Navaratri Saree Trend 2025: ಎಲ್ಲೆಡೆ ಹೆಚ್ಚಾಯ್ತು ನವರಂಗಿನ ಸೀರೆಗಳ ಖರೀದಿ
Navaratri Saree Trend 2025: ನವರಾತ್ರಿ ಇನ್ನೂ ಆರಂಭವಾಗಿಲ್ಲ, ಆಗಲೇ ಎಲ್ಲೆಡೆ 9 ದಿನಗಳು ಉಡಬಹುದಾದ ನವರಂಗಿನ ಸೀರೆಗಳ ಖರೀದಿ ಹೆಚ್ಚಾಗಿದೆ. ಪರಿಣಾಮ ಡಿಮ್ಯಾಂಡ್ ಮೊದಲಿಗಿಂತ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಬ್ರಾಂಡ್ನ ಡಿಸೈನ್ನ ಸಿಂಪಲ್ ಕಲರ್ಫುಲ್ ಸೀರೆಗಳು ಫ್ಯಾಷನ್ಲೋಕಕ್ಕೆ ಕಾಲಿಟ್ಟಿವೆ. ಈ ಕುರಿತಂತೆ ಇಲ್ಲಿದೆ ವರದಿ.

ಚಿತ್ರಕೃಪೆ: ಮಿಂಚು -


ನವರಾತ್ರಿಗಾಗಿ ನವರಂಗಿನ ಸೀರೆ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೌದು, ನವರಾತ್ರಿಯ ಹಿನ್ನೆಲೆಯಲ್ಲಿ ನವವರ್ಣದ ಸೀರೆಗಳಿಗೆ ಮಾರುಕಟ್ಟೆಯಲ್ಲಿ ಮೊದಲಿಗಿಂತ ಭಾರಿ ಡಿಮ್ಯಾಂಡ್ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಬ್ರಾಂಡ್ನ ಡಿಸೈನ್ನ ಸಿಂಪಲ್ ಕಲರ್ಫುಲ್ ಸೀರೆಗಳು ಫ್ಯಾಷನ್ಲೋಕಕ್ಕೆ ಕಾಲಿಟ್ಟಿವೆ.

ನವರಾತ್ರಿಯಲ್ಲಿ ಸೀರೆಗಳಿಗೆ ಪ್ರಾಮುಖ್ಯತೆ
ನವರಾತ್ರಿ ಅಂದರೆ, ಒಂಬತ್ತು ದಿನಗಳಂದು 9 ಶಕ್ತಿ ದೇವತೆಗಳ ಆರಾಧನೆ ಹಾಗೂ ಪೂಜೆ ಎಲ್ಲೆಡೆ ನಡೆಯುತ್ತದೆ. ದೇವಸ್ಥಾನಗಳಲ್ಲಿ ಮಾತ್ರವಲ್ಲ, ಬಹುತೇಕ ಮನೆಗಳಲ್ಲೂ ನವರಾತ್ರಿ ಸಂಭ್ರಮಾಚರಣೆ ನಡೆಯಲಿದೆ. ಪ್ರತಿದಿನವೂ ಒಂದೊಂದು ದೇವಿಯ ಪೂಜೆ ಆ ದೇವಿಯನ್ನು ಪ್ರತಿನಿಧಿಸುವ ವರ್ಣಗಳ ಸೀರೆ ಇಲ್ಲವೇ ಎಥ್ನಿಕ್ ಉಡುಪುಗಳನ್ನು ಹೆಣ್ಣುಮಕ್ಕಳು ಧರಿಸುವುದು ಸಾಮಾನ್ಯವಾಗಿದೆ.

