Varamahalaxmi Festival Fashion 2025: ವರಮಹಾಲಕ್ಷ್ಮಿ ಹಬ್ಬಕ್ಕೆ ಬಂತು ದಾವಣಿ-ಲಂಗ ಕಮ್ ಲೆಹೆಂಗಾ
Varamahalaxmi Festival Fashion 2025: ವರಮಹಾಲಕ್ಷ್ಮಿ ಹಬ್ಬದ ಟ್ರೆಡಿಷನಲ್ ಫ್ಯಾಷನ್ಗೆ ಇದೀಗ ದಾವಣಿ-ಲಂಗ ಕಮ್ ಲೆಹೆಂಗಾಗಳು ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಯುವತಿಯರನ್ನು ಹಾಗೂ ಮಹಿಳೆಯರನ್ನು ಸೆಳೆದಿವೆ? ಎಂಬುದರ ಬಗ್ಗೆ ಡಿಸೈನರ್ ಶಿಲ್ಪಾ ಪೂಜಾರಿ ಇಲ್ಲಿ ತಿಳಿಸಿದ್ದಾರೆ.

ಚಿತ್ರಗಳು: ಲಾವಣ್ಯ ಶೆಟ್ಟಿ, ಮಾಡೆಲ್


ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ನಾನಾ ಬಗೆಯ ದಾವಣಿ-ಲಂಗ ಕಮ್ ಲೆಹೆಂಗಾಗಳು ಎಂಟ್ರಿ ನೀಡಿವೆ. ಎಲ್ಲಾ ವರ್ಗದ ಸ್ತ್ರೀಯರನ್ನು ಸೆಳೆದಿವೆ.

ದಾವಣಿ-ಲಂಗ ಕಮ್ ಲೆಹೆಂಗಾ
ನೋಡಲು ಸಾಂಪ್ರದಾಯಿಕ ಲುಕ್ ನೀಡುವ ದಾವಣಿ-ಲಂಗ ಕಮ್ ಲೆಹೆಂಗಾಗಳು ಹಬ್ಬದ ಗ್ರ್ಯಾಂಡ್ ಲುಕ್ ನೀಡಲು ನಾನಾ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ. ಸಂತಸದ ವಿಚಾರವೆಂದರೆ, ಮದುವೆಯಾಗಿರುವ ಸ್ತ್ರೀಯರು ಕೂಡ ಇವನ್ನು ಧರಿಸುವ ವಿನ್ಯಾಸಗಳಲ್ಲಿ ಇವು ಬಿಡುಗಡೆಗೊಂಡಿವೆ ಎನ್ನುತ್ತಾರೆ ಡಿಸೈನರ್ ಶಿಲ್ಪಾ.

ಟ್ರೆಂಡಿಯಾಗಿರುವ ಟೂ ಇನ್ ವನ್ ದಾವಣಿ-ಲಂಗ ಕಮ್ ಲೆಹೆಂಗಾ
ಕೆಲವು ಕಾಂಚೀವರಂ, ಧರ್ಮಾವರಂ, ಗಾರ್ಡನ್ ರೇಷ್ಮೆ, ಬಾರ್ಡರ್ ರೇಷ್ಮೆ ಸೀರೆಯ ದಾವಣಿ-ಲಂಗ ಕಮ್ ಲೆಹೆಂಗಾಗಳು ಈ ಸೀಸನ್ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿವೆ. ಸೆಮಿ ಸ್ಟಿಚ್ನಲ್ಲಿ ದೊರೆಯುವ ಇವನ್ನು ಅವರವರ ಬಾಡಿ ಫಿಟ್ಗೆ ಅನುಗುಣವಾಗಿಯೂ ಹೊಲೆಸಬಹುದು. ರೇಷ್ಮೆ ಸೀರೆಗಳ ಅಂಗಡಿಗಳಲ್ಲೂ ಇವು ದೊರೆಯುತ್ತಿವೆ. ಬ್ಲೌಸ್ ಹಾಗೂ ಲಂಗಕ್ಕೆ ಹಾಫ್ ಸೀರೆಯಂತೆ ಉಡಬಹುದಾದ ದಾವಣಿಯು ಸಿಗುತ್ತವೆ. ಹಾಫ್ ಸೀರೆ ಬೇಡ ಎನ್ನುವವರು ಲೆಹೆಂಗಾ ಶೈಲಿಯಲ್ಲಿ ಧರಿಸಬಹುದು. ಒಟ್ಟಾರೆ ಸೆಟ್ನಲ್ಲಿ ದೊರೆಯುವ ಇವು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಿವೆ ಎನ್ನುತ್ತಾರೆ ಡಿಸೈನರ್ ಶಿಲ್ಪಾ ಪೂಜಾರಿ.

ದಾವಣಿ-ಲಂಗ ಕಮ್ ಲೆಹೆಂಗಾದ ಆಯ್ಕೆ ಹೀಗಿರಲಿ
- ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿ.
- ಟ್ರೆಂಡಿ ಶೇಡ್ನವು ಫ್ಯಾಷೆನಬಲ್ ಆಗಿ ಕಾಣುತ್ತವೆ.
- ಬ್ಲೌಸ್ಗೆ ಬ್ಯಾಕ್ ಬಟನ್ ಇಡಿಸುವುದರಿಂದ ಲೆಹೆಂಗಾದಂತೆ ಧರಿಸಬಹುದು.
- ಮೇಕಪ್, ಹೇರ್ಸ್ಟೈಲ್ ಎಲ್ಲವೂ ಎಥ್ನಿಕ್ ಲುಕ್ಗೆ ಮ್ಯಾಚ್ ಆಗಬೇಕು.
- ಪ್ರಿಂಟೆಡ್ನವು ಅತಿ ಹೆಚ್ಚು ಟ್ರೆಂಡಿಯಾಗಿವೆ.
- ಮಾನೋಕ್ರೋಮ್ ಶೇಡ್ನವು ಟ್ರೆಂಡ್ನಲ್ಲಿಲ್ಲ.

ವರಮಹಾಲಕ್ಷ್ಮಿ ಹಬ್ಬದ ಟ್ರೆಡಿಷನಲ್ ಫ್ಯಾಷನ್ಗೆ ಇದೀಗ ದಾವಣಿ-ಲಂಗ ಕಮ್ ಲೆಹೆಂಗಾಗಳು ಎಂಟ್ರಿ ನೀಡಿವೆ.