ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Attack on Pakistan: ಪಾಕಿಸ್ತಾನಕ್ಕೆ ಇನ್ನೂ ಬಿಟ್ಟಿಲ್ಲ ಗ್ರಹಚಾರ; TTP ಯಿಂದ 20 ಪಾಕ್‌ ಸೈನಿಕರ ಹತ್ಯೆ

ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಆತಂರಿಕ ಕಲಹ ಹೆಚ್ಚುತ್ತಿದೆ. ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಬಿಎಲ್‌ಎ ಪಾಕಿಸ್ತಾನದ ಮೇಲೆ ಕೆಲ ದಿನಗಳಿಂದ ದಾಳಿ ನಡೆಸುತ್ತಲೇ ಇದೆ. ಇದೀಗ ತೆಹ್ರಿಕ್-ಇ ತಾಲಿಬಾನ್‌ ಗುಂಪು (TTP) 2O ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದೆ ಎಂದು ತಿಳಿದು ಬಂದಿದೆ.

TTP ಯಿಂದ 20 ಪಾಕ್‌ ಸೈನಿಕರ ಹತ್ಯೆ

Profile Vishakha Bhat May 9, 2025 1:00 PM

ಇಸ್ಲಾಮಾಬಾದ್‌: ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಆತಂರಿಕ ಕಲಹ ಹೆಚ್ಚುತ್ತಿದೆ. ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ (Attack on Pakistan) ಬಿಎಲ್‌ಎ ಪಾಕಿಸ್ತಾನದ ಮೇಲೆ ಕೆಲ ದಿನಗಳಿಂದ ದಾಳಿ ನಡೆಸುತ್ತಲೇ ಇದೆ. ಇದೀಗ ತೆಹ್ರಿಕ್-ಇ ತಾಲಿಬಾನ್‌ ಗುಂಪು (TTP) 2O ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದೆ ಎಂದು ತಿಳಿದು ಬಂದಿದೆ. ಟಿಟಿಪಿ ಪಾಕಿಸ್ತಾನದ ಎರಡು ಸೇನಾ ವಾಹನದ ಮೇಲೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಖೈಬರ್‌ ಪಖ್ತುಂತ್ವಾ ಪ್ರದೇಶದವನ್ನು ಸ್ವತಂತ್ರ್ಯಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ವಜೀರಿಸ್ತಾನದ ಶಕೈ ಉಪವಿಭಾಗದಲ್ಲಿರುವ ಡಂಗೇಟ್ ಮಿಲಿಟರಿ ಹೊರಠಾಣೆಯಲ್ಲಿ ಶುಕ್ರವಾರ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಟಿಟಿಪಿ ಲೇಸರ್ ರೈಫಲ್‌ಗಳನ್ನು ಬಳಸಿ ಗುರಿಯಿಟ್ಟು ದಾಳಿ ನಡೆಸಿದ್ದರಿಂದ ಮೊದಲ ಸುತ್ತಿನಲ್ಲಿ ಆರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದರು ಎಂದು ಹೇಳಲಾಗಿದೆ. ಎರಡನೇ ಬಾರಿ ದಾಳಿ ನಡೆಸುವಾಗ ಉಗ್ರರು ಅತ್ಯಾಧುನಿಕ ಶಸ್ರ್ತಾಸ್ರ್ತಗಳನ್ನು ಬಳಸಿದ್ದರು ಎಂದು ತಿಳಿದು ಬಂದಿದೆ.

ಮಂಟೋಯ್ ಪ್ರದೇಶಕ್ಕೆ ಪಾಕಿಸ್ತಾನ ಸೇನಾ ವಾಹನ ಹೊರಟಿತ್ತು. ಅದೇ ಸಮಯದಲ್ಲಿ ಉಗ್ರರು ಹೊಂಚು ಹಾಕಿ ದಾಳಿ ನಡೆಸುತ್ತಿದ್ದಾರೆ. ಇದರ ಪರಿಣಾಮವಾಗಿ ಎರಡು ಸೇನಾ ವಾಹನಗಳು ನಾಶವಾದವು. ಟಿಟಿಪಿ 20 ಸೈನಿಕರನ್ನು ಕೊಂದು ಇತರ ಐದು ಜನರನ್ನು ಗಾಯಗೊಳಿಸಿದೆ ಎಂದು ಹೇಳಲಾಗಿದೆ. ಹೊರಠಾಣೆಯಿಂದ ಐದು ರೈಫಲ್‌ಗಳು, ರಾಕೆಟ್ ಲಾಂಚರ್, ರಾತ್ರಿ ದೃಷ್ಟಿ ಗೇರ್ ಮತ್ತು ಇತರ ಮಿಲಿಟರಿ ಸರಬರಾಜುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಗುಂಪು ಹೇಳಿದೆ.

ಈ ಸುದ್ದಿಯನ್ನೂ ಓದಿ: Operation Sindoor: ಭಾರತದ ಆಪರೇಷನ್ ಸಿಂದೂರ್‌ ಬಳಿಕ ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಹುಡುಕುತ್ತಿರೋದು ಏನು?

ಶಾವಲ್ ಪ್ರದೇಶದಲ್ಲಿ ಇತ್ತೀಚೆಗೆ ಪಾಕಿಸ್ತಾನ ನಡೆಸಿದ ಮಿಲಿಟರಿ ಕಾರ್ಯಾಚರಣೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಟಿಟಿಪಿ ಹೇಳಿದೆ. ದಾಳಿಯ ಸಮಯದಲ್ಲಿ ಗುಂಪು ತನ್ನ ಹೋರಾಟಗಾರ "ಮುಸಾಬ್" ಎಂಬಾತನ್ನು ಕಳೆದುಕೊಂಡಿದ್ದೇವೆ. ಅದರ ಪ್ರತೀಕಾರ ಇದೀಗ ನಮಗೆ ಸಿಕ್ಕಿದೆ ಎಂದು ಟಿಟಿಪಿ ಉಗ್ರರು ಹೇಳಿಕೆ ನೀಡಿದ್ದಾರೆ.