ಯಾವ್ಯಾವ ಬಗೆಯ ಸೀರೆಗಳಿಗೆ ಡಿಮ್ಯಾಂಡ್ ಇದೆ?
ನವರಾತ್ರಿಯ ಸೀಸನ್ನಲ್ಲಿ ಪ್ರಿಂಟೆಡ್ ಸೀರೆಗಳಿಗಿಂತ ಹೆಚ್ಚಾಗಿ ಸಾದಾ ಪ್ಲೇನ್ ಸೀರೆಗಳಿಗೆ ಪ್ರಾಮುಖ್ಯತೆ ಹೆಚ್ಚು. ಉದಾಹರಣೆಗೆ ಶ್ವೇತವರ್ಣ, ಗುಲಾಬಿ, ಕೆಂಪು, ಹಳದಿ ಹೀಗೆ ಒಂಬತ್ತು ದಿನಗಳು 9 ಬಗೆಯ ಬಣ್ಣದ ಸೀರೆಗಳಲ್ಲಿ ಹೆಣ್ಣುಮಕ್ಕಳು ಕಾಣಿಸಿಕೊಳ್ಳುತ್ತಾರೆ. ಬಹುತೇಕರು ಒಮ್ಮೆ ಒಂದು ವರ್ಷ ಉಟ್ಟ ಸೀರೆ ಮತ್ತೊಂದು ವರ್ಷ ಉಡುವುದು ಕಾಣಸಿಗುವುದಿಲ್ಲ. ಹಾಗಾಗಿ ನವರಾತ್ರಿ ಸಮಯದಲ್ಲಿ ಸೀರೆಗಳನ್ನು ಕೊಳ್ಳುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಸೀರೆ ಶೋರೂಂವೊಂದರ ಮಾಲೀಕರು.

ಸೀರೆಗಳ ಭರ್ಜರಿ ಮಾರಾಟ
ಸಾಮಾನ್ಯ ಮಹಿಳೆಯಿಂದಿಡಿದು ಶ್ರೀಮಂತ ಮಹಿಳೆಯರು ಕೂಡ ಈ ನವರಾತ್ರಿಯ ಸಮಯದಲ್ಲಿ ನವರಂಗಿನ ಸೀರೆಗಳನ್ನು ಉಟ್ಟು ಸಂಭ್ರಮಿಸುವುದು ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ದುಬಾರಿ ರೇಷ್ಮೆ ಸೀರೆಯಿಂದಿಡಿದು ಸೆಮಿ ಸಿಲ್ಕ್, ಆರ್ಗಾನ್ಜಾ, ಜಾರ್ಜೆಟ್, ಕ್ರೇಪ್ ಸಿಲ್ಕ್, ಕಾಟನ್ ಹೀಗೆ ಮಾನೋಕ್ರೋಮ್ ಲುಕ್ ನೀಡುವ ಸೀರೆಗಳ ಮಾರಾಟದಲ್ಲಿ ಏರಿಕೆ ಕಂಡಿದೆ ಎನ್ನುತ್ತಾರೆ ಎನ್ನುತ್ತಾರೆ ಮಾಡೆಲ್ ದಿವ್ಯಾ.

ನವರಂಗಿನ ಸೀರೆ ಪ್ರಿಯರಿಗೆ ಟಿಪ್ಸ್
- ನಾನಾ ಬ್ರಾಂಡ್ಗಳಲ್ಲಿ ನವರಂಗ್ ಸೀರೆಗಳು ಲಭ್ಯ.
- ಜ್ಯುವೆಲರಿಗಳನ್ನು ಸೀರೆಯ ವರ್ಣಕ್ಕೆ ತಕ್ಕಂತೆ ಮ್ಯಾಚ್ ಮಾಡಬಹುದು.
- ಮಿಕ್ಸ್ ಮ್ಯಾಚ್ ಬ್ಲೌಸ್ ಧರಿಸುವುದು ನಾಟ್ ಓಕೆ.
- ಜ್ಯುವೆಲರಿ ಮ್ಯಾಚ್ ಮಾಡಲಾಗದಿದ್ದಲ್ಲಿ ಬಂಗಾರವರ್ಣದ್ದು ಧರಿಸಿ.
- ಹೇರ್ಸ್ಟೈಲ್ ಸೀರೆಗೆ ಟ್ರೆಡಿಷನಲ್ ಲುಕ್ ನೀಡುವಂತಿರಲಿ.