುಂಜಾನೆ ನವಿ ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.


ಮುಂಬೈ: ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆ (Self Harming) ಮಾಡಿದ ಆರೋಪ ಜೈಲಿನಲ್ಲಿರುವ ವಿಶಾಲ್ ಗಾವ್ಲಿ ಭಾನುವಾರ ಮುಂಜಾನೆ ನವಿ ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮುಂಬೈನ ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಖಾರ್ಘರ್ ಪೊಲೀಸರು ಘಟನೆಯನ್ನು ದೃಢಪಡಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. 35 ವರ್ಷದ ವಿಶಾಲ್ ಗಾವ್ಲಿ, ಜೈಲಿನ ಶೌಚಾಲಯದಲ್ಲಿ ಬೆಳಗಿನ ಜಾವ 3.30 ರ ಸುಮಾರಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾರ್ಘರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಗಾವ್ಲಿ ಶೌಚಾಲಯಕ್ಕೆ ಹೋಗಿ ಟವಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ನಂತರ, ಜೈಲು ಅಧಿಕಾರಿಗಳು ಶವವನ್ನು ಪತ್ತೆ ಮಾಡಿದ್ದಾರೆ. ಸ್ಥಳೀಯ ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಲಾಯಿತು ಮತ್ತು ಪಂಚನಾಮ (ಸ್ಥಳ ಪರಿಶೀಲನೆ) ನಡೆಸಲಾಯಿತು. ಸಾವಿನ ನಿಖರವಾದ ಕಾರಣವನ್ನು ನಿರ್ಧರಿಸಲು ಮೃತದೇಹವನ್ನು ನೆರೆಯ ಮುಂಬೈನಲ್ಲಿರುವ ಸರ್ಕಾರಿ ಸ್ವಾಮ್ಯದ ಜೆಜೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣ
ಡಿಸೆಂಬರ್ 2024 ರಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಪ್ರದೇಶದಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪ ವಿಶಾಲ್ ಗಾವ್ಲಿ ಮೇಲಿತ್ತು.ಡಿಸೆಂಬರ್ 24 ರಂದು ಕೋಲ್ಸೆವಾಡಿ ಪ್ರದೇಶದಿಂದ ಮಗು ನಾಪತ್ತೆಯಾಗಿದ್ದು, ನಂತರ ಥಾಣೆ ಗ್ರಾಮೀಣ ಪೊಲೀಸ್ ವ್ಯಾಪ್ತಿಯ ಪಡ್ಘಾದ ಬಾಪ್ಗಾಂವ್ ಗ್ರಾಮದಲ್ಲಿ ಶವ ಪತ್ತೆಯಾಗಿತ್ತು. ಕೊಲ್ಸೆವಾಡಿ ಪೊಲೀಸರು ನಡೆಸಿದ ತನಿಖೆಯ ಪರಿಣಾಮವಾಗಿ, ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಸುಲಿಗೆಗಾಗಿ ಅಪಹರಣ, ಅತ್ಯಾಚಾರ, ಕೊಲೆ, ಸಾಕ್ಷ್ಯಗಳ ನಾಶ ಮತ್ತು ಇತರ ಅಪರಾಧಗಳ ಆರೋಪದ ಮೇಲೆ ಗೌಲಿ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದರು.
ಈ ಸುದ್ದಿಯನ್ನೂ ಓದಿ:Self Harming: ಪತ್ನಿಯ ಅಕಾಲಿಕ ಸಾವಿನ ನೋವು; ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ
ಶಾಲ್ ಗಾವ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ, ಆದರೆ ಸಾಕ್ಷಿ ಶವವನ್ನು ಬಾಪ್ಗಾಂವ್‌ನಲ್ಲಿ ಎಸೆಯಲು ಅವನಿಗೆ ಸಹಾಯ ಮಾಡಿದ್ದಾಳೆ" ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.